ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಗ್ರೀಸಿ ಸ್ಪಾಟ್

Mycosphaerella citri

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬಲಿತ ಎಲೆಗಳ ಮೇಲೆ, ಹಳದಿಯಿಂದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ಇವು ಕ್ಲೋರೋಟಿಕ್ ವಲಯದಿಂದ ಆವೃತವಾಗಿರುತ್ತವೆ.
  • ಕೆಳಗೆ, ಕೊಂಚ ಉಬ್ಬಿದ ತಿಳಿ ಕಿತ್ತಳೆ ಬಣ್ಣದಿಂದ ಹಳದಿ ಮಿಶ್ರಿತ ಕಂದು ಬಣ್ಣದ ಗುಳ್ಳೆಗಳು ಕಾಣುತ್ತವೆ.
  • ನಂತರ ಎರಡೂ ಕಡೆಗಳಲ್ಲಿ ರೋಗಲಕ್ಷಣಗಳು ಗಾಢವಾದ ಕಂದು ಬಣ್ಣಕ್ಕೆ ತಿರುಗಿ 'ಜಿಡ್ಡಿನ' ಲಕ್ಷಣವನ್ನು ತೋರಿಸುತ್ತವೆ.
  • ತೊಂದರೆಗೊಳಗಾದ ಮರಗಳು ಅವುಗಳ ಎಲೆಗಳನ್ನು ಕ್ರಮೇಣ ಕಳೆದುಕೊಳ್ಳಬಹುದು, ಮರದ ಚಟುವಟಿಕೆ ಕುಗ್ಗುತ್ತದೆ ಮತ್ತು ಹಣ್ಣಿನ ಇಳುವರಿ ಕಡಿಮೆಯಾಗುತ್ತದೆ.
  • ಹಣ್ಣುಗಳ ಮೇಲೆ ಜಿಡ್ಡಿನ ಕಲೆ ಸಿಪ್ಪೆ ಬೊಬ್ಬೆ ಕಾಣಿಸಿಕೊಳ್ಳುತ್ತದೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಸಸಿಯ ವಿಧವನ್ನು ಅವಲಂಬಿಸಿ ರೋಗಲಕ್ಷಣಗಳು ಸ್ವಲ್ಪ ಮಟ್ಟಿಗೆ ಬದಲಾಗುತ್ತವೆ. ಆದರೆ ಎಲ್ಲಾ ವಾಣಿಜ್ಯ ವಿಧಗಳೂ ಸ್ವಲ್ಪ ಮಟ್ಟಿಗೆ ಹಾನಿಗೊಳಗಾಗುತ್ತವೆ. ಮೊದಲಿಗೆ ಇವು ಬಲಿತ ಎಲೆಗಳ ಮೇಲೆ, ಹಳದಿಯಿಂದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇವು ಕ್ಲೋರೋಟಿಕ್ ವಲಯದಿಂದ ಆವೃತವಾಗಿರುತ್ತವೆ. ಕೊಂಚ ಉಬ್ಬಿದ ತಿಳಿ ಕಿತ್ತಳೆ ಬಣ್ಣದಿಂದ ಹಳದಿ ಮಿಶ್ರಿತ ಕಂದು ಬಣ್ಣದ ಗುಳ್ಳೆಗಳು ಈ ಚುಕ್ಕೆಗಳ ಕೆಳಗೆ, ಎಲೆಯ ಕೆಳಭಾಗದಲ್ಲಿ ಕಂಡುಬರುತ್ತವೆ. ನಂತರ ಎರಡೂ ಕಡೆಗಳಲ್ಲಿ ರೋಗಲಕ್ಷಣಗಳು ಗಾಢವಾದ ಕಂದು ಬಣ್ಣಕ್ಕೆ ತಿರುಗಿ 'ಜಿಡ್ಡಿನ' ಲಕ್ಷಣವನ್ನು ತೋರಿಸುತ್ತವೆ. ತೊಂದರೆಗೊಳಗಾದ ಮರಗಳು ಅವುಗಳ ಎಲೆಗಳನ್ನು ಕ್ರಮೇಣ ಕಳೆದುಕೊಳ್ಳಬಹುದು, ಮರದ ಚಟುವಟಿಕೆ ಕುಗ್ಗುತ್ತದೆ ಮತ್ತು ಹಣ್ಣಿನ ಇಳುವರಿ ಕಡಿಮೆಯಾಗುತ್ತದೆ. ಹಣ್ಣುಗಳ ಮೇಲೆ, ಸುತ್ತ ಹಸಿರು ಬಣ್ಣದಿಂದ ಆವೃತ್ತವಾದ, ಕೊಳೆತಂತಹ ಕಪ್ಪು ಕಲೆಯು, ಜಿಡ್ಡಿನ ಪ್ರದೇಶದಲ್ಲಿ ಕಾಣುತ್ತದೆ. ಇದನ್ನು ಗ್ರೀಸೀ ಸ್ಪಾಟ್ ರಿಂಡ್ ಬ್ಲಾಚ್ ಲಕ್ಷಣ (ಜಿಡ್ಡು ಕಲೆ ಸಿಪ್ಪೆ ಬೊಬ್ಬೆ) ಎಂದು ಕರೆಯಲಾಗುತ್ತದೆ. ಇವುಗಳು ಹಣ್ಣಿನ ಸಿಪ್ಪೆಯ ಬಹುತೇಕ ಎಲ್ಲಾ ಭಾಗವನ್ನು ಆವರಿಸುತ್ತವೆ. ಹೆಚ್ಚಿನ ಉಷ್ಣತೆ ಮತ್ತು ಹೆಚ್ಚಿನ ಮಳೆ ಬರುವ ಪ್ರದೇಶಗಳಲ್ಲಿ ಯಾವುದೇ ಸಮಯದಲ್ಲೂ ಈ ಸೋಂಕು ತಗುಲಬಹುದು.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಮೈಕೋಸ್ಫರೆಲ್ಲಾ ಸಿಟ್ರಿಯ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಬೇರೆ ಯಾವುದಾದರೂ ಮಾರ್ಗ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತಿದ್ದೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ವಿಧಾನ ಎರಡನ್ನೂ ಹೊಂದಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಬೇಸಿಗೆಯ ತಿಂಗಳುಗಳಲ್ಲಿ ಒಂದು ಅಥವಾ ಎರಡು ಬಾರಿ ಸರಿಯಾದ ಸಮಯದಲ್ಲಿ ಪೆಟ್ರೋಲಿಯಂ ತೈಲ ಹಾಕುವ ಮೂಲಕ ಗ್ರೀಸ್ ಸ್ಪಾಟ್ ರೋಗವನ್ನು ಸಾಮಾನ್ಯವಾಗಿ ನಿಯಂತ್ರಿಸಬಹುದು. ರೋಗಕಾರಕ ಶಿಲೀಂಧ್ರ ಈಗಾಗಲೇ ಎಲೆಗಳನ್ನು ಆವರಿಸಿಕೊಂಡಿದ್ದರೂ ಸಹ, ಮೇಲಿನ ಕ್ರಮದಿಂದ ಬೀಜಕಗಳು ಎಲೆಗಳು ಮತ್ತು ಹಣ್ಣುಗಳನ್ನು ಭೇದಿಸಿ ಒಳಸೇರುವುದನ್ನು ಕಡಿಮೆ ಮಾಡಿ ರೋಗಲಕ್ಷಣಗಳು ಕಾಣಿಸುವ ಸಮಯವನ್ನು ಸುದೀರ್ಘಗೊಳಿಸಬಹುದು. ತಾಮ್ರ ಅಥವಾ ತಾಮ್ರದ ಸಲ್ಫೇಟ್ ಹೊಂದಿರುವ ಉತ್ಪನ್ನಗಳನ್ನು ತೈಲಕ್ಕೆ ಸೇರಿಸುವ ಮೂಲಕ ಎಲೆ ಮತ್ತು ಹಣ್ಣುಗಳಲ್ಲಿ ಕಾಣುವ ರೋಗಲಕ್ಷಣಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಇತರ ಶಿಲೀಂಧ್ರನಾಶಕಗಳನ್ನು (ಉದಾಹರಣೆಗೆ ಸ್ಟ್ರೋಬಿಲ್ಯೂರಿನ್ಗಳು) ಹಿಂದೆ ಬಳಸಲಾಗುತ್ತಿತ್ತು . ಆದರೆ ಕೆಲವು ಸಂದರ್ಭಗಳಲ್ಲಿ ಇವುಗಳ ವಿರುದ್ಧ ಶೀಲೀಂಧ್ರಗಳು ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿವೆ.

ಅದಕ್ಕೆ ಏನು ಕಾರಣ

ಮೈಕೊಸ್ಪೇರೆಲ್ಲಾ ಸಿಟ್ರಿಯ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಸೂಕ್ತವಾದ ಬೆಳೆ ಲಭ್ಯವಿಲ್ಲದಿದ್ದಾಗ ಮಣ್ಣಿನ ಮೇಲ್ಭಾಗದಲ್ಲಿರುವ ಬೆಳೆಯ ಉಳಿಕೆಗಳಲ್ಲಿ ಆಶ್ರಯ ಪಡೆದಿರುತ್ತದೆ. ವಸಂತಕಾಲದಲ್ಲಿ, ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ, ಶಿಲೀಂಧ್ರವು ಬೀಜಕಗಳನ್ನು ಉತ್ಪಾದಿಸುತ್ತದೆ. ಈ ಬೀಜಕಗಳು ತುಂತುರು ನೀರಾವರಿ, ಮಳೆ, ಅಥವಾ ಭಾರೀ ಇಬ್ಬನಿಗಳಿಂದ ಪ್ರಸರಣಗೊಳ್ಳುತ್ತವೆ. ಗಾಳಿಯು ಕೂಡ ಇತರ ಸಿಟ್ರಸ್ ತೋಪುಗಳಿಗೆ ಇವುಗಳನ್ನು ಸಾಗಿಸುತ್ತದೆ. ಒಮ್ಮೆ ಇವು ಎಲೆಗಳ ಕೆಳಭಾಗ ಸೇರಿದ ಮೇಲೆ, ಮೊಳಕೆಯೊಡೆದು, ಶಿಲೀಂಧ್ರಗಳು ನಿಧಾನವಾಗಿ ಎಲೆಯಲ್ಲಿರುವ ನೈಸರ್ಗಿಕ ರಂಧ್ರಗಳ ಮೂಲಕ ಅಂಗಾಂಶಗಳನ್ನು ಭೇದಿಸುತ್ತವೆ. ಈ ಪ್ರಕ್ರಿಯೆಯು ಹೆಚ್ಚಿನ ತಾಪಮಾನ, ಹೆಚ್ಚಿನ ತೇವಾಂಶ ಮತ್ತು ಎಲೆಗಳ ಮೇಲೆ ದೀರ್ಘಕಾಲ ತೇವಾಂಶವಿದ್ದಾಗ ಇನ್ನೂ ವೇಗ ಪಡೆದುಕೊಳ್ಳುತ್ತದೆ. ಬೇಸಿಗೆಯಲ್ಲಿ ಆಗುವ ಪ್ರಾಥಮಿಕ ಸೋಂಕು ಮತ್ತು ಚಳಿಗಾಲದಲ್ಲಿ ಕಂಡುಬರುವ ಮೊದಲ ರೋಗಲಕ್ಷಣಗಳ ನಡುವೆ ಹಲವಾರು ತಿಂಗಳುಗಳೇ ಕಳೆದು ಹೋಗಬಹುದು. ಇದಕ್ಕೆ ತದ್ವಿರುದ್ಧವಾಗಿ, ತಂಪಾದ ಮತ್ತು ಶುಷ್ಕ ಹವಾಮಾನವು ಬೀಜಕದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕನ್ನು ಕಡಿಮೆ ಮಾಡುತ್ತದೆ. ಪರಿಸರದ ಸ್ಥಿತಿಗಳು ಅನುಕೂಲಕರವಾಗಿದ್ದರೆ ಬೆಳವಣಿಗೆಯ ಯಾವುದೇ ಹಂತದಲ್ಲಾದರೋ ಎಲೆಗಳು ಸೋಂಕಿಗೆ ಒಳಗಾಗಬಹುದು. ಮರಗಳ ಮೇಲೆ ಬುಷ್ಟು ಮಿಟೆಗಳಿದ್ದರೂ ಅವು ಈ ರೋಗಕ್ಕೆ ಅನುಕೂಲ ಉಂಟುಮಾಡುತ್ತವೆ ಎಂಬುದು ಕಂಡುಬಂದಿದೆ.


ಮುಂಜಾಗ್ರತಾ ಕ್ರಮಗಳು

  • ಗ್ರೀಸೀ ಸ್ಪಾಟ್ ಇತಿಹಾಸವಿರುವ ಸಿಟ್ರಸ್ ಸಸಿಗಳನ್ನು ನೆಡಬೇಡಿ.
  • ರೋಗದ ಯಾವುದೇ ಚಿಹ್ನೆಗಾಗಿ ತೋಟವನ್ನು ಪರಿಶೀಲಿಸಿ.
  • ಉದಾಹರಣೆಗೆ ಮೇಲಾವರಣದ ಸಾಂದ್ರತೆ ಮತ್ತು ಎಲೆಯ ಉದುರುವಿಕೆ.
  • ತುಂತುರು ನೀರಾವರಿ ಬಳಸಬೇಡಿ.
  • ಬೆಳೆಯ ಉಳಿಕೆಗಳು, ಬಿದ್ದ ಎಲೆಗಳು ಮತ್ತು ಹಣ್ಣುಗಳನ್ನು ತೋಟದಿಂದ ತಗೆದುಬಿಡಿ.
  • ನೆಲದ ಮೇಲಿನ ಎಲೆಗಳ ಕೊಳೆಯುವಿಕೆಯ ವೇಗ ಹೆಚ್ಚಿಸಲು ಕೊಯ್ಲಿನ ನಂತರ ಸುಣ್ಣ ಮತ್ತು ಹೆಚ್ಚುವರಿ ನೀರು ಹಾಕಿ.
  • ಪರ್ಯಾಯವಾಗಿ, ಶಿಲೀಂಧ್ರಗಳ ಬೆಳವಣಿಗೆಯನ್ನು ಹಿಮ್ಮೆಟ್ಟಿಸಲು ಯೂರಿಯಾವನ್ನು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ