ಮೆಕ್ಕೆ ಜೋಳ

ಮುಸುಕಿನ ಜೋಳದ ನಾರ್ದರ್ನ್ ಎಲೆ ಚುಕ್ಕೆ

Cochliobolus carbonum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಉದ್ದವಾದ ಅಂಡಾಕಾರದ ಅಥವಾ ವೃತ್ತಾಕಾರದ ತಿಳಿ-ಕಂದು ಬಣ್ಣದ ಗಾಯಗಳು ಕಂಡುಬರುತ್ತವೆ.
  • ಅವುಗಳ ಸುತ್ತಲೂ ದಪ್ಪವಾದ ಅಂಚನ್ನೂ ಸಹ ನೋಡಬಹುದು ಮತ್ತು ಇದು ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ.
  • ಕೆಲವು ಸಂದರ್ಭಗಳಲ್ಲಿ, ಈ ಗಾಯಗಳು ಎಲೆಯ ಕವಚಗಳು ಮತ್ತು ತೆನೆಯ ಹೊರ ಪದರದ ಮೇಲೂ ಕಂಡುಬರಬಹುದು.
  • ಕೆಲವೊಮ್ಮೆ ಕಾಳುಗಳಲ್ಲಿ ಕಪ್ಪು ಮಚ್ಚೆಗಳನ್ನೂ ಸಹ ಕಾಣಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ರೋಗಕಾರಕದ ಶಕ್ತಿ, ಸಸ್ಯವು ರೋಗಕ್ಕೆ ತುತ್ತಾಗುವ ಮಟ್ಟ ಮತ್ತು ಪರಿಸರ ಪರಿಸ್ಥಿತಿಗಳ ಆಧಾರದ ಮೇಲೆ ರೋಗಲಕ್ಷಣಗಳು ಸ್ವಲ್ಪಮಟ್ಟಿಗೆ ಬದಲಾಗುತ್ತವೆ. ಸಸ್ಯದ ಬೆಳವಣಿಗೆಯ ಕೊನೆಯ ಹಂತಗಳಲ್ಲಿ ಮೊದಲ ರೋಗಲಕ್ಷಣಗಳು ಕಂಡುಬರುತ್ತವೆ. ಅಂದರೆ, ಸಾಮಾನ್ಯವಾಗಿ ರೇಷ್ಮೆ ಎಳೆಗಳು ಹೊರಬರುವ ಸಮಯದಲ್ಲಿ ಅಥವಾ ಸಂಪೂರ್ಣ ಪರಿಪಕ್ವತೆಯ ಸಮಯದಲ್ಲಿ. ಉದ್ದವಾದ ಅಂಡಾಕಾರದ ಅಥವಾ ವೃತ್ತಾಕಾರದ ತಿಳಿ-ಕಂದು ಬಣ್ಣದ ಗಾಯಗಳು ಕಂಡುಬರುತ್ತವೆ. ಅವುಗಳ ಸುತ್ತಲೂ ದಪ್ಪವಾದ ಅಂಚನ್ನೂ ಸಹ ನೋಡಬಹುದು. ಗಾಯಗಳ ಉದ್ದ ಮತ್ತು ಅಗಲ ರೋಗಕಾರಕದ ಬಲದ ಮೇಲೆ ಮತ್ತು ನಾವು ಬಳಸುವ ಸಸ್ಯ ಪ್ರಕಾರದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಗಾಯಗಳು ಎಲೆಯ ಕವಚಗಳು ಮತ್ತು ತೆನೆಯ ಹೊರ ಪದರದ ಮೇಲೂ ಕಂಡುಬರಬಹುದು. ಕೆಲವೊಮ್ಮೆ ಕಾಳುಗಳಲ್ಲಿ ಕಪ್ಪು ಮಚ್ಚೆಗಳನ್ನೂ ಸಹ ಕಾಣಬಹುದು.

Recommendations

ಜೈವಿಕ ನಿಯಂತ್ರಣ

ಇಲ್ಲಿ ಹೆಸರಿಸಲಾದ ಚಿಕಿತ್ಸೆಗಳನ್ನು ಸಣ್ಣ ಪ್ರಮಾಣದಲ್ಲಿ ಮಾತ್ರ ಬಳಸಲಾಗಿದೆ. ಸ್ವಲ್ಪ ಮಟ್ಟಿಗೆ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಇಂಡಿಯನ್ ಬೇಯಲ್ (ಏಗಲ್ ಮರ್ಮೆಲಸ್) ನಿಂದ ತೆಗೆದ ಸಾರಭೂತ ತೈಲವು ಹೆಲ್ಮಿನ್ಥೋಸ್ಪೋರಿಯಮ್ ಕಾರ್ಬೊನಮ್ ವಿರುದ್ಧ ಸಕ್ರಿಯವಾಗಿರುತ್ತದೆ. ಕೆಲವು ಮೆಕ್ಕೆ ಜೋಳದ ಪ್ರಭೇದಗಳ (ನಿರೋಧಕ ಮತ್ತು ರೋಗಕ್ಕೆ ತುತ್ತಾಗುವ ಪ್ರಭೇದ ಎರಡೂ ಒಂದೇ ರೀತಿ)ಎಲೆಯ ಸಾರಗಳಿಂದ ತೆಗೆದ ವಿವಿಧ ಸಂಯುಕ್ತಗಳು ಶಿಲೀಂಧ್ರಕ್ಕೆ ವಿಷಕಾರಿಯಾಗಿರಬಹುದು. ಕಾಂಡ ಕೊಳೆತ ರೋಗಕ್ಕೆ ತುತ್ತಾದ ಮೆಕ್ಕೆ ಜೋಳ ಗಿಡಗಳ ತಿರುಳಿನಿಂದ ಹೊರತೆಗೆದ ಶಿಲೀಂಧ್ರಗಳು ಸಿ. ಕಾರ್ಬೊನಮ್ ಅನ್ನು ಒಳಗೊಂಡಂತೆ ಸಸ್ಯದ ರೋಗಕಾರಕ ಶಿಲೀಂಧ್ರಗಳ ಮೇಲೆ ಪರಾವಲಂಬಿಯಾಗುವ ಸಾಧ್ಯತೆಗಳೂ ಇವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗಕ್ಕೆ ಬೇಗ ತುತ್ತಾಗುವ ಸಸ್ಯಗಳಲ್ಲಿ, ಸಿಲ್ಕಿಂಗ್ ನ ಆರಂಭಿಕ ಹಂತದಲ್ಲಿ ಎಲೆಗೊಂಚಲುಗಳ ಮೇಲೆ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದು ಬಹುಶಃ ಅವಶ್ಯಕವಾದದ್ದು. ಉದಾಹರಣೆಗೆ, 2.5 ಗ್ರಾಂ/ ಲೀ ನೀರಿನಲ್ಲಿ ಮ್ಯಾಂಕೊಜೇಬನ್ನು 8-10 ದಿನಗಳ ಅಂತರದಲ್ಲಿ ಸಿಂಪಡಿಸುವುದು ರೋಗಕಾರದ ವಿರುದ್ಧ ಪರಿಣಾಮಕಾರಿಯಾಗಿದೆ.

ಅದಕ್ಕೆ ಏನು ಕಾರಣ

ಮುಸುಕಿನ ಜೋಳದ ನಾರ್ದೆರ್ನ್ ಎಲೆ ಚುಕ್ಕೆ, ಹೆಲ್ಮಿನ್ಥೋಸ್ಪೋರಿಯಮ್ ಕಾರ್ಬೊನಮ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ, ಇದು ಮಣ್ಣಿನಲ್ಲಿ ಮುಸುಕಿನ ಜೋಳದ ಉಳಿಕೆಗಳ ಮೇಲೆ ಚಳಿಗಾಲವನ್ನು ಕಳೆಯುತ್ತದೆ. ಆರ್ದ್ರ ವಾತಾವರಣದಲ್ಲಿ ಈ ಉಳಿಕೆಗಳ ಮೇಲಿರುವ ಬೀಜಕಗಳು ಸೋಂಕಿನ ಪ್ರಾಥಮಿಕ ಮೂಲವಾಗಿ ಕೆಲಸ ಮಾಡುತ್ತವೆ. ತರುವಾಯ ಸೋಂಕು ಸಸ್ಯದಿಂದ ಸಸ್ಯಕ್ಕೆ ಗಾಳಿ ಅಥವಾ ಮಳೆಯಿಂದ ಆಗುತ್ತದೆ. ರೋಗವು ಮುಖ್ಯವಾಗಿ ಬೀಜ ಉತ್ಪಾದನೆಗಾಗಿ ಬಳಸುವ ಗಿಡಗಳ ಮೇಲೆ ಹರಡುತ್ತದೆಯಾದ್ದರಿಂದ, ಹೆಚ್ಚಾಗಿ ನಿರೋಧಕ ಮಿಶ್ರತಳಿಗಳು ಬೆಳೆಯುವ ಹೊಲಗಳಲ್ಲಿ ಇದು ಹೆಚ್ಚಾಗಿ ಸಮಸ್ಯೆಯಲ್ಲ. ಮಧ್ಯಮ ತಾಪಮಾನಗಳು, ಆರ್ದ್ರ ವಾತಾವರಣ, ಮತ್ತು ಕೊಯ್ಲಿನ ನಂತರ ಹೊಲವನ್ನು ಅಲ್ಪ ಉಳುಮೆ ಮಾಡುವುದೂ ಈ ರೋಗವು ಪ್ರಗತಿ ಹೊಂದಲು ಸೂಕ್ತವಾದ ಪರಿಸ್ಥಿತಿಗಳಾಗಿರುತ್ತವೆ. ಧಾನ್ಯ ಹುಟ್ಟುವ ಹಂತದಲ್ಲಿ ಈ ರೋಗ ಬಂದರೆ, ಅದು 30 ಪ್ರತಿಶತ ಅಥವ ಅದಕ್ಕಿಂತ ಹೆಚ್ಚಿನಷ್ಟು ಇಳುವರಿ ನಷ್ಟಕ್ಕೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಹುಡುಕಿ.
  • ರೋಗ ಬೆಳವಣಿಗೆಯ ಬಗ್ಗೆ ಎಚ್ಚರವಹಿಸಲು ಭೂಮಿಯನ್ನು ವಾರಕ್ಕೊಮ್ಮೆ ಪರೀಕ್ಷಿಸಬೇಕು.
  • ಮಳೆ ಅಥವಾ ನೀರಾವರಿ ನಂತರ ಮೇಲಾವರಣ ತ್ವರಿತವಾಗಿ ಒಣಗಲು ನೆರವಾಗುವಂತೆ ಸಸ್ಯಗಳ ನಡುವೆ ಅಂತರ ಇರಲಿ.
  • ಸಸ್ಯಗಳು ಮಣ್ಣನ್ನು ಮುಟ್ಟದಂತೆ ತಡೆಯಲು ಮಣ್ಣಿನ ಮೇಲೆ ಹಸಿರುಗೊಬ್ಬರ ಹಾಕಿ.
  • ಗಾಳಿಯ ಹರಿವನ್ನು ಸುಧಾರಿಸಲು ಮತ್ತು ಮೇಲಾವರಣದಲ್ಲಿ ತೇವಾಂಶವನ್ನು ಕಡಿಮೆ ಮಾಡಲು ಕಳೆಗಳನ್ನು ನಿರ್ವಹಿಸಿ.
  • ಬೆಳೆಗಳಿಗೆ ಸೂಕ್ತವಾದ ಫಲವತ್ತತೆ ಒದಗಿಸಲು ಸಾರಜನಕ ಮತ್ತು ಪೊಟ್ಯಾಸಿಯಮ್ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಿ.
  • ಸಸ್ಯಗಳ ಒದ್ದೆಯಾಗಿದ್ದಾಗ ಕೆಲಸ ಮಾಡುವುದನ್ನು ತಪ್ಪಿಸಿ.
  • ರೋಗಕ್ಕೆ ತುತ್ತಾಗುವ ಬೆಳೆಗಳನ್ನು ಬಳಸುತ್ತಿದ್ದರೆ, ಹುರುಳಿ, ಸೋಯಾಬೀನ್ ಅಥವಾ ಸೂರ್ಯಕಾಂತಿಯಂತಹ ಆಶ್ರಯದಾತವಲ್ಲದ ಸಸ್ಯಗಳೊಂದಿಗೆ ಬೆಳೆ ಸರದಿ ಮಾಡಿ.
  • ಮಣ್ಣಿನಲ್ಲಿ ಸಸ್ಯದ ಉಳಿಕೆಗಳನ್ನು ಹೂಳಲು ಕೊಯ್ಲಿನ ನಂತರ ಉಳುಮೆ ಮಾಡುವುದರಿಂದ ಸಹ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ