ಕಬ್ಬು

ಕಬ್ಬಿನ ಸಾಮಾನ್ಯ ರಸ್ಟು

Puccinia melanocephala

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಆರಂಭಿಕ ರೋಗಲಕ್ಷಣಗಳೆಂದರೆ ಉದ್ದನೆಯ ಹಳದಿ ಬಣ್ಣದ ಎಲೆಯ ಕಲೆಗಳಾಗಿವೆ.
  • ಕಲೆಗಳು ಕೆಂಪು ಬಣ್ಣದಿಂದ- ಕಂದು ಬಣ್ಣಕ್ಕೆ ಕ್ರಮೇಣವಾಗಿ ಬದಲಾಯಿಸುತ್ತವೆ.
  • ಭಾರಿ ಹಾನಿಗೊಳಗಾದ ಎಲೆಗಳು ನೆಕ್ರೋಟಿಕ್ ಆಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಕಬ್ಬಿನ ಸಾಮಾನ್ಯ ರಸ್ಟು ಇದರ ಆರಂಭಿಕ ರೋಗಲಕ್ಷಣಗಳೆಂದರೆ ಸುಮಾರು 1-4 ಮಿಮೀ ಉದ್ದದ ಹಳದಿ ಬಣ್ಣದ ಎಲೆ ಕಲೆಗಳು. ರೋಗದ ಬೆಳವಣಿಗೆಯೊಂದಿಗೆ (ಮುಖ್ಯವಾಗಿ ಕೆಳ ಎಲೆ ಮೇಲ್ಮೈಯಲ್ಲಿ) ಕಲೆಗಳು ಎಲೆಯ ಸಿರೆಗಳ ವಿನ್ಯಾಸಕ್ಕೆ ಸಮಾನಾಂತರವಾಗಿ ಉದ್ದವಾಗುತ್ತವೆ. ಅವು 20 ಮಿಮೀ ಉದ್ದ ಮತ್ತು 1 ರಿಂದ 3 ಮಿಮೀ ಅಗಲದವರೆಗೆ ಹಿಗ್ಗುತ್ತವೆ. ಅವು ಸ್ವಲ್ಪ ಆದರೆ ನಿರ್ದಿಷ್ಟ ಕ್ಲೋರೊಟಿಕ್ ಪ್ರಭಾವಲಯದೊಂದಿಗೆ ಕಿತ್ತಳೆ-ಕಂದು ಬಣ್ಣ ಅಥವಾ ಕೆಂಪು-ಕಂದು ಬಣ್ಣದ ಕಲೆಗಳಾಗಿ ತಿರುಗುತ್ತವೆ. ನಂತರ, ರಸ್ಟಿನ ಗಂಟುಗಳು ಒಂದಾಗುತ್ತವೆ. ಇದು ಎಲೆಯ ಬಾಹ್ಯತ್ವಚೆ ಒಡೆಯುವುದಕ್ಕೆ ಮತ್ತು ನೆಕ್ರೋಟಿಕ್ ಜಾಗಗಳ ಅಭಿವೃದ್ಧಿಗೆ ಕಾರಣವಾಗುತ್ತದೆ. ಗಾಯಗಳು ಸಾಮಾನ್ಯವಾಗಿ ಎಲೆ ತುದಿಯ ಬಳಿಯಲ್ಲಿ ಹೆಚ್ಚಾಗಿರುತ್ತವೆ ಮತ್ತು ತಳದಲ್ಲಿ ಕಡಿಮೆ ಸಂಖ್ಯೆಯಲ್ಲಿರುತ್ತವೆ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಪುಸಿನಿಯಾ ಮೆಲನೊಸೆಫಲ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದನ್ನಾದರೂ ನೀವು ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರು ನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳೊಂದಿಗಿನ ಚಿಕಿತ್ಸೆಯು ಆರ್ಥಿಕವಾಗಿ ಪ್ರತಿಕೂಲವಾದದ್ದು ಮತ್ತು ಪ್ರಾಯೋಗಿಕವಾಗಿರುವುದಿಲ್ಲ.

ಅದಕ್ಕೆ ಏನು ಕಾರಣ

98% ರಷ್ಟು ಸಾಪೇಕ್ಷ ತೇವಾಂಶ ಮತ್ತು ತಂಪಾದ ರಾತ್ರಿಗಗಳೊಡನೆ ಬೆಚ್ಚಗಿನ ದಿನಗಳೊಂದಿಗೆ 20 ° ಸಿ ಮತ್ತು 25 ° ಸಿ ನಡುವಿನ ತಾಪಮಾನವು ಸಾಮಾನ್ಯ ರಸ್ಟಿಗೆ ಅನುಕೂಲಕರವಾಗಿರುತ್ತದೆ. ನಿರಂತರ ಎಲೆ ಆರ್ದ್ರತೆ (ಒಂಬತ್ತು ಗಂಟೆಗಳ ಅಥವಾ ಅದಕ್ಕಿಂತ ಹೆಚ್ಚು) ಸಹ ರೋಗದ ಹರಡುವಿಕೆಗೆ ಸಹಕಾರಿಯಾಗಿದೆ. ಅನುಕೂಲಕರ ಪರಿಸ್ಥಿತಿಗಳಲ್ಲಿ ಸಾಮಾನ್ಯ ರಸ್ಟು (ಪುಸಿನಿಯಾ ಮೆಲನೊಸೆಫಲ) ಸೋಂಕಿನ ಚಕ್ರವು 14 ದಿನಗಳಿಗಿಂತ ಕಡಿಮೆಯಿರುತ್ತದೆ. ಎರಡು ಮತ್ತು ಆರು ತಿಂಗಳ ವಯಸ್ಸಿನ ಸಸ್ಯಗಳು ಸಾಮಾನ್ಯ ರಸ್ಟಿಗೆ ಹೆಚ್ಚು ಒಳಗಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ತಳಿಯನ್ನು ಬೆಳೆಸಿ.
  • ಮಣ್ಣಿನ ಸಮತೋಲಿತ ಪೋಷಕಾಂಶ ಸ್ಥಿತಿಯನ್ನು ಕಾಪಾಡಿ.
  • ಬೆಳವಣಿಗೆಯ ಅವಧಿಯಲ್ಲಿ ಮಣ್ಣಿಗೆ ಸಾಕಷ್ಟು ನೀರಿನ ಪೂರೈಕೆ ಇರುವಂತೆ ನೋಡಿಕೊಳ್ಳಿ.
  • ಉದ್ದನೆಯ ನೇಗಿಲ ಸಾಲಿನ ಅಥವಾ ಜೋಡಿ ಸಾಲಿನ ಕಸಿ ಮಾಡುವ ವಿಧಾನಗಳನ್ನು ಅನ್ವಯಿಸಿಕೊಳ್ಳಿ.
  • ಉಳಿಕೆಗಳನ್ನು ಮತ್ತು ಪೀಡಿತ ಬೆಳೆಗಳ ಕೊಯ್ಲಿನ ಕಸವನ್ನು ತೆಗೆದುಹಾಕಿ ಮತ್ತು ಅವನ್ನು ಸುಟ್ಟು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ