ಭತ್ತ

ಅಕ್ಕಿ ಎಲೆಯ ಸ್ಕಾಲ್ಡ್ (ಸುಟ್ಟ ಗಾಯ)

Monographella albescens

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ತಿಳಿ, ನೀರು-ನೆನೆಸಿದಂತಹ ಗಾಯಗಳು - ಎಲೆ ತುದಿಯಿಂದ ಪ್ರಾರಂಭವಾಗುತ್ತವೆ.
  • ಗಾಯಗಳು ಅಗಲವಾಗುತ್ತವೆ, ಎಲೆಯ ದಳದಲ್ಲಿ ಸುಟ್ಟ ಗಾಯವುಂಟಾಗುತ್ತದೆ.
  • ಎಲೆಗಳು ಸೊರಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಬೆಳವಣಿಗೆಯ ಹಂತ, ತಳಿ ಮತ್ತು ಸಸ್ಯ ಸಾಂದ್ರತೆಗೆ ಅನುಗುಣವಾಗಿ ಎಲೆ ಸ್ಕಾಲ್ಡಿಗೆ ಸಂಬಂಧಿಸಿದ ರೋಗಲಕ್ಷಣಗಳು ಬದಲಾಗುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಬೂದು-ಹಸಿರು, ನೀರು-ನೆನೆಸಿದ ಗಾಯಗಳು ಎಲೆಗಳ ತುದಿಗಳು ಅಥವಾ ಅಂಚುಗಳ ಮೇಲೆ ಉಂಟಾಗಲು ಪ್ರಾರಂಭಿಸುತ್ತವೆ. ನಂತರ, ಗಾಯಗಳು ಎಲೆಗಳ ತುದಿಗಳಿಂದ ಅಥವಾ ಅಂಚುಗಳಿಂದ ಪ್ರಾರಂಭವಾಗಿ ತಿಳಿ ಹಳದಿ ಕಂದು ಬಣ್ಣದ ಮತ್ತು ಗಾಢ ಕಂದು ಬಣ್ಣದ ಒಂದು ಉಂಗುರದ ಮಾದರಿಯನ್ನು ಹರಡುತ್ತವೆ ಮತ್ತು ಉಂಟು ಮಾಡುತ್ತವೆ. ಗಾಯಗಳ ನಿರಂತರ ಹಿಗ್ಗುವಿಕೆ ಎಲೆಯ ದೊಡ್ಡ ಭಾಗವನ್ನು ಗಾಯಗೊಳಿಸುವುದಕ್ಕೆ ಕಾರಣವಾಗುತ್ತದೆ. ಎಲೆಯ ಪೀಡಿತ ಜಾಗಗಳು ಎಲೆಗೆ ಸುಟ್ಟಗಾಯ ಉಂಟು ಮಾಡಿದಂತೆ ತೋರಿ, ಒಣಗುತ್ತವೆ. ಕೆಲವು ದೇಶಗಳಲ್ಲಿ, ಗಾಯಗಳು ವಿರಳವಾಗಿ ಉಂಗುರದ ಮಾದರಿಯನ್ನು ಉಂಟು ಮಾಡುತ್ತವೆ ಮತ್ತು ಸುಟ್ಟ ಗಾಯದ ರೋಗಲಕ್ಷಣವು ಮಾತ್ರ ಸ್ಪಷ್ಟವಾಗಿ ಕಂಡುಬರುತ್ತದೆ.

Recommendations

ಜೈವಿಕ ನಿಯಂತ್ರಣ

ಈ ರೋಗಕ್ಕೆ ವಿರುದ್ಧವಾಗಿ ಈವರೆಗೆ ಯಾವುದೇ ಪರ್ಯಾಯ ಚಿಕಿತ್ಸೆ ಕಂಡುಬಂದಿಲ್ಲ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಬೀಜ-ನೆನೆಸುವ ಚಿಕಿತ್ಸೆಯಲ್ಲಿ ಕ್ವಿಟೊಜೆನ್ ಮತ್ತು ಥಿಯೊಫನೇಟ್-ಮೀಥೈಲ್ನ ಬಳಕೆಯು ಎಮ್. ಅಲ್ಬೆಸೆನ್ಸ್ನಿಂದ ಉಂಟಾದ ಸೋಂಕನ್ನು ಕಡಿಮೆಮಾಡಿದೆ. ಗದ್ದೆಯಲ್ಲಿ, ಮಂಕೊಜೆಬ್, 1.0 ಗ್ರಾಂ / ಲೀ ನಷ್ಟು ಥಿಯೋಫನೇಟ್ ಮೀಥೈಲ್ ಮತ್ತು ತಾಮ್ರದ ಆಕ್ಸಿಕ್ಲೋರೈಡ್ ಆಧರಿತ ಶಿಲೀಂಧ್ರನಾಶಕಗಳ ಎಲೆಗಳ ಸಿಂಪರಣೆಗಳು ಎಲೆಯ ಸ್ಕಾಲ್ಡಿನ ಸಂಭವಗಳನ್ನು ಮತ್ತು ತೀವ್ರತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಈ ರಾಸಾಯನಿಕಗಳ ಸಂಯೋಜನೆಯೂ ಸಹ ಪರಿಣಾಮಕಾರಿಯಾಗಿವೆ.

ಅದಕ್ಕೆ ಏನು ಕಾರಣ

ರೋಗದ ಅಭಿವೃದ್ಧಿ ಸಾಮಾನ್ಯವಾಗಿ ಪ್ರಬುದ್ಧ ಎಲೆಗಳ ಮೇಲೆ ಋತುವಿನ ಕೊನೆಯಲ್ಲಿ ಸಂಭವಿಸುತ್ತದೆ ಮತ್ತು ಇದಕ್ಕೆ ಆರ್ದ್ರ ಹವಾಮಾನ, ಹೆಚ್ಚಿನ ಸಾರಜನಕ ರಸಗೊಬ್ಬರ ಬಳಕೆ ಮತ್ತು ಹತ್ತಿರದ ಅಂತರ ಇವುಗಳು ಅನುಕೂಲಕರವಾಗಿವೆ. 40 ಕಿ.ಗ್ರಾಂ / ಹೆಕ್ಟೇರುಕ್ಕಿಂತ ಹೆಚ್ಚಿನ ಸಾರಜನಕದ ಮಟ್ಟಗಳು ಮತ್ತು ಅದಕ್ಕೂ ಮೇಲಿನವುಗಳು ಎಲೆಯ ಸ್ಕಾಲ್ಡ್ (ಸುಟ್ಟಗಾಯ) ಹೆಚ್ಚು ಉಂಟಾಗುವುದಕ್ಕೆ ಕಾರಣವಾಗುತ್ತವೆ. ಬಾಧೆಗೊಳ್ಳದ ಎಲೆಗಳಿಗಿಂತ ಬಾಧಿತವುಗಳಲ್ಲಿ ಇದು ವೇಗವಾಗಿ ಬೆಳೆಯುತ್ತದೆ. ಹಿಂದಿನ ಸುಗ್ಗಿಯ ಬೀಜಗಳು ಮತ್ತು ಬೆಳೆಗಳ ಕೊಯ್ದ ಪೈರಿನ ಕೂಳೆಗಳು ಸೋಂಕಿನ ಮೂಲಗಳಾಗಿವೆ. ರೋಗ ಮತ್ತು ಎಲೆಯ ಸ್ಕಾಲ್ಡ್ ನಡುವೆ ವ್ಯತ್ಯಾಸ ಗುರುತಿಸಲು, 5-10 ನಿಮಿಷಗಳ ಕಾಲ ತಿಳಿ ನೀರಿನಲ್ಲಿ ಎಲೆಗಳನ್ನು ಕತ್ತರಿಸಿ ಮುಳುಗಿಸಿ, ಯಾವುದೇ ಸ್ರವಿಕೆ ಹೊರಬರದಿದ್ದರೆ, ಅದು ಎಲೆಯ ಸ್ಕಾಲ್ಡ್ ಆಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದಾಗ, ನಿರೋಧಕ ಪ್ರಭೇದಗಳನ್ನು ಬಳಸಿ.
  • ಸಸ್ಯಗಳ ನಡುವಿನ ಅಂತರವನ್ನು ವಿಸ್ತಾರವಾಗಿರಿಸಿ.
  • ಮಣ್ಣಿನಲ್ಲಿ ಸಿಲಿಕಾನ್ ಮಟ್ಟಗಳ ನಿರ್ವಹಣೆ ಸಹ ಹೆಚ್ಚಿನ ಇಳುವರಿ ನೀಡುತ್ತದೆ ಮತ್ತು ರೋಗವನ್ನು ಕಡಿಮೆ ಮಾಡುತ್ತದೆ.
  • ಹೆಚ್ಚಿನ ಪ್ರಮಾಣದ ಸಾರಜನಕವನ್ನು ತಪ್ಪಿಸಿ.
  • ಟಿಲ್ಲೆರಿಂಗ್ ಹಂತದ ಸಮಯದಲ್ಲಿ ಸಾರಜನಕವನ್ನು ಭಾಗಗಳಲ್ಲಿ ಹಾಕಿ.
  • ಗದ್ದೆಯಿಂದ ಕಳೆ ಮತ್ತು ಸೋಂಕಿತ ಅಕ್ಕಿ ಸಸ್ಯಗಳನ್ನು ತೆಗೆದುಹಾಕಿ ಮತ್ತು ನೆಲದಡಿಗೆ ಉಳುಮೆ ಮಾಡಿ.
  • ಭತ್ತದ ಕೂಳೆಗಳನ್ನು ಉಳುಮೆ ಮಾಡಿ ಮತ್ತು ಸೋಂಕಿತ ಕೂಳೆಗಳನ್ನು ತೆಗೆದು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ