ಈರುಳ್ಳಿ

ತುಕ್ಕುರೋಗ (ಲೀಕ್ ರಸ್ಟ್)

Puccinia porri

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಎರಡೂ ಬದಿಗಳಲ್ಲಿ ಸಣ್ಣ, ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ.
  • ಕಲೆಗಳು ಪ್ರಕಾಶಮಾನವಾದ ಕಿತ್ತಳೆ ಬಣ್ಣದ ತುಕ್ಕು ಗುಳ್ಳೆಗಳಂತೆ ಬೆಳೆಯುತ್ತವೆ.
  • ಎಲೆಗಳ ಮೇಲ್ಮೈ ಸೀಳು ಗಾಯದಂತಹ ಬಿರುಕುಗಳನ್ನು ಹೊಂದಿರುತ್ತವೆ.
  • ಭಾರೀ ಸೋಂಕು ಸಸ್ಯಗಳ ಹಳದಿಯಾಗುವಿಕೆ, ಬಾಡುವಿಕೆ ಮತ್ತು ಒಣಗುವಿಕೆಗೆ ಕಾರಣವಾಗುತ್ತವೆ.
  • ಬೆಳ್ಳುಳ್ಳಿ ಸಸ್ಯಗಳ ಗೆಡ್ಡೆಗಳು ಮುದುಡಿದಂತಿರಬಹುದು ಮತ್ತು ಗುಣಮಟ್ಟ ಕಡಿಮೆಯಿರಬಹುದು.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬೆಳ್ಳುಳ್ಳಿ
ಈರುಳ್ಳಿ

ಈರುಳ್ಳಿ

ರೋಗಲಕ್ಷಣಗಳು

ಯಾವುದೇ ಬೆಳವಣಿಗೆಯ ಹಂತದಲ್ಲಿ ಸೋಂಕು ಸಂಭವಿಸಬಹುದು ಮತ್ತು ಎಲೆಗಳಲ್ಲಿ ಇದು ಮೊದಲ ಬಾರಿಗೆ ಗೋಚರಿಸುತ್ತದೆ. ಆರಂಭದ ರೋಗಲಕ್ಷಣಗಳು ಸಣ್ಣ, ಬಿಳಿ ಚುಕ್ಕೆಗಳಂತೆ ಕಂಡುಬರುತ್ತವೆ. ಅದು ಎಲೆಯ ಎರಡೂ ಬದಿಗಳಲ್ಲಿಯೂ ಇರುತ್ತದೆ. ಕಾಲಾನಂತರದಲ್ಲಿ, ಈ ಕಲೆಗಳು ಬೀಜಕ-ಉತ್ಪಾದಿಸುವ ರಚನೆಗಳಿಗೆ ಸಂಬಂಧಿಸಿದ ಕಿತ್ತಳೆ ಬಣ್ಣದ ತುಕ್ಕು ಗುಳ್ಳೆಗಳಾಗಿ ಬೆಳೆಯುತ್ತವೆ. ಈ ಗುಳ್ಳೆಗಳು ಬೆಳೆಯುತ್ತಾ ಹೋದಂತೆ, ಅವು ಒಡೆದು ಬೀಜಕಗಳನ್ನು ಬಿಡುಗಡೆ ಮಾಡುತ್ತವೆ. ಎಲೆಗಳು ಅಂತಿಮವಾಗಿ ಕ್ಲೋರೋಟಿಕ್ ಆಗಿಬಿಡುತ್ತವೆ ಮತ್ತು ಗಾಯಗಳು ಎಲೆಯ ಉದ್ದಕ್ಕೂ ಬೆಳೆಯಬಹುದು. ಕೆಲವೊಮ್ಮೆ ಸೀಳು ಗಾಯದಂತಹ ಬಿರುಕುಗಳಿಗೆ ಕಾರಣವಾಗುತ್ತದೆ. ಭಾರೀ ಸೋಂಕಿನ ಸಂದರ್ಭದಲ್ಲಿ ಇಡೀ ಸಸ್ಯ ಹಳದಿಯಾಗುತ್ತದೆ ಮತ್ತು ಬಾಡಿ ಹೋಗುತ್ತದೆ. ಇದು ಸಸ್ಯಗಳ ಅಕಾಲಿಕ ಮರಣಕ್ಕೆ ಕಾರಣವಾಗಬಹುದು. ಸಸ್ಯಗಳು ಆರಂಭದಲ್ಲೇ ಸೋಂಕಿತವಾಗಿದ್ದರೆ, ಅಥವಾ ಭಾರೀ ಸೋಂಕು ಸಂಭವಿಸಿದರೆ, ಕಡಿಮೆ ಗುಣಮಟ್ಟದ ಸಣ್ಣ ಮತ್ತು ಮುದುಡಿದಂತಹ ಗೆಡ್ಡೆಗಳು ಉತ್ಪತ್ತಿಯಾಗುತ್ತವೆ.

Recommendations

ಜೈವಿಕ ನಿಯಂತ್ರಣ

ದೀರ್ಘಾವಧಿಯಲ್ಲಿ ತುಕ್ಕುರೋಗ ನಿಭಾಯಿಸುವ ಏಕೈಕ ಮಾರ್ಗವೆಂದರೆ ತಡೆಗಟ್ಟುವಿಕೆ. ಸಲ್ಫರ್ ಹೊಂದಿರುವ ಕೆಲವು ಸಂಯುಕ್ತಗಳನ್ನು ಜೈವಿಕ ಎಂದು ಪರಿಗಣಿಸಲಾಗುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ತಡೆಗಟ್ಟುವ ವಿಧಾನವಾಗಿ ಬಳಸಬಹುದು. ಇವುಗಳನ್ನು ಬಳಸುವ ವಿವಿಧ ವಿಧಾನಗಳಿವೆ. ಉದಾಹರಣೆಗೆ ಸಲ್ಫರ್ ಪುಡಿಯನ್ನು ಸಸ್ಯಗಳ ಮೇಲೆ ಚಿಮುಕಿಸಲಾಗುತ್ತದೆ ಅಥವಾ ಉದುರಿಸಲಾಗುತ್ತದೆ, ಅಥವಾ ನೀರಿನಲ್ಲಿ ಬೆರೆಸಿದ ಸಲ್ಫರ್ ಮಿಶ್ರಣವನ್ನು ಎಲೆಗಳ ಮೇಲೆ ಸಿಂಪಡಿಸಬಹುದು ಅಥವಾ ಸಸ್ಯದ ಬೇರಿನ ಸುತ್ತ ಮಣ್ಣಿನಲ್ಲಿ ಸುರಿಯಬಹುದು. ಸೂಕ್ತ ರೀತಿಯಲ್ಲಿ ಬಳಸಲು, ದಯವಿಟ್ಟು ಸಂಬಂಧಪಟ್ಟ ಉತ್ಪನ್ನದ ಕೈಪಿಡಿ ಅನುಸರಿಸಿ ಅಥವಾ ನಿಮ್ಮ ಸ್ಥಳೀಯ ವ್ಯಾಪಾರಿಯನ್ನು ಕೇಳಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಅಜೋಕ್ಸಿಸ್ಟ್ರೋಬಿನ್ ಅಥವಾ ಮ್ಯಾಂಕೊಜೆಬ್ ಅನ್ನು ಹೊಂದಿರುವ ಉತ್ಪನ್ನಗಳನ್ನು ಸೋಂಕಿನ ಅಪಾಯವನ್ನು ತಡೆಗಟ್ಟಲು ಎಲೆಗಳ ಸಿಂಪಡಣೆಯಾಗಿ ಅಥವಾ ಮಣ್ಣಿನ ಅನ್ವಯಿಕವಾಗಿ ಬಳಸಬಹುದು. ಈ ಶಿಲೀಂಧ್ರ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬುದು ತಿಳಿದಿರಲಿ.

ಅದಕ್ಕೆ ಏನು ಕಾರಣ

ಈ ರೋಗವು ಪುಸಿಯಾನಿಯಾ ಪೊರ್ರಿ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ಜೀವಂತ ಸಸ್ಯ ಅಂಗಾಂಶಗಳ ಮೇಲೆ ಮಾತ್ರ ಬದುಕುಳಿಯಬಲ್ಲದು. ಇದು ಪರ್ಯಾಯ ಆಶ್ರಯದಾತ ಗಿಡಗಳಲ್ಲಿ (ಕಳೆಗಳು ಅಥವಾ ತಾವಾಗಿಯೇ ಹುಟ್ಟಿದ ಗಿಡಗಳು) ಚಳಿಗಾಲವನ್ನು ಕಳೆಯಬೇಕು ಅಥವಾ ಬೀಜಕಗಳನ್ನು ಉತ್ಪತ್ತಿ ಮಾಡುವ ಮೂಲಕ ಸುಪ್ತಾವಸ್ಥೆಯನ್ನು ಕಳೆಯಬೇಕು. ಈ ಶಿಲೀಂಧ್ರದ ಬೀಜಕಗಳು ಗಾಳಿ ಮತ್ತು ಮಳೆಯ ಹನಿಯ ಮೂಲಕ ಇತರ ಸಸ್ಯಗಳು ಅಥವಾ ಜಮೀನುಗಳಿಗೆ ಹರಡುತ್ತದೆ. ಹೆಚ್ಚಿನ ಆರ್ದ್ರತೆ, ಕಡಿಮೆ ಮಳೆ ಮತ್ತು 10-20 ಡಿಗ್ರಿ ಸೆಲ್ಶಿಯಸ್ ತಾಪಮಾನವು ಶಿಲೀಂಧ್ರದ ಜೀವನ ಚಕ್ರಕ್ಕೆ ಮತ್ತು ರೋಗದ ಹರಡುವಿಕೆಗೆ ಅತ್ಯಂತ ಅನುಕೂಲಕರವಾದ ಸ್ಥಿತಿಯಾಗಿದೆ. ಈ ಸ್ಥಿತಿಯಲ್ಲಿ, ಶಿಲೀಂಧ್ರಗಳ ಬೀಜಕಗಳು ಆಶ್ರಯದಾತ ಸಸ್ಯಗಳನ್ನು ತಲುಪಿದ ನಂತರ, ಶಿಲೀಂಧ್ರಗಳ ಬೆಳವಣಿಗೆ ಮತ್ತು ವಸಾಹತು ಪ್ರಾರಂಭವಾಗುತ್ತದೆ. ಸೋಂಕು ಮತ್ತು ರೋಗ ಕಾಣಿಸಿಕೊಳ್ಳುವ ನಡುವಿನ ಅವಧಿ, ತಾಪಮಾನ ಮತ್ತು ತೇವಾಂಶದ ಮಟ್ಟವನ್ನು ಅವಲಂಬಿಸಿ 10-15 ದಿನಗಳ ನಡುವೆ ಇರುತ್ತದೆ. ರೋಗ ಹರಡುವ ಮುಖ್ಯ ಸಮಯವೆಂದರೆ ಬೇಸಿಗೆಯ ಕೊನೆಯ ಅವಧಿ. ಈ ರೋಗವು ಭಾರೀ ಇಳುವರಿ ನಷ್ಟಕ್ಕೆ ಕಾರಣವಾಗಬಹುದು ಮತ್ತು ಗೆಡ್ಡೆಗಳನ್ನು ಸಂಗ್ರಹಣೆ ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲದಿಂದ ಆರೋಗ್ಯಕರ ಬೀಜಗಳನ್ನು ಅಥವಾ ನಾಟಿ ವಸ್ತುಗಳನ್ನು ಬಳಸಿ.
  • ರೋಗದ ಹರಡುವಿಕೆಯನ್ನು ತಡೆಗಟ್ಟಲು ಸಾಲು ನೆಡುವಿಕೆಗಾಗಿ ಶಿಫಾರಸು ಮಾಡಲಾದ ಅಂತರವನ್ನು ಕಾಯ್ದುಕೊಳ್ಳಿ ಮತ್ತು ಚೆನ್ನಾಗಿ ಗಾಳಿಯಾಡುವಂತೆ ನೋಡಿಕೊಳ್ಳಿ.
  • ನೆಡಲು ಚೆನ್ನಾಗಿ ಒಣಗಿದ ಜಾಗಗಳನ್ನು ಆಯ್ಕೆಮಾಡಿಕೊಳ್ಳಿ.
  • ಜಮೀನಿನಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಇರುವುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ಅತಿ ಹೆಚ್ಚು ನೀರು ಹಾಕಬೇಡಿ.
  • ಗೆಡ್ಡೆಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಎಚ್ಚರಿಕೆಯಿಂದ ಕಳೆ ನಿರ್ವಹಣೆ ಮಾಡಿ.
  • ನೈಟ್ರೋಜನ್-ಹೆಚ್ಚಿರುವ ಮಣ್ಣಿನಲ್ಲಿ ಅಲಿಯಮ್ ಕುಟುಂಬದ ಸಸ್ಯಗಳನ್ನು ಬೆಳೆಸಬೇಡಿ.
  • ಪೊಟ್ಯಾಸಿಯಮ್-ಸಮೃದ್ಧ ರಸಗೊಬ್ಬರಗಳನ್ನು ಬಳಸಿ (ಉದಾಹರಣೆಗೆ ಸಲ್ಫೇಟ್ ಆಫ್ ಪೊಟಾಷ್).
  • ತೇವಾಂಶದ ಸ್ಥಿತಿಯನ್ನು ತಪ್ಪಿಸಲು ರಾತ್ರಿಯ ಬದಲು ಬೆಳಿಗ್ಗೆ ನೀರು ಹಾಕಲು ಸೂಚಿಸಲಾಗುತ್ತದೆ.
  • ರೋಗಗಳ ಯಾವುದೇ ಚಿಹ್ನೆಗಾಗಿ ನಿಯಮಿತವಾಗಿ ನಿಮ್ಮ ಸಸ್ಯಗಳನ್ನು ಅಥವಾ ಜಮೀನನ್ನು ಪರಿಶೀಲಿಸಿ.
  • ಸೋಂಕಿಗೊಳಗಾದ ಸಸ್ಯಗಳನ್ನು ತೆಗೆದುಹಾಕಿ ಒಮ್ಮೆ ಆರಂಭಿಕ ರೋಗಲಕ್ಷಣಗಳನ್ನು ಪತ್ತೆಹಚ್ಚಿದ ನಂತರ ಅವುಗಳನ್ನು ಸುಡುವ ಮೂಲಕ ನಾಶಮಾಡಿ.
  • ಕನಿಷ್ಠ 2-3 ವರ್ಷಗಳ ಕಾಲ ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.
  • ರೋಗಮುಕ್ತ ಜಮೀನು ಇರುವಂತೆ ನೋಡಿಕೊಳ್ಳಲು ಆ ಸಮಯದಲ್ಲಿ ತಾವಾಗಿಯೇ ಹುಟ್ಟಿರುವ ಅಲಿಯಂ ಸಸ್ಯಗಳನ್ನು ನಾಶಪಡಿಸಿ.
  • ಜಮೀನಿನಲ್ಲಿ ಅಥವಾ ನಡುವೆ ರೋಗ ಹರಡುವುದನ್ನು ತಪ್ಪಿಸಲು ನಿಮ್ಮ ಉಪಕರಣಗಳನ್ನು ಸೋಂಕುರಹಿತವಾಗಿಸಿ ಮತ್ತು ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ