ಮೆಕ್ಕೆ ಜೋಳ

ಹೆಡ್ ಸ್ಮಟ್

Sphacelotheca reiliana

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹೂವುಗಳು ಕಪ್ಪು ಅಥವಾ ಪುಡಿ ಶಿಲೀಂಧ್ರಗಳ ಬೆಳವಣಿಗೆಯೊಂದಿಗೆ ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುತ್ತವೆ.
  • ಅಸಾಮಾನ್ಯ ಎಲೆಗಳ ರಚನೆಗಳು ಕಿರುಕದಿರುಗಳು ಮತ್ತು ತೆನೆಗಳಲ್ಲಿ ಕಂಡುಬರುತ್ತವೆ.
  • ಬಾಧಿತ ತೆನೆಗಳು ಗುಂಡಾಕಾರ ಅಥವಾ ಕಣ್ಣೀರು ಆಕಾರದಲ್ಲಿರುತ್ತವೆ ಮತ್ತು ಸಂಪೂರ್ಣವಾಗಿ ಕಪ್ಪು ಪುಡಿಯ ದ್ರವ್ಯರಾಶಿಗಳಿಂದ ತುಂಬಿರುತ್ತವೆ.
  • ನಾಳೀಯ ಎಳೆಗಳ ಅವ್ಯವಸ್ಥೆಯ ಸಮೂಹ ಬೀಜಕ ದ್ರವ್ಯರಾಶಿಯ ನಡುವೆ ಮಿಶ್ರಣವಾಗುತ್ತದೆ.
  • ತೆನೆಗಳಲ್ಲಿ ಯಾವುದೇ ರೇಷ್ಮೆ ಅಥವಾ ಕಾಳುಗಳಿರುವುದಿಲ್ಲ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಹೂಗೊಂಚಲು ಮತ್ತು ತೆನೆಗಳು ಕಾಣಿಸಿಕೊಂಡಾಗ ಸಸ್ಯದ ಬೆಳವಣಿಗೆಯ ನಂತರದ ಹಂತಗಳಲ್ಲಿ ರೋಗದ ಮೊದಲ ರೋಗಲಕ್ಷಣಗಳು ಕಂಡುಬರುತ್ತವೆ. ತುಂಡುಗಳು ಭಾಗಶಃ ಅಥವಾ ಸಂಪೂರ್ಣವಾಗಿ ಕಪ್ಪು, ಸೂಕ್ಷ್ಮ ಶಿಲೀಂಧ್ರಗಳ ಬೆಳವಣಿಗೆಯಿಂದ ಮುಚ್ಚಲ್ಪಡಬಹುದು. ಅಸಾಮಾನ್ಯ ಎಲೆ ರೀತಿಯ ರಚನೆಗಳು ಹೂಗೊಂಚಲು ಅಥವಾ ತೆನೆಗಳಲ್ಲಿ ಕಾಣಿಸಿಕೊಳ್ಳಬಹುದು. ಬಾಧಿತ ತೆನೆಗಳು ತಮ್ಮ ಆರೋಗ್ಯಕರ ಪ್ರತಿರೂಪಗಳಿಗಿಂತ ಗುಂಡಾಕಾರದಲ್ಲಿರುತ್ತವೆ ಮತ್ತು ಸಂಪೂರ್ಣವಾಗಿ ಕಪ್ಪು ಪುಡಿಯ ದ್ರವ್ಯರಾಶಿಗಳಿಂದ ತುಂಬಿರುತ್ತವೆ. ಬೀಜಕ ದ್ರವ್ಯರಾಶಿಗಳ ನಡುವಿನ ಮಿಶ್ರಣವಾದ ಗಟ್ಟಿಯಾದ ಸಸ್ಯದ ಅಂಗಾಂಶಗಳ ಉಳಿಕೆಗಳುಳ್ಳ ನಾಳೀಯ ಎಳೆಗಳ ಒಂದು ಅವ್ಯವಸ್ಥೆಯ ದ್ರವ್ಯರಾಶಿ ಕಂಡುಬರುತ್ತದೆ. ಸೋಂಕಿತ ಸಸ್ಯಗಳ ತೆನೆಗಳಲ್ಲಿ ಸಾಮಾನ್ಯವಾಗಿ ಯಾವುದೇ ರೇಷ್ಮೆ ಅಥವಾ ಕಾಳುಗಳು ಇರುವುದಿಲ್ಲ. ಹೆಚ್ಚಿನ ಶಾಖೆಗಳು ಬೆಳೆಯುವುದನ್ನು ದ್ವಿತೀಯ ರೋಗಲಕ್ಷಣವೆಂದು ವಿವರಿಸಲಾಗಿದೆ.

Recommendations

ಜೈವಿಕ ನಿಯಂತ್ರಣ

ಸ್ವಲ್ಪ ಮಟ್ಟಿನ ಇಂಗಾಲ ಮತ್ತು ಸಾರಜನಕದ ಅನುಪಾತದಲ್ಲಿ ಗೊಬ್ಬರವನ್ನು ಹಾಕಿದರೆ, ಅದು ರೋಗದ ವ್ಯಾಪ್ತಿಯನ್ನು ಕಡಿಮೆ ಮಾಡುತ್ತದೆ. ಶಿಲೀಂಧ್ರಗಳನ್ನು ತಿನ್ನುವ ಜೀರುಂಡೆಗಳು (ಫೀಲಾಕ್ರಸ್ ಅಬ್ಕ್ಯುರಸ್ ಮತ್ತು ಲಿಸ್ಟ್ರೋನಿಕುಸ್ ಕೊಯ್ಯುರೌಲಿಯಸ್) ಜೈವಿಕ ನಿಯಂತ್ರಣ ಏಜೆಂಟ್ಗಳಾಗಿ ಕಾರ್ಯನಿರ್ವಹಿಸುತ್ತವೆ. ಬಾಸಿಲಸ್ ಮೆಗಾಟೇರಿಯಂನ ಬ್ಯಾಕ್ಟೀರಿಯಾದ ಸಾರಗಳ ಬೀಜ ಚಿಕಿತ್ಸೆಯು ರೋಗದ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಬೀಜಗಳಿಗೆ ಶಿಲೀಂಧ್ರನಾಶಕದ (ಕಾರ್ಬಾಕ್ಸಿನ್) ಮೂಲಕ ಚಿಕಿತ್ಸೆ ನೀಡಬಹುದು. ಇದು ಶಿಲೀಂಧ್ರ ಮೊದಲ ಬಾರಿಗೆ ಸಸ್ಯಗಳಿಗೆ ಸೋಂಕು ತಗುಲಿಸದಂತೆ ತಡೆಗಟ್ಟಬಹುದು ಆದರೆ ಇದು ಸೀಮಿತ ನಿಯಂತ್ರಣವನ್ನು ಮಾತ್ರ ನೀಡುತ್ತದೆ. ಸಸಿ ಹಂತದಲ್ಲಿ ಫೂರೋ ಶಿಲೀಂಧ್ರನಾಶಕ ಚಿಕಿತ್ಸೆಗಳು ಸಹ ಪರಿಣಾಮಕಾರಿಯಾಗಿರುತ್ತವೆ, ಆದರೆ ಆರ್ಥಿಕವಾಗಿ ಕಾರ್ಯಸಾಧ್ಯವಾಗದಿರಬಹುದು.

ಅದಕ್ಕೆ ಏನು ಕಾರಣ

ಸ್ಫೇಸಲೋಥೆಕಾ ರೆಲಿಯಿನಾ ಎಂಬ ಶಿಲೀಂಧ್ರವು ಅನೇಕ ವರ್ಷಗಳ ಕಾಲ ಮಣ್ಣಿನಲ್ಲಿ ಬೀಜಕಗಳಂತೆ ಬದುಕಬಲ್ಲದು ಮತ್ತು ಪ್ರತ್ಯೇಕವಾಗಿ ಬೇರುಗಳ ಮೂಲಕ ಹರಡುತ್ತದೆ. ಇದು ಹೆಚ್ಚಾಗಿ ಸಸಿ ಹಂತದಲ್ಲಿ, ಗದ್ದೆಯಲ್ಲಿನ ಕೆಲವು ಸಸ್ಯಗಳಿಗೆ ವಿರಳವಾಗಿ ಸೋಂಕು ತಗುಲಿಸುತ್ತದೆ. ಹೂಗೊಂಚಲು (ಟಸೆಲ್) ಮತ್ತು ತೆನೆ ಸೇರಿದಂತೆ ಎಲ್ಲಾ ಸಸ್ಯ ಭಾಗಗಳಲ್ಲಿ ಸೋಂಕು ನಂತರ ಬೆಳೆಯುತ್ತದೆ. ಇದು ಕಪ್ಪು ಕೊಳೆತ ಬೆಳವಣಿಗೆ (ಬೀಜಕ ದ್ರವ್ಯರಾಶಿ) ಎಂದು ಪ್ರತಿಫಲಿಸುತ್ತದೆ, ಅದು ಹೂಗೊಂಚಲುಗಳನ್ನು ಆವರಿಸುತ್ತದೆ ಮತ್ತು ಕೆಲವೊಮ್ಮೆ ಕಾಳುಗಳ ಜಾಗದಲ್ಲಿ ಅವುಗಳನ್ನು ಕಾಣಬಹುದು. ಗದ್ದೆಯಿಂದ ಗದ್ದೆಗೆ ಮಾಲಿನ್ಯವು ಕಲುಷಿತ ಉಪಕರಣಗಳ ಮೂಲಕ ತಗುಲಬಹುದು. ಕಡಿಮೆ ಮಣ್ಣಿನ ತೇವಾಂಶ, ಬೆಚ್ಚಗಿನ ತಾಪಮಾನಗಳು (21 ರಿಂದ 27 °C), ಮತ್ತು ಪೌಷ್ಠಿಕಾಂಶದ ಕೊರತೆಗಳು ಸೋಂಕು ಮತ್ತು ರೋಗದ ಪ್ರಗತಿಯನ್ನು ಬೆಂಬಲಿಸುತ್ತವೆ. ಸೋಂಕು ತಗುಲಿದ ನಂತರ ಸೋಂಕಿಗೊಳಗಾದ ಸಸ್ಯಗಳ ಹಾನಿ ಕಡಿಮೆ ಮಾಡಲು ಯಾವುದೇ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಬೇಗನೆ ಸಸಿ ನೆಡಿ.
  • ಬೇಗನೆ ಮೊಳಕೆಯೊಡೆಯುವ ಸಸ್ಯ ಪ್ರಭೇದಗಳನ್ನು ನೆಡಿ.
  • ಸಾಧ್ಯವಾದರೆ, ಆಳದಲ್ಲಿ ಸಸ್ಯಗಳನ್ನು ನೆಡಿ.
  • ನಿಯಮಿತವಾಗಿ ನೀರಾವರಿ ಮಾಡಿ ಮತ್ತು ಒಣ ಮಣ್ಣನ್ನು ಬಳಸಬೇಡಿ.
  • ಗದ್ದೆಯಲ್ಲಿ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
  • ಬೀಜಕಗಳು ಮತ್ತಷ್ಟು ಹರಡುವುದನ್ನು ತಪ್ಪಿಸಲು ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಸುಟ್ಟೂ ಹಾಕಿ.
  • ಸಾಕಷ್ಟು ಸಾರಜನಕ ಮತ್ತು ಪೊಟ್ಯಾಸಿಯಮ್ಗೆ ಒತ್ತು ನೀಡುವುದರೊಂದಿಗೆ ಸೂಕ್ತ ಮಣ್ಣಿನ ಫಲವತ್ತತೆಯನ್ನು ಖಚಿತಪಡಿಸಿಕೊಳ್ಳಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ.
  • 4 ವರ್ಷಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಹೋಸ್ಟ್ ಅಲ್ಲದ ಬೆಳೆಗಳೊಂದಿಗೆ(ರೋಗವನ್ನು ತಡೆದುಕೊಳ್ಳುವ ಬೆಳೆ) ಬೆಳೆ ಸರದಿ ಮಾಡಿ ಮತ್ತು ಪರ್ಯಾಯ ಹೋಸ್ಟ್ (ರೋಗಕ್ಕೆ ಬೇಗ ತುತ್ತಾಗುವ ಬೆಳೆ) ಆದ ಹುಲ್ಲುಜೋಳವನ್ನು ಬೆಳೆಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ