ಬಾಳೆಗಿಡಕ್ಕೆ ಕಿಡಿ ಹುಳಗಳು ಹರಡುತ್ತಿವೆ ಹಾಗೂ ಗಿಡಗಳು ಕೆಂಪು ಬಣ್ಣದಲ್ಲಿ ಇರುವುದು
ಮೊಟ್ಟ ಮೊದಲ ಸಾರಿ ನಾನು ಸುಮಾರು ಆರುನೂರು ಬಾಳೆ ಗಿಡಗಳನ್ನೂ ನೆಟ್ಟಿದ್ದೇನೆ ಅದರಲ್ಲಿ ಕೆಲವಷ್ಟೇ ಗಿಡಗಳು ಮಾತ್ರ ಕೆಂಪು ಬಣ್ಣಕ್ಕೆ ತಿರುಗುತ್ತಿವೆ ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ. ಯಾವ ಕಾರಣಕ್ಕೆ ಈ ತೊಂದರೆ ಉಂಟಾಗುತ್ತಿದೆ,ದಯವಿಟ್ಟು ಪರಿಶೀಲಿಸಿ...
Suresh 173587
5 ವರ್ಷಗಳ ಹಿಂದೆ
ಹೆಲೋ Vishwanath Reddy Gowda. ತಮ್ಮ ಬಾಳೆ ಬೆಳೆಗೆ Cut Worm on Banana ಕೀಟ ಮತ್ತು Calcium Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಇದಲ್ಲದೆ, ಬಾಳೆ ಗಿಡಗಳು ಹೆಚ್ಚು ಪೋಷಕಾಂಶಗಳನ್ನು ಕೇಳುವ ಬೆಳೆಯಾಗಿದ್ದು, ತಮ್ಮ ಭಾಗದ ಮಣ್ಣು, ತಳಿ ಮತ್ತು ವಾತಾವರಣಕ್ಕೆ ಅನುಗುಣವಾಗಿ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡಬೇಕು. ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಆದುದರಿಂದ ತಾವು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ತಮ್ಮ ಭಾಗದ ಸಿಫಾರಸ್ಸಿನ ಗೊಬ್ಬರ ಪ್ರಮಾಣವನ್ನು ತಿಳಿದುಕೊಂಡು, ಈ ಗೊಬ್ಬರಗಳು ಹಂತ ಹಂತವಾಗಿ ಸಿಫಾರಸ್ಸಿನ ಪ್ರಮಾಣದಲ್ಲಿ ಕೊಡಬೇಕು. ಆದಾಗ್ಯೂ ನಾನು ತಮ್ಮ ಅನುಕೂಲತೆಗಾಗಿ ಇಲ್ಲಿ ರಾಸಾಯನಿಕ ಗೊಬ್ಬರಗಳ ಕೋಷ್ಟಕವನ್ನು ಲಗತ್ತಿಸಿದೇನೆ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Sachin 3
5 ವರ್ಷಗಳ ಹಿಂದೆ
9008425636
Suresh 173587
5 ವರ್ಷಗಳ ಹಿಂದೆ
ಹೆಲೋ Sachin Kenganal. ತಾವು ತಮ್ಮ ಮೋಬೈಲ್ ನಂಬರ ಕೊಟ್ಟು, ತಮ್ಮ ವೈಯಕ್ತಿಕ ಉತ್ಪನ್ನಗಳನ್ನು ಇಲ್ಲಿ ಪ್ರಚಾರ ಮಾಡಬೇಡಿ. ಇದು ತಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಧನ್ಯವಾದಗಳು.