ತೊಗರಿ ಬೇಳೆ & ಮಸೂರ್ ಬೇಳೆ

ತೊಗರಿಬೇಳೆಯ ಕಾಂಡ ಕೊಳೆತ

Phytophthora drechsleri f. sp. cajani

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ನೀರಿನಲ್ಲಿ-ನೆನೆಸಿದ ಗಾಯಗಳು.
  • ಕಾಂಡಗಳು ಮತ್ತು ತೊಟ್ಟುಗಳ ಮೇಲೆ ಕಪ್ಪು ಗುಳಿಬಿದ್ದ ಕಂದು ಬಣ್ಣದ ಗಾಯಗಳು.
  • ಸೋಂಕಿತ ಸಸ್ಯಗಳ ಹಠಾತ್ ಸಾವು.

ಇವುಗಳಲ್ಲಿ ಸಹ ಕಾಣಬಹುದು


ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ಎಲೆಗಳ ಮೇಲೆ ನೀರಿನಲ್ಲಿ-ನೆನೆಸಿದ ಗಾಯಗಳನ್ನು ಸೋಂಕಿತ ಸಸ್ಯಗಳು ತೋರಿಸುತ್ತವೆ. ಕಾಂಡಗಳು ಮತ್ತು ತೊಟ್ಟುಗಳಲ್ಲಿ, ಕಂದು ಬಣ್ಣದಿಂದ ಕಪ್ಪು ಬಣ್ಣದ ಮತ್ತು ಗುಳಿಬಿದ್ದ ಗಾಯಗಳು ಕಾಣಿಸಿಕೊಳ್ಳುತ್ತವೆ. ಕಾಂಡದ ಗಾಯಗಳ ಮೇಲೆ ಸಸ್ಯಗಳು ಒಣಗಲು ಪ್ರಾರಂಭವಾಗುತ್ತದೆ ಮತ್ತು ಅಂತಿಮವಾಗಿ ಸಾಯಬಹುದು. ಎಳೆಯ ಮೊಳಕೆಗಳು ಸೋಂಕಿನಿಂದಾಗಿ (ಹಠಾತ್ ಮರಣ) ನಶಿಸುತ್ತವೆ. ಸಸ್ಯವು ಸಾಯದಿದ್ದರೆ, ಕಾಂಡದ ಮೇಲೆ ದೊಡ್ಡ ಬೊಕ್ಕೆಗಳು(ಗಾಲ್ಸ್) ಬೆಳೆಯುತ್ತವೆ.

Recommendations

ಜೈವಿಕ ನಿಯಂತ್ರಣ

ಪೊಟ್ಯಾಸಿಯಮ್ ರಸಗೊಬ್ಬರವನ್ನು ಹಾಕುವ ಮೂಲಕ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಫೈಟೊಫ್ತೋರ ಬ್ಲೈಟ್ ಅನ್ನು ತಡೆಗಟ್ಟಲು ಒಂದು ಕೆಜಿ ಬೀಜಕ್ಕೆ 4 ಗ್ರಾಂ ಮೆಟಾಕ್ಸಿಲ್ ನೊಂದಿಗೆ ಬೀಜಗಳನ್ನು ಸಂಸ್ಕರಿಸಬಹುದು.

ಅದಕ್ಕೆ ಏನು ಕಾರಣ

ಫೈಟೊಫ್ತೋರ ಬ್ಲೈಟ್ ಮಣ್ಣಿನಿಂದ ಹುಟ್ಟಿದ ಶಿಲೀಂಧ್ರವಾಗಿದೆ. ಸಸ್ಯದ ಉಳಿಕೆಗಳಲ್ಲಿ ಇದು ಚಳಿಗಾಲವನ್ನು ಕಳೆಯುತ್ತದೆ. ಸುರಿಯುತ್ತಿರುವ ಮಳೆ ಮತ್ತು ಸುಮಾರು 25 ಡಿಗ್ರಿ ಸೆಲ್ಸಿಯಸ್ನಂತಹ ತಾಪಮಾನದ ಶುಷ್ಕ ಪರಿಸ್ಥಿತಿಗಳು ಸೋಂಕಿಗೆ ಅನುಕೂಲಕರವಾಗಿರುತ್ತವೆ. 8 ಗಂಟೆಗಳ ಎಲೆಯ ಆರ್ದ್ರತೆಯು ಸೋಂಕು ಉಂಟಾಗಲು ಅವಶ್ಯಕ. ಸ್ವಲ್ಪ ಸಮಯದ ನಂತರ ತೊಗರಿಬೇಳೆ ರೋಗಕ್ಕೆ ಪ್ರತಿರೋಧವನ್ನು ಬೆಳೆಸಿಕೊಳ್ಳುತ್ತವೆ.


ಮುಂಜಾಗ್ರತಾ ಕ್ರಮಗಳು

  • ನೀರು ನಿಲ್ಲುವಿಕೆಯನ್ನು ತಡೆಯಿರಿ.
  • ಬದುವಿನ ಮೇಲೆ ಸಸ್ಯಗಳ ಬಿತ್ತನೆ ಮಾಡಿ.
  • ಉತ್ತಮ ಒಳಚರಂಡಿ ಒದಗಿಸಿ.
  • ಬೆಳೆ ಸರದಿ ಅನುಸರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ