ಗೋಧಿ

ಸೆಪ್ಟೋರಿಯಾ ಟ್ರೈಟಿಸಿ ಗುಳ್ಳೆ

Zymoseptoria tritici

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮೊದಲು ಕೆಳಗಿರುವ ಎಲೆಗಳ ಮೇಲೆ ಸಣ್ಣ ಕ್ಲೋರೊಟಿಕ್ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
  • ಅವುಗಳು ದೊಡ್ಡದಾಗುತ್ತಿದ್ದಂತೆ, ಅಂಡಾಕಾರ ಅಥವಾ ಪಟ್ಟೆ ಆಕಾರದೊಂದಿಗೆ ಈ ಗುಳ್ಳೆಗಳು ಗಾಢ ಕಂದು ಬಣ್ಣದಲ್ಲಿ ಕಾಣುತ್ತವೆ.
  • ರೋಗದ ಎಲೆಗಳಲ್ಲಿ ಸಣ್ಣ ಕಪ್ಪು ಚುಕ್ಕೆಗಳು ಗೋಚರಿಸುತ್ತವೆ.
  • ನಂತರ, ರೋಗದ ಎಲೆಗಳು ಕಂದು ಬಣ್ಣಕ್ಕೆ ತಿರುಗಿ, ದೊಡ್ಡದಾಗಿ ಇಡೀ ಎಲೆಯನ್ನು ಆವರಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಗೋಧಿ

ರೋಗಲಕ್ಷಣಗಳು

ಸೆಪ್ಟೋರಿಯಾ ಟ್ರಿಟಿಸಿ ಗುಳ್ಳೆಯ ಆರಂಭಿಕ ರೋಗಲಕ್ಷಣಗಳು ಸಸಿ ಹೊರಹೊಮ್ಮಿದ ನಂತರ ಕೆಳ ಎಲೆಗಳ ಮೇಲೆ ಕಾಣುವ ಸಣ್ಣ ಕ್ಲೋರೋಟಿಕ್ ಕಲೆಗಳಾಗಿವೆ. ಅವುಗಳು ದೊಡ್ಡದಾಗುತ್ತಿದ್ದಂತೆ, ಈ ಕಲೆಗಳು ಅಂಡಾಕಾರದ ಅಥವಾ ಪಟ್ಟೆ ಆಕಾರದೊಂದಿಗೆ ತಿಳಿ ಬಣ್ಣದಿಂದ ಗಾಢ ಕಂದು ಬಣ್ಣದ ಬಿರುಕುಗಳನ್ನುಂಟುಮಾಡುತ್ತವೆ. ಅದು ಎಲೆಯ ಸುತ್ತ ಉದ್ದಕ್ಕೂ ವಿಸ್ತರಿಸಬಹುದು. ಕಾಂಡಗಳು ಮತ್ತು ಮೇಲ್ಭಾಗದಲ್ಲೂ ಅವು ಸ್ವಲ್ಪಮಟ್ಟಿಗೆ ಕಾಣಿಸುತ್ತವೆ. ಕಲೆಗಳೊಳಗೆ ಸಣ್ಣ ಕಪ್ಪು ಫ್ರುಟಿಂಗ್ ಕಾಯಗಳು, ಅವುಗಳಿಗೆ ವಿಶಿಷ್ಟ ಮುಳ್ಳಿನಂತಹ ರೂಪವನ್ನು ನೀಡುತ್ತವೆ. ನಂತರ, ಇಡೀ ಎಲೆಗಳನ್ನು ದೊಡ್ಡದಾದ, ಕಂದು ತುಕ್ಕಿನ ಗಾಯಗಳು ಆವರಿಸಬಹುದು ಮತ್ತು ಹಸಿರು ಅಂಗಾಂಶದ ಕೆಲವು ಜಾಗಗಳು ಮಾತ್ರ ಹಳದಿ ಪ್ರಭಾವಲಯದಿಂದ ಆವೃತವಾಗಿರುತ್ತವೆ. ಅಂತಿಮವಾಗಿ, ಎಲೆಗಳು ಒಣಗಿ ಸಾಯುತ್ತವೆ. ಕಪ್ಪು ಫ್ರುಟಿಂಗ್ ಕಾಯಗಳಿಲ್ಲದ, ಇದೇ ರೀತಿ ಗುಳ್ಳೆಯ ರೋಗಲಕ್ಷಣಗಳು ಮತ್ತೊಂದು ರೋಗದಿಂದಲೂ ಅಥವಾ ಅಲ್ಯೂಮಿನಿಯಂ ವಿಷತ್ವ ಅಥವಾ ಸತು ಕೊರತೆಯಂತಹ ಪೌಷ್ಟಿಕತೆಯ ಅಸ್ವಸ್ಥತೆಗಳಿಂದಲೂ ಉಂಟಾಗಬಹುದು. ಸೋಂಕಿನ ಎರಡರಿಂದ ಮೂರು ವಾರಗಳ ನಂತರ, ಸಸ್ಯ ಬೆಳವಣಿಗೆಯ ನಂತರದ ಹಂತಗಳಲ್ಲಿ ರೋಗಲಕ್ಷಣಗಳು ಮೊದಲು ಕಂಡುಬರುತ್ತವೆ

Recommendations

ಜೈವಿಕ ನಿಯಂತ್ರಣ

ನಿಯಂತ್ರಕ ಸ್ಥಿತಿಯಲ್ಲಿ ಎಂ. ಗ್ರ್ಯಾಮಿನಿಕೊಲಾ ವಿರುದ್ಧ ಬಯೋಕಂಟ್ರೋಲ್ ಏಜೆಂಟ್ಗಳನ್ನು ಯಶಸ್ವಿಯಾಗಿ ಬಳಸಲಾಗಿದೆ. ಟ್ರೈಕೋಡರ್ಮಾ ಗುಂಪಿನ ಶಿಲೀಂಧ್ರಗಳು ಮತ್ತು ಸೂಡೊಮೊನಾಡ್ಸ್ ಮತ್ತು ಬಾಸಿಲಸ್ನ ಕೆಲವು ಜಾತಿಗಳು ಎಲೆ ಚುಕ್ಕೆ ರೋಗಗಳ ವಿರುದ್ಧ ಗೋಧಿ ಸಸ್ಯಗಳನ್ನು ರಕ್ಷಿಸುವುದನ್ನು ಅಥವಾ ರೋಗದ ಪ್ರಗತಿಯನ್ನು ತಡೆಯುವುದನ್ನು ಗಮನಿಸಲಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಎಮ್ ಗ್ರಾಮೀನಿಕೋಲಾದ ಅನೇಕ ಸಂಖ್ಯೆಗಳು ಶಿಲೀಂಧ್ರನಾಶಕಗಳಿಗೆ ಅದರಲ್ಲೂ ಮುಖ್ಯವಾಗಿ ಸ್ಟ್ರೋಬಿಲ್ಯೂರಿನ್ ರಾಸಾಯನಿಕಗಳ ವರ್ಗಕ್ಕೆ, ವಿಶೇಷವಾಗಿ ಪ್ರತಿರೋಧವನ್ನು ಬೆಳೆಸಿಕೊಂಡಿವೆ. ಆರ್ಥಿಕ ಪ್ರಮಾಣ ಮಟ್ಟವು ನಿರೀಕ್ಷಿತ ಇಳುವರಿ ನಷ್ಟ, ಗೋಧಿ ಮಾರುಕಟ್ಟೆಯ ಮೌಲ್ಯ ಮತ್ತು ಶಿಲೀಂಧ್ರನಾಶಕ ಬಳಕೆ ವೆಚ್ಚವನ್ನು ಅವಲಂಬಿಸಿರುತ್ತದೆ. ಅಜೋಲ್ಗಳ ಗುಂಪಿನ ಶಿಲೀಂಧ್ರನಾಶಕಗಳನ್ನು ಸಾಮಾನ್ಯವಾಗಿ ಫಾಲಿಯಾರ್ ಸಿಂಪಡಣೆಗಳಾಗಿ ಬಳಸಲಾಗುತ್ತದೆ. ಕಾರ್ಬೊಕ್ಸಮೈಡ್ ಅಥವಾ ಬೆಂಜೊಫೆನೋನ್ಗಳಂತಹ ಪರ್ಯಾಯ ಶಿಲೀಂಧ್ರನಾಶಕಗಳು ಪ್ರತಿರೋಧದ ಬೆಳವಣಿಗೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಅದಕ್ಕೆ ಏನು ಕಾರಣ

ಮೈಕೋಸ್ಫೇರೆಲ್ಲಾ ಗ್ರ್ಯಾಮಿನಿಕೊಲ ಶಿಲೀಂಧ್ರದಿಂದ ಈ ರೋಗವು ಉಂಟಾಗುತ್ತದೆ. ಇದು ಮಣ್ಣಿನ ಮೇಲ್ಮೈ ಮೇಲೆ ಸಸ್ಯ ಉಳಿಕೆಗಳ ಮೇಲೆ, ಹುಲ್ಲುಗಾವಲುಗಳು, ಕಳೆಗಳ ಸಸ್ಯಗಳಲ್ಲಿ ಮತ್ತು ಶರತ್ಕಾಲದ-ಬಿತ್ತನೆಯ ಬೆಳೆಗಳಲ್ಲಿ ಕಾಣಿಸುವುದು. ಬೀಜಕಗಳು ದೂರದವರೆಗೆ ಮಳೆಯ ನೀರು ಬೀಳುವ ಮತ್ತು ಗಾಳಿ ಬೀಸುವ ಮೂಲಕ ಹರಡುತ್ತವೆ. ಮೊದಲ ರೋಗಲಕ್ಷಣಗಳು ಹಳೆಯ ಎಲೆಗಳಲ್ಲಿ ಗೋಚರಿಸುತ್ತವೆ ಮತ್ತು ಬೀಜಕಗಳು ಮೇಲ್ಮುಖವಾಗಿ ಹರಡುತ್ತವೆ. ರೋಗ ಸಸ್ಯಗಳ ಮೇಲಿನ ಎಲೆಗೊಂಚಲುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಮೇಲಿನ ಎಲೆ ಮತ್ತು ಕೆಳಗಿನ ಎರಡು ಎಲೆಗಳು ಭಾದಿತವಾದರೆ, ಇಳುವರಿ ಕಡಿತ ಸಂಭವಿಸುತ್ತದೆ. ತಾಪಮಾನದ ಆಧಾರದ ಮೇಲೆ ಶಿಲೀಂಧ್ರದ ಜೀವನ ಚಕ್ರವು 15 ರಿಂದ 18 ದಿನಗಳವರೆಗೆ ಪೂರ್ಣಗೊಳ್ಳುತ್ತದೆ. ಸೂಕ್ತವಾದ ಪರಿಸ್ಥಿತಿಗಳೆಂದರೆ 15 ° ಸಿ ಹಾಗು 25 ° ಸಿ ನಡುವಿನ ತಾಪಮಾನ ಮತ್ತು ಹರಿಯುವ ನೀರು ಅಥವಾ ದೀರ್ಘಕಾಲೀನ ಹೆಚ್ಚಿನ ಆರ್ದ್ರತೆಗಳಾಗಿವೆ. 4 ° ಸಿ ಕೆಳಗೆ ಇದರ ಜೀವನ ಚಕ್ರವು ಸ್ಥಗಿತವಾಗುತ್ತದೆ. ಯಶಸ್ವಿಯಾಗಿ ಸೋಂಕು ತಗಲಲು ಕನಿಷ್ಠ 20 ಗಂಟೆಗಳ ಕಾಲ ಹೆಚ್ಚಿನ ಸಾಪೇಕ್ಷ ಆರ್ದ್ರತೆ ಬೇಕಾಗುತ್ತದೆ. ಒದ್ದೆಯಾದ ವಸಂತ ಋತು ಮತ್ತು ಬೇಸಿಗೆಗಳು ಸೂಕ್ತವಾಗಿವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಋತುವಿನಲ್ಲಿ ತಡವಾಗಿ ನಾಟಿ ಮಾಡಲು ಶಿಫಾರಸು ಮಾಡಲಾಗುತ್ತದೆ.
  • ಉತ್ತಮ ಗಾಳಿಯಾಡುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಸ್ಯಗಳ ನಡುವೆ ಸಾಕಷ್ಟು ಜಾಗವನ್ನು ಬಿಡಿ.
  • ಬೆಳವಣಿಗೆಯ ನಿಯಂತ್ರಕ ಮತ್ತು ಸಾರಜನಕವನ್ನು ಮಧ್ಯಮ ದರದಲ್ಲಿ ಬಳಸಿ.
  • ನಿಯಮಿತವಾಗಿ ಪ್ರದೇಶವನ್ನು ಪರಿಶೀಲಿಸಿ.
  • ತಾನಾಗಿ ಬೆಳೆದ ಬೆಳೆಗಳು ಮತ್ತು ಕಳೆಗಳನ್ನು ನಿಯಂತ್ರಿಸಿ.
  • ರೋಗ ಬರದ ಸಸ್ಯಗಳೊಂದಿಗೆ ಒಂದು ಅಥವಾ ಎರಡು ವರ್ಷಗಳವರೆಗೆ ಬೆಳೆ ಸರದಿ ಮಾಡಿ.
  • ಮೇಲ್ಮೈಯಲ್ಲಿನ ಸಸ್ಯದ ಉಳಿಕೆಗಳನ್ನು ಹೂತು ಹಾಕಲು ಆಳವಾಗಿ ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ