ಹತ್ತಿ

ಹತ್ತಿಯ ಅಲ್ಟಾರ್ನೆರಿಯ ಎಲೆ ಚುಕ್ಕೆ

Alternaria macrospora

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ನೇರಳೆ ಅಂಚುಗಳುಳ್ಳ ಕಂದು - ಬೂದು ಬಣ್ಣದ ಕಲೆಗಳು.
  • ಕಲೆಗಳ ಮಧ್ಯಭಾಗವು ಕ್ರಮೇಣವಾಗಿ ಒಣಗಿ ಉದುರಿಹೋಗುತ್ತದೆ.
  • ಕಾಂಡಗಳ ಮೇಲೆ ಸಣ್ಣ ಗುಳಿಬಿದ್ದ ಕಲೆಗಳು.
  • ಮೊಗ್ಗುಗಳು ಉದುರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಎಲೆಗಳಲ್ಲಿನ ಆರಂಭಿಕ ಸೋಂಕು, ಸಣ್ಣ, ದುಂಡನೆಯ ನೇರಳೆ ಅಂಚುಗಳುಳ್ಳ ಕಂದು ಬಣ್ಣದಿಂದ ಬೂದು ಬಣ್ಣದ ಕಲೆಗಳನ್ನು ಉತ್ಪತ್ತಿ ಮಾಡುತ್ತದೆ. ಈ ಕಲೆಗಳು ವ್ಯಾಸದಲ್ಲಿ 1 ರಿಂದ 10 ಮಿಮಿ ನಷ್ಚಿದ್ದು ಬೇರೆ ಬೇರೆ ಗಾತ್ರಗಳಲ್ಲಿರುತ್ತವೆ. ಈ ಕಲೆಗಳು ಹೆಚ್ಚಾಗಿ ಕೇಂದ್ರೀಕೃತ ಬೆಳವಣಿಗೆಯನ್ನು ತೋರಿಸುತ್ತವೆ, ಇದು ವರ್ತುಲದಂತಹ ಮಾದರಿಗೆ ಕಾರಣವಾಗುತ್ತದೆ. ಇವು ಹೆಚ್ಚಾಗಿ ಎಲೆಯ ಮೇಲ್ಮೈಯಲ್ಲಿ ಸ್ಪಷ್ಟವಾಗಿರುತ್ತದೆ. ಅವು ಬೆಳೆದಂತೆ ಅವುಗಳ ಮಧ್ಯಭಾಗ ಕ್ರಮೇಣವಾಗಿ ಒಣಗುತ್ತದೆ ಮತ್ತು ಬೂದು ಬಣ್ಣಕ್ಕೆ ತಿರುಗುತ್ತದೆ, ಕೆಲವೊಮ್ಮೆ ಇದು ಸೀಳುಬಿಡುತ್ತದೆ ಮತ್ತು ಉದುರಿಹೋಗುತ್ತದೆ (ಶಾಟ್- ಹೋಲ್ ಪರಿಣಾಮ). ಈ ಕಲೆಗಳು ಎಲೆಯ ಮಧ್ಯಭಾಗದಲ್ಲಿ ಒಟ್ಟುಗೂಡಲೂಬಹುದು ಮತ್ತು ಅನಿಯಮಿತ ಸತ್ತ ಜಾಗಗಳನ್ನು ರಚಿಸಬಹುದು. ಆದರೆ, ಆರ್ದ್ರ ಪರಿಸ್ಥಿತಿಗಳಲ್ಲಿ ಶಿಲೀಂಧ್ರವು ಗಣನೀಯ ಸಂಖ್ಯೆಯಲ್ಲಿ ಬೀಜಕಣಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಅವನ್ನು ಬಿಡುಗಡೆ ಮಾಡುತ್ತದೆ. ಇದು ಗಾಯಗಳು ಕಪ್ಪು ಮಸಿಯಾಗಿ ಕಾಣುವುದಕ್ಕೆ ಕಾರಣವಾಗುತ್ತದೆ. ಕಾಂಡಗಳ ಮೇಲೆ, ಗಾಯಗಳ ಬೆಳವಣಿಗೆಯು ಸಣ್ಣ ಕುಳಿಬಿದ್ದ ಕಲೆಗಳಂತೆ ಶುರುವಾಗುತ್ತದೆ. ಇವು ನಂತರ ಹುಣ್ಣುಗಳಾಗಿ ಬೆಳೆದು ಅಂಗಾಂಶವನ್ನು ವಿಭಜಿಸಬಹುದು ಮತ್ತು ಸೀಳಬಹುದು. ತೀವ್ರವಾದ ಸೋಂಕಿದ್ದಲ್ಲಿ ಹೂವು, ಮೊಗ್ಗುಗಳು ಉದುರಬಹುದು ಇದು ಕೊನೆಯದಾಗಿ ಬೀಜಕೋಶಗಳ ಬೆಳವಣಿಗೆಯ ವೈಫಲ್ಯತೆಗೆ ದಾರಿ ಮಾಡಿಕೊಡಬಹುದು.

Recommendations

ಜೈವಿಕ ನಿಯಂತ್ರಣ

ಸುಡೋಮೊನಸ್ ಫ್ಲ್ಯೂರೋಸೆನ್ಸ್ (10 ಗ್ರಾಂ/ಕೆಜಿ ಬೀಜಗಳು)ನೊಂದಿಗಿನ ಬೀಜ ಸಂಸ್ಕರಣೆ ಬೆಳೆಗಳಿಗೆ ಸ್ವಲ್ಪ ಮಟ್ಟಿನ ರಕ್ಷಣೆ ನೀಡಬಹುದು. ಸುಡೋಮೊನಸ್ ಫ್ಲ್ಯೂರೋಸೆನ್ಸ್ ನ 0.2% ದ್ರಾವಣವನ್ನು ಪ್ರತಿ 10 ದಿನಗಳಿಗೊಮ್ಮೆ ಸಿಂಪರಣೆ ಮಾಡುವುದರಿಂದ ಸೋಂಕನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಾಮಾನ್ಯವಾಗಿ, ಈ ರೋಗ ನಿರ್ದಿಷ್ಟವಾದ ಶಿಲೀಂಧ್ರನಾಶಕ ಚಿಕಿತ್ಸೆಯ ಅಗತ್ಯವಿರುವಷ್ಟರ ಮಟ್ಟಿಗೆ ಇಳುವರಿಯಲ್ಲಿ ಕಡಿತವನ್ನೇನೂ ಮಾಡುವುದಿಲ್ಲ. ತೀವ್ರವಾದ ಪ್ರಕರಣಗಳಲ್ಲಿ, ಮಾನೇಬ್, ಮಂಕೋಝೇಬ್ (2.5 ಮಿಲೀ/ಲೀ), ಹೆಕ್ಸಕೊನಝೋಲ್ (1 ಮಿಲೀ/ಲೀ), ಟಬ್ಯುಕೊನಝೋಲ್ ಮತ್ತು ಡೈಫೆನೋಕೊನಝೋಲ್ ನಂತಹ ಶಿಲೀಂಧ್ರನಾಶಕಗಳನ್ನು ಅಲ್ಟಾರ್ನೆರಿಯ ಎಲೆ ಚುಕ್ಕೆಯನ್ನು ನಿಯಂತ್ರಿಸಲು ಬಳಸಬಹುದು. ಸ್ಟ್ರೋಬೈಲೂರಿನ್ಸ್ (ಉದಾ: ಟ್ರೈಫ್ಲೋಕ್ಸಿಸ್ಟ್ರೋಬಿನ್) ಅಥವಾ ಬಯೋ ಸಿಂಥಸಿಸ್ ನಿಯಂತ್ರಕಗಳೊಂದಿಗಿನ (ಉದಾ: ಟ್ರಿಯಾಡೆಮಿನೊಲ್, ಇಪ್ಕೊನಝೋಲ್ ) ಬೀಜ ಸಂಸ್ಕರಣೆಯನ್ನು ಬೀಜಗಳು ರೋಗಕಾರಕಕ್ಕೆ ಪ್ರತಿರೋಧಿಯಾಗುವಂತೆ ಮಾಡಲು ಬಳಸಬಹುದು.

ಅದಕ್ಕೆ ಏನು ಕಾರಣ

ಅಲ್ಟಾರ್ನೆರಿಯ ಮಾಕ್ರೋಸ್ಪೊರ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ, ಇದು ಯಾವುದೇ ಸಜೀವ ಅಂಗಾಂಶ ಇಲ್ಲದಿದ್ದಲ್ಲಿ ಅಥವಾ ಪರ್ಯಾಯ ಆಶ್ರಯದಾತ ಸಸ್ಯಗಳು ಸಿಗದಿದ್ದಲ್ಲಿ ಹತ್ತಿಯ ಉಳಿಕೆಗಳಲ್ಲಿ ಬದುಕುಳಿಯುತ್ತದೆ. ರೋಗಕಾರಕವು ಗಾಳಿಯಿಂದ ಜನಿಸಿದ ಬೀಜಕಣಗಳ ಮೂಲಕ ಮತ್ತು ಆರೋಗ್ಯಕರ ಸಸ್ಯಗಳ ಮೇಲೆ ನೀರಿನ ತುಂತುರುಗಳ ಮೂಲಕ ಹರಡುತ್ತದೆ. ಎಲೆಗಳ ಚುಕ್ಕೆಗಳಲ್ಲಿ ಬೀಜಕಣಗಳ ಉತ್ಪಾದನೆ ಹಾಗು ಸೋಂಕಿನ ಪ್ರಕ್ರಿಯೆಗೂ ಸಹ ತೇವಾಂಶಭರಿತ ಹವಾಮಾನ ಮತ್ತು ಸುಮಾರು 27 °C ನಷ್ಟು ತಾಪಮಾನಗಳು ಅನುಕೂಲಕರವಾಗಿವೆ. ಸಸಿ ಕುಡಿಯೊಡೆಯುವ ಹಂತದಲ್ಲಿ ಮತ್ತು ಋತುವಿನಲ್ಲಿ ತಡವಾಗಿ, ಎಲೆಗಳು ಹಣ್ಣಾಗುವ ಸಮಯದಲ್ಲಿ ಸಸ್ಯಗಳು ಹೆಚ್ಚಾಗಿ ರೋಗಕ್ಕೆ ಒಳಗಾಗುತ್ತವೆ. ಸೋಂಕಿನ ಅಪಾಯವು ಹತ್ತಿಯ ಎಲೆಗಳಲ್ಲಿ ಕೆಳಗಿನಿಂದ ಮೇಲಕ್ಕೆ ಹೋದಂತೆ ಕಡಿಮೆಯಾಗುತ್ತದೆ. ಶಿಲೀಂಧ್ರಕ್ಕೆ ಅನುಕೂಲಕರವಾಗಿರುವ ಪರಿಸ್ಥಿತಿಗಳಲ್ಲಿ, ಸೋಂಕಿಗೆ ಒಳಗಾಗಬಹುದಾದ ಹತ್ತಿಯ ತಳಿಗಳು ಹೆಚ್ಚು ಪ್ರಮಾಣದಲ್ಲಿ ಎಲೆಗಳನ್ನು ಬೇಗನೆ ಕಳೆದುಕೊಳ್ಳಬಹುದು (ಎಲೆಗಳಚುವಿಕೆ). ವಿಶೇಷವಾಗಿ, ಬೀಜಕೋಶದ ತೊಟ್ಟು ಸೋಂಕಿಗೆ ಒಳಗಾಗಿದ್ದಲ್ಲಿ ಇದು ಉಂಟಾಗಬಹುದು. ರೋಗಲಕ್ಷಣಗಳ ಬೆಳವಣಿಗೆಗೆ ಸಸ್ಯಗಳಲ್ಲಿನ ಪ್ರಾಕೃತಿಕ ಮತ್ತು ಪೋಷಕಾಂಶಗಳ ಕೊರತೆಯ ಹೆಚ್ಚುವರಿ ಒತ್ತಡವು ಅನುಕೂಲಕರವಾಗಿರುತ್ತವೆ. ಉದಾಹರಣೆಗೆ: ಹಣ್ಣುಗಳ ಅತಿಯಾದ ಭಾರ ಅಥವಾ ಅಕಾಲಿಕ ಮುಪ್ಪು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ರೋಗನಿರೋಧಕ ಮತ್ತು ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ಉತ್ತಮವಾಗಿ ಗಾಳಿಯಾಡಲು ಅವಕಾಶವಾಗುವಂತೆ ನಾಟಿ ಮಾಡುವಾಗ ಸಸ್ಯಗಳ ನಡುವೆ ಸಾಕಷ್ಟು ಜಾಗವನ್ನು ಬಿಡಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅವನ್ನು ಹತ್ತಿಯ ಹೊಲದಿಂದ ದೂರದಲ್ಲಿ ಸುಟ್ಟುಹಾಕಿ.
  • ಸಸ್ಯಕ್ಕೆ ಆಗಬಹುದಾದ ಒತ್ತಡವನ್ನು ವಿಶೇಷವಾಗಿ ಪೊಟಾಸಿಯಂ ಕೊರತೆಯನ್ನು ತಪ್ಪಿಸಿ.
  • ತೀವ್ರವಾಗಿ ಸೋಂಕಿಗೆ ಒಳಗಾಗಿರುವ ಹತ್ತಿಯ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವನ್ನು ನಾಶಮಾಡಿ.
  • ಹೊಲದಲ್ಲಿ ಎತ್ತರವಾದ ಹುಲ್ಲುಗಳನ್ನು ಮತ್ತು ಕಳೆಗಳನ್ನು ತೆಗೆದುಹಾಕಿ.
  • ಸೋಂಕಿಗೆ ಒಳಗಾದ ಸಸ್ಯಗಳ ಉಳಿಕೆಗಳನ್ನು ತೆಗೆದುಹಾಕಲು ಚಳಿಗಾಲದಲ್ಲಿ ಉಳುಮೆ ಮಾಡುವುದು ನೆರವಾಗುತ್ತದೆ.
  • ಆಶ್ರಯದಾತವಲ್ಲದ ಬೆಳೆಗಳ ಜೊತೆ ಬೆಳೆ ಸರದಿ ಯೋಜನೆ ರೂಢಿಸಿ.
  • ಉದಾಹರಣೆಗೆ, ಧಾನ್ಯಗಳು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ