ಟೊಮೆಟೊ

ಟೊಮೆಟೊ ಕಾಂಡ ಕೊಳೆತ

Didymella lycopersici

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕಾಂಡಗಳ ಕೆಳ ಭಾಗದಲ್ಲಿ ಗಾಢವಾದ, ಸ್ಪಷ್ಟವಾಗಿ-ಕತ್ತರಿಸಿದಂತಿರುವ ಗುಳಿಬಿದ್ದ ಕಲೆಗಳು.
  • ಬಾಧಿತ ಅಂಗಾಂಶಗಳ ಮೇಲೆ ಅತೀ ಸಣ್ಣದಾದ ಕಪ್ಪು ಮಚ್ಚೆಗಳು ಗೋಚರಿಸುತ್ತವೆ.
  • ಸಸ್ಯವು ಬಾಡುತ್ತದೆ ಮತ್ತು ನಿಧಾನವಾಗಿ ಬೀಳುತ್ತದೆ.
  • ಹಣ್ಣುಗಳು ಕಪ್ಪು ಬಣ್ಣಕ್ಕೆ ತಿರುಗಿ ಸುಕ್ಕಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಟೊಮೆಟೊ

ರೋಗಲಕ್ಷಣಗಳು

ಸೋಂಕು ಸಾಮಾನ್ಯವಾಗಿ ನೆಲದಲ್ಲಿ ಅಥವಾ ಅದರ ಮೇಲಿರುವ ಕಾಂಡದ ಮೇಲೆ ತಗುಲುತ್ತದೆ, ಆದರೆ ಮಣ್ಣಿನೊಂದಿಗೆ ಸಂಪರ್ಕದಲ್ಲಿರುವ ಎಲೆಗಳ ಮೇಲೆ ಕೂಡ ಪರಿಣಾಮವಾಗುತ್ತದೆ. ಕಂದು ಬಣ್ಣದ, ಸ್ಪಷ್ಟವಾಗಿ-ಕತ್ತರಿಸಿದಂತಿರುವ ಗುಳಿಬಿದ್ದ ಕಲೆಗಳು ಮೊದಲು ಕಾಂಡದಲ್ಲಿ ಗೋಚರಿಸುತ್ತವೆ. ಅವು ಮತ್ತಷ್ಟು ಬೆಳೆದಂತೆಯೇ, ಈ ಗಾಯಗಳು ಕಾಂಡವನ್ನು ಸುತ್ತುವರಿಯುತ್ತವೆ, ಇದರಿಂದಾಗಿ ಸಸ್ಯವು ಬಾಡುತ್ತದೆ ಮತ್ತು ನಂತರ ಬೀಳುತ್ತದೆ. ಬಾಧಿತ ಅಂಗಾಂಶಗಳ ಮೇಲೆ ಅತೀ ಸಣ್ಣದಾದ ಕಪ್ಪು ಮಚ್ಚೆಗಳು ಗೋಚರಿಸುತ್ತವೆ. ದ್ವಿತೀಯ ಹಂತದ ಗಾಯಗಳು ಅಥವಾ ಹುಣ್ಣು(ಕ್ಯಾಂಕರ್)ಗಳು ನಂತರ ಕಾಂಡದ ಮೇಲಿನ ಭಾಗಗಳಲ್ಲಿ ಬೆಳೆಯಬಹುದು. ನೀರಿನ ಎರಚಲು ಬೀಜಕಗಳನ್ನು ಇತರ ಸಸ್ಯ ಭಾಗಗಳಿಗೆ ಹರಡುತ್ತದೆ, ಇದರಿಂದಾಗಿ ಹೆಚ್ಚುವರಿ ಸೋಂಕುಗಳು ಮತ್ತು ರೋಗ ಹರಡುವಿಕೆ ಕಂಡುಬರುತ್ತದೆ. ಸೋಂಕಿಗೊಳಗಾದ ಹಣ್ಣುಗಳು ಕಪ್ಪು ಬಣ್ಣಕ್ಕೆ ತಿರುಗಿ ಸುಕ್ಕಾಗುತ್ತದೆ.

Recommendations

ಜೈವಿಕ ನಿಯಂತ್ರಣ

ರೋಗವನ್ನು ತಡೆಗಟ್ಟಲು ಅಥವಾ ಅದು ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಮುಂಜಾಗ್ರತಾ ಕ್ರಮಗಳು ಅತ್ಯುತ್ತಮ ಆಯ್ಕೆಯಾಗಿದೆ. ಟ್ರೈಕೋಡರ್ಮಾ ಹಾರ್ಜಿಯಂಮ್ ಶಿಲೀಂಧ್ರಗಳ ಕೆಲವು ತಳಿಗಳು ಡಿ. ಲಿಕೊಪೆರ್ಸಿಸಿಯ ಉತ್ತಮ ನಿಯಂತ್ರಣವನ್ನು ನೀಡುತ್ತವೆ ಮತ್ತು ಇಳುವರಿಯನ್ನು ಹೆಚ್ಚಿಸುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ರೋಗವನ್ನು ತಡೆಗಟ್ಟಲು ಅಥವಾ ಅದು ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಮುಂಜಾಗ್ರತಾ ಕ್ರಮಗಳು ಅತ್ಯುತ್ತಮ ಆಯ್ಕೆಯಾಗಿದೆ. ಶಿಲೀಂಧ್ರನಾಶಕ ಚಿಕಿತ್ಸೆಗಳನ್ನು ಸಕಾಲಿಕ ವಿಧಾನದಲ್ಲಿ ಬಳಸಿದರೆ ಅದು ಪರಿಣಾಮಕಾರಿಯಾಗಬಹುದು. ಹೊಸ ಸೋಂಕನ್ನು ತಡೆಗಟ್ಟಲು ಕ್ಲೋರೊಟಾಲೋನಿಯಲ್ ಆಧಾರಿತ ಉತ್ಪನ್ನಗಳನ್ನು ಉಪಯೋಗಿಸಬಹುದು.

ಅದಕ್ಕೆ ಏನು ಕಾರಣ

ಮಣ್ಣಿನಲ್ಲಿ ಮತ್ತು ಸೋಂಕಿತ ಸಸ್ಯಾವಶೇಷಗಳಲ್ಲಿ ಬದುಕಬಲ್ಲ ಶಿಲೀಂಧ್ರವಾದ ಡಿಡಿಮಿಲ್ಲಾ ಲೈಕೊಪೆರ್ಸಿಯಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಉದಾಹರಣೆಗೆ ಶಿಲೀಂಧ್ರವು ದಿನನಿತ್ಯದ ಸಮರುವಿಕೆಯು ಉಂಟುಮಾಡುವ ಗಾಯಗಳ ಮೂಲಕ ಸುಲಭವಾಗಿ ಒಳಹೊಕ್ಕುತ್ತವೆ. ನೈಟ್ ಶೇಡಿನ(ಸೊಲೇನಮ್ ಕುಲದ ಒಂದು ವಿಷಕರ ಸಸ್ಯವಿಶೇಷ) ಕುಟುಂಬಕ್ಕೆ ಪರ್ಯಾಯ ಆಶ್ರಯ ಗಿಡಗಳು ಸೀಮಿತವಾಗಿರುತ್ತವೆ, ಟೊಮೆಟೊ ಆ ಕುಟುಂಬಕ್ಕೆ ಸೇರಿದುದಾಗಿದೆ. ಎಲೆಗಳ ಮೇಲಿನ ಚುಕ್ಕೆಗಳು ಬೀಜಕಗಳನ್ನು ಉತ್ಪಾದಿಸುವ ಕುಶನ್ ಗಳನ್ನು ಹೊಂದಿರುತ್ತವೆ. ಇವುಗಳನ್ನು ನಂತರ ಗಾಳಿ ಅಥವಾ ಮಳೆಯ ಎರಚಲಿನ ಮೂಲಕ ಆರೋಗ್ಯಕರ ಸಸ್ಯಗಳಿಗೆ ಸಾಗಿಸಲಾಗುತ್ತದೆ. ರೋಗವು ಸೋಂಕಿತ ಬೀಜಗಳ ಮೂಲಕವೂ ಸಹ ಹರಡಬಹುದು ಎಂದು ತಿಳಿದುಬಂದಿದೆ. ಡಿಡಿಮಿಲ್ಲಾ ಕಾಂಡ ಕೊಳೆತವು ವಿವಿಧ ರೀತಿಯ ಪರಿಸ್ಥಿತಿಗಳಲ್ಲಿ ಕಂಡುಬರುತ್ತದೆ. ಹೇಗಾದರೂ, ತಂಪಾದ ತಾಪಮಾನವು (20 °ಸಿ), ಮಳೆಯ ಹನಿಗಳೊಂದಿಗಿನ ತೇವವಿರುವ ವಾತಾವರಣ ಅಥವಾ ಮಿತಿ ಮೀರಿದ(ಒವರ್ಹೆಡ್) ನೀರಾವರಿಯ ಬಳಕೆಯು ಇದಕ್ಕೆ ಸೂಕ್ತವಾಗಿರುತ್ತವೆ. ಸಸ್ಯಗಳು ಪಕ್ವವಾಗುತ್ತ ಇದ್ದಂತೆ ಹೆಚ್ಚು ಸೂಕ್ಷ್ಮವಾಗಿರುತ್ತವೆ ಮತ್ತು ಮಣ್ಣಿನಲ್ಲಿ ಸಾರಜನಕ ಹಾಗು ಫಾಸ್ಪರಸ್ನ ಕೊರತೆಯು ರೋಗದ ತೀವ್ರತೆಗೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಬೀಜಗಳನ್ನು ಬಳಸಿ.
  • ನಿರೋಧಕ ಪ್ರಭೇದಗಳನ್ನು ನೆಡಿ.
  • ಹಸಿರುಮನೆಗಳಲ್ಲಿ ಸಸ್ಯಗಳನ್ನು ಬೆಳೆಯುವಾಗ ಮೇಲಾವರಣದಲ್ಲಿ ವಾತಾಯನಕ್ಕೆ ಅನುಕೂಲವಾಗುವಂತೆ ಸಸ್ಯಗಳ ನಡುವೆ ಸಾಕಷ್ಟು ಅಂತರವನ್ನು ಒದಗಿಸಿ.
  • ಮಣ್ಣಿನೊಂದಿಗೆ ಕೆಳಭಾಗದ ಎಲೆಗಳು ಸಂಪರ್ಕವಾಗುವುದನ್ನು ತಡೆಗಟ್ಟಿ ಅಥವಾ ಅವುಗಳನ್ನು ತೆಗೆದುಹಾಕಿ ಅಥವಾ ಕತ್ತರಿಸಿ.
  • ಬೆಳಿಗ್ಗಿನ ಸಮಯದಲ್ಲಿ ಸಸ್ಯಗಳಿಗೆ ನೀರು ಹಾಯಿಸಿ ಮತ್ತು ಮಿತಿ ಮೀರಿದ(ಓವರ್ಹೆಡ್) ನೀರಾವರಿ ಮಾಡಬೇಡಿ.
  • ಕನಿಷ್ಠ 3 ವರ್ಷಗಳಿಗೊಮ್ಮೆ ವೈವಿಧ್ಯಮಯ ಬೆಳೆ ಸರದಿಯನ್ನು ಮಾಡಿ.
  • ಹಲವು ವಾರಗಳವರೆಗೆ ಮಣ್ಣಿನ ಸೌರೀಕರಣವನ್ನು ಯೋಜಿಸಿ.
  • ಕೃಷಿ ಕೆಲಸದ ಸಮಯದಲ್ಲಿ ಸಸ್ಯಗಳಿಗೆ ಗಾಯವಾಗದಂತೆ ನೋಡಿಕೊಳ್ಳಿ.
  • ಸೋಂಕಿತ ಸಸ್ಯಗಳು ಕಂಡ ತಕ್ಷಣವೇ ತೆಗೆದುಹಾಕಿ.
  • ತಾವಾಗೇ ಬೆಳೆದ ಸಸ್ಯಗಳು, ಕಳೆಗಳು ಮತ್ತು ಹೊಲದ ಸುತ್ತಲೂ ಬೆಳೆದ ಪರ್ಯಾಯವಾದ ರೋಗಕ್ಕೆ ಆಶ್ರಯ ನೀಡುವ ಸಸ್ಯಗಳನ್ನು ತೆಗೆದುಹಾಕಿ.
  • ಕೊಯ್ಲಿನ ನಂತರ ಎಲ್ಲಾ ಸಸ್ಯಾವಶೇಷಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟು ಹಾಕಿ.
  • ಕೃಷಿ ಕೆಲಸದ ನಂತರ ಕೋಲುಗಳು ಮತ್ತು ಸಾಧನಗಳನ್ನು ಸ್ವಚ್ಛಮಾಡಲು ಮರೆಯದಿರಿ.
  • ಗಾಜುಮನೆಗಳಲ್ಲಿ, ತೇವಾಂಶವನ್ನು 90% ಗಿಂತ ಕಡಿಮೆ ಇರಿಸಿ ಮತ್ತು ತಾಪಮಾನವು 15 °ಸಿ ಗಿಂತ ಹೆಚ್ಚಿರುವಂತೆ ನೋಡಿಕೊಳ್ಳಿ.
  • ಟೊಮೆಟೊಗಳನ್ನು ಬೆಂಬಲಿಸಲು ರೀಡ್ ಕೇನ್ ಗಳು (ಅರುಂಡೋ ಡೋನಾಕ್ಸ್) ಅಥವಾ ಯೂಕಲಿಪ್ಟಸ್ ಗೂಟಗಳನ್ನು ಬಳಸಿ, ಇವು ರೋಗ ತಗುಲುವುದನ್ನು ಕಡಿಮೆ ಮಾಡುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ