ಸ್ಟ್ರಾಬೆರಿ

ಸ್ಟ್ರಾಬೆರಿಯ ಸೂಕ್ಷ್ಮ ಶಿಲೀಂಧ್ರ

Podosphaera aphanis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕೆಳಭಾಗದಲ್ಲಿ ಬಿಳಿ ಶಿಲೀಂಧ್ರದ ಲೇಪನವಿದ್ದು ಸುರುಳಿಯಾಗಿರುವ ಎಲೆಗಳು.
  • ಎಲೆಯ ಎರಡೂ ಬದಿಗಳ ಮೇಲೆ ಕೆಂಪಿ ಅಥವಾ ಕಂದು ಬಣ್ಣದ ತೇಪೆಗಳಿರುತ್ತವೆ.
  • ಬೆರ್ರಿಳಲ್ಲಿ ಮಂಕಾದ ಹೊಳಪು, ಬಿರುಕುಗಳು ಮತ್ತು ತುಕ್ಕು-ಗುಲಾಬಿ ಬಣ್ಣ ಕಾಣಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಸ್ಟ್ರಾಬೆರಿ

ಸ್ಟ್ರಾಬೆರಿ

ರೋಗಲಕ್ಷಣಗಳು

ಎಲೆಗಳು ಅಂಚುಗಳಲ್ಲಿ ಸುರುಳಿಯಾಗಿರುತ್ತವೆ, ಕೆಳ ಎಲೆ ಮೇಲ್ಮೈಯಲ್ಲಿ ಶಿಲೀಂಧ್ರ ಲೇಪನದ ಬಿಳಿ ತೇಪೆಯನ್ನು ಬಹಿರಂಗವಾಗುತ್ತವೆ. ತೇಪೆಗಳು ಅಂತಿಮವಾಗಿ ಒಂದಾಗಿ ಎಲೆಗಳ ಕೆಳಭಾಗದ ಮೇಲೆ ಸಂಪೂರ್ಣವಾಗಿ ಹರಡುತ್ತವೆ. ನೇರಳೆ ಮತ್ತು ಕೆಂಪು ಬಣ್ಣದ ಗಾಯಗಳು ಎಲೆಗಳ ಎರಡೂ ಬದಿಯಲ್ಲಿ ಕಾಣಿಸಿಕೊಳ್ಳುತ್ತವೆ, ಅಲ್ಲದೆ ಹಲವಾರು ಕಪ್ಪು ಚುಕ್ಕೆಗಳು ಕಂಡುಬರುತ್ತವೆ. ಸೋಂಕಿತ ಹೂವುಗಳು ವಿರೂಪಗೊಂಡ ಹಣ್ಣುಗಳನ್ನು ಉತ್ಪತ್ತಿ ಮಾಡುತ್ತವೆ ಅಥವಾ ಯಾವುದೇ ಹಣ್ಣುಗಳನ್ನು ಉತ್ಪತ್ತಿ ಮಾಡುವುದಿಲ್ಲ. ಬಾಧಿತ ಬೆರ್ರಿಗಳು ಮಂದವಾದ ಬಣ್ಣದಲ್ಲಿರುತ್ತವೆ ಮತ್ತು ತೀವ್ರತರವಾದ ಸಂದರ್ಭಗಳಲ್ಲಿ, ಅವುಗಳು ಒಣಗಿದಂತೆ, ಬಿರುಕುಗೊಂಡಂತೆ ಮತ್ತು ಕಂದು-ಹಳದಿ ಅಥವಾ ತುಕ್ಕು-ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. ಎಲೆಗಳ ಮೇಲಿರುವ ಕೂದಲಿನ ಕಾರಣದಿಂದ, ಶಿಲೀಂಧ್ರದ ಪದರವನ್ನು ಕೆಲವೊಮ್ಮೆ ಗುರುತಿಸಲು ಕಷ್ಟವಾಗುತ್ತದೆ. ಈ ಉದ್ದೇಶಕ್ಕಾಗಿ ಕೈ ಕನ್ನಡಿಯನ್ನು ಶಿಫಾರಸು ಮಾಡಲಾಗಿದೆ. ಭಾರೀ ಸೂಕ್ಷ್ಮ ಶಿಲೀಂಧ್ರ ಸೋಂಕಿನ ಕಾರಣದಿಂದ ದ್ಯುತಿಸಂಶ್ಲೇಷಣೆಯಲ್ಲಿ ಗಂಭೀರವಾದ ಕಡಿತವಾಗಬಹುದು, ಒಟ್ಟಾರೆ ಸಸ್ಯದ ಚಟುವಟಿಕೆ, ಹಣ್ಣು ಉತ್ಪಾದನೆ, ಮತ್ತು ಗುಣಮಟ್ಟಕ್ಕೆ ಪರಿಣಾಮ ಬೀರುತ್ತದೆ.

Recommendations

ಜೈವಿಕ ನಿಯಂತ್ರಣ

ನೈಸರ್ಗಿಕ ಶಿಲೀಂಧ್ರನಾಶಕಗಳಾಗಿ ಕಾರ್ಯನಿರ್ವಹಿಸುವ ಹಾಲು-ನೀರಿನ-ದ್ರಾವಣವನ್ನು, ಸೋಂಕು ಕಡಿಮೆಯಿರುವ ಸಂದರ್ಭದಲ್ಲಿ ಬಳಸಬಹುದು. ಅವುಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದಾಗಿದೆ ಮತ್ತು ಇದು ಶಿಲೀಂಧ್ರಗಳನ್ನು ತೊಳೆದುಹಾಕುತ್ತದೆ. ಈ ದ್ರಾವಣವನ್ನು ಎಲೆಗಳ ಮೇಲೆ ಎರಡು ದಿನಕ್ಕೊಮ್ಮೆ ಹಾಕಿ. ಸಿಲಿಕಾನ್ ಪೌಷ್ಟಿಕಾಂಶವನ್ನು ಹೊಂದಿರುವ ಸಿಂಪರಿಕೆಗಳೂ ಸಹ ಶಿಲೀಂಧ್ರದ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಪ್ರಮಾಣೀಕೃತ ಜೈವಿಕ ಸಲ್ಫರ್ ದ್ರಾವಣವನ್ನು ಮುಂಜಾಗ್ರತಾ ಕ್ರಮವಾಗಿ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕ್ವಿನೋಕ್ಸಿಫೆನ್, ಟ್ರೈಫ್ಲುಮಿಝೋಲ್, ಮೈಕ್ಲೊಬುಟನಿಲ್, ಮೈಕ್ರೋನೈಸ್ಡ್ ಸಲ್ಫರ್ ಅಥವಾ ಅಜೋಕ್ಸಿಸ್ಟ್ರೋಬಿಮ್ಗಳನ್ನು ಹೊಂದಿರುವ ಶಿಲೀಂಧ್ರನಾಶಕಗಳನ್ನು ಹಾಕಬಹುದು. ಆದಾಗ್ಯೂ, ಸೂಕ್ಷ್ಮ ಶಿಲೀಂಧ್ರವು ಶಿಲೀಂಧ್ರನಾಶಕಗಳಿಗೆ ಬೆಳೆಸಿಕೊಳ್ಳುವ ಪ್ರತಿರೋಧವು ಅಧಿಕ ಸಮಸ್ಯೆಯನ್ನೊಡ್ಡುತ್ತದೆ. ಮುಂಜಾಗ್ರತಾ ಕ್ರಮವಾಗಿ ಸಲ್ಫರ್ ಅನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ರೋಗಪೀಡಿತ ಸ್ಟ್ರಾಬೆರಿ ಎಲೆಗಳು ಅಥವಾ ಇತರ ಪರ್ಯಾಯ ರೋಗ ಪಡೆದುಕೊಳ್ಳದ ಸಸ್ಯಗಳ ಮೇಲೆ ಚಳಿಗಾಲವನ್ನು ಕಳೆಯುವ ಕಡ್ಡಾಯ ರೋಗಕಾರಕವಾದ ಪೊಡೋಸ್ಫೇರಾ ಅಫಾನೀಸ್ ಎಂಬ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಸೋಂಕಿತ ಕಸಿ ವಸ್ತುಗಳ ಮೂಲಕ ಇದು ಗದ್ದೆಯೊಳಗೆ ಸೇರಿಕೊಳ್ಳಬಹುದು. ಅನುಕೂಲಕರ ಪರಿಸ್ಥಿತಿಗಳಲ್ಲಿ, ಶಿಲೀಂಧ್ರವು ಬೆಳವಣಿಗೆಯನ್ನು ಪುನರಾರಂಭಿಸುತ್ತದೆ ಮತ್ತು ಬೀಜಕಗಳನ್ನು ಉತ್ಪತ್ತಿ ಮಾಡಲು ಆರಂಭಿಸುತ್ತದೆ, ಇದು ಆರೋಗ್ಯಕರ ಸಸ್ಯಗಳಿಗೆ ಗಾಳಿಯಿಂದ ಹರಡುತ್ತದೆ. ಜೋರಾಗಿ ಬೀಸುವ ಗಾಳಿಯ ಪರಿಸ್ಥಿತಿಗಳು, ಮಧ್ಯಮದಿಂದ ಅಧಿಕ ಆರ್ದ್ರತೆ, ಒಣಗಿದ ಎಲೆ ದಳಗಳು ಮತ್ತು 15-27 °C ನಡುವಿನ ತಾಪಮಾನವು ಅದರ ಜೀವನ ಚಕ್ರಕ್ಕೆ ಅನುಕೂಲಕರವಾಗಿರುತ್ತದೆ. ಶಿಲೀಂಧ್ರ ರೋಗಕಾರಕಗಳಲ್ಲಿರುವಂತೆ, ಇದರಲ್ಲಿ ಸೋಂಕು ಮತ್ತು ಕುಡಿಯೊಡೆಯುವ ಪ್ರಕ್ರಿಯೆಗೆ ಹರಿಯುವ ನೀರಿನ ಅಗತ್ಯವಿಲ್ಲ. ಸ್ಟ್ರಾಬೆರಿ ಗದ್ದೆಯಲ್ಲಿ ಹೆಚ್ಚಿನ ಆರ್ದ್ರತೆ ಹೊಂದಿರುವ ಉಷ್ಣ ತಾಪಮಾನವು ಹಣ್ಣಿನ ಮೇಲೆ ಸೂಕ್ಷ್ಮ ಶಿಲೀಂಧ್ರದ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಓವರ್ಹೆಡ್ ನೀರಾವರಿ, ಮಳೆ ಮತ್ತು ಇಬ್ಬನಿಯು ಈ ರೋಗದ ಬೆಳವಣಿಗೆ ಮತ್ತು ಹರಡುವಿಕೆಯನ್ನು ಪ್ರತಿಬಂಧಿಸುತ್ತದೆ, ಹೀಗಾಗಿ ಈ ರೋಗಕಾರಕವು ಹಸಿರುಮನೆಗಳು ಮತ್ತು ಎತ್ತರವಾದ ಸುರಂಗಗಳಲ್ಲಿ ಹೆಚ್ಚು ತೊಂದರೆಗಳನ್ನು ಉಂಟುಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ರೋಗದಿಂದ ಬೇಗ ಚೇತರಿಸಿಕೊಳ್ಳುವಂತಹ ಪ್ರಭೇದಗಳನ್ನು ನೆಡಿ.
  • ಸೂರ್ಯನ ಬೆಳಕು ಚೆನ್ನಾಗಿ ಬೀಳುವ, ಗಾಳಿಯಾಡುವ ಮತ್ತು ಕನಿಷ್ಠ ನೆರಳು ಇರುವ ಕೃಷಿ ಪ್ರದೇಶವನ್ನು ಆಯ್ಕೆಮಾಡಿ.
  • ಸಸ್ಯಗಳ ನಡುವೆ ಸಾಕಷ್ಟು ಅಂತರವನ್ನು ಬಿಡಿ.
  • ರೋಗಕಾರಕದ ಚಿಹ್ನೆಗಳಿಗೆ ಸ್ಟ್ರಾಬೆರಿ ಸಸ್ಯಗಳನ್ನು ಆಗಾಗ್ಗೆ ಪರಿಶೀಲಿಸಿ.
  • ಸಮತೋಲಿತ ಪೌಷ್ಟಿಕ ಪೂರೈಕೆಯನ್ನು ನೀಡಿ ಮತ್ತು ಹೆಚ್ಚಿನ ಸಾರಜನಕವನ್ನು ಹಾಕಬೇಡಿ.
  • ತೀವ್ರವಾದ ತಾಪಮಾನ ಬದಲಾವಣೆಯನ್ನು ತಪ್ಪಿಸಿ.
  • ಸುಗ್ಗಿಯ ನಂತರ ಎಲೆಗಳನ್ನು ಕತ್ತರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ