ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ನ ಗಮ್ಮೋಸಿಸ್

Phytophthora spp.

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮಣ್ಣಿನಿಂದ ಮೇಲಿರುವ ತೊಗಟೆಯಲ್ಲಿ ನೀರಿನಲ್ಲಿ-ನೆನೆಸಿದಂತಹ ಗಾಢ ಕಲೆಗಳು.
  • ಶುಷ್ಕ ವಾತಾವರಣದಲ್ಲಿ ತೊಗಟೆಯ ಬಿರುಕುಗಳಿಂದ ನೀರಿನಲ್ಲಿ-ಕರಗುವ ಗೋಂದು ಹೊರಬರುತ್ತದೆ.
  • ಮಣ್ಣಿನ ಕೆಳಗಿನ ತೊಗಟೆ ನೀರಿನಲ್ಲಿ-ನೆನೆಸಿದಂತಿರುತ್ತದೆ.
  • ತೆಳ್ಳಗೆ, ಕೆಂಪು-ಕಂದು ಬಣ್ಣ ಅಥವಾ ಕಪ್ಪಾಗಿರುತ್ತದೆ.
  • ಕೊಳೆತ ಭಾಗಗಳು ಒಳಗಿನ ಅಂಗಾಂಶಗಳಿಗೆ ವಿಸ್ತರಿಸಬಹುದು ಮತ್ತು ತೊಗಟೆಯನ್ನು ಸುತ್ತುವರೆಯಬಹುದು.
  • ಇದು ಮರ ಬೀಳಲು ಕಾರಣವಾಗುತ್ತದೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಹಣ್ಣು ಕೊಳೆತ ಅಥವಾ ಗಮ್ಮೋಸಿಸ್ ಲಕ್ಷಣಗಳು ಸಾಮಾನ್ಯವಾಗಿ ಮಣ್ಣಿನ ಬಳಿ ಕಾಣಿಸಿಕೊಳ್ಳುತ್ತವೆ. ನೀರಿನಲ್ಲಿ-ನೆನೆಸಿದಂತಹ ಪ್ರದೇಶಗಳು ತೊಗಟೆಯಲ್ಲಿ ರೂಪುಗೊಳ್ಳುತ್ತವೆ ಮತ್ತು ಆರ್ದ್ರ ವಾತಾವರಣದಲ್ಲಿ ಇವುಗಳಿಂದ ಕೆಟ್ಟ ವಾಸನೆ ಹೊರಬರುತ್ತದೆ. ವಿಶೇಷವಾಗಿ ಶುಷ್ಕ ವಾತಾವರಣದಲ್ಲಿ, ತೊಗಟೆಯಲ್ಲಿನ ಉದ್ದವಾದ ಬಿರುಕುಗಳಿಂದ ನೀರಿನಲ್ಲಿ ಕರಗುವ ಗೋಂದು ಹೊರಹೊಮ್ಮುತ್ತದೆ. ಮಣ್ಣಿಗಿಂತ ಕೆಳಗಿರುವ ತೊಗಟೆಯು ನೀರಿನಲ್ಲಿ ನೆನೆಸಿದಂತಾಗುತ್ತದೆ. ತೆಳ್ಳಗಾಗುತ್ತದೆ. ಮುಂದುವರಿದ ಹಂತದಲ್ಲಿ ಕೆಂಪು-ಕಂದು ಅಥವಾ ಕಪ್ಪಾಗುತ್ತದೆ. ಕಂದು ಬಣ್ಣದ ಕೊಳೆತ ಭಾಗಗಳು ಮರದ ಆಂತರಿಕ ಅಂಗಾಂಶಗಳಿಗೆ ಹರಡಬಹುದು. ಪೌಷ್ಟಿಕಾಂಶದ ಕೊರತೆಯ ಕಾರಣದಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನಂತರದ ಹಂತಗಳಲ್ಲಿ, ಸತ್ತ ತೊಗಟೆ ಒಣಗಿ, ಕುಗ್ಗಿ, ಬಿರುಕು ಬಿಡುತ್ತದೆ. ಕೊನೆಗೆ ತೇಪೆಗಳು ಉದುರಿ ಹೋಗಿ, ತೆರೆದ ಗಾಯವನ್ನು ಉಳಿಸುತ್ತದೆ. ಶಿಲೀಂಧ್ರ ತೊಗಟೆಯನ್ನು ಸುತ್ತುವರಿದರೆ ಮರ ಕುಸಿದು ಸಾಯಬಹುದು. ಸೋಂಕಿಗೊಳಗಾದ ಹಣ್ಣುಗಳು ಮೃದುವಾಗಿ ಕಂದು ಬಣ್ಣಕ್ಕೆ ತಿರುಗಿ ಕೊಳೆಯಬಹುದು. ಇದು ಅಂತಿಮವಾಗಿ ಒಂದು ವಿಶಿಷ್ಟವಾದ ಕಟು ವಾಸನೆಯನ್ನು ಉತ್ಪತ್ತಿ ಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ಬೀಜಗಳನ್ನು 4-10 ನಿಮಿಷಗಳ ಕಾಲ ಬಿಸಿ ನೀರಿಗೆ (49 ಡಿಗ್ರಿಗಳಷ್ಟು) ಒಡ್ಡುವ ಮೂಲಕ ಬೀಜದೊಳಗಿನ ಸೋಂಕನ್ನು ನಿವಾರಿಸಬಹುದು. ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಲ್ಲಿ ಕ್ಲೋರಿನ್ ಹಾಕುವ ಮೂಲಕ ಫೈಟೊಫ್ಥೊರಾ ಸೋಂಕುಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಕೆಲವು ಶಿಲೀಂಧ್ರಗಳು ಅಥವಾ ಬ್ಯಾಕ್ಟೀರಿಯಾ ಜಾತಿಗಳು (ಟ್ರೈಕೋಡರ್ಮಾ ಎಸ್ಪಿಪಿ ಮತ್ತು ಬ್ಯಾಸಿಲಸ್ ಎಸ್ಪಿಪಿ.) ಫೈಟೊಫ್ಥೊರಾ ವಿರುದ್ಧ ನಿಯಂತ್ರಣ ಏಜೆಂಟ್ ಗಳಾಗಿ ಉತ್ತಮ ಫಲಿತಾಂಶ ನೀಡಿವೆ. ಆರಂಭಿಕ ಹಂತಗಳಲ್ಲಿ ರೋಗವನ್ನು ನಿಯಂತ್ರಿಸಲು, ತಾಮ್ರದ ಶಿಲೀಂಧ್ರನಾಶಕಗಳನ್ನು ಸಹ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿರುವ ಸಮಗ್ರವಾದ ಮಾರ್ಗವನ್ನು ಮೊದಲು ಪರಿಗಣಿಸಿ. ಶಿಲೀಂಧ್ರವನ್ನು ತಡೆಗಟ್ಟುವುದು ಮತ್ತು ಜೈವಿಕ ನಿಯಂತ್ರಣಕ್ಕೆ ಪೂರಕವಾಗಿ ಮೆಟಲಾಕ್ಸಿಲ್ ಮತ್ತು ಫೊಸೆಟೈಲ್-ಅಲ್ಯೂಮಿನಿಯಂಗಳನ್ನು ಒಳಗೊಂಡಿರುವ ಶಿಲೀಂಧ್ರನಾಶಕಗಳನ್ನು ತೋಟದಲ್ಲಿ ಬಳಸುವುದು ತಡೆಗಟ್ಟುವ ಕ್ರಮ ಮತ್ತು ಜೈವಿಕ ವಿಧಾನಗಳಿಗೆ ಪರ್ಯಾಯ ಪರಿಣಾಮಕಾರಿ ವಿಧಾನವಾಗಿದೆ. ಫೋಸೆಟೈಲ್-ಅಲ್ಯೂಮಿನಿಯಂನ್ನು ಎಲೆಗಳಿಗೆ ಸಿಂಪಡಿಸುವುದು ಮತ್ತು ಮೆಟಲಾಕ್ಸಿಲ್ ಅನ್ನು ಮಣ್ಣಿಗೆ ಹಾಕುವುದು ಉತ್ತಮ ಫಲಿತಾಂಶಗಳನ್ನು ತೋರಿಸಿದೆ. ಕೊಯ್ಲಿಗೆ ಮೊದಲಿನ ಸ್ಪ್ರೇಗಳು, ಕೊಯ್ಲು ನಂತರದ ಡಿಪ್ ಚಿಕಿತ್ಸೆಗಳು ಮತ್ತು / ಅಥವಾ ಲೇಪಿತ ಹೊದಿಕೆಗಳ ಬಳಕೆಯನ್ನು ಶಿಫಾರಸು ಮಾಡಲಾಗಿದೆ.

ಅದಕ್ಕೆ ಏನು ಕಾರಣ

ಫೈಟೊಫ್ಥೊರಾ ಶಿಲೀಂಧ್ರಗಳ ವಿವಿಧ ಜಾತಿಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇವು ಅನುಕೂಲಕರವಾದ ಪರಿಸ್ಥಿತಿಗಳಲ್ಲಿ (ಹೆಚ್ಚಿನ ತೇವಾಂಶ ಮತ್ತು ತಾಪಮಾನ) ಸ್ವಲ್ಪ ದೂರದವರೆಗೆ ಈಜಬಹುದಾದ ನೀರಿನ ಮೂಲಕ ಹರಡುವ ಬೀಜಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿ ಮಾಡುತ್ತವೆ. ಈ ಬೀಜಕಗಳು ಮಳೆ ಅಥವಾ ನೀರಾವರಿಯಿಂದಾಗಿ ಮರದ ಬೇರುಗಳಿಗೆ ಸಾಗಿಸಲ್ಪಟ್ಟು ಸೋಂಕಿನ ಪ್ರತಿನಿಧಿಗಳಾಗುತ್ತವೆ. ಇವು ಮೊಳಕೆಯೊಡೆದು ಬೇರಿನ ತುದಿಯನ್ನು ಪ್ರವೇಶಿಸಿ ಬೇರಿನ ಕವಲು ಕೊಳೆಯಲು ಕಾರಣವಾಗುತ್ತವೆ. ನಂತರ ಉಳಿದ ಬೇರುಗಳಿಗೂ ಹರಡುತ್ತವೆ. ಕಾಂಡದ ತಳ ಭಾಗದ ಸುತ್ತಲೂ ಈ ಬೀಜಕಗಳು ತೊಗಟೆಯ ಗಾಯ ಅಥವಾ ಬಿರುಕುಗಳ ಮೇಲೆ ಎಸೆಯಲ್ಪಟ್ಟಾಗ ಕಾಂಡ ಕೊಳೆತ ಅಥವಾ ಗಮ್ಮೋಸಿಸ್ ಸಂಭವಿಸುತ್ತದೆ. ಮರ ರೋಗಕ್ಕೆ ತುತ್ತಾಗುವ ಸಾಧ್ಯತೆ ಮುಖ್ಯವಾಗಿ ಫೈಟೋಫ್ಥೋರಾ ಜಾತಿಯ ಮೇಲೆ ಮತ್ತು ಪರಿಸರದ ಪರಿಸ್ಥಿತಿಗಳ (ಮಣ್ಣಿನ ವಿಧ, ನೀರಿನ ಉಪಸ್ಥಿತಿ) ಮೇಲೆ ಅವಲಂಬಿತವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಪಡೆಯಿರಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ತೋಟಗಳಿಗೆ ಆಯ್ಕೆಮಾಡಿ.
  • ನರ್ಸರಿ ಪ್ರದೇಶದಲ್ಲಿ ನೀರು ಹರಿಯುವಂತಿರಬೇಕು.
  • ಬಳಕೆಗೆ ಮುಂಚೆ ಉಪಕರಣಗಳು ಸೋಂಕುರಹಿತವಾಗಿವೆ ಎಂದು ಖಚಿತಪಡಿಸಿಕೊಳ್ಳಿ.
  • ರೋಗದಿಂದಾಗುವ ನಷ್ಟವನ್ನು ತಡೆಯಲು ಇಳಿಜಾರು ಪ್ರದೇಶದಲ್ಲಿ ಗಿಡಗಳನ್ನು ನೆಡಿ.
  • ವಿಶೇಷವಾಗಿ ಕಾಂಡದ ಮೂಲದಲ್ಲಿ ಗಾಯವಾಗದಂತೆ ನೋಡಿಕೊಳ್ಳಿ.
  • ಸತ್ತ ಅಥವಾ ಸೋಂಕಿತ ಮರದ ವಸ್ತುಗಳನ್ನು ತಕ್ಷಣವೇ ತೆಗೆದುಹಾಕಿ.
  • ಮೊದಲ ರೋಗದ ಚಿಹ್ನೆಗಳಿಗಾಗಿ ಪಾರ್ಶ್ವದ ಬೇರುಗಳ ತನಕ ನಿಯಮಿತವಾಗಿ ತೋಟವನ್ನು ಪರೀಕ್ಷಿಸಿ.
  • ಮೇಲ್ಮೈ ನೀರಾವರಿಯ ನೀರು ಮತ್ತು ಮರಗಳ ಕಾಂಡದ ನಡುವಿನ ಸಂಪರ್ಕವನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ