ದ್ರಾಕ್ಷಿ

ಬೊಟ್ರಿಯೋಸ್ಫೇರಿಯಾ ಡೈಬ್ಯಾಕ್

Botryosphaeriaceae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ತೋಟದ ಕೆಲಸದ ಸಮಯದಲ್ಲಿ ಗಾಯಗೊಂಡ ತೊಗಟೆಯ ಭಾಗಗಳಲ್ಲಿ ಕ್ಯಾಂಕರ್‌ಗಳು ಅಥವಾ ಸ್ಟ್ರೈಕಿಂಗ್ ಹೆಚ್ಚಾಗಿ ಬೆಳೆಯುತ್ತವೆ.
  • ಕಾಂಡದ ಅಡ್ಡ ಭಾಗಗಳು ಬೆಣೆಯಾಕಾರದ ಗಾಢ ಕಂದು ಗಾಯಗಳ ಮೂಲಕ ಮರದ ತಿರುಳನ್ನು ತಲುಪುತ್ತದೆ.
  • ಚಿಗುರುಗಳು, ಎಲೆಗಳು ಮತ್ತು ಮೊಗ್ಗುಗಳ ಮೇಲೆ ಸಹ ಪರಿಣಾಮ ಬೀರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು
ಬಾದಾಮಿ
ಸೇಬು
ದ್ರಾಕ್ಷಿ
ಸೀಬೆಕಾಯಿ
ಇನ್ನಷ್ಟು

ದ್ರಾಕ್ಷಿ

ರೋಗಲಕ್ಷಣಗಳು

ಇದು ಮುಖ್ಯವಾಗಿ ಮರದ ಕಾಯಿಲೆಯಾಗಿದ್ದು, ಕಾಂಡದ ಮೇಲೆ ಕ್ಯಾಂಕರ್ ಮತ್ತು ಡೈಬ್ಯಾಕ್ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ತೋಟದ ಕೆಲಸದ ಸಮಯದಲ್ಲಿ ಗಾಯಗೊಂಡ ತೊಗಟೆಯ ಭಾಗಗಳಲ್ಲಿ ಕ್ಯಾಂಕರ್‌ಗಳು ಅಥವಾ ಸ್ಟ್ರೈಕಿಂಗ್ ಹೆಚ್ಚಾಗಿ ಬೆಳೆಯುತ್ತದೆ, ಉದಾಹರಣೆಗೆ ಸಮರುವಿಕೆಯ ಸಮಯದಲ್ಲಿ. ಕಾಂಡದ ಅಡ್ಡ ಭಾಗದಲ್ಲಿ ಬೆಣೆಯಾಕಾರದ ಗಾಢ ಕಂದು ಗಾಯಗಳು ಕಂಡುಬರುತ್ತವೆ. ಅದು ಮರದ ತಿರುಳನ್ನು ತಲುಪಿದಾಗ ಚಿಗುರುಗಳು ಕುಂಠಿತವಾಗಿ ಕಾಣುತ್ತವೆ ಮತ್ತು ಡೈಬ್ಯಾಕ್‌ನಿಂದ ಕೂಡ ಪರಿಣಾಮ ಬೀರಬಹುದು. ಆಂತರಿಕ ಅಂಗಾಂಶಗಳು ನೆಕ್ರೋಸಿಸ್ಗೆ ಒಳಗಾಗುವುದರೊಂದಿಗೆ ಕುಡಿಯ ಅಭಿವೃದ್ಧಿ ವಿಳಂಬವಾಗುತ್ತದೆ ಅಥವಾ ನಿಲ್ಲುತ್ತದೆ. ನಾಟಿ ವೈಫಲ್ಯವೂ ಈ ರೋಗದ ಲಕ್ಷಣವಾಗಿದೆ. ಈ ರೋಗಲಕ್ಷಣಗಳು ಯಾವಾಗಲೂ ಒಟ್ಟಿಗೆ ಸಂಭವಿಸುವುದಿಲ್ಲ ಮತ್ತು ಕೆಲವು ಪ್ರಭೇದಗಳಲ್ಲಿ, ಯಾವುದೇ ಎಲೆಗಳ ಲಕ್ಷಣಗಳಿರುವುದಿಲ್ಲ. ಒಟ್ಟಾರೆಯಾಗಿ, ರೋಗವು ತಳಿಗಳ ಉತ್ಪಾದಕತೆ ಮತ್ತು ದೀರ್ಘಾಯುಷ್ಯವನ್ನು ಕಡಿಮೆ ಮಾಡುತ್ತದೆ, ಇಳುವರಿಯನ್ನು ಕಡಿಮೆ ಮಾಡುತ್ತದೆ ಮತ್ತು ಉತ್ಪಾದನಾ ವೆಚ್ಚವನ್ನು ಹೆಚ್ಚಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಟ್ರೈಕೊಡರ್ಮಾ ಶಿಲೀಂಧ್ರಗಳ ಜಾತಿಗಳ ಸೂತ್ರೀಕರಣಗಳ ಮೂಲಕ ಒಂದು ನಿರ್ದಿಷ್ಟ ಪ್ರಮಾಣದ ಜೈವಿಕ ನಿಯಂತ್ರಣವನ್ನು ಸಾಧಿಸಬಹುದು(ಉದಾಹರಣೆಗೆ ಟಿ. ಸ್ಪೆರೆಲ್ಲಮ್ ಮತ್ತು ಟಿ. ಗ್ಯಾಮ್ಸಿಯ ಮಿಶ್ರಣ). ಇದು ಕತ್ತರಿಸುವಿಕೆಯ (ಟ್ರಿಮ್ಮಿಂಗ್) ಗಾಯಗಳು, ಪ್ರಸರಣ ವಸ್ತುಗಳ ತಳದ ತುದಿಗಳು ಮತ್ತು ನಾಟಿಗಳನ್ನು ಸೋಂಕಿಗಿಂತ ಮೊದಲು ರಕ್ಷಿಸಲು ಸಹಾಯ ಮಾಡುತ್ತದೆ. ಕತ್ತರಿಸುವಿಕೆಯ (ಟ್ರಿಮ್ಮಿಂಗ್) ಗಾಯದ ರಕ್ಷಣೆಗಾಗಿ ಹಲವಾರು ಸಾವಯವ ಉತ್ಪನ್ನಗಳು ಲಭ್ಯವಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಟೆಬುಕೊನಜೋಲ್, ಸೈಪ್ರೊಕೊನಜೋಲ್, ಫ್ಲೂಯಿಲಾಜೋಲ್ ಅನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳು, ಪೇಂಟ್ ಮತ್ತು ಪೇಸ್ಟ್‌ಗಳನ್ನು ಕತ್ತರಿಸುವಿಕೆಯ (ಟ್ರಿಮ್ಮಿಂಗ್) ನಂತರ ಸಾಧ್ಯವಾದಷ್ಟು ಬೇಗ ದೊಡ್ಡ ಗಾಯಗಳಿಗೆ ಹಚ್ಚಿ. ಇತರ ಶಿಲೀಂಧ್ರನಾಶಕಗಳಲ್ಲಿ ಫ್ಲುಡಿಯೋಆಕ್ಸೊನಿಲ್, ಫ್ಲೂಜಿನಾಮ್, ಫ್ಲುಸಿಲಾಜೋಲ್, ಪೆಂಕೊನಜೋಲ್, ಐಪ್ರೊಡಿಯೋನ್, ಮೈಕ್ಲೋಬ್ಯುಟಾನಿಲ್ ಮತ್ತು ಪೈರಾಕ್ಲೋಸ್ಟ್ರೋಬಿನ್ ಸೇರಿವೆ.

ಅದಕ್ಕೆ ಏನು ಕಾರಣ

ಬೊಟ್ರಿಯೋಸ್ಫೇರಿಯಾಸೀ ಕುಟುಂಬದ ಶಿಲೀಂಧ್ರ ರೋಗಕಾರಕಗಳ ಗುಂಪಿನಿಂದ ಈ ಲಕ್ಷಣಗಳು ಕಂಡುಬರುತ್ತವೆ. ಅವು ವ್ಯಾಪಕ ಶ್ರೇಣಿಯ ಆತಿಥೇಯ ಗಿಡಕ್ಕೆ ಸೋಂಕು ತಗುಲಿಸುತ್ತವೆ ಆದರೆ ಸಾಮಾನ್ಯವಾಗಿ ಚಪ್ಪರ/ಬಳ್ಳಿ ಮಾದರಿಯ ಸಸ್ಯಗಳೊಂದಿಗೆ ಸಂಬಂಧ ಹೊಂದಿವೆ. ಸೋಂಕಿತ ಬಳ್ಳಿಗಳು ಅಥವಾ ಮರಗಳ ತೊಗಟೆಯ ಮೇಲೆ ಶಿಲೀಂಧ್ರಗಳು ಅತಿಕ್ರಮಿಸುತ್ತವೆ ಮತ್ತು ವಸಂತಕಾಲದಲ್ಲಿ ಬೀಜಕಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತವೆ. ಬೀಜಕಗಳು ಗಾಳಿ ಮತ್ತು ಮಳೆ ಮಾರುತದ ಮೂಲಕ ಇತರ ಬಳ್ಳಿಗಳಿಗೆ ಹರಡುತ್ತವೆ. ನೈಸರ್ಗಿಕ ಬಿರುಕುಗಳು, ಕತ್ತರಿಸುವಿಕೆಯ ಗಾಯಗಳು ಅಥವಾ ಕಡಿತಗಳಂತಹ ತಾಜಾ ಗಾಯಗಳ ಮೂಲಕ ಅವು ಅಂಗಾಂಶಗಳನ್ನು ಪ್ರವೇಶಿಸುತ್ತವೆ, ಅಲ್ಲಿ ಅವು 5 ಡಿಗ್ರಿಗಿಂತ ಹೆಚ್ಚಿನ ತಾಪಮಾನದಲ್ಲಿ ಮೊಳಕೆಯೊಡೆಯಬಹುದು. ಬಳ್ಳಿಯ ಸುಪ್ತ ಅವಧಿಯಲ್ಲಿ ಆರಂಭಿಕ ಕತ್ತರಿಸುವಿಕೆಯ ಗಾಯವು ರೋಗಕ್ಕೆ ಹೆಚ್ಚು ಒಳಗಾಗುತ್ತದೆ. ಅದು ಕ್ರಮೇಣ ಕಾಂಡದ ನಾಳೀಯ ಅಂಗಾಂಶವನ್ನು ಆಕ್ರಮಿಸುತ್ತದೆ ಮತ್ತು ಬೇರುಗಳತ್ತ ಸಾಗುತ್ತದೆ. ಇದು ಕ್ಯಾಂಕರ್‌ಗಳು, ಮರದ ನೆಕ್ರೋಸಿಸ್ ಮತ್ತು ಕಾಂಡಗಳ ಡೈಬ್ಯಾಕ್ ಗೆ ಕಾರಣವಾಗುತ್ತದೆ. ಪರ್ಯಾಯ ಆಶ್ರಯದಾತ ಸಸ್ಯಗಳಲ್ಲಿ ಕಾರ್ಕ್ ಓಕ್, ಪಾಪ್ಲರ್‌ಗಳು, ಸೈಪ್ರೆಸ್ ಮತ್ತು ಜುನಿಪರ್‌ಗಳು ಸೇರಿವೆ.


ಮುಂಜಾಗ್ರತಾ ಕ್ರಮಗಳು

  • ಹೆಚ್ಚು ರೋಗಕ್ಕೆ ಈಡಾಗದ ಪ್ರಭೇದಗಳನ್ನು ಬೆಳೆಸಿ.
  • ದ್ರಾಕ್ಷಿತೋಟದಿಂದ ಸಸ್ಯದ ಅವಶೇಷಗಳು ಮತ್ತು ಸತ್ತ ಮರಗಳನ್ನು ತೆಗೆಯಿರಿ.
  • ಆರ್ದ್ರ ವಾತಾವರಣದಲ್ಲಿ ಗಿಡದ ಸವರುವಿಕೆಯನ್ನು (ಟ್ರಿಮ್ಮಿಂಗ್) ತಪ್ಪಿಸಿ ಮತ್ತು ಗಾಯಗಳ ಸಂಖ್ಯೆಯನ್ನು ಕಡಿಮೆ ಮಾಡಿ.
  • ರೋಗಪೀಡಿತ ಗಿಡವನ್ನು ಗುರುತಿಸಿ ಮತ್ತು ಅದರ ಶಾಖೆಗಳನ್ನು ಅಥವಾ ಸಂಪೂರ್ಣ ಬಳ್ಳಿಗಳನ್ನು ತೆಗೆದುಹಾಕಿ.
  • ಬೀಜಕ ಉತ್ಪಾದನೆಯ ಉತ್ತುಂಗವನ್ನು ತಪ್ಪಿಸಲು ಸುಪ್ತ ಅವಧಿಯಲ್ಲಿ ಕತ್ತರಿಸಿ.
  • ಹೆಚ್ಚುವರಿ ನೀರಾವರಿ ರೋಗಲಕ್ಷಣದ ತೀವ್ರತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಆದರೆ ಓವರ್ ಹೆಡ್ (ಮೇಲಿನಿಂದ ನೀರು ಹಾಯಿಸುವುದು) ನೀರಾವರಿಯನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ