ಗೋಧಿ

ಗೋಧಿ ಎಲೆಯ ತುಕ್ಕುರೋಗ

Puccinia triticina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಲವಾರು ಸಣ್ಣ ಕೆಂಪು ಕಿತ್ತಳೆ ಬಣ್ಣದಿಂದ ಕಂದು ಗಂಟುಗಳು ಎಲೆಗಳು, ಎಲೆ ಪೊರೆಗಳು ಮತ್ತು ಹೊಟ್ಟುಗಳ ಮೇಲೆ ಕಾಣಿಸುತ್ತವೆ.
  • ದುರ್ಬಲ ಸಸ್ಯಗಳಲ್ಲಿ, ಸಣ್ಣ ದ್ವಿತೀಯಕ ಗುಳ್ಳೆಗಳು ಮತ್ತು ಹಳದಿ ಹಸಿರು ಅಥವಾ ಹಳದಿ ಪ್ರಭಾವಲಯವು ಪ್ರಾಥಮಿಕ ಗಂಟುಗಳ ಸುತ್ತಲೂ ಗೋಚರಿಸುತ್ತದೆ.
  • ಹೆಚ್ಚು ನಿರೋಧಕ ಗೋಧಿ ಪ್ರಭೇದಗಳಲ್ಲಿ, ಕಿತ್ತಳೆ ಬಣ್ಣದ ಗಂಟು ಚಿಕ್ಕದಾಗಿದ್ದು, ಬಣ್ಣ ಕಳೆದುಕೊಂಡ ಅಥವಾ ಕೊಳೆತ ಸ್ಥಳಗಳಿಂದ ಆವೃತವಾಗಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಗೋಧಿ

ರೋಗಲಕ್ಷಣಗಳು

ಎಲೆ ತುಕ್ಕುರೋಗ ಗೋಧಿಯ ಸಾಮಾನ್ಯ ರೋಗವಾಗಿದೆ. ಪರಿಣಾಮಕ್ಕೊಳಗಾದ ಸಸ್ಯದ ರೋಗಕ್ಕೆ ತುತ್ತಾಗಬಹುದಾದ ಸ್ವಭಾವವನ್ನು ಅವಲಂಬಿಸಿ ರೋಗಲಕ್ಷಣಗಳು ಉಂಟಾಗುತ್ತವೆ. ಎಲೆಗಳು, ಎಲೆಯ ಪೊರೆಗಳು ಮತ್ತು ಹೊಟ್ಟುಗಳ ಎರಡೂ ಮೇಲ್ಮೈಗಳ ಮೇಲೆ ಹಲವಾರು ಸಣ್ಣ ಕೆಂಪು ಕಿತ್ತಳೆ ಬಣ್ಣದ, ಹರಡಿದ ಕಂದು ಗಂಟುಗಳ ಗುಣಲಕ್ಷಣವನ್ನು ಇದು ಹೊಂದಿದೆ. ಅವು ಸುಮಾರು 1.5 ಮಿಮೀ ವ್ಯಾಸವನ್ನು ಹೊಂದಿದ್ದು, ಸ್ವಲ್ಪ ಉಬ್ಬಿರುತ್ತವೆ ಮತ್ತು ದುಂಡಗೆ ಅಥವಾ ಉದ್ದವಾಗಿರುತ್ತವೆ. ದುರ್ಬಲ ಸಸ್ಯಗಳಲ್ಲಿ, ಸಣ್ಣ ದ್ವಿತೀಯಕ ಗುಳ್ಳೆಗಳು ಮತ್ತು ಹಳದಿ ಹಸಿರು ಅಥವಾ ಹಳದಿ ಪ್ರಭಾವಲಯವು ಪ್ರಾಥಮಿಕ ಗಂಟುಗಳ ಸುತ್ತಲೂ ಗೋಚರಿಸಬಹುದು. ಕಾಲಾನಂತರದಲ್ಲಿ, ಬಣ್ಣವು ಗಾಢ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೆಚ್ಚು ನಿರೋಧಕ ಗೋಧಿ ಪ್ರಭೇದಗಳಲ್ಲಿ, ಕಿತ್ತಳೆ ಬಣ್ಣದ ಗಂಟುಗಳು ಸಾಮಾನ್ಯವಾಗಿ ಚಿಕ್ಕದಾಗಿರುತ್ತವೆ ಮತ್ತು ಅವುಗಳು ಹಸಿರು ಬಣ್ಣ ಕಳೆದುಕೊಂಡ ಅಥವಾ ಕೊಳೆತ ಸ್ಥಳಗಳಿಂದ ಆವೃತವಾಗಿರುತ್ತವೆ. ಸೋಂಕು ಸಸ್ಯದ ಅಂಗಾಂಶಗಳಿಗೆ ಹಾನಿ, ನೀರಿನ ನಷ್ಟ ಉಂಟುಮಾಡುತ್ತದೆ ಮತ್ತು ಕಡಿಮೆ ಉತ್ಪಾದಕತೆಗೆ ಕಾರಣವಾಗುತ್ತದೆ. ಇದರ ಜೊತೆಗೆ, ಕಡಿಮೆ ಹೂ ಬಿಡುವುದು ಮತ್ತು ಧಾನ್ಯ ಬಾಡುವುದು ಇಂತಹ ರೋಗಲಕ್ಷಣಗಳು, ಇಳುವರಿಯನ್ನು ಕಡಿಮೆ ಮಾಡುತ್ತವೆ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಪುಸಿನಿಯಾ ಟ್ರೈಟಿಸಿನ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಏನಾದರೋ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಪ್ರತಿಕ್ರಿಯೆಗಾಗಿ ನಾವು ಎದುರುನೋಡುತ್ತೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಪ್ರೊಪಿಕೊನಜೋಲ್ ಅಥವಾ ಟ್ರಿಯಾಜೋಲ್ ಅನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ರೋಗವನ್ನು ತಡೆಗಟ್ಟಲು ಎಲೆಗಳಿಗೆ ಸಿಂಪಡಿಸಬಹುದು. ಉತ್ಪನ್ನವನ್ನು ಹೇಗೆ ಬಳಸುವುದು ಎಂಬುದರ ಕುರಿತು ಸೂಚನೆಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳಿ. ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸಲು ಹಾಕುವ ಸಮಯ ಮತ್ತು ಪ್ರಮಾಣಗಳನ್ನು ಗಮನಿಸಿ.

ಅದಕ್ಕೆ ಏನು ಕಾರಣ

ಈ ರೋಗವು ಪುಸಿನಿಯಾ ಟ್ರೈಟಿಸಿನದಿಂದ ಉಂಟಾಗುತ್ತದೆ, ಇದು ಸಸ್ಯ ಅಂಗಾಂಶಗಳ ಒಂದು ಕಡ್ಡಾಯವಾದ ಪರಾವಲಂಬಿಯಾಗಿದೆ. ಅದರ ಜೀವನ ಚಕ್ರವನ್ನು ಪೂರ್ಣಗೊಳಿಸಲು ಜೀವಿಸುವ ಗೋಧಿ ಗಿಡಗಳು ಅಥವಾ ಪರ್ಯಾಯ ಆಶ್ರಯದಾತ ಸಸ್ಯ ಇದಕ್ಕೆ ಅಗತ್ಯವಿರುತ್ತವೆ. ಬೀಜಕಗಳು ತಮ್ಮ ಮೂಲದಿಂದ ನೂರಾರು ಕಿಲೋಮೀಟರ್ಗಳವರೆಗೆ ಗಾಳಿಯ ಪ್ರವಾಹಗಳಿಂದ ಚದುರಿಹೋಗುತ್ತದೆ. ಮೊಳಕೆಯೊಡೆಯುವ ಪ್ರಕ್ರಿಯೆಗೆ ಹೆಚ್ಚಿನ ತೇವಾಂಶ ಅಥವಾ ದೀರ್ಘವಾದ ಎಲೆಗಳ ಆರ್ದ್ರತೆ ಮತ್ತು 10 ° ಮತ್ತು 30 ° ಸಿ ನಡುವಿನ ತಾಪಮಾನವು (16-22 ° ಸಿ ಸೂಕ್ತವಾಗಿರುತ್ತದೆ) ಅಗತ್ಯವಿರುತ್ತದೆ. ಈ ಪರಿಸ್ಥಿತಿಯಲ್ಲಿ, ಬೀಜಕಗಳ ಮೊಳಕೆಯೊಡೆಯುವುದು ಎಲೆಗಳೊಂದಿಗೆ ತಮ್ಮ ಮೊದಲ ಸಂಪರ್ಕದ 30 ನಿಮಿಷಗಳಲ್ಲಿ ನಡೆಯುತ್ತದೆ. ಹೆಚ್ಚಿನ ಸಾರಜನಕ ರಸಗೊಬ್ಬರ ಮಟ್ಟಗಳೂ ಸಹ ಇದಕ್ಕೆ ಅನುಕೂಲಕರವಾಗಿವೆ. ಎಲೆಗಳು ಅಥವಾ ಪೊರೆಗಳ ಮೇಲೆ ನೈಸರ್ಗಿಕ ರಂಧ್ರಗಳ ಮೂಲಕ ಶಿಲೀಂಧ್ರ ಸಸ್ಯದೊಳಗೆ ಪ್ರವೇಶಿಸುತ್ತದೆ. ಶಿಲೀಂಧ್ರಗಳು ಹೊಲದ ಸ್ಥಿತಿಗತಿಗಳನ್ನು ಅವಲಂಬಿಸಿ ತಮ್ಮ ಜೀವನಚಕ್ರವನ್ನು 7 ರಿಂದ 8 ದಿನಗಳಲ್ಲಿ ಪೂರ್ಣಗೊಳಿಸಬಹುದು. ಪುಸಿನಿಯಾ ಟ್ರೈಟಿಸಿನಾ ಧಾನ್ಯ ಕುಟುಂಬದಲ್ಲಿ ವಿವಿಧ ಪರ್ಯಾಯ ಆತಿಥೇಯ ಸಸ್ಯಗಳನ್ನು ಹೊಂದಿದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸ್ಥಿರ ಮತ್ತು ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಚಳಿಗಾಲದ ಗೋಧಿಯನ್ನು ತಡವಾಗಿ ಮತ್ತು ಬೇಸಿಗೆಯ ಗೋಧಿಯನ್ನು ಸಾಮಾನ್ಯಕ್ಕಿಂತ ಬೇಗನೆ ಬಿತ್ತಿರಿ.
  • ತಾನೇ ಹುಟ್ಟುಕೊಳ್ಳುವ ಸಸ್ಯಗಳನ್ನು ಹುಡುಕಿ ಮತ್ತು ಅವುಗಳನ್ನು ತೆಗೆದುಹಾಕಿ.
  • ನೆಟ್ಟ ಸಮಯದಲ್ಲಿ ಕಡಿಮೆ ಬೆಳೆ ಸಾಂದ್ರತೆಯನ್ನು ಖಚಿತಪಡಿಸಿಕೊಳ್ಳಿ.
  • ಆರೋಗ್ಯಕರ ಬೆಳೆ ಸರದಿಯನ್ನು ಯೋಜಿಸಿ ಮತ್ತು ಕಾರ್ಯಗತಗೊಳಿಸಿ.
  • ಸಾಕಷ್ಟು ಸಾರಜನಕ ರಸಗೊಬ್ಬರ ಬಳಕೆಯನ್ನು ಖಚಿತಪಡಿಸಿಕೊಳ್ಳಿ.
  • ಸುಗ್ಗಿಯ ನಂತರ ಬೆಳೆ ಉಳಿಕೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ