ಆಲಿವ್

ಆಲಿವ್ ಎಲೆ ಚುಕ್ಕೆ

Venturia oleagina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲಿನ ಮೇಲ್ಮೈಯಲ್ಲಿ ಕಪ್ಪಾದ, ಮಸಿ ಕಲೆಗಳು.
  • ಇವು ಕ್ರಮೇಣವಾಗಿ ಬೆಳೆಯುತ್ತವೆ.
  • ಪ್ರತಿ ಕಲೆಯ ಸುತ್ತಲೂ ಹಳದಿ ಹೊರವಲಯ.
  • ಎಲೆಗಳ ಉದುರುವಿಕೆ, ರೆಂಬೆಗಳ ಸಾವು ಮತ್ತು ಹೂವು ಅರಳಲು ವಿಫಲವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಆಲಿವ್

ಆಲಿವ್

ರೋಗಲಕ್ಷಣಗಳು

ವಸಂತ ಋತುವಿನ ಕೊನೆಯಲ್ಲಿ, ಮಸಿ ಕಲೆಗಳು (ಸಾಮಾನ್ಯವಾಗಿ ನವಿಲು ಚುಕ್ಕೆಗಳು(ಪಿಕಾಕ್ ಸ್ಪಾಟ್) ಎಂದು ಕರೆಯಲಾಗುತ್ತದೆ) ಎಲೆಗಳ ಮೇಲಿನ ಮೇಲ್ಮೈಯಲ್ಲಿ ಕೆಳಗಿನ ಮೇಲಾವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಚುಕ್ಕೆಗಳು ಕಾಂಡ ಮತ್ತು ಹಣ್ಣಿನ ಮೇಲೆ ಕಾಣಿಸಿಕೊಳ್ಳಬಹುದು. ಆದರೆ ಎಲೆಗಳ ಮೇಲ್ಮೈಯಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಎಲೆಗಳ ಕೆಳಭಾಗವು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ಋತು ಮುಂದುವರೆದಂತೆ, ಕಪ್ಪು ಕಲೆಗಳು ಬೆಳೆಯುತ್ತವೆ ಮತ್ತು ಎಲೆಯ ಗಣನೀಯ ಭಾಗವನ್ನು ಆವರಿಸಬಹುದು (0.25 ಮತ್ತು 1.27 ಸೆಂಮೀ ವ್ಯಾಸದಲ್ಲಿ). ಹಳದಿ ಹೊರವಲಯವು ಕ್ರಮೇಣ ಈ ಕಲೆಗಳ ಸುತ್ತಲೂ ಹೊರಹೊಮ್ಮುತ್ತದೆ ಮತ್ತು ಇಡೀ ಎಲೆಗೆ ವಿಸ್ತರಿಸುತ್ತದೆ. ಈ ಮರಗಳಲ್ಲಿ ಎಲೆ ಉದುರಬಹುದು ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ರೆಂಬೆಗಳೂ ಸಾಯಬಹುದು. ಹೂವುಗಳು ಅರಳದೇ ಹೋಗಬಹುದು. ಇದು ಬೆಳೆ ಉತ್ಪಾದನೆಯಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಶರತ್ಕಾಲದಲ್ಲಿ ಹಣ್ಣುಗಳನ್ನು ಕೊಯ್ಲು ಮಾಡಿದ ನಂತರ ಬೋರ್ಡೆಕ್ಸ್ ಮಿಶ್ರಣದಂತಹ ಸಾವಯವ ತಾಮ್ರದ ಸಂಯುಕ್ತಗಳನ್ನು ಮರಗಳ ಎಲೆಗಳಿಗೆ ಸಿಂಪಡಿಸಿ ಮತ್ತು ಚಳಿಗಾಲದ ಕೊನೆಯಲ್ಲಿ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಮತ್ತೆ ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮರಗಳ ಎಲೆಗಳ ಮೇಲೆ ತಾಮ್ರದ ಸಂಯುಕ್ತಗಳನ್ನು ಸಿಂಪಡಿಸಿ (ಉದಾ. ತಾಮ್ರದ ಹೈಡ್ರಾಕ್ಸೈಡ್, ತಾಮ್ರದ ಆಕ್ಸಿಕ್ಲೋರೈಡ್, ಟ್ರೈಬಾಸಿಕ್ ಕಾಪರ್ ಸಲ್ಫೇಟ್ ಮತ್ತು ತಾಮ್ರದ ಆಕ್ಸೈಡ್). ಹಣ್ಣುಗಳನ್ನು ಶರತ್ಕಾಲದಲ್ಲಿ ಕೊಯ್ಲು ಮಾಡಿದ ನಂತರ ಮತ್ತು ಚಳಿಗಾಲದ ಕೊನೆಯಲ್ಲಿ ಪರಿಸರವು ಇನ್ನೂ ತುಂಬಾ ತೇವವಾಗಿದ್ದರೆ ಸಿಂಪಡಣೆ ಮಾಡಿ.

ಅದಕ್ಕೆ ಏನು ಕಾರಣ

ಫ್ಯುಸಿಕ್ಲಾಡಿಯಮ್ ಒಲಿಜಿನಿಯಮ್ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ತಗ್ಗು ಪ್ರದೇಶಗಳಲ್ಲಿ ಅಥವಾ ಕಡಿಮೆ ಸೂರ್ಯನ ಬೆಳಕನ್ನು ಪಡೆಯುವ ಅಥವಾ ಮುಚ್ಚಿದ ಮರದ ಮೇಲಾವರಣವನ್ನು ಹೊಂದಿರುವ ಪರಿಸರದಲ್ಲಿ ಬೆಳೆಯುತ್ತದೆ. ಇದು ಮೊಳಕೆಯೊಡೆಯಲು ಎಲೆಗಳ ಮೇಲೆ ಸೌಮ್ಯವಾದ ಕಡಿಮೆ ತಾಪಮಾನ ಮತ್ತು ಹೆಚ್ಚಿನ ತೇವಾಂಶದ ಅಗತ್ಯವಿರುತ್ತದೆ. ಹೀಗಾಗಿ, ಇದು ಸಾಮಾನ್ಯವಾಗಿ ಶರತ್ಕಾಲದಲ್ಲಿ, ಚಳಿಗಾಲದಲ್ಲಿ ಮತ್ತು ವಸಂತಕಾಲದ ಮಳೆಯ ಅವಧಿಯಲ್ಲಿ ಸೋಂಕುಗಳಿಗೆ ಕಾರಣವಾಗುತ್ತದೆ. ಮಂಜು, ಇಬ್ಬನಿ ಮತ್ತು ಹೆಚ್ಚಿನ ಆರ್ದ್ರತೆಯು ರೋಗದ ಹರಡುವಿಕೆಗೆ ಕೊಡುಗೆ ನೀಡುವ ಪ್ರಮುಖ ಅಂಶಗಳಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ, ಬೇಸಿಗೆಯಲ್ಲಿ ಬಿಸಿ ಮತ್ತು ಶುಷ್ಕ ಪರಿಸ್ಥಿತಿಗಳು ಶಿಲೀಂಧ್ರದ ನಿಷ್ಕ್ರಿಯತೆಗೆ ಕಾರಣವಾಗಿ, ಅದು ಅಂತಿಮವಾಗಿ ಸುಪ್ತಸ್ಥಿತಿಗೆ ತಲುಪಬಹುದು. ಚುಕ್ಕೆಗಳ ಬಣ್ಣ ಬದಲಾವಣೆಯಿಂದ ಇದು ಗೊತ್ತಾಗುತ್ತದೆ. ಆಗ ಚುಕ್ಕೆಗಳು ಬಿಳಿ ಮತ್ತು ಪಡಿ ಪುಡಿಯಾಗುತ್ತವೆ. ಎಳೆಯ ಎಲೆಗಳು ಹಳೆಯ ಎಲೆಗಳಿಗಿಂತ ಹೆಚ್ಚು ಸೋಂಕಿಗೆ ಹೆಚ್ಚು ಒಳಗಾಗುತ್ತವೆ. ಆದ್ಯತೆಯ ತಾಪಮಾನದ ವ್ಯಾಪ್ತಿಯು 14-24 °C ಆಗಿದೆ, ಆದಾಗ್ಯೂ ಇದು 2-27 °C ನಡುವೆಯೂ ಸೋಂಕು ಸಂಭವಿಸಬಹುದು. ಮಣ್ಣಿನಲ್ಲಿನ ಪೋಷಕಾಂಶಗಳ ಕೊರತೆ ಅಥವಾ ಅಸಮತೋಲನವು ಮರಗಳು ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಉದಾಹರಣೆಗೆ, ಹೆಚ್ಚಿನ ಸಾರಜನಕ ಮತ್ತು ಕ್ಯಾಲ್ಸಿಯಂ ಕೊರತೆಯು ಮರಗಳ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಎಂದು ಭಾವಿಸಲಾಗಿದೆ.


ಮುಂಜಾಗ್ರತಾ ಕ್ರಮಗಳು

  • ರೋಗದ ಲಕ್ಷಣಗಳಿಗಾಗಿ ಕೃಷಿ ಸ್ಥಳವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಸಾರಜನಕದ ಅತಿಯಾದ ಬಳಕೆ ಮತ್ತು ಕ್ಯಾಲ್ಸಿಯಂ ಕೊರತೆಯನ್ನು ತಪ್ಪಿಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಅಥವಾ ಪ್ರತಿರೋಧ ಒಡ್ಡುವ ಪ್ರಭೇದಗಳನ್ನು ಆಯ್ಕೆಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ