ಭತ್ತ

ಅಕ್ಕಿ ಕಾಂಡದ ಕೊಳೆರೋಗ

Magnaporthe salvinii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹೊರಗಿನ ಎಲೆಗಳ ಪೊರೆಗಳ ಕೆಳಭಾಗದಲ್ಲಿ ಸಣ್ಣ, ಅನಿಯಮಿತ ಕಪ್ಪು ಗಾಯಗಳು.
  • ಗಾಯಗಳು ಹಿಗ್ಗುತ್ತವೆ.
  • ಒಳಗಿನ ಗೆಣ್ಣುಗಳು ಕೊಳೆಯುತ್ತವೆ ಮತ್ತು ಕುಸಿಯುತ್ತವೆ.
  • ಸಸ್ಯ ಬಾಗುವುದು, ತುಂಬದ ಪ್ಯಾನಿಕಲ್ ಗಳು, ಸೀಮೆಸುಣ್ಣದಂತಹ ಧಾನ್ಯಗಳು, ಟಿಲ್ಲರ್ ಸಾವು.
  • ಟೊಳ್ಳಾದ, ಸೋಂಕಿತ ಕಾಂಡಗಳ ಒಳಗೆ ಗಾಢ ಬೂದು ಬಣ್ಣದ ಕವಕಜಾಲ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಟಿಲ್ಲರಿಂಗ್ ಹಂತದ ನಂತರ ರೋಗಲಕ್ಷಣಗಳನ್ನು ಸಾಮಾನ್ಯವಾಗಿ ಕಾಣಬಹುದು. ಆರಂಭದ ಲಕ್ಷಣಗಳು ಚಿಕ್ಕದಾಗಿರುತ್ತವೆ, ನೀರಿನ ಮಟ್ಟದಲ್ಲಿನ ಹೊರ ಎಲೆ ಪೊರೆಯ ಮೇಲ್ಮೈ ಅನಿಯಮಿತ ಕಪ್ಪು ಗಾಯಗಳಿಂದ ಕೂಡಿರುತ್ತವೆ. ಕಾಯಿಲೆಯು ಮುಂದುವರೆದಂತೆ, ಗಾಯವು ದೊಡ್ಡದಾಗುತ್ತದೆ, ಒಳಗಿನ ಎಲೆಯ ಪೊರೆ ಮತ್ತು ಸಸ್ಯದ ಟೊಳ್ಳಾದ ಕಾಂಡವನ್ನು ತೂರಿಕೊಂಡು ಕಂದು-ಕಪ್ಪು ಗಾಯಗಳನ್ನು ಉತ್ಪತ್ತಿ ಮಾಡುತ್ತದೆ. ಕಾಂಡದ ಒಂದು ಅಥವಾ ಎರಡು ಅಂಚುಗಳು ಅಂತಿಮವಾಗಿ ಕೊಳೆಯುತ್ತವೆ ಮತ್ತು ಕುಸಿಯುತ್ತವೆ (ಎಪಿಡರ್ಮಿಸ್ ಮಾತ್ರ ಹಾಗೇ ಉಳಿದಿರುತ್ತದೆ), ಇದು ವಸತಿಗೆ , ತುಂಬದ ಹೂಗೊಂಚಲುಗಳು ,ಉದುರುದುರಾದ ಧಾನ್ಯಗಳು ಅಥವಾ ಟಿಲ್ಲರ್ನ ಮರಣಕ್ಕೆ ಕಾರಣವಾಗುತ್ತದೆ. ಒಳಗಿನ ಮೇಲ್ಮೈಯಲ್ಲಿ ಆವರಿಸಿರುವ ಸಣ್ಣ, ಕಪ್ಪು ಸ್ಕ್ಲೆರೋಟಾಗಳೊಂದಿಗೆ ಗಾಢ-ಬೂದು ಕವಕಜಾಲವನ್ನು ಟೊಳ್ಳಾದ, ಸೋಂಕಿಗೊಳಗಾದ ಕಾಂಡಗಳಲ್ಲಿ ಕಾಣಬಹುದಾಗಿದೆ.

Recommendations

ಜೈವಿಕ ನಿಯಂತ್ರಣ

ಕಾಂಡ ಕೊಳೆತವನ್ನು ನಿಯಂತ್ರಿಸುವ ವಿಧಾನಗಳು ಉತ್ತಮ ಭೂಮಿ ನಿರ್ವಹಣೆ ಪದ್ಧತಿಗಳು ಮತ್ತು ವಿರೋಧಿ ಜೀವಿಗಳ ಬಳಕೆಯನ್ನು ಒಳಗೊಂಡಿರುತ್ತವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ವ್ಯಾಲಿಟಮೈಸಿನ್ ಅಥವಾ ಹೆಕ್ಸಾಕೋನಜೋಲ್ ಅನ್ನು (2 ಮಿಲೀ/ಲೀ), ಪ್ರಾಪಿಕೋನಜೋಲ್ ಅನ್ನು (1 ಮಿಲೀ/ಲೀ) ಅಥವಾ ಥಿಯೊಫನೇಟ್ ಮೀಥೈಲ್ ಅನ್ನು (1.0 ಗ್ರಾಂ/ ಲೀ) ಆಧರಿಸಿದ ರಾಸಾಯನಿಕಗಳನ್ನು ನೀರಿನಲ್ಲಿ 15 ದಿನಗಳ ಮಧ್ಯಂತರದಲ್ಲಿ ಎರಡು ಬಾರಿ, ಸಾಮಾನ್ಯವಾಗಿ ಮಧ್ಯ ಟಿಲ್ಲರಿಂಗ್ ಹಂತದಿಂದ ಅಥವಾ ರೋಗ ಪ್ರಾರಂಭವಾಗುವ ಸಮಯದಲ್ಲಿ ಬಳಸಿ.

ಅದಕ್ಕೆ ಏನು ಕಾರಣ

ಹಾನಿಯು ಮಾಗ್ನಾಪೋರ್ಥ್ ಸಾಲ್ವಿನಿ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಇದು ಸತ್ತ ಸಸ್ಯದ ಅಂಗಾಂಶದೊಳಗೆ ಅಥವಾ ಮಣ್ಣಿನಲ್ಲಿ ಚಳಿಗಾಲದುದ್ದಕ್ಕೂ- ಜೀವಿಸುತ್ತದೆ. ನಂತರ ಅನುಕೂಲಕರವಾದ ವಾತಾವರಣವಿದ್ದಾಗ (ಹೆಚ್ಚಿನ ತೇವಾಂಶ, ಹೆಚ್ಚಿನ ಸಾರಜನಕ ರಸಗೊಬ್ಬರ ಬಳಕೆ) ಇದರ ಬೀಜಕಗಳು ಮಳೆ ನೀರಿನ ಎರಚಲಲ್ಲಿ ಮತ್ತು ನೀರಿನ ನೀರಾವರಿಯ ಮೂಲಕ ಹರಡಲ್ಪಡುತ್ತವೆ. ಇದು ಎಲೆಯ ಮೇಲೆ ಬಿದ್ದಾಗ, ಎಲೆಯ ಮೇಲ್ಮೈಗೆ ಅಂಟಿಕೊಳ್ಳುತ್ತದೆ ಮತ್ತು ಅಲ್ಲೇ ಒಂದು ಕೊಳವೆಯಂತೆ ಕುಡಿಯೊಡೆಯುತ್ತದೆ ಇದು ಎಲೆಯ ಚರ್ಮದೊಳಗೆ ನುಗ್ಗುತ್ತದೆ. ಈ ಪ್ರಕ್ರಿಯೆಯು ತಪ್ಪು ಅಭ್ಯಾಸಗಳ ಅಥವಾ ಕೀಟಗಳ ದಾಳಿಯಿಂದ ಉಂಟಾದ ಗಾಯಗಳಿರುವ ಸಸ್ಯಗಳ ಮೇಲೆ ಸುಗಮವಾಗಿ ನಡೆಯುತ್ತದೆ. ರೋಗದ ದಟ್ಟಣೆಯು ಬೆಳೆಯು ಕುಯ್ಲಿಗೆ ಬರುವ ಹಂತದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಉಷ್ಣ ವಾತಾವರಣಗಳಲ್ಲಿ ಸುಗ್ಗಿಯ ನಂತರದ ಹೆಚ್ಚು ತೇವಾಂಶ ಭರಿತ ಅವಧಿಗಳು ಈ ಶಿಲೀಂಧ್ರಗಳ ಜೀವನಚಕ್ರಕ್ಕೆ ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗನಿರೋಧಕ ಪ್ರಭೇದಗಳನ್ನು ಬಳಸಿ.
  • ನೆಡುವಾಗ ಸಸ್ಯ ಸಾಂದ್ರತೆಯನ್ನು ಕಡಿಮೆ ಮಾಡಿ.
  • ಸಾರಜನಕದ ಅಂಶವನ್ನು ಕಡಿಮೆ ಮಾಡಿ ಮತ್ತು ವಿಭಜಿತ ಪ್ರಮಾಣಗಳಲ್ಲಿ ರಸಗೊಬ್ಬರಗಳನ್ನು ಬಳಸಿ.
  • ಮಣ್ಣಿನ pH ಅನ್ನು ಹೆಚ್ಚಿಸಲು ಪೊಟಾಷಿನ ಪ್ರಮಾಣವನ್ನು ಹೆಚ್ಚಿಸಿ.
  • ಸಕಾಲಿಕ ಕಳೆ ನಿಯಂತ್ರಣ.
  • ಸುಗ್ಗಿಯ ನಂತರ ಯಾವುದೇ ಸಸ್ಯಾವಶೇಷಗಳಿದ್ದರೆ ಅದನ್ನು ಸುಟ್ಟು ಹಾಕಿ ಮತ್ತು ಒಣಹುಲ್ಲು ಕೊಳೆಯುವುದಕ್ಕೆ ಬಿಡಬೇಡಿ.
  • ಅವಶೇಷಗಳನ್ನು ಮಣ್ಣಿನಲ್ಲಿ ಆಳವಾಗಿ ಉಳುಮೆ ಮಾಡುವುದು ಇನ್ನೊಂದು ಆಯ್ಕೆಯಾಗಿದೆ.
  • ನೀರಾವರಿಯ ನೀರು ನಿಲ್ಲದಂತೆ ನೋಡಿಕೊಳ್ಳಿ.
  • ಹೊಲದಲ್ಲಿ ಕೆಲವು ತಿಂಗಳು ಅಥವಾ ಒಂದು ವರ್ಷದವರೆಗೆ ಕೃಷಿ ಮಾಡದೆ ಹಾಗೇ ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ