ಟೊಮೆಟೊ

ಎಡಿಮಾ

Transpiration disorder

ಇತರೆ

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು ಮತ್ತು ಹಣ್ಣುಗಳ ಮೇಲೆ ಗುಳ್ಳೆಗಳು.
  • ದುರ್ಬಲವಾದ ಎಲೆಗಳು.

ಇವುಗಳಲ್ಲಿ ಸಹ ಕಾಣಬಹುದು


ಟೊಮೆಟೊ

ರೋಗಲಕ್ಷಣಗಳು

ಎಲೆಗಳ ಕೆಳಭಾಗದಲ್ಲಿ ನೀರಿನಲ್ಲಿ-ನೆನೆಸಿದಂತಹ ಗುಳ್ಳೆಗಳು ಮತ್ತು ಹಳದಿ ಕಲೆಗಳು. ಇದರಿಂದ ಎಲೆಗಳ ಅಸಾಮಾನ್ಯವಾಗಿ ಸುರುಳಿಯಾಗಬಹುದು. ಕಾಂಡಗಳು ಮತ್ತು ಹಣ್ಣುಗಳ ಮೇಲೆ ಗುಳ್ಳೆಗಳು ಉಂಟಾಗಬಹುದು. ಎಲೆಗಳು ಬಾಡಬಹುದು ಮತ್ತು ಮುಟ್ಟಿದಾಗ ಬಿರುಕು ಬಿಡಬಹುದು. ಏಕೆಂದರೆ ಗುಳ್ಳೆಗಳು ಎಲೆಯ ರಚನೆಯನ್ನು ದುರ್ಬಲಗೊಳಿಸುತ್ತವೆ. ಎಡಿಮಾವು ಸಾಮಾನ್ಯವಾಗಿ ಸಸ್ಯದ ಒಟ್ಟಾರೆ ಆರೋಗ್ಯಕ್ಕೆ ಹಾನಿಯಾಗದಿದ್ದರೂ, ಇದು ತರಕಾರಿಗಳನ್ನು ಮಾರಾಟಕ್ಕೆ ಸೂಕ್ತವಲ್ಲದಂತೆ ಮಾಡುತ್ತದೆ, ಇದರಿಂದ ಆರ್ಥಿಕ ನಷ್ಟವಾಗುತ್ತದೆ. ಪರಿಸ್ಥಿತಿಗಳು ಸರಿಯಾಗಿದ್ದರೆ ತರಕಾರಿ ಬೆಳೆಗಳ ಎಲ್ಲಾ ಮೃದುವಾದ ಭಾಗಗಳು ಎಡಿಮಾಗೆ ತುತ್ತಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಸಮಸ್ಯೆಯು ಕೀಟ ಅಥವಾ ರೋಗವಲ್ಲ; ಆದ್ದರಿಂದ, ಸಾವಯವ ನಿಯಂತ್ರಣ ಅಗತ್ಯವಿಲ್ಲ ಅಥವಾ ಸೂಕ್ತವಲ್ಲ.

ರಾಸಾಯನಿಕ ನಿಯಂತ್ರಣ

ಈ ಸಮಸ್ಯೆಯು ಕೀಟ ಅಥವಾ ರೋಗವಲ್ಲ; ಆದ್ದರಿಂದ, ರಾಸಾಯನಿಕ ನಿಯಂತ್ರಣ ಅಗತ್ಯವಿಲ್ಲ ಅಥವಾ ಸೂಕ್ತವಲ್ಲ.

ಅದಕ್ಕೆ ಏನು ಕಾರಣ

ಅತಿಯಾಗಿ ನೀರುಹಾಕುವುದು, ಮಣ್ಣಿನಲ್ಲಿ ಸೂಕ್ತ ಗುಂಡಿ ಮಾಡದಿರುವುದು, ಶೀತ ಮತ್ತು ಮೋಡ ದಿನಗಳು, ಹೆಚ್ಚಿನ ಆರ್ದ್ರತೆ. ಸಸ್ಯಗಳು ನೀರನ್ನು ಬಾಷ್ಪಿಸುವುದಕ್ಕಿಂತ ವೇಗವಾಗಿ ಅದನ್ನು ಹೀರಿಕೊಂಡಾಗ ಎಡಿಮಾ ತಗುಲುತ್ತದೆ. ಸಾಮಾನ್ಯವಾಗಿ ಸಾಕಷ್ಟು ಬೆಳಕು ಇಲ್ಲದ ಮೋಡಕವಿದ ವಾತಾವರಣ, ಹೆಚ್ಚಿನ ಆರ್ದ್ರತೆ ಅಥವಾ ಸೀಮಿತ ಗಾಳಿಯಿರುವ ದಿನಗಳಲ್ಲಿ ಅತಿಯಾಗಿ ನೀರುಹಾಕುವುದು. ಎಲೆಕೋಸು ಮತ್ತು ಟೊಮೆಟೊಗಳು ಈ ಸ್ಥಿತಿಗೆ ವಿಶೇಷವಾಗಿ ಒಳಗಾಗುತ್ತವೆ, ಅದರಲ್ಲೂ ನೀರಿನಿಂದ ತುಂಬಿದ ಮಣ್ಣಿನಲ್ಲಿ. ಎಡಿಮಾದಿಂದ ಉಂಟಾಗುವ ಗುಳ್ಳೆಗಳು ಹವಾಮಾನ ಪರಿಸ್ಥಿತಿಗಳು ಸುಧಾರಿಸಿದರೂ ಸಹ ಇರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಅತಿಯಾಗಿ ನೀರುಹಾಕಬೇಡಿ, ವಿಶೇಷವಾಗಿ ತಂಪಾದ ಮತ್ತು ಮೋಡ ಕವಿದ ದಿನಗಳಲ್ಲಿ ಸಸ್ಯಗಳನ್ನು ಸ್ವಲ್ಪ ಒಣಗಿಸಬೇಕು.
  • ಸಸ್ಯಗಳ ನಡುವೆ ಗಾಳಿಯಾಡುವ ಸಲುವಾಗಿ ವಾತಾಯನವನ್ನು ಹೆಚ್ಚಿಸಿ ಮತ್ತು ಸಸ್ಯಗಳನ್ನು ಒಂದಕ್ಕೊಂದು ಅಂಟಿಕೊಂಡಂತೆ ನೆಡಬೇಡಿ.
  • ಹವಾಮಾನ ಪರಿಸ್ಥಿತಿಗಳು ಎಡಿಮಾಗೆ ಅನುಕೂಲಕರವಾದಾಗ ನೀರುಹಾಕುವುದನ್ನು ಕಡಿಮೆ ಮಾಡಿ ಆದರೆ ಸಸ್ಯಗಳು ಸಂಪೂರ್ಣವಾಗಿ ಒಣಗಲು ಬಿಡಬೇಡಿ.
  • ಯಾವಾಗಲೂ ಬೆಳಿಗ್ಗೆ ಮಾತ್ರ ನೀರು ಹಾಕಿ.
  • ಅತಿಯಾದ ಗೊಬ್ಬರವನ್ನು ಹಾಕಬೇಡಿ, ವಿಶೇಷವಾಗಿ ನಿಧಾನ ಬೆಳವಣಿಗೆಯ ಅವಧಿಯಲ್ಲಿ.
  • ಮಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಮಟ್ಟಗಳಿಗೆ ಗಮನ ಕೊಡಿ, ಏಕೆಂದರೆ ಈ ಅಂಶಗಳು ಸಸ್ಯ ಅಂಗಾಂಶಗಳ ಸ್ಥಿರತೆಗೆ ಸಹಾಯ ಮಾಡುತ್ತವೆ.
  • ಕೆಲವು ಸಸ್ಯ ಪ್ರಭೇದಗಳು ಎಡಿಮಾಗೆ ಹೆಚ್ಚು ನಿರೋಧಕವಾಗಿರಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ