ಸೋಯಾಬೀನ್

ಸೋಯಾಬೀನಿನ ಚಾರ್ಕೋಲ್ ರಾಟ್ (ಇದ್ದಿಲು ಕೊಳೆತ)

Macrophomina phaseolina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹೂಬಿಡುವ ಸಮಯದಲ್ಲಿ ಮತ್ತು ಬೆಚ್ಚಗಿನ, ಶುಷ್ಕ ವಾತಾವರಣದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
  • ಕಡಿಮೆ ಶಕ್ತಿಯನ್ನು ಹೊಂದಿರುವ ಸಸ್ಯಗಳು ದಿನದ ಅತ್ಯಂತ ಬಿಸಿಲಿನ ಸಮಯದಲ್ಲಿ ಬಾಡಲು ಪ್ರಾರಂಭಿಸುತ್ತವೆ.
  • ಕಿರಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬೀಜಕೋಶಗಳು ತುಂಬುವುದಿಲ್ಲ.
  • ಬೇರುಗಳು ಮತ್ತು ಕಾಂಡದ ಆಂತರಿಕ ಅಂಗಾಂಶಗಳಲ್ಲಿ ಕೆಂಪು-ಮಿಶ್ರಿತ ಕಂದು ಬಣ್ಣದ ಧಾನ್ಯದ ರೀತಿಯ ಬಣ್ಣ ಕುಂದುವಿಕೆ ಉಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ರೋಗವು ಬೆಳವಣಿಗೆಯ ಯಾವುದೇ ಹಂತದಲ್ಲಿ ಬರಬಹುದು ಆದರೆ ಹೂಬಿಡುವ ಹಂತದ ಆರಂಭದಲ್ಲಿ ಸಸ್ಯಗಳು ಬೇಗ ರೋಗಕ್ಕೆ ತುತ್ತಾಗಬಹುದು. ದೀರ್ಘಾವಧಿಯ ಬೆಚ್ಚಗಿನ, ಶುಷ್ಕ ವಾತಾವರಣದಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಗೋಚರಿಸುತ್ತವೆ. ಸಸ್ಯಗಳಲ್ಲಿ ಶಕ್ತಿ ಕಡಿಮೆಯಿರುತ್ತದೆ, ಮತ್ತು ಅವು ದಿನದ ಅತ್ಯಂತ ಬಿಸಿಲಿನ ಸಮಯದಲ್ಲಿ ಬಾಡಲು ಪ್ರಾರಂಭಿಸುತ್ತವೆ, ಮತ್ತು ರಾತ್ರಿಯ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತವೆ. ಎಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಬೀಜಕೋಶಗಳು ತುಂಬುವುದಿಲ್ಲ. ಬೇರುಗಳು ಮತ್ತು ಕಾಂಡದಲ್ಲಿ ಕಂಡುಬರುವ ಕೊಳೆತದಿಂದ ಒಳಗಿನ ಅಂಗಾಂಶಗಳಲ್ಲಿ ಕೆಂಪು-ಮಿಶ್ರಿತ ಕಂದು ಬಣ್ಣದ ಹರಳು ರೀತಿಯ ಕುಂದುವಿಕೆ ಕಂಡುಬರುತ್ತದೆ. ಕಾಂಡದ ತಳದಲ್ಲಿ ಅಲ್ಲಲ್ಲೆ ಕಪ್ಪು ಬಣ್ಣದ ಕಲೆಗಳು ಹರಡಿರುತ್ತವೆ, ಮತ್ತು ಇದು ಶಿಲೀಂಧ್ರ ಬೆಳವಣಿಗೆಯ ಮತ್ತೊಂದು ಲಕ್ಷಣವಾಗಿದೆ.

Recommendations

ಜೈವಿಕ ನಿಯಂತ್ರಣ

ಪರಾವಲಂಬಿ ಶಿಲೀಂಧ್ರವಾಗಿರುವ ಟ್ರೈಕೋಡರ್ಮಾ ಜಾತಿಯ ಇತರ ಶಿಲೀಂಧ್ರಗಳನ್ನು ಪರಾವಲಂಬಿಗೊಳಿಸುತ್ತದೆ, ಅವುಗಳಲ್ಲಿ ಮ್ಯಾಕ್ರೋಫೊಮಿನಾ ಫಾಸಿಯೋಲಿನ ಒಂದಾಗಿದೆ. ಬಿತ್ತನೆಯ ಸಮಯದಲ್ಲಿ ಟ್ರೈಕೋಡರ್ಮಾ ವಿರಿಡೆಯನ್ನು ಮಣ್ಣಿಗೆ (5 ಕೆಜಿ ಪುಷ್ಟೀಕರಿಸುವುದಕ್ಕೆ 250 ಕೆಜಿಯಷ್ಟು FYM ಅಥವಾ ವರ್ಮಿಕಾಂಪೋಸ್ಟ್) ಹಾಕುವುದರಿಂದ ರೋಗದ ಸಂಭಾವ್ಯತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಇನ್ನಿತರ ವಿಧಾನಗಳೆಂದರೆ ಶಿಲೀಂಧ್ರಗಳನ್ನು ನಿಯಂತ್ರಿಸಲು ಬ್ಯಾಕ್ಟೀರಿಯಮ್ ರೈಜೊಬಿಯಮ್ ಜಾತಿಯ ಬಳಕೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಬೀಜಗಳಿಗೆ ಶಿಲೀಂಧ್ರನಾಶಕಗಳನ್ನು ಹಾಕುವುದು ಅಥವಾ ಎಲೆಗೊಂಚಲುಗಳ ಸಂಸ್ಕರಣೆಯಿಂದ ಚಾರ್ಕೋಲ್ ಕೊಳೆತವನ್ನು ನಿಯಮಿತವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಬಿತ್ತನೆಯ ಸಮಯದಲ್ಲಿ ಇನಾಕ್ಯುಲಮ್ ಅನ್ನು ಕಡಿಮೆ ಮಾಡಲು 3 ಗ್ರಾಂ/ಕೆಜಿ ಬೀಜದಂತೆ ಮ್ಯಾಂಕೊಜೇಬಿನೊಂದಿಗೆ ಬೀಜಗಳ ಸಂಸ್ಕರಣೆಯನ್ನು ಯೋಜಿಸಬಹುದು. 80 ಕೆಜಿ/ ಪ್ರತಿ ಹೆಕ್ಟೇರ್ ನಂತೆ ಎಂಒಪಿ ಯನ್ನು ಎರಡು ಭಾಗಗಳಲ್ಲಿ ಹಾಕುವುದೂ ಸಹ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡುತ್ತದೆ.

ಅದಕ್ಕೆ ಏನು ಕಾರಣ

ಮ್ಯಾಕ್ರೊಫೊಮಿನ ಫಸಿಯೋಲಿನ ಎಂಬ ಶಿಲೀಂಧ್ರದಿಂದ ಸೋಯಾಬೀನಿನ ಚಾರ್ಕೋಲ್ ಕೊಳೆತವು ಉಂಟಾಗುತ್ತದೆ. ಇದು ಹೊಲದಲ್ಲಿ ಅಥವಾ ಮಣ್ಣಿನಲ್ಲಿನಲ್ಲಿರುವ ಸಸ್ಯದ ಉಳಿಕೆಗಳಲ್ಲಿ ಚಳಿಗಾಲವನ್ನು ಕಳೆಯುತ್ತದೆ, ಮತ್ತು ಋತುವಿನ ಆರಂಭದಲ್ಲಿ ಸಸ್ಯಗಳಿಗೆ ಬೇರಿನ ಮೂಲಕ ಸೋಂಕು ಮಾಡುತ್ತದೆ. ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳು (ಉದಾಹರಣೆಗೆ, ಉಷ್ಣ, ಶುಷ್ಕ ವಾತಾವರಣ) ಸಸ್ಯಗಳಿಗೆ ಒತ್ತಡ ನೀಡುವವರೆಗೆ ರೋಗಲಕ್ಷಣಗಳು ಸುಪ್ತವಾಗಿ ಉಳಿಯಬಹುದು. ಬೇರಿನ ಒಳಗಿನ ಅಂಗಾಂಶಗಳಿಗೆ ಉಂಟಾದ ಹಾನಿಯ ಕಾರಣದಿಂದ ಸಸ್ಯಗಳಿಗೆ ನೀರಿನ ಅಗತ್ಯತೆ ಹೆಚ್ಚು ಇರುವಾಗಲೇ ಅದರ ಗ್ರಹಿಕೆಯನ್ನು ದುರ್ಬಲಗೊಳಿಸುತ್ತದೆ. ಇತರ ಶಿಲೀಂಧ್ರಗಳಂತಲ್ಲದೆ, ಚಾರ್ಕೋಲ್ ರಾಟ್ ಶಿಲೀಂಧ್ರದ ಚಟುವಟಿಕೆ ಮತ್ತು ಬೆಳವಣಿಗೆಯು ಒಣ ಮಣ್ಣಿನಿಂದ (27 ರಿಂದ 35 °C) ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಹೊಲದಲ್ಲಿ ಅಧಿಕ ಸೀಡ್ಲಿಂಗ್ ರೇಟನ್ನು ತಡೆಗಟ್ಟಿ.
  • ಶುಷ್ಕ, ಉಷ್ಣ ವಾತಾವರಣದಲ್ಲಿ ಹೊಲಕ್ಕೆ ನಿಯಮಿತವಾಗಿ ನೀರಾವರಿ ಮಾಡಿ.
  • ಆಳವಾದ ಬೇಸಿಗೆಯ ಉಳುಮೆ ಮಣ್ಣಿನಲ್ಲಿ ರೋಗಕಾರಕದ ಇನಾಕ್ಯುಲಮ್ ಅನ್ನು ಕಡಿಮೆ ಮಾಡಬಹುದು.
  • ಹವಾಮಾನ ಮಾದರಿಗಳನ್ನು ಅವಲಂಬಿಸಿ ಆರಂಭಿಕ ಅಥವಾ ಋತುವಿನ ಕೊನೆಯ ಪ್ರಭೇದಗಳನ್ನು ಬಳಸಿ.
  • ಗೋಧಿ ತರಹದ ಹೋಸ್ಟ್ ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ ಅಥವಾ ಭೂಮಿಯನ್ನು ಪಾಳು ಬಿಡಲು ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ