ಕರಿಹೇನು ರೋಗ(ಅಫಿಡ್) - ಪಪ್ಪಾಯಿ

ಪಪ್ಪಾಯಿ ಪಪ್ಪಾಯಿ

M

ನಮಸ್ಕಾರ ‌ಸರ್ ನನ್ನ ಪಪ್ಪಾಯಿ ಎಲೆಗಳು ಹಳದಿ ಬಣ್ಣದ ಹಾಗೆ ಸಂಪೂರ್ಣವಾಗಿ ಹರಡಿದೆ

ನಮಸ್ಕಾರ ‌ಸರ್ ನನ್ನ ಪಪ್ಪಾಯಿ ಎಲೆಗಳು ಹಳದಿ ಬಣ್ಣದ ಹಾಗೆ ಸಂಪೂರ್ಣವಾಗಿ ಹರಡಿದೆ‌ ಹಾಗೂ ಎಲೆಗಳು ವನಗತಿದಾವೆ ದಯಮಾಡಿ ಪರಿಹಾರ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mahammadsadik Huddar. ಗಿಡಗಳ ಎಲೆಗಳು ಸರಿಯಾಗಿ ತಿರುಗಿಸಿ ನೋಡಿರಿ. ಈ ಚಿತ್ರದ ಪ್ರಕಾರವಾಗಿ ತಮ್ಮ ಪಾಪಯ ಬೆಳೆಗೆ Papaya Leaf Curl Virus ರೋಗ ತಗುಲಿದೆ ಅನಿಸುತ್ತಿದೆ. ಈ ರೋಗವು ರೋಗವಾಹಕಗಳಾದ Aphids ಕೀಟಗಳಿಂದ ಹರಡುವುದರಿಂದ, ತಾವು ಮೊದಲು Aphids ಕೀಟದ ಹತೋಟಿಯ ಕ್ರಮಗಳು ಅನುಸರಿಸಿರಿ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಇಂಥಾ ಗಿಡಗಳು ಆದಷ್ಟು ಕಿತ್ತು ತೆಗೆದು ಸುಟ್ಟು ಹಾಕುವುದು ಒಳ್ಳೆಯದು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

Hi Mahammadsadik Huddar as per your it seems Papaya Leaf Curl Virus

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
C

ಬಿಳಿ ತೈಲ ಎಂದರೆ ಯಾವ ರೀತಿಯ ಔಷಧ ತಿಳಿಸಿ Suresh Gollar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ C Manjunatha. ಬಿಳಿ ತೈಲ ಎಂದರೆ - ಸಾಮಾನ್ಯ ಅಡುಗೆ ಎಣ್ಣೆ ಮತ್ತು ಸಾಬೂನು ದ್ರಾವಣದ ಮಿಶ್ರಣ. ಅಂದರೆ, ಈ ಮಿಶ್ರಣ ತಾವೂ ಕೂಡ ಈ ಕೆಳಗಿನಂತೆ ತಯಾರಿಸಿಕೊಳ್ಳಬಹುದು: ಖಾಲಿ ಜಾರ್ ಅಥವಾ ಪ್ಲಾಸ್ಟಿಕ್ ಬಾಟಲಿಯನ್ನು ತೆಗೆದುಕೊಂಡು, ಒಂದು ಕಪ್ ಸಾಮಾನ್ಯ ಅಡುಗೆ ಎಣ್ಣೆ ಮತ್ತು ¼ ಕಪ್ ಪಾತ್ರೆ ತೊಳೆಯುವ ದ್ರವವನ್ನು ಸುರಿಯಿರಿ. ಇದಕ್ಕೆ ಉತ್ತಮವಾಗಿ ಶೇಕ್ ಮಾಡಿರಿ - ಅದು ಬಿಳಿಯಾಗಿರುವುದನ್ನು ನೀವು ನೋಡುತ್ತೀರಿ. ಅದು ನಿಮ್ಮ ಬಿಳಿ ಎಣ್ಣೆ ಸಾಂದ್ರತೆಯಾಗಿರುತ್ತದೆ. ಸರಿಯಾದ ದುರ್ಬಲಗೊಳಿಸುವ ದರದೊಂದಿಗೆ ಧಾರಕವನ್ನು ಲೇಬಲ್ ಮಾಡಿ - 'ಪ್ರತಿ ಲೀಟರ್ ನೀರಿಗೆ ಒಂದು ಚಮಚ' ಹಾಕಿ ಉಪಯೋಗಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ