ಸೋಯಾಬೀನ್

ಸಡನ್ ಡೆತ್ ಸಿಂಡ್ರೋಮ್

Fusarium virguliforme

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆ ಸಿರೆಗಳ ನಡುವೆ ಅಗಲವಾದ, ಹರಡಿರುವ, ಹಳದಿ ಕಲೆಗಳು ಕಂಡುಬರುತ್ತವೆ.
  • ಕಲೆಗಳು ಬೆಳೆಯುವುದು ಮತ್ತು ಒಣಗುವುದು, ನಂತರ ಉದುರಬಹುದು.
  • ಕಾಂಡ ಮತ್ತು ಬೇರು ಕಂದು ಬಣ್ಣಕ್ಕೆ ತಿರುಗುವುದು.
  • ಹೂವುಗಳ ಬೆಳವಣಿಗೆ ನಿಂತು ಉದುರಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಹೂಬಿಡುವ ಹಂತದಲ್ಲಿ ಸಣ್ಣ, ತಿಳಿ ಹಸಿರು ಬಣ್ಣದ ವೃತ್ತಾಕಾರದ ಕಲೆಗಳು ಎಲೆಗಳ ಮೇಲೆ ಕಾಣಿಸುತ್ತವೆ. ಎಲೆಗಳ ಮೇಲೆ ಅಂತರನಾಳೀಯ ಕ್ಲೋರೋಸಿಸ್ ಮತ್ತು ಅದರ ನಂತರ ನೆಕ್ರೋಸಿಸ್ ಕಂಡುಬರುತ್ತವೆ. ರೋಗ ಹೆಚ್ಚಾದಂತೆ, ಸಿರೆಗಳ ನಡುವಿನ ನೆಕ್ರೋಟಿಕ್ ಅಂಗಾಂಶವು ನಿರ್ಜೀವಗೊಂಡು ಉದುರಬಹುದು, ಮತ್ತು ಎಲೆಗಳು ಸೊರಗಿದಂತೆ ಕಾಣುತ್ತವೆ. ಅಂತಿಮವಾಗಿ ಎಲೆಗಳು ಒಣಗುತ್ತವೆ, ಸುರುಳಿಯಾಗುತ್ತವೆ ಅಥವಾ ಉದುರಿಹೋಗುತ್ತವೆ ಆದರೆ ಎಲೆಗಳ ತೊಟ್ಟು ಕಾಂಡಕ್ಕೆ ಅಂಟಿಕೊಂಡಿರುತ್ತವೆ. ಕೊಳೆತದ ಚಿಹ್ನೆಗಳು (ಕಂದು ಬಣ್ಣದ ವಿಪರ್ಣನ) ಕೆಳಗಿನ ಕಾಂಡ ಮತ್ತು ಮುಖ್ಯ ಬೇರಿನ ಆಂತರಿಕ ಅಂಗಾಂಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹೂವುಗಳ ಬೆಳವಣಿಗೆ ಸ್ಥಗಿತಗೊಳ್ಳಬಹುದು ಮತ್ತು ಬೀಜಕೋಶಗಳು ಬೆಳೆಯುವುದಿಲ್ಲ ಅಥವಾ ತುಂಬದೇ ಇರಬಹುದು.

Recommendations

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ ಈ ಶಿಲೀಂಧ್ರಕ್ಕೆ ಯಾವುದೇ ಜೈವಿಕ ನಿಯಂತ್ರಣದ ಬಗ್ಗೆ ತಿಳಿದುಬಂದಿಲ್ಲ. ನಿಮಗೆ ಯಾವುದಾದರೂ ವಿಧದ ಬಗ್ಗೆ ತಿಳಿದಿದ್ದಲ್ಲಿ ದಯಮಾಡಿ ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಎಲೆಗಳ ಮೇಲೆ ಸಿಂಪಡಿಸುವ ಶಿಲೀಂಧ್ರನಾಶಕಗಳು ಪರಿಣಾಮಕಾರಿಯಾಗಿರುವುದಿಲ್ಲ ಏಕೆಂದರೆ ಶಿಲೀಂಧ್ರವು ಬೇರಿನಲ್ಲಿರುತ್ತವೆ. ಬದಲಾಗಿ, ಫ್ಲೋಪಿರಾಮ್ ನಂತಹ ನಿರ್ದಿಷ್ಟ ಶಿಲೀಂಧ್ರನಾಶಕಗಳನ್ನು ಬೀಜಗಳಿಗೆ ಹಾಕಿ.

ಅದಕ್ಕೆ ಏನು ಕಾರಣ

ಫ್ಯುಸಾರಿಯಮ್ ವರ್ಗುಲಿಫೋರ್ಮ್ ಎಂಬ ಶಿಲೀಂಧ್ರವು ಮಣ್ಣಿನಲ್ಲಿ ಅಥವಾ ಸೋಂಕಿತ ಬೆಳೆ ಉಳಿಕೆಗಳಲ್ಲಿ ಬೀಜಕಗಳಾಗಿ ಬದುಕುತ್ತದೆ. ಇದು ಸಸ್ಯಕ ಹಂತದ ಆರಂಭದಲ್ಲಿ ಬೇರುಗಳ ಮೂಲಕ ಸಸ್ಯಗಳಿಗೆ ಸೋಂಕು ತಗುಲಿಸುತ್ತದೆ ಮತ್ತು ಸಸ್ಯವನ್ನು ವಸಾಹತುಗೊಳಿಸುತ್ತದೆ ಆದರೆ ಹೂಬಿಡುವ ಸಮಯದಲ್ಲಿ ಮಾತ್ರ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ತಣ್ಣನೆಯ ಮತ್ತು ತೇವವಾದ ಮಣ್ಣು, ಮಳೆಯ ಹವಾಮಾನದ ಪರಿಸ್ಥಿತಿಗಳು, ದಟ್ಟವಾಗಿ ನೆಟ್ಟಿರುವ ಹೊಲಗಳು, ಕಳಪೆ ಒಳಚರಂಡಿ ವ್ಯವಸ್ಥೆ ಅಥವಾ ಸಾಂದ್ರೀಕೃತ ಮಣ್ಣುಗಳು ಸೋಂಕಿಗೆ ಸೂಕ್ತ ಸ್ಥಿತಿಗಳು. ಸೋಯಾಬೀನ್ ಸಿಸ್ಟ್ ನೆಮಟೋಡ್ಗಳು, ಕೀಟಗಳು ಮತ್ತು ನಿರ್ವಹಣಾ ಪದ್ಧತಿಗಳಲ್ಲಿನ ತಪ್ಪುಗಳಿಂದಾಗುವ ಯಾಂತ್ರಿಕ ಗಾಯಗಳು ಸಹ ಸೋಂಕಿನ ಅಪಾಯಕ್ಕೆ ಸಹಕಾರಿಯಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ಉತ್ತಮ ಗುಣಮಟ್ಟದ ಪ್ರಮಾಣೀಕೃತ ಬೀಜಗಳನ್ನು ಬಳಸಿ.
  • ಚೇತರಿಸಿಕೊಳ್ಳುವ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ದೂರವಿರಲು ಋತುವಿನ ಆರಂಭದಲ್ಲೇ ನಾಟಿ ಮಾಡಿ.
  • ಸಸ್ಯಗಳ ನಡುವೆ ಗಾಳಿಯಾಡುವ ಸಲುವಾಗಿ ಸಾಕಷ್ಟು ಜಾಗವನ್ನು ಬಿಡಿ.
  • ಆರಂಭಿಕ ರೋಗಲಕ್ಷಣಗಳನ್ನು ಕಂಡುಹಿಡಿಯಲು ನಿಮ್ಮ ಹೊಲಗಳನ್ನು ಆಗಾಗ್ಗೆ ಪರಿಶೀಲಿಸಿ.
  • ಮಣ್ಣಿನ ಸಂಕೋಚನವನ್ನು ತಡೆಗಟ್ಟಲು ಹೊಲದಲ್ಲಿ ಉಳುಮೆ ಮಾಡಿ.
  • ಆಯಾ ಸಮಯಕ್ಕೆ ಸರಿಹೊಂದುವ ಹೋಸ್ಟ್ ಅಲ್ಲದ ಸಸ್ಯಗಳೊಂದಿಗೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ