ಮಳೆ ಹೆಚ್ಚಾದ ಪರಿಣಾಮ ತೇವಾಂಶ ಹೆಚ್ಚಾಗಿ ಟೊಮೊಟೊ ಗಿಡಗಳು ಹಳದಿಯಾಗುತ್ತಿವೆ ಮತ್ತು ಹೂಗಳು ಉದುರುತ್ತಿವೆ.....
ಮಳೆ ಹೆಚ್ಚಾದ ಪರಿಣಾಮ ತೇವಾಂಶ ಹೆಚ್ಚಾಗಿ ಟೊಮೊಟೊ ಗಿಡಗಳು ಹಳದಿಯಾಗುತ್ತಿವೆ ಕಾಯಿಗಳು ಮತ್ತು ಹೂಗಳು ಉದುರುತ್ತಿವೆ......ದಯವಿಟ್ಟು ಉತ್ತಮ ಇಳುವರಿ ಪಡೆಯಲು ಉತ್ತಮವಾದ ಔಷಧಿಯ ಹೆಸರನ್ನು ಹೇಳಿ..
Suresh 173587
3 ವರ್ಷಗಳ ಹಿಂದೆ
ಹೆಲೋ Raghu. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ. ಮಳೆ ಜಾಸ್ತಿ ಆಗಿ ಹೊಲದಲ್ಲಿ ನೀರು ನಿಂತರೆ, ತಕ್ಷಣ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಈ ಕ್ರಮವನ್ನು ಮಳೆ ನಿಳುವವರೆಗೆ ಅನುಸರಿಸುವುದು ಒಳ್ಳೆಯದು. ಇದರಿಂದ ನೀರು ನಿಲ್ಲುವುದು ಕಡಿಮೆಯಾದಂತೆ, ಮತ್ತೆ ಗಿಡಗಳು ಚೇತರಿಕೆ ಕಂಡು, ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಜೊತೆಗೆ ಈ ಚಿತ್ರದ ಪ್ರಕಾರವಾಗಿ, ತಮ್ಮ ಟೊಮೆಟೊ ಬೆಳೆಗೆ ತೀವ್ರಗತಿಯಲ್ಲಿ Phosphorus Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಮಗೆ ಗೋತ್ತಿರುವಂತೆ, ಟೊಮೆಟೋ ಬೆಳೆಯ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ಪಡೆಯಲು, ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ತಮ್ಮ ಭಾಗದ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!