ಕಡಲೆಕಾಯಿ

ಬೀನ್ ನಲ್ಲಿ ಬೂದಿ ಕಾಂಡ ಬ್ಲೈಟ್

Macrophomina phaseolina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬಾಡುವಿಕೆ, ಚಿಗುರೆಲೆಗಳ ಬಾಗುವಿಕೆ ಮತ್ತು ಎಲೆ ಅಂಗಾಂಶಗಳ ಹಸಿರು ಬಣ್ಣ ಬದಲಾಗುವಿಕೆ.
  • ಕಾಂಡ ಬಣ್ಣ ಕಳೆದುಕೊಂಡು ಒಣಹುಲ್ಲಿನ ಬಣ್ಣ ಪಡೆಯುತ್ತವೆ.
  • ಮುಖ್ಯ ಬೇರು ಕೊಳೆಯುತ್ತದೆ.
  • ಕಪ್ಪು ಬಣ್ಣದ, ಚೂರಾದ ತೊಗಟೆ ಮತ್ತು ಹೊರಗೆ ಹಾಗು ಒಳಗೆ ಸೂಕ್ಷ್ಮ ಕಪ್ಪು ಶಿಲೀಂಧ್ರಗಳು ಕಂಡುಬರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಕಡಲೆಕಾಯಿ

ರೋಗಲಕ್ಷಣಗಳು

ಹೂಬಿಡುವ ನಂತರದ ಹಂತದಲ್ಲಿ ಈ ರೋಗದ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಅವುಗಳು ಆರಂಭದಲ್ಲಿ ಸಸ್ಯದ ಮೇಲಿನ ಭಾಗಕ್ಕೆ ಸೀಮಿತಗೊಂಡಿರುತ್ತವೆ ಮತ್ತು ಎಳೆಯ ಎಲೆಗಳ ನೇತಾಡುವಿಕೆ ಮತ್ತು ತೊಟ್ಟುಗಳ ಹಾಗು ಎಲೆಯ ಅಂಗಾಂಶಗಳ ಹಸಿರು ಬಣ್ಣ ಬದಲಾಗುವಿಕೆ(ಕ್ಲೋರೋಸಿಸ್) ಇದರಲ್ಲಿ ಸೇರಿರುತ್ತದೆ. ಪೀಡಿತ ಸಸ್ಯಗಳ ಕೆಳಗಿನ ಎಲೆಗಳು ಮತ್ತು ಕಾಂಡಗಳು ಸಾಮಾನ್ಯವಾಗಿ ಒಣಹುಲ್ಲು ಬಣ್ಣಕ್ಕೆ ಅಥವಾ ಕೆಲವು ಸಂದರ್ಭಗಳಲ್ಲಿ ಕಂದು ಬಣ್ಣಕ್ಕೆ ತಿರುಗುತ್ತವೆ. ಮುಖ್ಯ ಬೇರು ಕೊಳೆಯುತ್ತಿರುವ ಚಿಹ್ನೆಯೊಂದಿಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಮತ್ತು ಹೆಚ್ಚಿನ ಪಾರ್ಶ್ವ, ದ್ವಿತೀಯ ಬೇರುಗಳು ಮತ್ತು ಸಣ್ಣ ಬೇರುಗಳು ಕಾಣೆಯಾಗಿರುತ್ತವೆ. ಸತ್ತ ಅಂಗಾಂಶಗಳು ಬೇರು ಮುರಿಯುವಂತೆ ಮತ್ತು ತೊಗಟೆ ಕಳಚಿ ಬೀಳುವಂತೆ ಮಾಡುತ್ತದೆ. ಸಸ್ಯವನ್ನು ಬೇರುಸಹಿತ ಕೀಳಲು ಪ್ರಯತ್ನಿಸುವಾಗ, ಸುಲಭವಾಗಿ ಮುರಿಯುತ್ತದೆ ಮತ್ತು ಸಾಮಾನ್ಯವಾಗಿ ಮುಖ್ಯ ಬೇರಿನ ಕೆಳಭಾಗವು ಮಣ್ಣಿನಲ್ಲಿ ಉಳಿದಿರುತ್ತದೆ. ಕಾಲರ್ ಪ್ರದೇಶದ ಉದ್ದ ಸೀಳು ನೋಟದಲ್ಲಿ ತೊಗಟೆಯ ಆಂತರಿಕ ಭಾಗ ಮತ್ತು ಆಂತರಿಕ ಅಂಗಾಂಶದ ಮೇಲೆ ಕಪ್ಪು ಬಣ್ಣದ ಸೂಕ್ಷ್ಮ ಶಿಲೀಂಧ್ರಗಳು ಕಂಡುಬರುತ್ತವೆ.

Recommendations

ಜೈವಿಕ ನಿಯಂತ್ರಣ

ಟ್ರೈಕೋಡರ್ಮಾ ವಿರಿಡ್, ಸ್ಯೂಡೋಮೊನಸ್ ಫ್ಲೋರೊಸೆನ್ಸ್ ಮತ್ತು ಬ್ಯಾಸಿಲಸ್ ಸಬ್ಟಿಟಿಲಿಸ್ ನಂತಹ ಜೈವಿಕ ನಿಯಂತ್ರಣ ಏಜೆಂಟ್ ಗಳೊಂದಿಗೆ ಬೀಜ ಚಿಕಿತ್ಸೆಯು, ರೋಗವನ್ನು ನಿರ್ವಹಿಸುವಲ್ಲಿ ಕೆಲವು ಪ್ರಯೋಜನಗಳನ್ನು ತೋರಿಸಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಮೊದಲು ಪರಿಗಣಿಸಿ. ಥಿಯೊಫನೇಟ್ ಮೀಥೈಲ್ ಮತ್ತು ವಿಟವಾಕ್ಸ್ ನೊಂದಿಗೆ ಶಿಲೀಂಧ್ರನಾಶಕ ಬೀಜದ ಚಿಕಿತ್ಸೆಯು ರೋಗ ಸಂಭವಿಸುವ ಸಾಧ್ಯತೆಯನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತದೆ. ಕ್ಯಾಪ್ಟನ್, ಥೀರಮ್ ಅಥವಾ ಬೆನೆಲೇಟ್ ನೊಂದಿಗೆ ಬೀಜಗಳನ್ನು ಸಂಸ್ಕರಿಸುವುದು ರೋಗವನ್ನು (ಸಾಮಾನ್ಯವಾಗಿ 3 ಗ್ರಾಂ / ಕೆಜಿ ಬೀಜ) ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಅದಕ್ಕೆ ಏನು ಕಾರಣ

ಇದು ಮಣ್ಣಿನ ಮೂಲದ ಶಿಲೀಂಧ್ರ ಎಳೆಗಳಿಂದ ಅಥವಾ ಶಿಲೀಂಧ್ರ ಮ್ಯಾಕ್ರೋಫೊಮಿನಾ ಫೊಸೋಲಿನದ ಬೀಜಕಗಳಿಂದ ಮಣ್ಣಿನಿಂದ ಹರಡುವ ರೋಗ. ತಾಪಮಾನ 25-30 ಸಿ ನಡುವೆ ಇದ್ದಾಗ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಅಷ್ಟರೊಳಗೆ, ಶಿಲೀಂಧ್ರ ಸಸ್ಯ ಅಂಗಾಂಶಗಳ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಿರುತ್ತದೆ ಮತ್ತು ಕ್ರಮೇಣವಾಗಿ ಅವುಗಳನ್ನು ಹಾನಿಗೊಳಿಸಿರುತ್ತದೆ. ತಾಪಮಾನ ಮತ್ತು ತೇವದ ಒತ್ತಡ ಹೆಚ್ಚುತ್ತಿರುವುದರಿಂದ, ಆರ್. ಬಾಟಾಟಿಕೊಲಾ ಸಾಮಾನ್ಯವಾಗಿ ಉಷ್ಣವಲಯದ ಆರ್ದ್ರ ಪ್ರದೇಶಗಳಲ್ಲಿ ಹೆಚ್ಚು ತೀವ್ರವಾಗುತ್ತಿದೆ. 30 ° ಸಿ ಗಿಂತ ಹೆಚ್ಚು ಉಷ್ಣಾಂಶ ಮತ್ತು ಒಣ ಮಣ್ಣಿನ ಪರಿಸ್ಥಿತಿಗಳು ಹೂಬಿಡುವ ಮತ್ತು ಬೀಜಕೋಶದ ಹಂತಗಳಲ್ಲಿ ರೋಗದ ತೀವ್ರತೆಯನ್ನು ಶೀಘ್ರವಾಗಿ ಹೆಚ್ಚಿಸುತ್ತವೆ. ಚಳಿಗಾಲ ಕಳೆಯುತ್ತಿರುವ ಸ್ಕ್ಲೆರೊಟಿಯಾ ಎಂದು ಕರೆಯಲ್ಪಡುವ ಶಿಲೀಂಧ್ರದ ರಚನೆಗಳು ಕೆಲವು ಸಂದರ್ಭಗಳಲ್ಲಿ ಮಣ್ಣಿನಲ್ಲಿ 6 ವರ್ಷಗಳವರೆಗೂ ಇರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಬಲಿಯುವ ಸಮಯದಲ್ಲಿ ಹೆಚ್ಚಿನ ಉಷ್ಣಾಂಶವನ್ನು ತಪ್ಪಿಸಲು ಬೇಗ ಬಲಿಯುವ ಪ್ರಭೇದಗಳನ್ನು ಬಿತ್ತಿ.
  • ಇದರಿಂದಾಗಿ ಸೋಂಕನ್ನು ಕಡಿಮೆ ಮಾಡಬಹುದು.
  • ರೋಗದ ಲಕ್ಷಣಗಳಿಗಾಗಿ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • 3 ವರ್ಷಗಳ ಬೆಳೆ ಸರದಿ, ಮಣ್ಣಿನಲ್ಲಿ ಚಳಿಗಾಲ ಕಳೆಯುತ್ತಿರುವ ಜೀವಿಗಳನ್ನು ಕಡಿಮೆಗೊಳಿಸುತ್ತದೆ.
  • ಆಳವಾಗಿ ಉಳುಮೆ ಮಾಡಿ ಮತ್ತು ಹೊಲದಿಂದ ಸಸ್ಯದ ಅವಶೇಷಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ನಾಟಿಯಿಂದ ಬೀಜಕೋಶ ತುಂಬುವವರೆಗೂ ಸರಿಯಾಗಿ ನೀರು ಹಾಕುವ ಮೂಲಕ ಮಣ್ಣಿನ ತೇವಾಂಶವನ್ನು ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಿ.
  • ಆದರೆ, ಅತೀ ಹೆಚ್ಚು ನೀರು ಹಾಕಬೇಡಿ.
  • ರೋಗದ ವ್ಯಾಪ್ತಿಯನ್ನು ಕಡಿಮೆ ಮಾಡಲು ಹೆಚ್ಚು ರಸಗೊಬ್ಬರ ಬಳಕೆ ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ