ಸೋಯಾಬೀನ್

ಸೋಯಾಬೀನ್ ನಲ್ಲಿ ತುಕ್ಕು ರೋಗ

Phakopsora pachyrhizi

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಕೆಳಭಾಗ ಮತ್ತು ನಾಳಗಳ ಉದ್ದಕ್ಕೂ ಸಣ್ಣ, ಬೂದು ಕಲೆಗಳು.
  • ಬೂದು ಕಲೆಗಳು ಕೆಂಪು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುತ್ತವೆ.
  • ಕಲೆಯ ಸುತ್ತಲಿನ ಪ್ರದೇಶ ಹಳದಿ ಬಣ್ಣಕ್ಕೆ ತಿರುಗುತ್ತದೆ.
  • ಸೋಂಕಿನ ಕೊನೆಯ ಹಂತದಲ್ಲಿ ಎಲ್ಲಾ ಎಲೆಗಳಲ್ಲೂ ಈ ರೋಗಲಕ್ಷಣಗಳನ್ನು ಕಾಣಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಸೋಂಕು ಸಸ್ಯದ ಕೆಳಗಿನ ಭಾಗಗಳಲ್ಲಿ ಪ್ರಾರಂಭವಾಗುತ್ತದೆ ಮತ್ತು ನಂತರ ಮೇಲ್ಮುಖವಾಗಿ ಚಲಿಸುತ್ತದೆ. ಮುಖ್ಯವಾಗಿ ಎಳೆಯ ಎಲೆಗಳನ್ನು ಬಾಧಿಸುತ್ತದೆ. ಸಾಮಾನ್ಯವಾಗಿ ಹೂಬಿಡುವ ಹಂತದಲ್ಲಿ, ಎಲೆಗಳ ನಾಳಗಳ ಉದ್ದಕ್ಕೂ, ಎಲೆಗಳ ಕೆಳಭಾಗದಲ್ಲಿ ಸೂಕ್ಷ್ಮವಾದ, ಇಟ್ಟಿಗೆ-ಕೆಂಪು ಬಣ್ಣದ ಮುಳ್ಳಿನ ರೂಪದಲ್ಲಿ ಮೊದಲ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಂತರ, ಈ ಕಲೆಗಳು ಗಾತ್ರ ಮತ್ತು ಸಂಖ್ಯೆಯಲ್ಲಿ ಹೆಚ್ಚಾಗುತ್ತವೆ ಮತ್ತು ಕೆಂಪು ಕಂದು ಬಣ್ಣ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಕಾಯಿಲೆಯು ಮುಂದುವರೆದಂತೆ, ಅವುಗಳು ಉಬ್ಬಿದ, ಮಸುಕಾದ-ಕಂದು ಶಿಲೀಂಧ್ರಗಳ ಹೊದಿಕೆಯಂತೆ ಬರಿಗಣ್ಣಿಗೆ ಕಾಣಿಸುವಂತೆ ಬೆಳೆಯುತ್ತವೆ. ಅವುಗಳಲ್ಲಿ ಕೆಲವು ಒಗ್ಗೂಡಿ, ಹಳದಿ ಬಣ್ಣದ ಹೊರ ವರ್ತುಲದಿಂದ ಆವೃತವಾದ ಅನಿಯಮಿತವಾದ ಗಾಢ ಕಂದು ಬಣ್ಣದ ಚುಕ್ಕೆಗಳಾಗುತ್ತವೆ. ಅವು ಈಗ ಎಲೆಗಳ ಎರಡೂ ಬದಿಗಳಲ್ಲಿಯೂ ಇರುತ್ತವೆ. ಕೆಲವೊಮ್ಮೆ ತೊಟ್ಟುಗಳು ಮತ್ತು ಕಾಂಡಗಳ ಮೇಲೆ ಇರುತ್ತವೆ. ಸಸ್ಯಗಳ ಅಕಾಲಿಕ ಎಲೆ ಉದುರುವಿಕೆ ಸಂಭವಿಸಬಹುದು.

Recommendations

ಜೈವಿಕ ನಿಯಂತ್ರಣ

ಕೊರಿಂಬಿಯಾ ಸಿಟ್ರಿಯೊಡೋರಿಯಾ 1% ರಷ್ಟು, ಸಿಂಬೊಪೊಗನ್ ನಾರ್ಡಸ್ 0,5%, ಮತ್ತು ಥೈಮಸ್ ವಲ್ಗ್ಯಾರಿಸ್ 0,3% ಇರುವ ಸಸ್ಯಜನ್ಯ ತೈಲಗಳನ್ನು ಹೊಂದಿರುವ ಉತ್ಪನ್ನಗಳನ್ನು, ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ, ಜೈವಿಕ ಚಿಕಿತ್ಸೆಯೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸರಿಯಾದ ಶಿಲೀಂಧ್ರನಾಶಕವನ್ನು ಆಯ್ಕೆ ಮಾಡಿ ಸರಿಯಾದ ಸಮಯದಲ್ಲಿ ಅದನ್ನು ಬಳಸುವುದು ಅತ್ಯಗತ್ಯ. ಹೆಕ್ಸಾಕೋನಜೋಲ್ (2 ಮಿಲೀ/ಲೀ ನೀರು) ಮತ್ತು ಪ್ರೊಪಿಕೊನಜೋಲ್ (1 ಮಿಲೀ/ಲೀ ನೀರು) ಆಧರಿಸಿದ ಶಿಲೀಂಧ್ರನಾಶಕಗಳನ್ನು ಬಳಸಿ. ಬೆಳವಣಿಗೆಯ ಋತುವಿನ ಅವಧಿಯಲ್ಲಿ ನಿಯಮಿತವಾಗಿ ಸತು ಐರನ್ – ಮನೇಬ್ ಸಂಕೀರ್ಣದ ಸಂಯುಕ್ತವನ್ನು ಬಳಸಿ.

ಅದಕ್ಕೆ ಏನು ಕಾರಣ

ಸೋಯಾಬೀನ್ ತುಕ್ಕು ರೋಗ, ಫ್ಯಾಕೋಪ್ಸೊರಾ ಪಚೈರಿಜಿ ಶಿಲೀಂಧ್ರದಿಂದ ಉಂಟಾಗುವ ಆಕ್ರಮಣಕಾರಿ ಕಾಯಿಲೆಯಾಗಿದೆ. ಇದು ಬೀಜಗಳಿಂದ ಹುಟ್ಚುವುದಿಲ್ಲ ಮತ್ತು ಅವುಗಳಿಗೆ ಜೀವಿಸಲು ಮತ್ತು ತಮ್ಮ ಜೀವನ ಚಕ್ರವನ್ನು ಪೂರ್ಣಗೊಳಿಸಲು ಹಸಿರು ಜೀವಂತ ಅಂಗಾಂಶದ ಅಗತ್ಯವಿದೆ. ಯಾವುದೇ ಸೋಯಾಬೀನ್ ಸಸ್ಯಗಳು ಇಲ್ಲವಾದಾಗ, ಬದುಕಲು ಅವುಗಳಿಗೆ ಪರ್ಯಾಯವಾದ ಆಶ್ರಯದಾತ ಸಸ್ಯಗಳ ಅಗತ್ಯವಿರುತ್ತದೆ. ಪುಷ್ಟಿಕೆಯಲ್ಲಿ ಉತ್ಪತ್ತಿಯಾದ ಬೀಜಕಗಳು ಸಸ್ಯದಿಂದ ಸಸ್ಯಕ್ಕೆ ಹಾರಿ ನೇರವಾಗಿ ಸಸ್ಯ ಜೀವಕೋಶಗಳನ್ನು ಚುಚ್ಚಿ ಒಳಸೇರುತ್ತವೆ. ಎಲೆಗಳ ಅಂಗಾಂಶದಲ್ಲಿರುವ ರಂಧ್ರಗಳು ಅಥವಾ ಗಾಯಗಳ ಮೂಲಕವಲ್ಲ. ರೋಗದ ಅಭಿವೃದ್ಧಿ 6 ರಿಂದ 12 ಗಂಟೆಗಳ ನಿರಂತರ ಎಲೆಯ ತೇವ, ತಂಪಾದ ಅಥವಾ ಮಧ್ಯಮ ಉಷ್ಣತೆ (16 ರಿಂದ 28 °C ) ಮತ್ತು ಅಧಿಕ ಆರ್ದ್ರತೆ (>75%) ಯಲ್ಲಿ ಹೆಚ್ಚಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ.
  • ಸಾಧ್ಯವಾದರೆ ಬೇಗ ಪ್ರೌಢವಸ್ಥೆ ತಲುಪುವ ತಳಿಯನ್ನು ಆಯ್ಕೆಮಾಡಿ ಮತ್ತು ಬೇಗ ನೆಡಿ.
  • ಪರ್ಯಾಯವಾಗಿ, ಶುಷ್ಕ ಅವಧಿಗಳ ಅನುಕೂಲವನ್ನು ಪಡೆಯಲು ತಡವಾಗಿ ನೆಡಿ.
  • ಮೇಲಾವರಣದ ಒಣಗಿಸುವಿಕೆಯನ್ನು ತ್ವರಿತವಾಗಿ ಮಾಡಲು ಸಾಲುಗಳ ನಡುವೆ ಅಗಲವಾದ ಅಂತರವನ್ನು ಬಿಡಿ.
  • ನಿಯಮಿತವಾಗಿ ನಿಮ್ಮ ಸಸ್ಯಗಳ ಮೇಲ್ವಿಚಾರಣೆ ಮಾಡಿ ಮತ್ತು ಪರ್ಯಾಯ ಆಶ್ರಯದಾತ ಕಳೆ ಗಿಡಗಳನ್ನು ತೆಗೆದುಹಾಕಿ.
  • ಮಣ್ಣಿನ ಫಲವತ್ತತೆ, ವಿಶೇಷವಾಗಿ ಪೊಟ್ಯಾಸಿಯಮ್ ಮತ್ತು ರಂಜಕ ಮಟ್ಟವನ್ನು ಹೊಂದಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ