ಹತ್ತಿ

ಹತ್ತಿಯ ಬೂದು ಶಿಲೀಂಧ್ರ ರೋಗ ( ಹತ್ತಿಯ ಗ್ರೇ ಮಿಲ್ಡ್ಯೂ )

Mycosphaerella areola

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಣ್ಣದಾದ, ತಿಳಿ ಹಸಿರಿನಿಂದ ಹಳದಿ ಬಣ್ಣದ ಕೋನೀಯ ತೇಪೆಗಳು.
  • ಕಲೆಗಳ ಕೆಳಗೆ ಬಿಳಿ ಬೂದು ಬಣ್ಣದ ಪುಡಿಯು ಕಂಡುಬರುತ್ತದೆ.
  • ಎಲೆಗಳು ನಿಧಾನವಾಗಿ ಒಣಗಿ ಬೇಗ ಉದುರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ರೋಗಲಕ್ಷಣಗಳು ಸಾಮಾನ್ಯವಾಗಿ ಕೃಷಿ ಅವಧಿಯ ಕೊನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಸಣ್ಣ, ತಿಳಿ ಹಸಿರಿನಿಂದ ಹಳದಿಬಣ್ಣದ, ವಕ್ರ ಕಲೆಗಳು, ನಾಳಗಳನ್ನು ಹೊರತುಪಡಿಸಿ ಹಳೆಯ ಎಲೆಗಳ ಮೇಲಿನ ಭಾಗದಲ್ಲಿ ಕಾಣಿಸುತ್ತವೆ. ಎಲೆಗಳ ಕೆಳಭಾಗದಲ್ಲಿ ಕಲೆಗಳ ಕೆಳಗೆ ಬಿಳಿ ಬೂದು ಬಣ್ಣದ ಪುಡಿಯು ಕಂಡುಬರುತ್ತದೆ. ಹೆಚ್ಚಿನ ತೇವಾಂಶದ ಅವಧಿಯಲ್ಲಿ, ಎಲೆಗಳ ಎರಡೂ ಬದಿ ಬೆಳ್ಳಿಯ ಬಣ್ಣದ ಶಿಲೀಂಧ್ರದಿಂದ ಆವರಿಸಿಕೊಂಡಿರುತ್ತದೆ. ತೀವ್ರವಾಗಿ ಬಾಧಿತವಾದ ಎಲೆಗಳು ಕೊಳೆಯುತ್ತವೆ, ಎಲೆ ಮುರುಟುತ್ತದೆ ಮತ್ತು ಒಣಗುತ್ತದೆ. ಮತ್ತು ಕಲೆಗಳು ಕೆಂಪು-ಕಂದು ಬಣ್ಣಕ್ಕೆ ತಿರುಗಿ, ಅಕಾಲಿಕವಾಗಿ ಉದುರುತ್ತವೆ. ಎಲೆ ಉದುರುವಿಕೆಯು ಸಸ್ಯ ಮತ್ತು ಅದರ ಉತ್ಪಾದಕತೆಯನ್ನು ದುರ್ಬಲಗೊಳಿಸುತ್ತದೆ. ಹೊಸ ಎಲೆಗಳು ರೋಗದ ಚಿನ್ಙೆಗಳನ್ನು ತೋರಿಸುತ್ತವೆ. ಸೋಂಕಿತ ಬೀಜಗಳು ಶಕ್ತಿ ಕಳೆದುಕೊಳ್ಳುತ್ತವೆ ಮತ್ತು ಮುಂಚಿತವಾಗಿಯೇ ತೆರೆದುಕೊಳ್ಳುತ್ತವೆ ಅಥವಾ ಕೊಯ್ಲಿನ ಸಮಯದ ಚಟುವಟಿಕೆಯಿಂದಾಗಿ ಮುರಿಯುತ್ತವೆ.

Recommendations

ಜೈವಿಕ ನಿಯಂತ್ರಣ

ಸ್ಯೂಡೋಮೊನಸ್ ಫ್ಲೂರೊಸೆನ್ಸ್ ಇರುವ ಉತ್ಪನ್ನಗಳನ್ನು (10 ಗ್ರಾಂ / ಕೆಜಿ ಬೀಜಗಳು) ಬಳಸಿ ಬೀಜ ಚಿಕಿತ್ಸೆ ನೀಡಬಹುದು. ಪ್ರತಿ 10 ದಿನಗಳಿಗೊಮ್ಮೆ ಈ ಬ್ಯಾಕ್ಟೀರಿಯ ಇರುವ ದ್ರಾವಣ ಸಿಂಪಡಿಸುವುದು ಸೋಂಕನ್ನು ಗಮನಾರ್ಹವಾಗಿ ತಗ್ಗಿಸುತ್ತದೆ. ಇತರ ಬ್ಯಾಕ್ಟೀರಿಯಾಗಳನ್ನು ( ಬ್ಯಾಸಿಲಸ್ ಸರ್ಕ್ಯುಲನ್ಸ್ ಮತ್ತು ಸೆರೆಟಿಯ ಮಾರ್ಸೆಸೆನ್ಸ್) ಮೈಕೊಸ್ಫರೆಲ್ಲಾದ ಇತರ ಜಾತಿಗಳನ್ನು ನಿಯಂತ್ರಿಸಲು ಮತ್ತು ಇತರ ಬೆಳೆಗಳಲ್ಲಿ ಸಂಬಂಧಿತ ರೋಗಗಳ ಪ್ರಮಾಣವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಒಂದು ಲೀಟರ್ ನೀರಿಗೆ ಪ್ರತಿ 3 ಗ್ರಾಂ ವೆಟ್ಟೇಬಲ್ ಸಲ್ಫರ್ನ ಸ್ಪ್ರೇ ಅಥವಾ ಒಂದು ಹೆಕ್ಟೇರ್ ಗೆ 8 -10 ಕೆ.ಜಿ.ಗಳಷ್ಟು ಗಂಧಕದ ಪುಡಿ ಬಳಕೆ ಇತರ ಸಾಧ್ಯತೆಗಳು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಸೇರಿಸಿದ ಸಮಗ್ರ ಮಾರ್ಗ ಇದ್ದರೆ ಅದನ್ನು ಮೊದಲು ಪರಿಗಣಿಸಿ. ರೋಗದ ಆರಂಭಿಕ ಹಂತಗಳಲ್ಲಿ ಅಥವಾ ಕಡಿಮೆ ತೀವ್ರತೆಯ ಸಂದರ್ಭದಲ್ಲಿ, ಜೈವಿಕ ಚಿಕಿತ್ಸೆಗಳನ್ನು ಮೊದಲು ಪರಿಗಣಿಸಬೇಕು. ರೋಗದ ಮುಂದುವರಿದ ಹಂತಗಳಲ್ಲಿ ಅಥವಾ ತೀವ್ರತೆ ಹೆಚ್ಚಿದ್ದಾಗ ಪ್ರೊಪಿಕೊನಜೋಲ್ ಅಥವಾ ಹೆಕ್ಸಾಕೋನಜೋಲ್ (2 ಮಿಲಿ / ಲೀ) ಹೊಂದಿರುವ ಹೊಸ ಶಿಲೀಂಧ್ರನಾಶಕಗಳ ಬಳಕೆಯನ್ನು ಶಿಫಾರಸು ಮಾಡಲಾಗಿದೆ. ಒಂದು ವಾರ ಅಥವಾ 10 ದಿನಗಳ ನಂತರ ಚಿಕಿತ್ಸೆಯನ್ನು ಪುನರಾವರ್ತಿಸಿ.

ಅದಕ್ಕೆ ಏನು ಕಾರಣ

ಹಿಂದಿನ ಋತುವಿನ ಸಸ್ಯ ಅವಶೇಷ ಅಥವಾ ತಾವಾಗೇ ಬೆಳೆದ ಸಸ್ಯಗಳಲ್ಲಿ ಉಳಿದುಕೊಳ್ಳುವ ಶಿಲೀಂಧ್ರ ಮೈಕೋಸ್ಫೇರೆಲ್ಲಾ ಎರೋಲಾದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇವು ಹೊಸ ಋುತುವಿನಲ್ಲಿ ರೋಗಕಾರಕದ ಮೂಲಗಳು. 20-30 °C ನಡುವಿನ ಉಷ್ಣಾಂಶ, ಆರ್ದ್ರ ಮತ್ತು ಆರ್ದ್ರತೆಯ ಪರಿಸ್ಥಿತಿಗಳು (80% ಅಥವಾ ಹೆಚ್ಚು) ಮತ್ತು ಮರುಕಳಿಸುವ ಮಳೆ ಸೋಂಕನ್ನು ಮತ್ತು ರೋಗದ ಪ್ರಗತಿಯನ್ನು ಉತ್ತೇಜಿಸುತ್ತವೆ. ತಂಪಾದ ವಾತಾವರಣ ಮತ್ತು ಸತತವಾಗಿ ಹಲವಾರು ದಿನಗಳವರೆಗೆ ರಾತ್ರಿಯ ಮಂಜು ಜೊತೆಗೆ ಇದ್ದರೆ ಮಳೆಯ ಅನುಪಸ್ಥಿತಿಯಲ್ಲೂ ಸಹ ಶಿಲೀಂಧ್ರಕ್ಕೆ ಅನುಕೂಲಕರವಾಗಿರುತ್ತದೆ. ಬೀಜಕಣಗಳು ಎಲೆ ಗಾಯಗಳಲ್ಲಿ ಉತ್ಪಾದನೆಯಾಗುತ್ತದೆ ಮತ್ತು ತರುವಾಯ ಆರೋಗ್ಯವಂತ ಸಸ್ಯಗಳಿಗೆ ಗಾಳಿಯಿಂದ ಸಾಗಿಸಲ್ಪಡುತ್ತದೆ. ಇದರಿಂದ ದ್ವಿತೀಯಕ ಸೋಂಕುಗಳು ಉಂಟಾಗುತ್ತವೆ. ಬೀಜಕೋಶ ಮೊಳೆಯುವಾಗ ಅಥವಾ ಅದಕ್ಕಿಂತ ಮೊದಲು, ಋತುವಿನ ಅಂತ್ಯದ ಸಮಯದಲ್ಲಿ ಸಸ್ಯಗಳು ಹೆಚ್ಚು ದುರ್ಬಲವಾಗಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸಸ್ಯ ನಿರೋಧಕ ಪ್ರಭೇದಗಳನ್ನು (ಹಲವಾರು ಲಭ್ಯವಿವೆ) ನೆಡಿ.
  • ಒಳಚರಂಡಿ ಸುಧಾರಿಸಲು ಎತ್ತರದ ಸಾಲುಗಳ ಮೇಲೆ ನೆಡಿ.
  • ಋತುವಿನಲ್ಲಿ ತೀರಾ ಮೊದಲು ಅಥವಾ ತಡವಾಗಿ ಬಿತ್ತಬೇಡಿ.
  • ಮಳೆಯ ನಂತರ ಮೇಲಾವರಣ ಬೇಗ ಒಣಗುವಂತೆ ಸಸ್ಯಗಳ ನಡುವೆ ಅಂತರ ಇರಿಸಿ.
  • ರೋಗದ ಲಕ್ಷಣಗಳಿಗಾಗಿ ನಿಯಮಿತವಾಗಿ ಹತ್ತಿಯ ಜಮೀನನ್ನು ಗಮನಿಸುತ್ತಿರಿ.
  • ರೋಗಲಕ್ಷಣಗಳನ್ನು ಪ್ರದರ್ಶಿಸುವ ಎಲೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
  • ಹೊಲದಲ್ಲಿ ಮತ್ತು ಸುತ್ತಲು ರೋಗಕ್ಕೆ ಒಳಗಾಗುವ ಕಳೆಗಳನ್ನು ನಿಯಂತ್ರಿಸಿ.
  • ಜಮೀನಿನಲ್ಲಿ ಮತ್ತು ಸುತ್ತಮುತ್ತಲು ತಮ್ಮಷ್ಟಕ್ಕೆ ಬೆಳೆದಿರಬಹುದಾದ ಹಿಂದಿನ ಬಾರಿಯ ಬೆಳೆಗಳನ್ನು ನಾಶಮಾಡಿ.
  • ಎಲೆಯ ತೇವವನ್ನು ಕಡಿಮೆ ಮಾಡಲು ಹನಿ ನೀರಾವರಿ ವ್ಯವಸ್ಥೆಯನ್ನು ಬಳಸಿ ಮತ್ತು ತುಂತುರು ನೀರಾವರಿ ತಪ್ಪಿಸಿ.
  • ಬೆಳಿಗ್ಗೆ ನೀರು ಹಾಕುವ ಮೂಲಕ ಸಸ್ಯಗಳು ಹಗಲಲ್ಲಿ ಒಣಗುವಂತೆ ನೋಡಿಕೊಳ್ಳಿ.
  • ಆಗ್ಗಾಗ್ಗೆ ನೀರು ಹಾಕುವುದನ್ನು ತಪ್ಪಿಸಿ.
  • ಆ ಮೂಲಕ ಬೆಳೆಗಳ ಮೇಲಾವರಣವನ್ನು ಮತ್ತು ಮಣ್ಣಿನ ಮೇಲ್ಮೈಯನ್ನು ಒಣಗಿದಂತೆ ಇಡಬಹುದು.
  • ಸಾರಜನಕ ರಸಗೊಬ್ಬರಗಳು ಅಥವಾ ಸಾವಯವ ಗೊಬ್ಬರಗಳ ಹೆಚ್ಚಿನ ಬಳಕೆ ತಪ್ಪಿಸಿ.
  • ಸಸ್ಯಗಳು ತೇವವಾಗಿದ್ದಾಗ ಹೊಲದಲ್ಲಿ ಕೆಲಸ ಮಾಡಬೇಡಿ.
  • ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಹತ್ತಿಯ ಕೃಷಿಭೂಮಿಗಿಂತ ದೂರದಲ್ಲಿ ಅವುಗಳನ್ನು ಸುಟ್ಟು ಹಾಕಿ.
  • ಆಶ್ರಯದಾತವಲ್ಲದ ಗಿಡಗಳೊಂದಿಗೆ 2- ಅಥವಾ 3 ವರ್ಷ ಬೆಳೆ ಸರದಿ ಮಾಡಿ.
  • ಉದಾಹರಣೆಗೆ ಧಾನ್ಯಗಳು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ