ಸಿರಿಧಾನ್ಯ

ಸಿರಿಧಾನ್ಯದ ತುಕ್ಕುರೋಗ

Puccinia substriata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಹಳದಿಯಿಂದ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ.
  • ನಂತರ ಹಳದಿ ಅಂಚಿರುವ ಕೆಂಪು ಕಿತ್ತಳೆ ಬಣ್ಣದ "ತುಕ್ಕು" ಹಿಡಿದಂತೆ ಕಾಣುವ ಗುಳ್ಳೆಗಳು ಉಂಟಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸಿರಿಧಾನ್ಯ

ರೋಗಲಕ್ಷಣಗಳು

ಎಲೆಗಳ ಎರಡೂ ಬದಿಗಳಲ್ಲಿ, ಹಳದಿಯಿಂದ ಬಿಳಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಸ್ಥಳಗಳು ಉಬ್ಬಿದಂತೆ ಇರಬಹುದು. ರೋಗ ಹೆಚ್ಚಾದಂತೆ, ಈ ಕಲೆಗಳು ವಿಲೀನಗೊಳ್ಳುತ್ತವೆ ಮತ್ತು ಕೆಂಪು-ಕಿತ್ತಳೆ ಬಣ್ಣದ ಮತ್ತು ತುಕ್ಕು ಹಿಡಿದಂತೆ ಕಾಣುವ ಗುಳ್ಳೆಗಳನ್ನು ರೂಪಿಸುತ್ತವೆ. ಈ ಗುಳ್ಳೆಗಳು ಹಳದಿ ಅಂಚು ಹೊಂದಿರಬಹುದು. ನಂತರ ಗುಳ್ಳೆಗಳು ಕಪ್ಪಾಗಬಹುದು. ಸೋಂಕಿನ ಕಾರಣದಿಂದ ಎಲೆಗಳು ಸಾಯಬಹುದು ಮತ್ತು ತೀವ್ರತರ ಸೋಂಕಿನ ಸಂದರ್ಭಗಳಲ್ಲಿ ಸಸ್ಯಗಳು ಕುಸಿಯಬಹುದು.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಪುಕ್ಕೀನಿಯ ಸಬ್ ಸ್ಚ್ರಿಯಾಟಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ಮಾಹಿತಿ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇವೆ.

ರಾಸಾಯನಿಕ ನಿಯಂತ್ರಣ

ತಾಮ್ರದ ಸಂಯುಕ್ತಗಳು, ಕ್ಲೋರೊಥಲೋನಿಲ್, ಸಲ್ಫರ್ ಅಥವಾ ಮ್ಯಾಂಕೊಜೆಬ್ ಗಳಂತಹ ಶಿಲೀಂಧ್ರನಾಶಕಗಳನ್ನು ಸಿರಿಧಾನ್ಯಗಳ ತುಕ್ಕುರೋಗ ನಿಯಂತ್ರಿಸಲು ಬಳಸಬಹುದು. ಸಣ್ಣ ರೈತರಿಗೆ, ಶಿಲೀಂಧ್ರನಾಶಕಗಳು ಹೆಚ್ಚಿನ ಸಂದರ್ಭಗಳಲ್ಲಿ ಆರ್ಥಿಕವಾಗಿ ಸರಿಹೊಂದುವುದಿಲ್ಲ.

ಅದಕ್ಕೆ ಏನು ಕಾರಣ

ರೋಗಕಾರಕವು ಬದನೆ ಮತ್ತು ಹಲವು ಹುಲ್ಲು ಪ್ರಭೇದಗಳಂತಹ ಅನೇಕ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ಹೊಂದಿದೆ. ಶಿಲೀಂಧ್ರಗಳು ಗಾಳಿಯ ಮೂಲಕ ಹೆಚ್ಚು ದೂರದವರೆಗೆ ಹರಡಬಹುದು. ಇದಲ್ಲದೆ, ಮಣ್ಣು, ಸಸ್ಯದ ಉಳಿಕೆಗಳು ಮತ್ತು ಆಶ್ರಯದಾತ ಸಸ್ಯಗಳ ಮೇಲೆ ರೋಗಕಾರಕವು ಉಳಿಯುತ್ತದೆ. ತಂಪಾದ ರಾತ್ರಿಗಳು ಮತ್ತು ಬೆಚ್ಚಗಿನ ದಿನಗಳು ಶಿಲೀಂಧ್ರಕ್ಕೆ ಅನುಕೂಲವಾದ ಪರಿಸ್ಥಿತಿಗಳಾಗಿವೆ. ಉದಾಹರಣೆಗೆ ಎಲೆಗಳ ಮೇಲೆ ಮಂಜು ನಿಲ್ಲುವ ಪರಿಸ್ಥಿತಿಗಳು. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ಬಳಸಿ.
  • ಬೇಗ ನೆಡಿ.
  • ತುಂತುರು ನೀರಾವರಿ ಮಾಡಬೇಡಿ.
  • ಹುಲ್ಲುಜೋಳ ಮತ್ತು ಕಾಳುಗಳು ಜೊತೆ ಸಿರಿಧಾನ್ಯದ ಬೆಳೆಯನ್ನು ಸರದಿ ಬೆಳೆ ಮಾಡಿ.
  • ಸಿರಿಧಾನ್ಯದ ಹತ್ತಿರ ಬದನೆಯನ್ನು ನೆಡಬೇಡಿ.
  • ಹುಲ್ಲುಗಳಂತಹ ಕಳೆಗಳನ್ನು ನಿಯಂತ್ರಿಸಿ.
  • ಜಮೀನಿನ ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಿ - ಯಾವುದೇ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಅಥವಾ ಸುಟ್ಟು ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ