ಸೋಯಾಬೀನ್

ಸೋಯಾಬೀನ್ ನ ಪರ್ಪಲ್ ಸೀಡ್ ಸ್ಟೇನ್ (ಬೀಜಗಳ ಮೇಲೆ ಕೆನ್ನೀಲಿ ಬಣ್ಣದ ಕಲೆ)

Cercospora kikuchii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮೇಲಿನ ಎಲೆಗಳಲ್ಲಿ ಕಂದು ಬಣ್ಣ ಅಥವಾ ಕೆನ್ನೀಲಿ ಬಣ್ಣದ ವಿಪರ್ಣನವಾದ ಮಚ್ಚೆಗಳಿರುತ್ತವೆ.
  • ಕಾಂಡಗಳು ಮತ್ತು ಬೀಜಕೋಶಗಳ ಮೇಲೆ ಕೆಂಪು-ಕಂದು ಬಣ್ಣದ ಕಲೆಗಳು ಸಹ ಕಾಣಿಸಿಕೊಳ್ಳಬಹುದು.
  • ಬೀಜಗಳ ಮೇಲೆ ವಿವಿಧ ಗಾತ್ರದ (ಚುಕ್ಕೆಗಳಿಂದ ದೊಡ್ಡ ತೇಪೆಗಳವರೆಗೆ) ನೇರಳೆ ಬಣ್ಣ ಅಥವಾ ಗುಲಾಬಿ ಬಣ್ಣದ ವಿಪರ್ಣನ ಕಲೆಗಳು.
  • ಚಿಗುರೊಡೆಯುವ ಪ್ರಮಾಣ ಮತ್ತು ಮೊಳಕೆಯೊಡೆಯುವ ಸಾಮರ್ಥ್ಯದ ಮೇಲೆ ಪರಿಣಾಮವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಬೆಳವಣಿಗೆಯ ನಂತರದ ಹಂತಗಳಲ್ಲಿ, ಹೂಬಿಡುವಾಗ ಮತ್ತು ಬೀಜಕೋಶಗಳು ಹುಟ್ಟುವ ಸಮಯದಲ್ಲಿ ಇದರ ರೋಗಲಕ್ಷಣಗಳು ಗೋಚರಿಸುತ್ತವೆ. ಈ ರೋಗದ ಲಕ್ಷಣಗಳೆಂದರೆ, ಮೇಲಿನ ಎಲೆಗಳಲ್ಲಿ ಕೆನ್ನೀಲಿ ಬಣ್ಣದದಿಂದ ಕಂದು ಬಣ್ಣದ ಕುಂದಿದ ಮಚ್ಚೆಗಳಿರುತ್ತವೆ ಮತ್ತು ಅವುಗಳು ಸೂರ್ಯನ ಬೆಳಕಿಗೆ ಸುಟ್ಟಂತೆ ಕಾಣುತ್ತವೆ. ಕಾಂಡಗಳು ಮತ್ತು ಬೀಜಕೋಶಗಳ ಮೇಲೆ ಕೆಂಪು-ಕಂದು ಬಣ್ಣದ ಕಲೆಗಳು ಸಹ ಕಾಣಿಸಿಕೊಳ್ಳಬಹುದು. ಸೋಂಕಿತ ಬೀಜಗಳು ಆರೋಗ್ಯಕರವಾಗಿ ಕಾಣಿಸಬಹುದು ಅಥವಾ ಬೀಜದ ಸಿಪ್ಪೆಯ ಮೇಲೆ ದೊಡ್ಡ ತೇಪೆಗಳು ಅಥವ ಸಣ್ಣ ಚುಕ್ಕೆಗಳ ರೀತಿಯಲ್ಲಿ ವಿವಿಧ ಗಾತ್ರದ ಕೆನ್ನೇರಳೆ ಅಥವಾ ಗುಲಾಬಿ ಬಣ್ಣದ ಕಲೆಗಳಿರುತ್ತವೆ. ಇದು ಇಳುವರಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ, ಆದರೆ ಮೊಳಕೆಯೊಡೆಯುವ ಪ್ರಮಾಣ ಮತ್ತು ಸಸ್ಯೋತ್ಪತ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಸೆರ್ಕೊಸ್ಪೊರಾ ಕಿಕುಚಿಯ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ತಿಳಿದಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ವಿಧ ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ವಿಪರ್ಣನಗೊಂಡ ಬೀಜಗಳ ಶೇಕಡ ಅಧಿಕವಿದ್ದರೆ ಬೀಜಗಳನ್ನು ಶಿಲೀಂಧ್ರನಾಶಕಗಳೊಂದಿಗೆ ಸಂಸ್ಕರಣೆ ಮಾಡಿ. ಇದು ರೋಗದ ಹರಡುವ ಸಾಮರ್ಥ್ಯದ ಮೇಲೆ ಸ್ವಲ್ಪ ಮಟ್ಟಿಗೆ ನಿಯಂತ್ರಣವನ್ನು ನೀಡಬಹುದು. ಎಲೆ ರೋಗ ಮತ್ತು ಬೀಜಕೋಶಗಳಿಗೆ ಸೋಂಕಾಗುವುದನ್ನು ತಡೆಗಟ್ಟಲು ಬೀಜಕೋಶ ರಚನೆಯ ಮುಂಚಿತ ಹಂತಗಳಲ್ಲಿ ಎಲೆಗಳ ಮೇಲೆ ಶಿಲೀಂಧ್ರನಾಶಕಗಳನ್ನು, ಉದಾಹರಣೆಗೆ ಮ್ಯಾಂಕೊಜೆಬ್ (2.5 ಗ್ರಾಂ / ಲೀ ನೀರು)ಅನ್ನು ಸಿಂಪಡಿಸಿ.

ಅದಕ್ಕೆ ಏನು ಕಾರಣ

ಸೆರ್ಕೊಸ್ಪೊರಾ ಕುಕುಚಿ ಎಂಬ ಶಿಲೀಂಧ್ರದಿಂದ ಸೆರ್ಕೊಸ್ಪೊರಾ ಲೀಫ್ ಸ್ಪಾಟ್ ಉಂಟಾಗುತ್ತದೆ. ಮಣ್ಣಿನಲ್ಲಿರುವ ಸಸ್ಯ ಉಳಿಕೆಗಳು ಮತ್ತು ಬೀಜಗಳಲ್ಲಿ ಈ ಶಿಲೀಂಧ್ರ ಚಳಿಗಾಲವನ್ನು ಕಳೆಯುತ್ತದೆ. ಅಧಿಕ ಸಾಪೇಕ್ಷ ಆರ್ದ್ರತೆಗಳು, ಬೆಚ್ಚಗಿನ ತಾಪಮಾನಗಳು (ಸುಮಾರು 22 ರಿಂದ 26 ಡಿಗ್ರಿ ಸೆಲ್ಸಿಯಸ್), ಗಾಳಿ ಮತ್ತು ಮಳೆ ಎರಚಲು ಈ ಶಿಲೀಂಧ್ರವನ್ನು ಎಲೆಗಳ ಮೇಲೆ ಹರಡಲು ಮತ್ತು ರೋಗದ ಬೆಳವಣಿಗೆಗೆ ಸಹಾಯವಾಗುವಂತಹ ಪರಿಸ್ಥಿತಿಗಳು. ಆರಂಭಿಕ ಸೋಂಕುಗಳು ಹೆಚ್ಚಾಗಿ ಸುಪ್ತವಾಗಿದ್ದು, ಹೂಬಿಡುವ ಅಥವಾ ಬೀಜ ಕೋಶ ರಚನೆಯ ಹಂತಗಳವರೆಗೆ ಗೋಚರಿಸುವುದಿಲ್ಲ. ಶಿಲೀಂಧ್ರವು ಕ್ರಮೇಣವಾಗಿ ಬೀಜಕೋಶವನ್ನು ಪ್ರವೇಶಿಸುತ್ತದೆ ಮತ್ತು ಬೀಜಗಳ ಮೇಲೆ ಬೆಳೆಯುತ್ತದೆ, ಮತ್ತು ಅವುಗಳಲ್ಲಿ ಕೆನ್ನೀಲಿ ಬಣ್ಣ ಅಥವಾ ಕಂದು ಬಣ್ಣದ ಮಚ್ಚೆ ಬರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ರೋಗಕಾರಕ-ಮುಕ್ತ ಬೀಜಗಳನ್ನು ಬಳಸಿ.
  • ಸಹಿಷ್ಣು ಪ್ರಭೇದಗಳು ಲಭ್ಯವಿದೆ.
  • ಸೋಂಕಾಗುವ ಸಂಭಾವ್ಯತೆಯನ್ನು ಮಿತಿಗೊಳಿಸಲು ನಾನ್ ಹೋಸ್ಟ್ ಸಸ್ಯಗಳೊಂದಿಗೆ ಸರದಿ ಬೆಳೆ ಮಾಡಿ.
  • ಉಳುಮೆ ಮಾಡುವುದು ಮತ್ತು ಸೌರ ವಿಕಿರಣ ಮತ್ತು ಗಾಳಿಗೆ ಈ ಶಿಲೀಂಧ್ರಗಳನ್ನು ಒಡ್ಡುವುದರಿಂದ ಸಸ್ಯದ ಉಳಿಕೆಗಳ ಮೇಲೆ ಇವುಗಳ ಬದುಕುಳಿಯುವ ಸಾಮರ್ಥ್ಯ ಕಡಿಮೆಯಾಗುತ್ತದೆ.
  • ಕೊಯ್ಲಿನ ನಂತರ ಸಸ್ಯ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ