Herbicides Cell Membrane Disruptors
ಇತರೆ
ರೋಗಲಕ್ಷಣಗಳು ಬಳಸಿದ ಕಳೆನಾಶಕ, ಸಿಂಪಡಣೆ ಸಮಯ ಮತ್ತು ಡೋಸೇಜ್ ಅನ್ನು ಅವಲಂಬಿಸಿರುತ್ತವೆ. ಸಾಮಾನ್ಯವಾಗಿ, ಎಲೆಗಳಲ್ಲಿ ನೀರಿನಲ್ಲಿ ನೆನೆಸಿದಂತಹ ಗಾಯಗಳನ್ನು ಕಾಣಬಹುದು. ಅದು ನಂತರ ಒಣಗುತ್ತದೆ. ಚಿಗುರೊಡೆಯುವ ಮೊದಲೇ ಬಳಸಿದರೆ ಅಂಗಾಂಶವನ್ನು ಸುಡುವುದು ಅಥವಾ ವಿಫಲ ಚಿಗುರುವಿಕೆ ಈ ಕಳೆನಾಶಕಗಳ ಲಕ್ಷಣಗಳಾಗಿವೆ. ಕಳೆಗಳು ಚಿಗುರಿದ ನಂತರ ಸಿಂಪಡಣೆ ಮಾಡಿದಾಗ, ಅವುಗಳು ಮಚ್ಚೆಯ ಮಾದರಿಯಲ್ಲಿ ಸುಡುವಿಕೆಗೆ ಕಾರಣವಾಗಬಹುದು. ಇದನ್ನು ಪ್ಯಾರಾಕ್ವಾಟ್ ಗಾಯ ಎಂದು ತಪ್ಪಾಗಿ ತಿಳಿಯಬಹುದು. ಆದರೆ ಇದರಲ್ಲಿ ಕಂಚಿನ ಬಣ್ಣ ಬರುವುದಿಲ್ಲ.
ಈ ಸ್ಥಿತಿಗೆ ಯಾವುದೇ ಜೈವಿಕ ಚಿಕಿತ್ಸೆ ಲಭ್ಯವಿಲ್ಲ. ತಡೆಗಟ್ಟುವಿಕೆ ಮತ್ತು ಉತ್ತಮ ಕೃಷಿ ಪದ್ಧತಿಗಳು ಮೊದಲಿಗೆ ಸಂಭವಿಸುವ ಹಾನಿಯನ್ನು ತಪ್ಪಿಸುವ ಕೀಲಿಗಳಾಗಿವೆ. ಮಿತಿಮೀರಿದ ಡೋಸೇಜಿನ ಸಂದರ್ಭದಲ್ಲಿ ಸಸ್ಯಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಸ್ವಚ್ಛಮಾಡಿ.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕಳೆನಾಶಕ ಸಿಂಪಡಣೆಯನ್ನು ಯೋಜಿಸುವ ಮೊದಲು, ನೀವು ಯಾವ ರೀತಿಯ ಕಳೆಗಳನ್ನು ಎದುರಿಸುತ್ತಿರುವಿರಿ (ಮೂಲತಃ ಅಗಲವಾದ ಕಳೆಗಳು ಮತ್ತು ಹುಲ್ಲುಗಳು) ಎಂದು ನಿಮಗೆ ತಿಳಿದಿದೆಯೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಲಭ್ಯವಿರುವ ಅತ್ಯುತ್ತಮ ವಿಧಾನವನ್ನು ಆರಿಸಿ. ಕಳೆನಾಶಕವನ್ನು ಎಚ್ಚರಿಕೆಯಿಂದ ಆರಿಸಿ ಮತ್ತು ಲೇಬಲ್‌ನಲ್ಲಿ ಸೂಚಿಸಿದಂತೆ ಡೋಸೇಜ್ ಸೂಚನೆಗಳನ್ನು ಅನುಸರಿಸಿ.
ಪಿಪಿಒ ಪ್ರತಿರೋಧಕಗಳ ಕಳೆನಾಶಕಗಳಿಂದ ಈ ಹಾನಿ ಉಂಟಾಗುತ್ತದೆ, ಇವುಗಳಲ್ಲಿ ಫ್ಲುಮಿಯೊಆಕ್ಸಾಜಿನ್, ಫೋಮೆಸಾಫೆನ್, ಲ್ಯಾಕ್ಟೋಫೆನ್, ಕಾರ್ಫೆಂಟ್ರಾಜೋನ್, ಆಸಿಫ್ಲೋರ್ಫೆನ್, ಡಿಫೆನೈಲ್ ಈಥರ್ ಕುಟುಂಬಕ್ಕೆ ಸೇರಿದವು ಒಳಗೊಂಡಿವೆ. ಕ್ಲೋರೊಫಿಲ್ ಉತ್ಪಾದನೆಯನ್ನು ತಡೆಯುವ ಮೂಲಕ ಅವು ಜೀವಕೋಶದ ಪೊರೆ ಮತ್ತು ಇತರ ವಿಷಯಗಳಿಗೆ ಅಡ್ಡಿಪಡಿಸುತ್ತವೆ. ಬೆಳಕು ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಎಲೆಯ ಲಕ್ಷಣಗಳು 1-3 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ. ರೋಗಲಕ್ಷಣಗಳು ಬೆಳಕಿನಿಂದ ಪ್ರಚೋದಿಸಲ್ಪಡುತ್ತವೆ ಮತ್ತು ಪ್ರಕಾಶಮಾನವಾದ, ಬೆಚ್ಚಗಿನ ದಿನಗಳಲ್ಲಿ ಹದಗೆಡುತ್ತವೆ.