ಸಿರಿಧಾನ್ಯ

ಸಜ್ಜೆಯ ಕಾಡಿಗೆ ರೋಗ

Moesziomyces bullatus

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಧಾನ್ಯಗಳು ಹಸಿರು ಸೋರಿಯಾಗಿ ಬದಲಾಗುತ್ತವೆ.
  • (ಶಿಲೀಂಧ್ರದ ಬೀಜಕಗಳ ಕ್ಯಾಪ್ಸುಲ್ ಗಳು).
  • ನಂತರ ಶಿಲೀಂಧ್ರಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸಿರಿಧಾನ್ಯ

ರೋಗಲಕ್ಷಣಗಳು

ಸಜ್ಜೆಯ ಧಾನ್ಯಗಳು ಹಸಿರು ಸೋರಿಯಾಗಿ ಬದಲಾಗುತ್ತವೆ. ಇವು ಧಾನ್ಯಗಳಿಗಿಂತ ದೊಡ್ಡದಾಗಿದ್ದು, ಅಂಡಾಕಾರದ / ಶಂಕುವಿನಾಕಾರದ ಕ್ಯಾಪ್ಸುಲ್ ಗಳಂತೆ ಕಾಣಿಸುತ್ತವೆ. ರೋಗ ಮುಂದುವರಿದಂತೆ, ಸೋರಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಮೊಸ್ಜಿಯೋಮೈಸಸ್ ಬುಲ್ಲಾಟಸ್ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವುದಾದರೂ ಮಾಹಿತಿ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಮುಂಜಾಗ್ರತಾ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಆರ್ಥಿಕ ದೃಷ್ಟಿಕೋನದಿಂದ, ರಾಸಾಯನಿಕ ಚಿಕಿತ್ಸೆಯು ಕಾರ್ಯಸಾಧ್ಯವಲ್ಲ.

ಅದಕ್ಕೆ ಏನು ಕಾರಣ

ಮೊಯೆಜಿಯೋಮೈಸಸ್ ಬುಲಟಸ್ ಎಂಬ ರೋಗಕಾರಕದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ರೋಗವು ಬೀಜಗಳ ಮೂಲಕ ಹರಡುತ್ತದೆ. ರೋಗಕಾರಕವು ವ್ಯಾಪಕ ಶ್ರೇಣಿಯ ತಾಪಮಾನದಲ್ಲಿ (5 °C - 40 °C) ಬೆಳೆಯಬಹುದು, ಇದರ ಗರಿಷ್ಠ ಬೆಳವಣಿಗೆಯು 30 °C ಆಗಿರುತ್ತದೆ. ಶಿಲೀಂಧ್ರ ಬೀಜಕಗಳು ಮಣ್ಣಿನಲ್ಲಿ ಬದುಕಬಲ್ಲವು. ಬೀಜ, ಮಣ್ಣು ಮತ್ತು ಗಾಳಿಯಿಂದ ಹರಡುವ ಪ್ರಕೃತಿ ಇವಕ್ಕಿವೆ.


ಮುಂಜಾಗ್ರತಾ ಕ್ರಮಗಳು

  • WC-C75, ICMS 7703, ICTP 8203, ಮತ್ತು ICMV 155 ನಂತಹ ನಿರೋಧಕ ಪ್ರಭೇದಗಳನ್ನು ಬಳಸಿ.
  • ಆರೋಗ್ಯಕರ ಬೀಜಗಳನ್ನು ಬಳಸಿ.
  • ಸಾರಜನಕ ಗೊಬ್ಬರದ ವಿಪರೀತ ಬಳಕೆ ತಪ್ಪಿಸಿ.
  • ಬಿಳಿ ಪಾಲಿಥೀನ್ ಮತ್ತು ಹಸಿಗೊಬ್ಬರಗಳನ್ನು ಬಳಸಿ ಮಣ್ಣಿನ ಸೌರೀಕರಣವನ್ನು ಮಾಡುವ ಮೂಲಕ ಕಾಡಿಗೆ ರೋಗದ ಸೋಂಕನ್ನು ಕಡಿಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ