ಕೃಷಿಯಲ್ಲಿನ ಡಿಜಿಟಲ್ ರೂಪಾಂತರವನ್ನು ನೈಸರ್ಗಿಕವಾಗಿ ಮತ್ತು ಆರ್ಥಿಕವಾಗಿ ಸುಸ್ಥಿರವಾದ ಕೃಷಿಯತ್ತ ಮುನ್ನಡೆಸುವುದು.
ಕಳೆದ ಕೆಲವು ವರ್ಷಗಳಿಂದ, ಪ್ಲಾಂಟಿಕ್ಸ್ ಡಿಜಿಟಲ್ ಸಸ್ಯ ರೋಗನಿರ್ಣಯ ಮತ್ತು ಕೃಷಿ ತಜ್ಞ ಎಂದು ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ಇಂದು, ನಾವು ನಮ್ಮ ಎರಡು ಅಪ್ಲಿಕೇಶನ್‌ಗಳಾದ ಪ್ಲಾಂಟಿಕ್ಸ್ ಮತ್ತು ಪ್ಲಾಂಟಿಕ್ಸ್ ಪಾರ್ಟ್ನರ್ ಬಳಸಿ ಒಂದು ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ಸಣ್ಣ ಪ್ರಮಾಣದ ರೈತರು ಮತ್ತು ಪೂರೈಕೆದಾರರ ನಡುವೆ ಸಂಪರ್ಕ ಏರ್ಪಡಿಸುತ್ತೇವೆ. ನಮ್ಮ ಪ್ರಾಥಮಿಕ ಗುರಿಳೆಂದರೆ ಕಸ್ಟಮೈಸ್ ಮಾಡಿದ ಪರಿಹಾರಗಳು, ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ವಿಶ್ವಾಸಾರ್ಹ ಸೇವೆಗಳನ್ನು ಒದಗಿಸುವುದು. ನಾವು ಈಗಾಗಲೇ ರೈತರ ಲಕ್ಷಾಂತರ ಕೃಷಿ ಮತ್ತು ಬೆಳೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಮತ್ತು ಸಾವಿರಾರು ಚಿಲ್ಲರೆ ವ್ಯಾಪಾರಿಗಳೊಂದಿಗೆ ಡಿಜಿಟಲ್ ಸಂಪರ್ಕವನ್ನು ಹೊಂದಿದ್ದೇವೆ.
ಕಸ್ಟಮೈಸ್ ಮಾಡಿದ ಪರಿಹಾರಗಳು, ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ವಿಶ್ವಾಸಾರ್ಹ ಸೇವೆಗಳು ನಮ್ಮ ಪ್ರಾಥಮಿಕ ಗುರಿಗಳಾಗಿವೆ. 2022 ರಲ್ಲಿ, ನಾವು ರೈತರ 50 ದಶಲಕ್ಷಕ್ಕೂ ಹೆಚ್ಚು ಸಾಗುವಳಿ ಮತ್ತು ಬೆಳೆ-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ ಮತ್ತು 100,000 ಕ್ಕೂ ಹೆಚ್ಚು ರಿಟೇಲ್ ವ್ಯಾಪಾರಿಗಳೊಂದಿಗೆ ಡಿಜಿಟಲ್ ಮೂಲಕ ಸಂಪರ್ಕ ಏರ್ಪಡಿಸಿದ್ದೇವೆ.
134,000 ದೈನಂದಿನ ಸಕ್ರಿಯ ಅಪ್ಲಿಕೇಶನ್ ಬಳಕೆದಾರರು
ಪ್ರತಿ 1,5 ಸೆಕೆಂಡಿಗೆ 1 ರೋಗನಿರ್ಣಯ
177 ದೇಶಗಳು ಮತ್ತು 18 ಭಾಷೆಗಳಲ್ಲಿ ಲಭ್ಯವಿದೆ
40+ ಬ್ರಾಂಡ್‌ಗಳು ಮತ್ತು 1000+ ಉತ್ಪನ್ನಗಳನ್ನು ತಲುಪಿಸುತ್ತಿದೆ
10 ಭಾರತೀಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ
100,000+ ರಿಟೇಲರ್ ಗಳ ವಿಶ್ವಾಸ ಗಳಿಸಿದೆ
250+ ಪ್ಲಾಂಟಿಕ್ಸ್ ಉದ್ಯೋಗಿಗಳು
ಕಚೇರಿಗಳು ಇಲ್ಲಿವೆ:
ಬರ್ಲಿನ್ · ಇಂದೋರ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಸಹ-ಸಂಸ್ಥಾಪಕರಾಗಿ ಸೈಮನ್ ಸ್ಟ್ರೇ, ಕೃಷಿಯಲ್ಲಿನ ಡಿಜಿಟಲ್ ರೂಪಾಂತರವನ್ನು ನೈಸರ್ಗಿಕವಾಗಿ ಮತ್ತು ಆರ್ಥಿಕವಾಗಿ ಸುಸ್ಥಿರವಾದ ವ್ಯವಸಾಯದತ್ತ ಕರೆದೊಯ್ಯುವ ನಿಟ್ಟಿನಲ್ಲಿ ಪ್ಲಾಂಟಿಕ್ಸ್ ಅನ್ನು ಮುಂಚೂಣಿಗೆ ತರಲು ಯತ್ನಿಸುತ್ತಿದ್ದಾರೆ.
ಸೈಮನ್ ಲೈಬ್ನಿಜ್ ವಿಶ್ವವಿದ್ಯಾಲಯ ಹ್ಯಾನೋವರ್ ನಿಂದ ಭೂಗೋಳಶಾಸ್ತ್ರದಲ್ಲಿ ಎಂ.ಎಸ್ ಪಡೆದಿದ್ದಾರೆ. ಅವರ ವೃತ್ತಿಜೀವನವು ಅವರನ್ನು ಬರ್ಲಿನ್, ಅಮೆಜಾನ್ ಮಳೆಕಾಡುಗಳಿಂದ ಪಶ್ಚಿಮ ಆಫ್ರಿಕಾ, ಗಾಂಬಿಯಾ ಮತ್ತು ಭಾರತಕ್ಕೆ ಕರೆದೊಯ್ದಿತು. ಅಲ್ಲಿ ಅವರು ಸಣ್ಣ ಪ್ರಮಾಣದ ರೈತರ ಅಗತ್ಯಗಳ ಬಗ್ಗೆ ಪ್ರತ್ಯಕ್ಷ ಅನುಭವ ಮತ್ತು ತಿಳುವಳಿಕೆಯನ್ನು ಪಡೆದರು.
ನೀರು, ಕೃಷಿ ಮತ್ತು ಇಂಧನ ಮೂಲಸೌಕರ್ಯಗಳಲ್ಲಿ ಸ್ವಾವಲಂಬಿ ತಾಂತ್ರಿಕ ಪರಿಹಾರಗಳನ್ನು ಸೃಷ್ಟಿಸಲು ಸೈಮನ್, ಗ್ರೀನ್ ಡೆಸರ್ಟ್ ಇವಿ ಎಂಬ ಸರ್ಕಾರೇತರ ಸಂಸ್ಥೆಯನ್ನು ಯಶಸ್ವಿಯಾಗಿ ನಿರ್ಮಿಸಿದ್ದರು.
ಪ್ಲಾಂಟಿಕ್ಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಮತ್ತು ಸಹ-ಸಂಸ್ಥಾಪಕರಾದ ರಾಬರ್ಟ್ ಸ್ಟ್ರೇ, ಪ್ಲಾಂಟಿಕ್ಸ್‌ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃಷಿ ಡೇಟಾಬೇಸ್‌ನ ವಾಸ್ತುಶಿಲ್ಪಿ. ರಾಬರ್ಟ್ ಲೈಬ್ನಿಜ್ ಯೂನಿವರ್ಸಿಟಿ ಹ್ಯಾನೋವರ್‌ನಿಂದ ಭೂಗೋಳಶಾಸ್ತ್ರದಲ್ಲಿ ಎಂ.ಎಸ್. ಪಡೆದಿದ್ದಾರೆ.
ಪ್ಲಾಂಟಿಕ್ಸ್‌ನಲ್ಲಿ ಅವರಿಗಿರುವ ಪ್ರಮುಖ ಗುರಿಯೆಂದರೆ ಪರಿಣಾಮಕಾರಿ, ಲಾಭದಾಯಕ ಮತ್ತು ಸುರಕ್ಷಿತ ತಾಂತ್ರಿಕ ಸಂಪನ್ಮೂಲಗಳನ್ನು ಬಳಸುವ ಕಂಪನಿಯ ಕಾರ್ಯತಂತ್ರವನ್ನು ಸ್ಥಾಪಿಸುವುದು ಮತ್ತು ಹೊಸ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಾರ್ಯಗತಗೊಳಿಸುವುದು.