ಪಪ್ಪಾಯಿ

ಪಪ್ಪಾಯದ ಪೌಡರೀ ಮಿಲ್ ಡ್ಯೂ

Oidium caricae-papayae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಪುಡಿಯಂತಹ ಪದರ ಇರುವ ನೀರಿನಲ್ಲಿ ನೆನೆಸಿದಂತಹ ಕಲೆಗಳು ಎಲೆಯ ಕೆಳ ಭಾಗವನ್ನು ಆವರಿಸಿರುತ್ತದೆ.
  • ಹಳದಿ ಬಣ್ಣದ ಹೊರ ವರ್ತುಲ ಹೊಂದಿರುವ ಹಳದಿ ಬಣ್ಣದಿಂದ ಕಂದು ಬಣ್ಣದ ಚುಕ್ಕೆಗಳು ಮೇಲ್ಭಾಗದಲ್ಲಿ ಕೆಲವೊಮ್ಮೆ ಕಂಡುಬರುತ್ತವೆ.
  • ಬಿಳಿ ಶೀಲಿಂಧ್ರ ತೇಪೆಗಳು ಇನ್ನೂ ಬಲಿಯದ ಹಣ್ಣುಗಳ ಮೇಲೆ ಕಾಣಿಸಿಕೊಳ್ಳುತ್ತವೆ.
  • ತೀವ್ರವಾಗಿ ಸೋಂಕಿತವಾದ ಎಲೆಗಳು ನಂತರ ಬಾಡುತ್ತವೆ ಮತ್ತು ಒಳಮುಖವಾಗಿ ಮಡಚಿಕೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಪಪ್ಪಾಯಿ

ರೋಗಲಕ್ಷಣಗಳು

ಪುಡಿಯಂತಹ ಪದರ ಇರುವ ನೀರಿನಲ್ಲಿ ನೆನೆಸಿದಂತಹ ಕಲೆಗಳು ಮೊದಲಿಗೆ ಎಲೆಯ ಕೆಳ ಭಾಗವನ್ನು ಆವರಿಸುತ್ತದೆ. ಹೆಚ್ಚಾಗಿ ಎಲೆಗಳ ನಾಳಗಳ ಪಕ್ಕದಲ್ಲಿ, ಎಲೆಗಳ ತೊಟ್ಟುಗಳ ಮೇಲೆ ಮತ್ತು ಹೂವಿನ ತಳದಲ್ಲಿ ಕಂಡು ಬರುತ್ತವೆ. ಕೆಲವೊಮ್ಮೆ, ತಿಳಿ ಹಸಿರಿನಿಂದ ಹಳದಿ ಬಣ್ಣದ ಚುಕ್ಕೆಗಳು ಎಲೆಯ ಮೇಲ್ಲೈ ಮೇಲೆ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಬಿಳಿ ಬೂಷ್ಟುಗಳಿಂದ ಮುಚ್ಚಲ್ಪಟ್ಟಿರುತ್ತವೆ. ಈ ಕಲೆಗಳು ನಂತರ ಒಣ ಕಂದು ಬಣ್ಣಕ್ಕೆ ತಿರುಗಿ ನಂತರ ಹಳದಿ ಹೊರ ವೃತ್ತದಿಂದ ಸುತ್ತುವರೆಯಬಹುದು. ತೀವ್ರವಾಗಿ ಸೋಂಕಿತವಾದ ಎಲೆಗಳು ನಂತರ ಬಾಡುತ್ತವೆ ಮತ್ತು ಒಳಮುಖವಾಗಿ ಮಡಚಿಕೊಳ್ಳುತ್ತವೆ. ಹಣ್ಣುಗಳ ಮೇಲೆ ವಿವಿಧ ಗಾತ್ರದ ಬಿಳಿಯ ಶಿಲೀಂಧ್ರಗಳು ಬೆಳೆಯಬಹುದು, ಸೋಂಕು ಸಾಮಾನ್ಯವಾಗಿ ಹಳೆಯ ಮರಗಳಿಗೆ ಕಡಿಮೆ ಹಾನಿ ಉಂಟುಮಾಡುತ್ತದೆ. ಆದಾಗ್ಯೂ, ಹೊಸ ಸಸ್ಯಗಳಲ್ಲಿ ಇದು ಬೆಳೆಯುತ್ತಿರುವ ಅಂಗಾಂಶಗಳ ಸಾವಿಗೆ, ಎಲೆ ಉದುರುವಿಕೆಗೆ, ಕಾಂಡ ಮತ್ತು ಹಣ್ಣಿನ ಮೇಲೆ ಗಾಯಗಳಿಗೆ ಮತ್ತು ಪ್ರಮುಖವಾಗಿ ಇಳುವರಿ ನಷ್ಟಕ್ಕೆ ಕಾರಣವಾಗಬಹುದು.

Recommendations

ಜೈವಿಕ ನಿಯಂತ್ರಣ

ಈ ರೋಗವನ್ನು ನಿಯಂತ್ರಿಸಲು ವೆಟ್ಟಬಲ್ ಸಲ್ಫರ್, ಸಲ್ಫರ್ ಡಸ್ಟ್ ಅಥವಾ ಲೈಮ್ ಸಲ್ಫರ್ ಮತ್ತು ಪೊಟ್ಯಾಸಿಯಮ್ ಬೈಕಾರ್ಬನೇಟ್ ಸಹಕಾರಿಯಾಗಿವೆ. ಆದರೆ, ಈ ಚಿಕಿತ್ಸೆಗಳನ್ನು ಉಷ್ಣ ವಾತಾವರಣದಲ್ಲಿ ಮಾಡಿದರೆ ಅದು ಸಸ್ಯಗಳಿಗೆ ವಿಷಕಾರಿಯಾಗಬಹುದು. ಕೆಲವು ಸಂದರ್ಭಗಳಲ್ಲಿ, ಬೇಕಿಂಗ್ ಪೌಡರ್, ಬೇವಿನ ಎಣ್ಣೆ ಮತ್ತು ಸೋಪ್ ಉಪಯುಕ್ತವಾಗಬಹುದು. ಈ ಎಲ್ಲಾ ಸಂದರ್ಭಗಳಲ್ಲೂ, ರೋಗವು ತೀವ್ರವಾಗಿದ್ದರೆ ಈ ಚಿಕಿತ್ಸೆಗಳು ಬಹಳ ಪರಿಣಾಮಕಾರಿಯಾಗಿರುವುದಿಲ್ಲ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗವಿದ್ದರೆ ಮೊದಲು ಅದನ್ನು ಪರಿಗಣಿಸಿ. ಅಜೋಕ್ಸಿಸ್ಟ್ರೋಬಿನ್, ಮಂಕೋಜೆಬ್ ನಂತಹ ಶಿಲೀಂಧ್ರನಾಶಕಗಳನ್ನು ಪಪ್ಪಾಯದ ಪೌಡ್ರೀ ಮಿಲ್ಡ್ಯೂ ನಿಯಂತ್ರಿಸಲು ಬಳಸಬಹುದು.

ಅದಕ್ಕೆ ಏನು ಕಾರಣ

ಈ ರೋಗವು ಶಿಲೀಂಧ್ರವಾದ ಓಯಿಡಿಯಮ್ ಕ್ಯಾರಿಕೇ-ಪಪಾಯೇದಿಂದ ಉಂಟಾಗುತ್ತದೆ. ಪಪ್ಪಾಯಿ ಸಸ್ಯಗಳಲ್ಲಿ ಮಾತ್ರ ಶಿಲೀಂಧ್ರವು ಉಳಿಯುತ್ತದೆ ಮತ್ತು ವಂಶಾಭಿವೃದ್ದಿ ಮಾಡುತ್ತದೆ. ಬೀಜಕಗಳು ಸಸ್ಯದಿಂದ ಸಸ್ಯಕ್ಕೆ ಮತ್ತು ಕ್ಷೇತ್ರದಿಂದ ಕ್ಷೇತ್ರಕ್ಕೆ ಗಾಳಿಯ ಮೂಲಕ ಹರಡುತ್ತವೆ. ಎಲ್ಲಾ ಬೆಳವಣಿಗೆಯ ಹಂತಗಳಲ್ಲೂ ಎಲೆಗಳ ಮೇಲೆ ಪರಿಣಾಮ ಬೀರಬಹುದು. ಆದರೆ ಬೆಳೆದ ಎಲೆಗಳು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತವೆ. ಶಿಲೀಂಧ್ರವು ಎಪಿಡೆರ್ಮಲ್ ಜೀವಕೋಶಗಳಲ್ಲಿ ನೆಲೆಸುತ್ತದೆ. ಇದು ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ರೋಗದ ಬೆಳವಣಿಗೆ ಮತ್ತು ರೋಗಲಕ್ಷಣಗಳ ತೀವ್ರತೆ ಕಡಿಮೆ ಬೆಳಕಿನ ಮಟ್ಟ, ಮಧ್ಯಮ ತಾಪಮಾನ (18 ರಿಂದ 32 °C), ಮತ್ತು ವರ್ಷಕ್ಕೆ 1500 ರಿಂದ 2500 mm ವರೆಗಿನ ಮಳೆ ಬೀಳುವಿಕೆಯಿಂದ ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಬೇಗ ಚೇತರಿಸಿಕೊಳ್ಳಬಲ್ಲ ಪ್ರಭೇದಗಳನ್ನು ನೆಡಿ.
  • ಸಾಲುಗಳ ನಡುವೆ ಸಾಕಷ್ಟು ಜಾಗವಿರುವ ಮತ್ತು ಉತ್ತಮವಾಗಿ ಗಾಳಿಯಾಡುವ ಪ್ರದೇಶಗಳಲ್ಲಿ ಸಸ್ಯಗಳನ್ನು ನೆಡಿ.
  • ಹೆಚ್ಚಿನ ತೇವಾಂಶ ಇರುವ ಮತ್ತು ತಾಪಮಾನ 24 °C ಗಿಂತ ಕಡಿಮೆ ಇರುವ ಪ್ರದೇಶಗಳನ್ನು ಬಳಸಬೇಡಿ.
  • ತುಂತುರು ನೀರಾವರಿ ಮಾಡಬೇಡಿ.
  • ದಿನದ ಆರಂಭದಲ್ಲಿ ಸಸ್ಯಗಳಿಗೆ ನೀರು ಹಾಕಿ.
  • ಬೇರಿನ ಭಾಗಕ್ಕೆ ನೀರು ಹಾಕಿ.
  • ಸಮತೋಲಿತ ಪೋಷಕಾಂಶ ಇರುವಂತೆ ನೋಡಿಕೊಳ್ಳಿ್, ಮತ್ತು ಹೆಚ್ಚು ಸಾರಜನಕ ಪೋಷಕಾಂಶ ಹಾಕಬೇಡಿ.
  • ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಯಾವುದೇ ಸಸ್ಯದ ಉಳಿಕೆಗಳನ್ನು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ