ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಮೆಲನೋಸ್

Diaporthe citri

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಣ್ಣ, ಕೆಂಪು-ಕಂದು ಬಣ್ಣದಿಂದ ಗಾಢ ಕಂದು ಬಣ್ಣದ ಚುಕ್ಕೆಗಳು ಹಣ್ಣುಗಳ ಮೇಲೆ ತೈಲ ಗ್ರಂಥಿಗಳ ಸುತ್ತ ಕಾಣಿಸಿಕೊಳ್ಳುತ್ತವೆ.
  • ಅಂಗಾಂಶ ಗಾಯಗೊಳ್ಳುತ್ತವೆ ಮತ್ತು ಬಿರುಕುಗಳು ಉಂಟಾಗುತ್ತವೆ, ಮತ್ತು ಹಣ್ಣುಗಳು ಅಕಾಲಿಕವಾಗಿ ಉದುರಬಹುದು.
  • ಎಲೆಗಳ ಮೇಲೆ ಹಳದಿ ವರ್ತುಲ ಹೊಂದಿರುವ ಸಣ್ಣ ಕಂದು ಬಣ್ಣದ ಕಲೆಗಳು, ಕೆಂಪು-ಕಂದು ಬಣ್ಣದ ಗೋಂದಿನಲ್ಲಿ ನೆನೆಸಿದಂತೆ ಸ್ವಲ್ಪಮಟ್ಟಿಗೆ ಉಬ್ಬಿದಂತೆ ಬೆಳೆಯುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಮೆಲನೋಸ್ ಲಕ್ಷಣಗಳು ಪಕ್ವತೆಯ ಕೊನೆಯ ಹಂತಗಳಲ್ಲಿ ಹಣ್ಣುಗಳ ಮೇಲೆ ಕೆಂಪು-ಕಂದು ಬಣ್ಣದಿಂದ ಗಾಢ-ಕಂದು ಬಣ್ಣದ ಚುಕ್ಕೆಗಳ (0.2 - 1.5 ಮಿಮೀ ಗಾತ್ರದ) ರೂಪದಲ್ಲಿ ಕಂಡುಬರುತ್ತದೆ. ಚುಕ್ಕೆಗಳು ಚರ್ಮದ ಮೇಲೆ ಇರುವ ತೈಲ ಗ್ರಂಥಿಗಳ ಸುತ್ತಲೂ ಕಂಡುಬರುತ್ತವೆ. ಅಂಗಾಂಶಗಳು ಗಾಯಗೊಳ್ಳುವುದು ಮತ್ತು ಬಿರುಕುಗಳು ಸೋಂಕಿನ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿವೆ. ಹಣ್ಣುಗಳ ಬೆಳವಣಿಗೆ ಕುಂಠಿತವಾಗಬಹುದು ಮತ್ತು ಅವು ಮುಂಚಿತವಾಗಿ ಬೀಳಬಹುದು. ಇತರ ರೋಗಗಳಿಂದ ಉಂಟಾಗುವ ಇದೇ ರೀತಿಯ ಚುಕ್ಕೆಗಳಿಗೆ ವಿರುದ್ಧವಾಗಿ, ಮೆಲನೋಸ್ ಚುಕ್ಕೆಗಳನ್ನು ಸ್ಪರ್ಶಿಸಿದಾಗ ಅವು ಮರಳು ಕಾಗದದಂತಹ ವಿನ್ಯಾಸವನ್ನು ಹೊಂದಿರುತ್ತವೆ. ಸಂಪೂರ್ಣವಾಗಿ ಬಲಿತ ಹಣ್ಣುಗಳಲ್ಲಿ ರೋಗಕಾರಕವು ಕೊಳೆತವನ್ನು ಉಂಟುಮಾಡುತ್ತದೆ. ಇದು ಸಾಮಾನ್ಯವಾಗಿ ಕಾಂಡದಿಂದ ಆರಂಭಗೊಳ್ಳುತ್ತದೆ ಮತ್ತು ಹಣ್ಣು ಬೇಗನೆ ಉದುರುವಂತೆ ಮಾಡುತ್ತದೆ. ಎಲೆಯ ಮೇಲಿನ ಲಕ್ಷಣಗಳು ಮೊದಲಿಗೆ ಸಣ್ಣ ಕಂದು ಬಣ್ಣದ ವಿಭಿನ್ನ ಚುಕ್ಕೆಗಳಾಗಿ ಗೋಚರಿಸುತ್ತವೆ. ನಂತರ ಇವು ಕೆಂಪು-ಕಂದು ಗೋಂದಿನಿಂದ ವ್ಯಾಪಿಸಲ್ಪಟ್ಟಿರುವ ಉಬ್ಬಿದ ಗೆಡ್ಡೆಗಳಾಗಿ ಬೆಳೆಯುತ್ತವೆ. ಅವುಗಳು ಸಾಮಾನ್ಯವಾಗಿ ಹಳದಿ ವೃತ್ತದಿಂದ ಸುತ್ತುವರಿಯಲ್ಪಟ್ಟಿರುತ್ತವೆ. ಅಂತಿಮವಾಗಿ ಸಣ್ಣ, ಗಟ್ಟಿಯಾದ ಗೆಡ್ಡೆಗಳಾಗುತ್ತವೆ. ಶೇಖರಣಾ ಸಂದರ್ಭಗಳಲ್ಲಿ, ಕಾಂಡದ-ಕೊನೆ ಕೊಳೆತ ಕಾಣಿಸಿಕೊಳ್ಳಬಹುದು.

Recommendations

ಜೈವಿಕ ನಿಯಂತ್ರಣ

ಡಿ ಸಿಟ್ರಿಗೆ ಚಿಕಿತ್ಸೆ ನೀಡಲು ಸಾವಯವ ತಾಮ್ರದ ಸಂಯುಕ್ತಗಳನ್ನು ಹೊಂದಿರುವ ಸ್ಪ್ರೇ ಗಳನ್ನು ಬಳಸಿ. ಆರಂಭಿಕ ಸಿಂಪಡಣೆಯನ್ನು ದಳಗಳು ಉದುರತೊಡಗಿದಾಗ ಮಾಡಬೇಕು. ನಂತರ 6-8 ವಾರಗಳ ನಂತರ ಎರಡನೇ ಬಾರಿ ಸಿಂಪಡಿಸಬೇಕು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಒಳಗೊಂಡಿರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ವಸಂತದ ಚಿಗುರು ಬೆಳವಣಿಗೆಯ ಸಮಯದಲ್ಲಿ ಪಿರಾಕ್ಲೋಸ್ಟ್ರೋಬಿನ್ ಸಿಂಪಡಿಸುವುದು ಹಣ್ಣುಗಳಲ್ಲಿ ಮೆಲನೋಸ್ ಬೆಳೆಯದಂತೆ ತಡೆಯುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಮನ್ಕೊಜೆಬ್ ಮತ್ತು ಫೆನ್ಬಕೊನಜೋಲ್ ಗಳನ್ನು ಆಧರಿಸಿರುವ ಉತ್ಪನ್ನಗಳನ್ನು ಸಹ ಬಳಸಬಹುದು. ಸ್ಟ್ರೋಬಿಲ್ಯೂರಿನ್ ಶಿಲೀಂಧ್ರನಾಶಕಗಳು ಸಹ ತೃಪ್ತಿಕರ ಫಲಿತಾಂಶಗಳನ್ನು ನೀಡಿವೆ ಮತ್ತು ಅವುಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಮೆಲನೋಸ್ ಕೊಳೆತ ವಸ್ತುಗಳ ಮೇಲೆ ಬೆಳೆಯುವ ಒಂದು ಜೀವಿಯಾಗಿದ್ದು, ಇದು ಸತ್ತ ಕೊಂಬೆಗಳ ಮೇಲೆ ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸುತ್ತದೆ. ಮರದ ಮೇಲೆ ಶಿಲೀಂಧ್ರಗಳ ಬೆಳವಣಿಗೆಯ ಪ್ರಮಾಣ ಮತ್ತು ಮಳೆ ಅಥವಾ ಓವರ್ಹೆಡ್ ತುಂತುರು ನೀರಾವರಿಯ ನಂತರ ಸತತ ಆರ್ದ್ರತೆಯ ಅವಧಿಯು ಈ ರೋಗದ ತೀವ್ರತೆಯನ್ನು ನಿರ್ಧರಿಸುತ್ತವೆ. ಸೋಂಕು ಉಂಟಾಗಲು 18-24 ಗಂಟೆಗಳ ತೇವ ಮತ್ತು 20-24 ° C ತಾಪಮಾನ ಬೇಕಾಗುತ್ತದೆ. ಮರಗಳ ಮೇಲೆ, ನೆಲದ ಮೇಲೆ ಅಥವಾ ತೋಟದಲ್ಲಿ ಹಾಗೆಯೇ ಬಿಟ್ಟ ಕಸದ ರಾಶಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸತ್ತ ಮರದ ಭಾಗಗಳು ಇದ್ದಾಗ ಬೀಜಕಗಳು ಸಮಸ್ಯೆ ಉಂಟುಮಾಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ತೋಟದಲ್ಲಿ ಸತ್ತ ಮರದ ಭಾಗಗಳನ್ನು ನಿಯಮಿತವಾಗಿ ತೆಗೆದುಹಾಕಿ.
  • ಹಾನಿಗೊಳಗಾದ ಅಥವಾ ಸಾಯುತ್ತಿರುವ ಭಾಗಗಳನ್ನು ವರ್ಷಕ್ಕೆ 1 ರಿಂದ 2 ಬಾರಿ ಮರಗಳನ್ನು ಸವರುವ ಮೂಲಕ ಕತ್ತರಿಸಿ ಹಾಕಿ.
  • ರೋಗಕಾರಕಕ್ಕೆ ಮರಗಳ ಭೌತಿಕ ಪ್ರತಿರೋಧವನ್ನು ಸುಧಾರಿಸಲು ಸಹಾಯವಾಗುವಂತೆ ಸಮತೋಲಿತ ರಸಗೊಬ್ಬರಗಳ ಬಳಕೆ ಮಾಡಿ.
  • ರೋಗದ ಲಕ್ಷಣಗಳಿಗಾಗಿ ನಿಯಮಿತವಾಗಿ ಪರಿಶೀಲಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ