ಪಪ್ಪಾಯಿ ಗಿಡದ ಎಲೆಗಳು ಹಳದಿ ಹಾಗೂ ಬೆಳವನಿಗೆ ನಿಧಾನ ಆಗುತ್ತಿದೆ
ನನ್ನ ಪಪ್ಪಾಯಿ ಗಿಡದ ಎಲೆಗಳು ಹಳದಿ ಬನ್ನ ಹಾಗು ಗಿಡದ ಬೆಳವನಿಗೆ ಸರಿಯಾಗಿ ಆಗುತ್ತಿಲ್ಲ ನಾನ ಸಾಕಷ್ಟು ಬಾರಿ ಕೆಳಿದರು ಸಮಂಜಸವಾದ ಉತ್ತರ ಅಥವಾ ಪರಿಹಾರ ಸಿಗುತ್ತಿಲ್ಲ ಇದಕ್ಕೆ ಸಮಂಜಸವಾದ ಔಷದಗಳು ಅಥವಾ ಗೊಬ್ಬರಗಳು ಇದ್ದರೆ ದಯಮಾಡಿ ಬೆಗನೆ ಪರಿಹಾರ ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ Mahammadsadik Huddar. ತಮ್ಮ ಪಾಪಯ ಬೆಳೆಗೆ ತೀವ್ರಗತಿಯಲ್ಲಿ Iron Deficiency ಮತ್ತು Potassium Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಮ್ಮ ಮಣ್ಣು ಪರೀಕ್ಷೆ ಆಧಾರದ ಮೇಲೆ ಸಿಫಾರಸ್ಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು ಅಥವಾ ತಮ್ಮ ಪ್ಲ್ಯಾಂಟಿಕ್ಸನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ ರಸಗೋಬ್ಬರ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ಜೊತೆಗೆ ಬೆಳೆಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಪ್ರತಿ 6 ತಿಂಗಳಿಗೆ ಒಂದು ಸಾರಿಯಂತೆ ತಪ್ಪದೇ ಕೊಡಬೇಕು. ಪ್ರಯತ್ನಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!