ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸೆಪ್ಟೊರಿಯಾ ಸ್ಪಾಟ್

Septoria citri

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ಹಸಿರು ಅಂಚನ್ನು ಹೊಂದಿರುವ ಕಿರಿದಾದ ಕಂದು ಬಣ್ಣದ ಗುಳಿಗಳು ಕಾಣಿಸಿಕೊಂಡು, ನಂತರ ಕೆಂಪು-ಕಂದು ಬಣ್ಣಕ್ಕೆ ತಿರುಗಿ ಗುಂಪು ಗುಂಪಾದ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ.
  • ಎಲೆಗಳ ಮೇಲೆ ಹಳದಿ ವರ್ತುಲ ಇರುವ ಉಬ್ಬಿದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.
  • ಎಲೆಯ ಮೇಲಿನ ಕಲೆಗಳ ಮಧ್ಯಭಾಗ ನಂತರ ಕೊಳೆತು, ತೆಳು ಕಂದು ಬಣ್ಣಕ್ಕೆ ತಿರುಗುತ್ತದೆ.
  • ಮರದ ಕೆಳಭಾಗದ ಎಲೆಗಳು ಉದುರಿ ಹೋಗುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಹಣ್ಣಿನ ಮೇಲೆ, ಸಣ್ಣ ಗುಳಿ (1-2 ಮಿಮೀ ವ್ಯಾಸ)ಗಳು ಕಾಣಿಸಿಕೊಳ್ಳುತ್ತವೆ. ಅದು ಸಿಪ್ಪೆಗಿಂತ ಆಳಕ್ಕೆ ಹೋಗುವುದಿಲ್ಲ. ಗುಳಿಗಳು ಆರಂಭದಲ್ಲಿ ಸ್ವಲ್ಪ ಕಪ್ಪಗೆ ಕಿರಿದಾದ ಹಸಿರು ಅಂಚು ಹೊಂದಿರುತ್ತದೆ. ಹಣ್ಣು ಬೆಳೆದಂತೆ ಗಾಯಗಳೆಲ್ಲಾ ಸೇರಿ ಕೆಂಪಿನಿಂದ ಕಂದು ಬಣ್ಣದ ದೊಡ್ಡ ಕೊಳೆತ ಪ್ರದೇಶವಾಗಿ ರೂಪುಗೊಳ್ಳುತ್ತವೆ. ಗುಂಪು ಗುಂಪಾದ ಗಾಯಗಳೊಳಗೆ ಕಪ್ಪು ಬಣ್ಣದ ಚುಕ್ಕೆಗಳು ಕಾಣಬಹುದು. ಇವು ಶಿಲೀಂಧ್ರದ ಹುಟ್ಟುವಳಿ ಕಾಯಗಳಾಗಿವೆ. ಹೆಚ್ಚು ಸೋಂಕಿಗೊಳಗಾದ ಹಣ್ಣು ತ್ವರಿತವಾಗಿ ಒಂದು ವಿಶಿಷ್ಟ ವಾಸನೆಯನ್ನು ಪಡೆಯುತ್ತದೆ ಮತ್ತು ಅಕಾಲಿಕವಾಗಿ ಉದುರುತ್ತದೆ. ಎಲೆಗಳ ಮೇಲೆ ರೋಗಲಕ್ಷಣಗಳು, ಹಳದಿ ವರ್ತಲದಿಂದ ಸುತ್ತುವರಿದ, ಉಬ್ಬಿದ, ಗುಳ್ಳೆಯ ರೀತಿಯ ಕಪ್ಪು ಚುಕ್ಕೆಗಳಾಗಿ (1-4 ಮಿಮೀ ವ್ಯಾಸ) ಕಾಣಿಸಿಕೊಳ್ಳುತ್ತವೆ. ಕಾಲಾನಂತರದಲ್ಲಿ, ಈ ಕಲೆಗಳ ಮಧ್ಯಭಾಗ ಕೊಳೆತು, ತೆಳು ಕಂದು ಬಣ್ಣಕ್ಕೆ ತಿರುಗುತ್ತವೆ. ಅನುಕೂಲಕರ ಪರಿಸ್ಥಿತಿಗಳಲ್ಲಿ, ರೋಗವು ಮರದ ಕೆಳಭಾಗದಲ್ಲಿ ತೀವ್ರವಾದ ಎಲೆಯ ಉದುರುವಿಕೆ ಕಾರಣವಾಗಬಹುದು. ಎಲೆಗಳು ಉದುರಿದಂತೆ, ಗಾಯಗಳು ಗಾಢ ಕಂದು ಬಣ್ಣಕ್ಕೆ ತಿರುಗಿ ಕಪ್ಪು ಅಂಚುಗಳನ್ನು ಬೆಳೆಸಿಕೊಳ್ಳುತ್ತವೆ. ಸಣ್ಣ ಕಪ್ಪು, ಶಿಲೀಂಧ್ರ ಕಾಯಗಳು ಗಾಯಗಳೊಳಗೆ ಬೆಳೆಯುತ್ತವೆ.

Recommendations

ಜೈವಿಕ ನಿಯಂತ್ರಣ

ತಾಮ್ರ ಮತ್ತು ಸತು ಸಲ್ಫೇಟ್ ಆಧಾರಿತ ಸಾವಯವ ಶಿಲೀಂಧ್ರನಾಶಕಗಳು ಸೆಪ್ಟೋರಿಯಾ ಸಿಟ್ರಿಯನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುತ್ತವೆ. ಚಳಿಗಾಲದ ಮಳೆಗೆ ಮುಂಚಿತವಾಗಿ ಅವುಗಳನ್ನು ಹಾಕಬೇಕು ಮತ್ತು ಅಗತ್ಯವಿದ್ದರೆ, ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಪರಿಣಾಮಕಾರಿ ರೋಗ ನಿಯಂತ್ರಣಕ್ಕಾಗಿ ಶರತ್ಕಾಲದ ಮಳೆಗೆ ಮುಂಚಿತವಾಗಿ ತಾಮ್ರದ ಶಿಲೀಂಧ್ರನಾಶಕಗಳನ್ನು ಬಳಸಿ. ತಾಮ್ರದ ಸಂಯುಕ್ತಗಳೊಂದಿಗೆ ಸಂಯೋಜಿಸಲ್ಪಟ್ಟ ಅಜೋಕ್ಸಿಸ್ಟ್ರೋಬಿನ್ ಹೊಂದಿರುವ ಉತ್ಪನ್ನಗಳು, ರೋಗ ನಿಯಂತ್ರಣದಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸುತ್ತವೆ. ಚಳಿಗಾಲದ ಮಳೆಗೆ ಮೊದಲು ಇದನ್ನು ಸಿಂಪಡಿಸಬೇಕು. ಮತ್ತು ಅಗತ್ಯವಿದ್ದಲ್ಲಿ, ಚಳಿಗಾಲದಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಎರಡನೇ ಬಾರಿಗೆ ಸಿಂಪಡಿಸಬೇಕು.

ಅದಕ್ಕೆ ಏನು ಕಾರಣ

ಶಿಲೀಂಧ್ರವು ಸೋಂಕಿತ ಕೊಂಬೆಗಳು, ಸತ್ತ ಮರ ಮತ್ತು ಎಲೆಗಳಲ್ಲಿ ಹಾಗು ನೆಲದ ಮೇಲಿನ ಎಲೆಯ ಕಸಗಳಲ್ಲಿ ಉಳಿದುಕೊಂಡಿರುತ್ತವೆ. ನೀರಿನ ಸಿಂಪಡಿಕೆಯಿಂದ ಬೀಜಕಗಳು ಆರೋಗ್ಯಕರ ಎಲೆಗಳು ಮತ್ತು ಹಣ್ಣುಗಳಿಗೆ ಹರಡುತ್ತವೆ. ತಂಪಾದ, ತೇವವಾದ ಹವಾಮಾನದ ನಂತರ ಬೇಸಿಗೆಯ ಕೊನೆ ಅಥವಾ ಶರತ್ಕಾಲದಲ್ಲಿ ಹಣ್ಣುಗಳು ಇನ್ನೂ ಹಸಿರಾಗಿರುವಾಗಲೇ ಸೋಂಕು ಸಂಭವಿಸುತ್ತದೆ. ಸಾಮಾನ್ಯವಾಗಿ ಸುಮಾರು 5-6 ತಿಂಗಳ ಶೀತ ಮಾರುತದ ನಂತರ ಹಣ್ಣುಗಳು ಮಾಗುವವರೆಗೂ ಶಿಲೀಂಧ್ರವು ಹಣ್ಣುಗಳಲ್ಲಿ ಸುಪ್ತವಾಗಿ ಉಳಿಯುತ್ತದೆ. ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾದ ವರ್ಷಗಳಲ್ಲಿ ಸೆಪ್ಟೋರಿಯಾ ಸೋಂಕು ಹೆಚ್ಚು ತೀವ್ರವಾಗಿರುತ್ತದೆ. ಕಡಿಮೆ ಅಥವಾ ವೇಗವಾಗಿ ಬದಲಾಗುವ ತಾಪಮಾನವು ಸಿಟ್ರಸ್ ಅಂಗಾಂಶವನ್ನು ರೋಗಕ್ಕೆ ತುತ್ತುಮಾಡುತ್ತದೆ ಎಂದು ಭಾವಿಸಲಾಗಿದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳು ಮತ್ತು ಕಡಿಮೆ ಮುಳ್ಳುಗಳನ್ನು ಹೊಂದಿರುವ ಸಸ್ಯ ಪ್ರಭೇದಗಳನ್ನು ಬಳಸಿ.
  • ಗಾಳಿ ಆಡಲು ಸಾಧ್ಯವಾಗುವಂತೆ ಮರಗಳ ಮೇಲ್ಬಾಗವನ್ನು ಕತ್ತರಿಸಿ.
  • ನೀರಿನ ಕಣಗಳಿಂದ ರೋಗ ಹರಡುವುದನ್ನು ತಡೆಯಲು ತುಂತುರು ನೀರಾವರಿ ತಪ್ಪಿಸಿ.
  • ಸಾಧ್ಯವಾದರೆ, ಹಿಮದಿಂದ ತೋಟವನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಿ.
  • ಬಿದ್ದ ಎಲೆಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸಿ ನಾಶಮಾಡಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟವನ್ನು ಪರಿಶೀಲಿಸಿ.
  • ನಿಯಮಿತವಾಗಿ ಮರಗಳನ್ನು ಕತ್ತರಿಸಿ.
  • ಅದರಲ್ಲೂ ವಿಶೇಷವಾಗಿ ಸೋಂಕಿತ ಕೊಂಬೆಗಳು ಅಥವಾ ಸತ್ತ ಭಾಗಗಳನ್ನು ಕತ್ತರಿಸಿ.
  • ಹಣ್ಣುಗಳನ್ನು ಬೇಗ ಕೊಯ್ಲು ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ