ದ್ರಾಕ್ಷಿ

ದ್ರಾಕ್ಷಿಯ ಆಂಥ್ರಾಕ್ನೋಸ್

Elsinoe ampelina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹೊಸ ಎಲೆಗಳ ಮೇಲ್ಭಾಗದಲ್ಲಿ ಸಣ್ಣ ಕಂದು ಬಣ್ಣದ ಚುಕ್ಕೆಗಳಿರುತ್ತದೆ.
  • ಅವು ಬೂದು ಬಣ್ಣಕ್ಕೆ ತಿರುಗಿ ಒಣಗಿದ ತೇಪೆಗಳಾಗುತ್ತವೆ.
  • ಅವು ಉದುರಿದರೆ ಶಾಟ್ ಹೋಲ್ ಪರಿಣಾಮವಾಗುತ್ತದೆ.
  • ಕಾಂಡಗಳು ಮತ್ತು ಚಿಗುರುಗಳ ಮೇಲೆ ಪರಿಣಾಮವಾಗುತ್ತದೆ.
  • ಹಣ್ಣುಗಳ ಮೇಲೆ ಕಂದು ಅಂಚಿನ ಬೂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಶಿಲೀಂಧ್ರವು ಬಳ್ಳಿ, ಎಲೆಗಳು, ಚಿಗುರುಗಳು, ಕಾಂಡಗಳು ಮತ್ತು ಕುಡಿಬಳ್ಳಿಗಳ ಎಲ್ಲಾ ಹಸಿರು ಭಾಗಗಳನ್ನು ಆಕ್ರಮಿಸುತ್ತದೆ. ಆದರೆ, ಹೊಸ, ವೇಗವಾಗಿ ಬೆಳೆಯುತ್ತಿರುವ ಅಂಗಾಂಶಗಳ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ. ಎಲೆಗಳ ಮೇಲ್ಭಾಗದಲ್ಲಿ, ಸಣ್ಣ ಕಂದು ಬಣ್ಣದ ಚುಕ್ಕೆಗಳು ಬೆಳೆಯುತ್ತವೆ. ಅವು ದೊಡ್ಡದಾಗುತ್ತಿದ್ದಂತೆ, ಅವುಗಳು ಯದ್ವಾತದ್ವಾ ಬೆಳೆಯುತ್ತವೆ ಮತ್ತು ಅವುಗಳ ಮಧ್ಯಭಾಗವು ಕ್ರಮೇಣ ಬೂದು ಬಣ್ಣಕ್ಕೆ ತಿರುಗಿ, ಕೊಳೆತಂತಾಗುತ್ತದೆ. ಅಂತಿಮವಾಗಿ, ಸತ್ತ ಅಂಗಾಂಶವು ಉದುರಿ ಬಿದ್ದು, ಶಾಟ್-ಹೋಲ್ (ಗುಂಡು ಹೊಡೆದಾಗ ಬಿದ್ದ ತೂತದಂತೆ) ಪರಿಣಾಮವನ್ನು ಉಂಟುಮಾಡುತ್ತದೆ. ಅದೇ ವಿಧದ ಕಲೆಗಳು ಮತ್ತು ಗಾಯಗಳು ಕಾಂಡಗಳು ಮತ್ತು ಚಿಗುರುಗಳ ಮೇಲೂ ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳನ್ನು ಸುತ್ತುವರಿಯುತ್ತವೆ. ಇದರಿಂದ ಕ್ಯಾಂಕರ್ (ಹುಣ್ಣು) ಉಂಟಾಗಿ ಗಿಡ ಮೇಲಿನಿಂದ ಕೆಳಗೆ ಸಾಯಲು ಆರಂಭಿಸುತ್ತದೆ. ಸಣ್ಣ, ದುಂಡನೆಯ, ನೇರಳೆ ಬಣ್ಣದ ಕಲೆಗಳು ಹಣ್ಣುಗಳ ಮೇಲೆ ಬೆಳೆಯುತ್ತವೆ. ಅವು ಕ್ರಮೇಣ ವಿಸ್ತರಿಸುತ್ತವೆ ಮತ್ತು ಕಂದು ಅಂಚಿನಿಂದ ಕೂಡಿದ ಗುಳಿ ಬಿದ್ದ ಬೂದು ಬಣ್ಣದ ಗಾಯವಾಗಿ ಮಾರ್ಪಡುತ್ತವೆ. ಅವು ಸಿಪ್ಪೆಯನ್ನು ಮುಚ್ಚಿರುವುದರಿಂದ, ಹಣ್ಣುಗಳು ಒಣಗುತ್ತವೆ, ಉದುರುತ್ತವೆ ಮತ್ತು ಗೊಂಚಲಿನಲ್ಲಿಯೇ ಸಾಯುತ್ತವೆ. ಬೂದು ಬಣ್ಣದ ಕೇಂದ್ರಗಳಿರುವ ಈ ವಿಶಿಷ್ಟ ಕಲೆಗಳಿಂದಾಗಿಯೇ ಈ ರೋಗಕ್ಕೆ ಬರ್ಡ್ಸ್ ಐ ರಾಟ್ ಎಂಬ ಹೆಸರು ಬಂದಿದೆ.

Recommendations

ಜೈವಿಕ ನಿಯಂತ್ರಣ

ಮೊಗ್ಗು ಬಿರಿಯುವ ಮುಂಚೆಯೇ ವಸಂತಕಾಲದ ಆರಂಭದಲ್ಲಿ ದ್ರವರೂಪದ ಸುಣ್ಣದ ಸಲ್ಫರ್ ಅಥವಾ ತಾಮ್ರದ ಸಿಂಪಡಿಸುವಿಕೆಯ ಬಳಕೆಯಿಂದ ರೋಗಕಾರಕದ ಪ್ರಮಾಣವನ್ನು ಕಡಿಮೆ ಮಾಡಬಹುದು. ಸಾವಯವ ಪ್ರಮಾಣೀಕರಣ ಕಾರ್ಯಕ್ರಮದೊಳಗೆ ಈ ಶಿಲೀಂಧ್ರನಾಶಕಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳನ್ನು ಒಳಗೊಂಡಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ರಕ್ಷಣಾತ್ಮಕ ಶಿಲೀಂಧ್ರನಾಶಕ ಔಷಧಗಳನ್ನು ಸಕಾಲಿಕವಾಗಿ ಬಳಸುವುದರ ಜೊತೆಗೆ ಉತ್ತಮ ಕೃಷಿ ಪದ್ಧತಿಗಳನ್ನು ಅನುಸರಿಸಿದರೆ ಆಂಥ್ರಾಕ್ನೋಸ್ ಅನ್ನು ನಿಯಂತ್ರಿಸಬಹುದು. ಮೊಗ್ಗುಗಳು ಬಿರಿಯುವಾಗ ದ್ರವ ಸುಣ್ಣದ ಸಲ್ಫರ್ ಅಥವಾ ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸುವುದರಿಂದ ಆಂಥ್ರಾಕ್ನೋಸ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಕಪ್ಟನ್, ಕ್ಲೋರೊಥಲೋನಿಲ್ ಮತ್ತು ಮನ್ಕೊಜೆಬ್ ಕೀಟನಾಶಕಗಳು ಹೊಸ ಬೆಳವಣಿಗೆಯನ್ನು ಮತ್ತು ಹಣ್ಣುಗಳನ್ನು ರಕ್ಷಿಸುತ್ತವೆ. ಮೊಗ್ಗು ಬಿರಿಯುವ ಅವಧಿಯಿಂದ ಹಣ್ಣಿಗೆ ಬಣ್ಣ ಬರಲು ಶುರುವಾಗುವವರೆಗೆ 2 ವಾರಗಳ ಅಂತರಗಳಲ್ಲಿ ಇವನ್ನು ಸಿಂಪಡಿಸಿ.

ಅದಕ್ಕೆ ಏನು ಕಾರಣ

ಎಲ್ಸಿನೋ ಆಂಪೇಲಿನಾ ಎಂಬ ಶಿಲೀಂಧ್ರವು ಈ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಚಿಗುರುಗಳು ಮತ್ತು ಸೋಂಕಿತ ಬಳ್ಳಿಗಳ ತೊಗಟೆಯ ಮೇಲೆ ಶಿಲೀಂಧ್ರಗಳ ರಚನೆಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ವಸಂತಕಾಲದಲ್ಲಿ, ಇದು ಮಳೆಯ ಹನಿಗಳಿಂದ ಬಿಡುಗಡೆ ಹೊಂದುವ ಮತ್ತು ಪ್ರಸರಣಗೊಳ್ಳುವ ಬೀಜಕಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಗಾಳಿ ಮತ್ತು ಮಳೆಗಳು ಬೀಜಕಗಳನ್ನು ಹೊಸ, ಬೆಳೆಯುತ್ತಿರುವ ಎಲೆಗಳು ಅಥವಾ ಚಿಗುರುಗಳಿಗೆ ಸಾಗಿಸುತ್ತವೆ. ದೀರ್ಘಕಾಲದವರೆಗೆ ಅಂಗಾಂಶಗಳು ಒದ್ದೆಯಿರುವುದು (12 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು) ಮತ್ತು 2 ರಿಂದ 32 °C ವರೆಗಿನ ತಾಪಮಾನಗಳು ಬೀಜಕಗಳ ಉತ್ಪಾದನೆ ಮತ್ತು ಕುಡಿಯೊಡೆಯುವುದಕ್ಕೆ ಅನುಕೂಲಕರವಾಗಿದೆ. ಉಷ್ಣಾಂಶ ಮತ್ತು ತೇವಾಂಶವು ಹೆಚ್ಚಾಗಿದ್ದಷ್ಟು ವೇಗವಾಗಿ ಸೋಂಕು ತಗುಲುತ್ತದೆ ಮತ್ತು ಶೀಘ್ರದಲ್ಲೇ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಂಪು ಹವಾಮಾನ ಶಿಲೀಂಧ್ರದ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ. ಎಲೆಗಳು ಉದುರುವುದು ಮತ್ತು ನೇರ ಹಣ್ಣಿನ ಮೇಲಿನ ಹಾನಿಗಳು ಹಣ್ಣುಗಳ ಇಳುವರಿ ಮತ್ತು ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸೂರ್ಯನ ಕಿರಣ ಚೆನ್ನಾಗಿ ಬೀಳುವ ಮತ್ತು ಉತ್ತಮವಾಗಿ ಗಾಳಿಯಾಡುವ ಸ್ಥಳಗಳನ್ನು ಆರಿಸಿ.
  • ಲಭ್ಯವಿದ್ದರೆ ಹೆಚ್ಚು ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಬಳ್ಳಿಗಳ ನಡುವೆ ಅಗಲವಾದ ಅಂತರ ಇರುವಂತೆ ನೋಡಿಕೊಳ್ಳಿ.
  • ಮನೆಯಲ್ಲಿ ಬೆಳೆವ ದ್ರಾಕ್ಷಿಗಾಗಿ, ಸೋಂಕಿತ ಉಳಿಕೆಯನ್ನು ಮುಚ್ಚಲು ಎಲೆ ಪದರ ಅಥವಾ ನಯವಾದ ತೊಗಟೆಯನ್ನು ಬಳಸಿ.
  • ದ್ರಾಕ್ಷಿತೋಟದ ಬಳಿ ಯಾವುದೇ ಕಾಡು ದ್ರಾಕ್ಷಿಯಿದ್ದರೆ ತೆಗೆದುಹಾಕಿ.
  • ಬಳ್ಳಿಗಳ ಮೇಲ್ವಿಚಾರಣೆ ಮಾಡಿ ಮತ್ತು ರೋಗದ ಚಿಹ್ನೆಯನ್ನು ತೋರಿಸುವ ಹಣ್ಣು ಅಥವಾ ಸಸ್ಯ ಭಾಗಗಳನ್ನು ತೆಗೆದುಹಾಕಿ.
  • ಸುಪ್ತಾವಸ್ಥೆಯಲ್ಲಿರುವಾಗ ಚಳಿಗಾಲದ ಆರಂಭದಲ್ಲಿ ದ್ರಾಕ್ಷಿ ಬಳ್ಳಿಗಳನ್ನು ಕತ್ತರಿಸಿ.
  • ದ್ರಾಕ್ಷಿ ತೋಟದಿಂದ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ.
  • ನೆಲವನ್ನು ಊಳಿ ಮತ್ತು ಸಸ್ಯದ ಉಳಿಕೆಗಳು ಮತ್ತು ಹಣ್ಣುಗಳನ್ನು ಹೂಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ