ಇತರೆ

ಡೌನಿ ಮಿಲ್ಡ್ಯೂ

Peronosporales

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲ್ಮೈಯಲ್ಲಿ ಹಳದಿ ಬಣ್ಣದ ಚುಕ್ಕೆಗಳು- ಇವುಗಳು ನಂತರ ಕಂದು ಬಣ್ಣದ ನಿರ್ಜೀವ ತೇಪೆಗಳಾಗಿ ಬೆಳೆಯುತ್ತವೆ.
  • ದಟ್ಟವಾದ, ಬಿಳಿಯಿಂದ ಬೂದು ಬಣ್ಣದ ಹತ್ತಿಯಂತಹ ಲೇಪ ಈ ಕಲೆಗಳ ಕೆಳಗೆ, ಎಲೆಗಳ ಕೆಳ ಮೇಲ್ಮೈ ಮೇಲೆ ಬೆಳೆಯುತ್ತದೆ.
  • ಎಲೆ ಉದುರುತ್ತದೆ.
  • ಎಳೆಯ ಚಿಗುರುಗಳು, ಹೂವುಗಳು, ಹಣ್ಣುಗಳು ಕುಬ್ಜವಾಗುತ್ತವೆ ಮತ್ತು ಸಾಯುತ್ತವೆ.
  • ಕುಂಠಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

10 ಬೆಳೆಗಳು

ಇತರೆ

ರೋಗಲಕ್ಷಣಗಳು

ಬೆಳೆಯುತ್ತಿರುವ ಚಿಗುರು ಎಲೆಗಳ ಮೇಲ್ಮೈಯಲ್ಲಿ ವಿಭಿನ್ನ ಗಾತ್ರದ ಹಳದಿ ಬಣ್ಣದ ಚದುರಿದ ಚುಕ್ಕೆಗಳು ಕಂಡುಬರುತ್ತವೆ. ಈ ಕಲೆಗಳು ದೊಡ್ಡದಾಗುತ್ತವೆ, ಮೊನಾಚಾಗುತ್ತವೆ ಮತ್ತು ನಾಳಗಳಿಂದ ವಿಂಗಡಿಸಲ್ಪಡುತ್ತವೆ. ಅವುಗಳ ಮಧ್ಯಭಾಗವು ಕಂದುಬಣ್ಣದ ವಿವಿಧ ಛಾಯೆಗಳೊಂದಿಗೆ ನಿರ್ಜೀವವಾಗುತ್ತವೆ. ಸಾಮಾನ್ಯವಾಗಿ ಬೆಚ್ಚನೆಯ, ಆರ್ದ್ರ ರಾತ್ರಿಗಳ ನಂತರ, ದಟ್ಟವಾದ, ಬಿಳಿಯಿಂದ ಬೂದು ಬಣ್ಣದ ಹತ್ತಿಯಂತಹ ಲೇಪ ಈ ಕಲೆಗಳ ಕೆಳಗೆ ಬೆಳೆಯುತ್ತದೆ. ಬಿಸಿಲು ಹೆಚ್ಚಿದಂತೆ ಇವು ಮಾಯವಾಗುತ್ತವೆ. ಹೊಸ ಚಿಗುರುಗಳು ಎಲೆ ಕಳೆದುಕೊಳ್ಳುತ್ತವೆ ಅಥವಾ ಬೆಳವಣಿಗೆ ಕುಂಠಿತವಾಗುತ್ತದೆ. ರೋಗ ಹಣ್ಣು ಮತ್ತು ಸಸ್ಯದ ಇತರ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ.

Recommendations

ಜೈವಿಕ ನಿಯಂತ್ರಣ

ಡೌನಿ ಮಿಲ್ಡ್ಯೂ ವಿರುದ್ಧ ಹೋರಾಡಲು ವಾಣಿಜ್ಯ ಸಾವಯವ ಚಿಕಿತ್ಸೆಗಳು ಲಭ್ಯವಿವೆ. ಅಲ್ಪ ಸೋಂಕಿನ ಸಂದರ್ಭಗಳಲ್ಲಿ, ಏನೂ ಮಾಡದೆ, ಹವಾಮಾನ ಸುಧಾರಿಸುವವರೆಗೂ ಕಾಯುವುದು ಉತ್ತಮ. ಇನ್ನೂ ಕೆಲವು ಸಂದರ್ಭಗಳಲ್ಲಿ, ಸೋಂಕು ಪೂರ್ವ ಸಾವಯವ ಶಿಲೀಂಧ್ರನಾಶಕಗಳು ಸಸ್ಯಗಳ ಸೋಂಕನ್ನು ತಪ್ಪಿಸಲು ಸಹಾಯ ಮಾಡಬಹುದು. ಇವುಗಳಲ್ಲಿ ಬೋರ್ಡೆಕ್ಸ್ ಮಿಶ್ರಣದಂತಹ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳು ಸೇರಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳು, ತಡೆಗಟ್ಟುವ ಕ್ರಮಗಳನ್ನು ಒಳಗೊಂಡಂತಹ ಸಮಗ್ರ ವಿಧಾನವನ್ನು ಪರಿಗಣಿಸಿ. ರಕ್ಷಿತ ಶಿಲೀಂಧ್ರನಾಶಕಗಳು ಸಸ್ಯಗಳ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಆದರೆ ಎಲೆಗಳ ಕೆಳಭಾಗದಲ್ಲಿ ಅವುಗಳನ್ನು ಸರಿಯಾಗಿ ಸಿಂಪಡಿಸಬೇಕು. ಡೈಥಿಯೋಕಾರ್ಬಮೇಟ್ ಗಳ ಕುಟುಂಬದ ಶಿಲೀಂಧ್ರನಾಶಕಗಳನ್ನು ಬಳಸಬಹುದು. ಮೊದಲ ರೋಗಲಕ್ಷಣಗಳು ಪತ್ತೆಯಾದ ಕೂಡಲೇ ಸೋಂಕಿನ ನಂತರ ಬಳಸುವ ಶಿಲೀಂಧ್ರನಾಶಕವನ್ನು ಬಳಸಬೇಕು. ಸಾಮಾನ್ಯವಾಗಿ ಬಳಸಲಾಗುವ ಸೋಂಕು ನಂತರದ ಶಿಲೀಂಧ್ರನಾಶಕಗಳೆಂದರೆ ಫೋಸೆಟೈಲ್-ಅಲ್ಯುಮಿನಮ್, ಅಝಾಕ್ಸಿಸ್ಟ್ರೊಬಿನ್ ಮತ್ತು ಫೆನಿಲ್ಯಾಮಿಡ್ಸ್(ಉದಾ - ಮೆಟಲಾಕ್ಸಿಲ್ -ಎಂ).

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಪೆರೋನೊಸ್ಪೊರೇಲ್ಸ್ ನ ಗುಂಪಿನ ಶಿಲೀಂಧ್ರಗಳಿಂದ ಉಂಟಾಗುತ್ತವೆ ಮತ್ತು ನಿಯಮಿತವಾಗಿ ಮಳೆ ಬೀಳುವ ಹಾಗು ಬೆಚ್ಚಗಿನ ತಾಪಮಾನ (15-23 °C) ಹೊಂದಿರುವ ನೆರಳಿನ ಪ್ರದೇಶಗಳಲ್ಲಿ ಅತೀ ಹೆಚ್ಚು ವಿನಾಶಕಾರಿಯಾಗಿರುತ್ತದೆ. ಈ ಶಿಲೀಂಧ್ರಗಳು ತಮ್ಮ ಆಶ್ರಯದಾತ ಸಸ್ಯಗಳಿಗೆ ಬಹಳ ಚೆನ್ನಾಗಿ ಹೊಂದಿಕೊಂಡಿವೆ. ಅಂದರೆ, ಪ್ರತೀ ಪ್ರಮುಖ ಬೆಳೆಗಳೂ ತಮ್ಮದೇ ಆದ ಶಿಲೀಂಧ್ರದ ಜಾತಿಗಳಿಗೆ ಆಶ್ರಯ ನೀಡುತ್ತವೆ. ಸೋಂಕಿತ ಸಸ್ಯದ ಕಸಕಡ್ಡಿಗಳಲ್ಲಿ ಅಥವಾ ಚಿಗುರುಗಳಲ್ಲಿ, ಮಣ್ಣಿನಲ್ಲಿ ಅಥವಾ ಪರ್ಯಾಯ ಆಶ್ರಯದಾತ ಗಿಡಗಳಲ್ಲಿ (ಬೆಳೆಗಳು ಮತ್ತು ಕಳೆಗಳು) ಈ ಶಿಲೀಂಧ್ರಗಳು ಚಳಿಗಾಲವನ್ನು ಕಳೆಯುತ್ತವೆ. ಅನುಕೂಲಕರ ಸಂದರ್ಭದಲ್ಲಿ, ಗಾಳಿ ಮತ್ತು ಮಳೆ ಬೀಜಕಗಳನ್ನು ಹರಡುತ್ತವೆ. ಬೀಜಕಗಳು ಮೊಳಕೆಯೊಡೆದು ಉತ್ಪಾದಿಸುವ ರಚನೆಗಳು, ಎಲೆಗಳ ಕೆಳಭಾಗದಲ್ಲಿನ ನೈಸರ್ಗಿಕ ರಂಧ್ರಗಳ ಮೂಲಕ ಎಲೆಯೊಳಗೆ ಪ್ರವೇಶಿಸುತ್ತವೆ. ಅಲ್ಲಿ ಇದು ಅಂಗಾಂಶಗಳ ಮೂಲಕ ಹರಡಲು ಆರಂಭಿಸುತ್ತದೆ. ಅಂತಿಮವಾಗಿ ಆಂತರಿಕ ಅಂಗಾಂಶಗಳನ್ನು ಮೀರಿ ಬೆಳೆದು, ಹೊರಭಾಗದಲ್ಲಿ ವಿಶಿಷ್ಟವಾದ ಶಿಲೀಂಧ್ರದ ಹೊದಿಕೆಯಾಗಿ ಹೊರಹೊಮ್ಮುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದಲ್ಲಿ ನಿರೋಧಕ ಪ್ರಭೇದಗಳನ್ನು ಆಯ್ಕೆ ಮಾಡಿ.
  • ನಿಮ್ಮ ಸಸ್ಯದಲ್ಲಿ ತೇವವಿಲ್ಲದಂತೆ ನೋಡಿಕೊಳ್ಳಿ.
  • ಉದಾಹರಣೆಗೆ ಸರಿಯಾಗಿ ಗಾಳಿಯಾಡುವ ಮೂಲಕ.
  • ಮಣ್ಣಿನಲ್ಲಿ ನೀರು ಚೆನ್ನಾಗಿ ಬಸಿಯುವಂತೆ ನೋಡಿಕೊಳ್ಳಿ.
  • ಸಸ್ಯದ ಜೀವಂತಿಕೆಗಾಗಿ ಸಮತೋಲಿತ ರಸಗೊಬ್ಬರ ಬಳಕೆ ಇರುವಂತೆ ನೋಡಿಕೊಳ್ಳಿ.
  • ಸಸ್ಯಗಳ ನಡುವೆ ಉತ್ತಮ ಅಂತರವನ್ನು ಒದಗಿಸಿ.
  • ಸೂರ್ಯನ ಕಿರಣ ಚೆನ್ನಾಗಿ ಬೀಳುವ ಸ್ಥಳಗಳಲ್ಲಿ ಸಸಿಗಳನ್ನು ನೆಡಿ ಮತ್ತು ಸರಿಯಾದ ದಿಕ್ಕನ್ನು ಆರಿಸಿ.
  • ಜಮೀನು ಮತ್ತು ಸುತ್ತಲೂ ಕಳೆಗಳನ್ನು ನಿಯಂತ್ರಿಸಿ.
  • ಕೃಷಿ ಭೂಮಿಯಿಂದ ಸಸಿಗಳ ಕಸಗಳನ್ನು ತೆಗೆದುಹಾಕಿ.
  • ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ.
  • ಸೋಂಕಿತ ಮಣ್ಣು ಮತ್ತು ಸಸ್ಯ ಸಾಮಾಗ್ರಿಗಳ ವಿತರಣೆಯನ್ನು ತಪ್ಪಿಸಿ.
  • ಸಸ್ಯದ ಆರೋಗ್ಯವನ್ನು ಬಲಪಡಿಸಲು ಫೋರ್ಟಿಫೈಯರ್ ಗಳನ್ನು ಬಳಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ