ಹತ್ತಿಯ ಜಿಗಿ ಹುಳು ಜಾಸ್ಸಿಡ್ - ಹತ್ತಿ

ಹತ್ತಿ ಹತ್ತಿ

S

ಜಾಸ್ತಿ ಮಳೆಯಿಂದ ಈ ತರಹ ಕಾಣುತ್ತಿದೆ ಇದಕ್ಕೆ ಪರಿಹಾರ ಹೇಳಿ

ಎಲೆ ಕಟ್ಟಾಗಿದೆ & ಬೆಳೆ ಲಕ್ಷಣ ಕಡಿಮೆ ಇದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shivu Totad. ಈ ಚಿತ್ರದ ಪ್ರಕಾರವಾಗಿ ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ ರಸ ಹೀರುವ ಕೀಟಗಳಾದ Thrips, Whiteflies ಮತ್ತು Cotton Leafhopper Jassids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಸರಿಯಾಗಿ ಎಲೆಗಳು ತಿರುಗಿಸಿ ನೋಡಿರಿ ಮತ್ತು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಮಳೆ ಹೆಚ್ಚಾದರೆ, ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇದರಿಂದ ಗಿಡಗಳು ಮತ್ತೆ ಚೇತರಿಕೆ ಕಂಡು, ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಇಲ್ಲದಿದ್ದರೆ, ಕೆಲವೊಂದು ಸಲ ಸಂಪೂರ್ಣ ಬೆಳೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
J

ಮಳೆ ಜಾಸಿ ಆಗಿ ಗೀಡ ಬೇಳಿಯೂತೀಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ J Siddaiah Swamy. ಮೊದಲನೆಯದಾಗಿ, ಮಳೆ ಜಾಸ್ತಿ ಆದರೆ, ತಮ್ಮ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇಲ್ಲದಿದ್ದರೆ ಎಲ್ಲಾ ಬೆಳೆ ಬೇರು ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈಗ ಈ ಚಿತ್ರದ ಪ್ರಕಾರವಾಗಿ ತಮ್ಮ ಹತ್ತಿ ಬೆಳೆಗೆ Anthracnose of Cotton, Leaf Reddening of Cotton ಮತ್ತು Whiteflies ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ಕೊಟ್ಟಿರುವ ಹತ್ತಿ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ