ಗುಲಾಬಿ

ಕಪ್ಪು ಚುಕ್ಕೆ

Diplocarpon rosae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಯ ಮೇಲ್ಭಾಗದಲ್ಲಿ ಸಣ್ಣ ಚುಕ್ಕೆಗಳು.
  • ಹಳದಿ ಹೊರವಲಯದಿಂದ ಸುತ್ತುವರಿದಿರುತ್ತದೆ.
  • ಅಕಾಲಿಕ ಎಲೆ ಉದುರುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಗುಲಾಬಿ

ಗುಲಾಬಿ

ರೋಗಲಕ್ಷಣಗಳು

ರೋಗಲಕ್ಷಣಗಳನ್ನು ಎಲೆಯ ಮೇಲಿನ ಭಾಗದಲ್ಲಿ ಸಣ್ಣ ಚುಕ್ಕೆಗಳಿಂದ ಹೇಳಲಾಗುತ್ತದೆ. ಈ ಕೆನ್ನೇರಳೆ ಅಥವಾ ಕಪ್ಪು ತೇಪೆಗಳು 2 ರಿಂದ 12 ಮಿಮೀ ವರೆಗೆ ವೇಗವಾಗಿ ವಿಸ್ತರಿಸಬಹುದು ಮತ್ತು ಹರಡಿದಂತಹ ಅಂಚುಗಳನ್ನು ಹೊಂದಿರಬಹುದು. ಎಲೆಯ ಮೇಲೆ ಕಲೆಯ ಸುತ್ತಲಿನ ಪ್ರದೇಶವು ಹಳದಿ ಬಣ್ಣಕ್ಕೆ ತಿರುಗಬಹುದು ಮತ್ತು ಅಕಾಲಿಕವಾಗಿ ಎಲೆ ಉದುರಬಹುದು. ಕೆಲವೊಮ್ಮೆ ಎಳೆಯ ಕಾಂಡಗಳ ಮೇಲೆ ಸಣ್ಣ, ಕಪ್ಪು, ತುರಿಕೆ ತೇಪೆಗಳು ಕಾಣಿಸಿಕೊಳ್ಳುತ್ತವೆ. ತೀವ್ರವಾದ ಸೋಂಕಿನ ಸಂದರ್ಭದಲ್ಲಿ ಸಸ್ಯವು ಬಹುತೇಕ ಎಲ್ಲಾ ಎಲೆಗಳನ್ನು ಉದುರಿಸಬಹುದು ಮತ್ತು ಕಡಿಮೆ ಹೂವುಗಳನ್ನು ಉತ್ಪಾದಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಕಪ್ಪು ಚುಕ್ಕೆಗಳನ್ನು ನಿಯಂತ್ರಿಸಲು ಕೆಳಗಿನ ಪದಾರ್ಥಗಳನ್ನು ಶಿಫಾರಸು ಮಾಡಲಾಗಿದೆ: ತಾಮ್ರ, ಸುಣ್ಣದ ಗಂಧಕ, ಬೇವಿನ ಎಣ್ಣೆ, ಪೊಟ್ಯಾಸಿಯಮ್ ಬೈಕಾರ್ಬನೇಟ್. ಅಡಿಗೆ ಸೋಡಾ (ಸೋಡಿಯಂ ಬೈಕಾರ್ಬನೇಟ್) ವನ್ನು ಸಹ ಬಳಸಬಹುದು: 1 ಲೀಟರ್ ನೀರಿಗೆ 1 ಟೀ ಚಮಚ (5 ಮಿಲಿ), ಮತ್ತು ಜೊತೆಗೆ ಒಂದು ಹನಿ ದ್ರವ ಸಾಬೂನನ್ನು ಬೆರೆಸಿ. ಬ್ಯಾಸಿಲಸ್ ಸಬ್ಟಿಲಿಸ್ ಎಂಬ ಬ್ಯಾಕ್ಟೀರಿಯಾವನ್ನು ಒಳಗೊಂಡಿರುವ ಒಂದು ಸೂತ್ರೀಕರಣವು ಲಭ್ಯವಿದೆ. ಟ್ರೈಕೋಡರ್ಮಾ ಹಾರ್ಜಾನಿಯಮ್ ಅನ್ನು ಶಿಲೀಂಧ್ರನಾಶಕಗಳ ಸಂಯೋಜನೆಯೊಂದಿಗೆ ಬಳಸಿದಾಗ ಉತ್ತಮ ನಿಯಂತ್ರಣವನ್ನು ನೀಡುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕಪ್ಪು ಚುಕ್ಕೆಯನ್ನು ನಿಯಂತ್ರಿಸಲು ಟೆಬುಕೊನಜೋಲ್, ಟೆಬುಕೊನಜೋಲ್ + ಟ್ರೈಫ್ಲೋಕ್ಸಿಸ್ಟ್ರೋಬಿನ್ ಮತ್ತು ಟ್ರೈಟಿಕೋನಜೋಲ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ಶಿಫಾರಸು ಮಾಡಲಾಗುತ್ತದೆ.

ಅದಕ್ಕೆ ಏನು ಕಾರಣ

ಗುಲಾಬಿಗಳ ಮೇಲೆ ಕಪ್ಪು ಚುಕ್ಕೆ ಡಿಪ್ಲೋಕಾರ್ಪಾನ್ ರೋಸೇ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಶಿಲೀಂಧ್ರವು ಬಿದ್ದ ಮತ್ತು ಕೊಳೆಯುತ್ತಿರುವ ಎಲೆಗಳು ಮತ್ತು ಕಾಂಡಗಳ ಮೇಲೆ ಚಳಿಗಾಲವನ್ನು ಕಳೆಯುತ್ತದೆ. ಬೀಜಕಗಳು ಗಾಳಿ ಮತ್ತು ಮಳೆಹನಿಗಳಿಂದ ಹರಡುತ್ತವೆ ಮತ್ತು ವಸಂತ ಋತುವಿನಲ್ಲಿ ಎಲೆಗಳ ತೆರೆಯುವಿಕೆಯ ಮೂಲಕ ಸೋಂಕು ತರುತ್ತದೆ. ಶಿಲೀಂಧ್ರವು ಮಳೆಗಾಲದಲ್ಲಿ 20-26 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಆರ್ದ್ರ ಪರಿಸ್ಥಿತಿಗಳಲ್ಲಿ ಹೆಚ್ಚು ತೀವ್ರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ರೋಗರಹಿತ ನೆಡು ವಸ್ತುಗಳನ್ನು ಬಳಸಿ.
  • ರೋಗಕ್ಕೆ ಕಡಿಮೆ ಒಳಗಾಗುವ ಪ್ರಭೇದಗಳನ್ನು, ಹೊಸ ಅಥವಾ ಹಳೆಯ ಜಾತಿಗಳನ್ನು ನೆಡಬೇಕು.
  • ಚೆನ್ನಾಗಿ ಬಿಸಿಲು ಬೀಳುವ, ಚೆನ್ನಾಗಿ ನೀರು ಬರಿದಾಗುವ, ಚೆನ್ನಾಗಿ ಗಾಳಿಯ ಪ್ರಸರಣ ಇರುವ ಸ್ಥಳವನ್ನು ನೆಡಲು ಬಳಸಿ.
  • ಮತ್ತು ಸಸ್ಯಗಳ ನಡುವೆ 1-1.25 ಮೀ.
  • ಅಂತರ ಇರಲಿ.
  • ಮಣ್ಣಿನ ಮೇಲೆ ಹಸಿರೆಲೆ ಪದರವನ್ನು ಹಾಕಿ.
  • ನಿಯಮಿತವಾಗಿ ಸಮರಿ, ದುರ್ಬಲ ಅಥವಾ ಸತ್ತ ಕಾಂಡಗಳನ್ನು ತೆಗೆದುಹಾಕಿ.
  • ಬೆಳಿಗ್ಗೆ ಗುಲಾಬಿಗಳ ಸುತ್ತ ಮಣ್ಣಿಗೆ ನೀರು ಹಾಕಿ.
  • ಬಿದ್ದ ಎಲೆಗಳನ್ನು ಸಂಗ್ರಹಿಸಿ ನಾಶಮಾಡಿ ಅಥವಾ ಮಲ್ಚ್ ಅಡಿಯಲ್ಲಿ ಹೂತುಹಾಕಿ.
  • ಹೊಸ ಎಲೆಗಳು ಕಾಣಿಸಿಕೊಳ್ಳುವ ಮೊದಲು ಪೀಡಿತ ಕಾಂಡಗಳನ್ನು ಕತ್ತರಿಸು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ