ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ಸಿನ್ ಮೇಲೆ ಗಾಳಿಯ ಹಾನಿ

Wind Damage on Citrus

ಇತರೆ

ಸಂಕ್ಷಿಪ್ತವಾಗಿ

  • ದೀರ್ಘಾವಧಿಯಲ್ಲಿ, ಗಾಳಿಯು, ಮರದ ಬೆಳವಣಿಗೆ, ಅಂಗರಚನೆ ಮತ್ತು ರೂಪವಿಜ್ಞಾನದ ಮೇಲೆ ವೈವಿಧ್ಯ ಬದಲಾವಣೆಗಳನ್ನು ಉಂಟುಮಾಡಬಹುದು.
  • ಬಾಹ್ಯ ಹಾನಿಯೆಂದರೆ, ರೆಂಬೆ ಅಥವಾ ಸಣ್ಣ ರೆಂಬೆಗಳು ಮುರಿಯುವುದು, ಹಣ್ಣುಗಳು ಗಡಸಾಗುವುದು ಮತ್ತು ಸ್ಯಾಂಡ್ ಬ್ಲಾಸ್ಟಿಂಗ್ ಇವು ಸವೆತವನ್ನು ಉಂಟುಮಾಡುತ್ತವೆ ಮತ್ತು ಅಂಗಾಂಶಗಳನ್ನು ತೆಗೆದು ಹಾಕುತ್ತವೆ.
  • ತೀವ್ರವಾದ ಪ್ರಕರಣಗಳಲ್ಲಿ, ಕೆಲವೇ ಹಣ್ಣುಗಳು ಮೂಡುತ್ತವೆ ಮತ್ತು ಗುಣಮಟ್ಟದ ಮೇಲೆ ಪರಿಣಾಮವಿರುತ್ತದೆ ಹಾಗು ಇಳುವರಿಗಳ ನಷ್ಟಗಳನ್ನು ನಿರೀಕ್ಷಿಸಬಹುದು.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ರೋಗಲಕ್ಷಣಗಳನ್ನು ಹೆಚ್ಚಾಗಿ ಥ್ರಿಪ್ಸ್ ಹಾನಿ ಎಂದು ತಪ್ಪು ತಿಳಿದುಕೊಳ್ಳಲಾಗುತ್ತದೆ. ಎಳೆಯ ಮರಗಳ ಮೇಲಿನ ಬೇರುಗಳು ನೆಲ ಮಟ್ಟದ ತೊಗಟೆಗಳು ಮರಳಿನ ಕಣಗಳಿಂದ (ಸ್ಯಾಂಡ್ ಬ್ಲಾಸ್ಟಿಂಗ್ ಎಂದೂ ಕರೆಯಲಾಗುತ್ತದೆ) ಉಂಟಾದ ಸವೆತದ ಚಿಹ್ನೆಗಳನ್ನು ತೋರುತ್ತವೆ. ಎಲೆಗಳ ಮತ್ತು ಕಾಂಡಗಳ ಮೇಲಿನ ಗಾಯಗಳೂ ಸಹ ಸವೆತದಿಂದ ಉಂಟಾಗುತ್ತವೆ ಆದರೆ ಅಲ್ಲಿನ ಹಾನಿಯು ಅತಿ ಗಣನೀಯವಾಗಿರುತ್ತದೆ. ಬೆಳವಣಿಗೆಯ ಪ್ರಮಾಣ ಮತ್ತು ಇಳುವರಿ ಗಾಳಿಯ ಒತ್ತಡದಿಂದ ಕಡಿಮೆಯಾಗಬಹುದು ಇದು ಗಾಳಿಗೆ ಒಡ್ಡಲ್ಪಟ್ಟ ಮರದ ಭಾಗದಲ್ಲಿನ ಕೆಲವು ಹಣ್ಣುಗಳಲ್ಲಿ ಕಾಣಬಹುದು ಅಥವಾ ಯಾವುದೇ ಹಣ್ಣುಗಳಲ್ಲಿ ಕಾಣದಿರಬಹುದು. ಋತುವಿನ ನಂತರದ ಅವಧಿಯಲ್ಲಿ ಎಳೆಯ ಹಣ್ಣುಗಳು (ವ್ಯಾಸದಲ್ಲಿ 8 ಮಿಮೀ ಇರುವ) ಹೆಚ್ಚಾಗಿ ಗಾಳಿಯ ಹಾನಿಗೆ ಒಳಪಡುತ್ತವೆ. ಚರ್ಮದುದ್ದಕ್ಕೂ ಒಂದು ಅಥವಾ ಅನೇಕ ಅಡ್ಡಲಾಗಿ ಅಥವಾ ಕರ್ಣೀಯವಾಗಿ ಬೂದು ಬಣ್ಣದ ಗಾಯದ ಗುರುತುಗಳನ್ನು ಕಾಣಬಹುದು. ಥ್ರಿಪ್ಸ್ ಹಾನಿಗೆ ಹೋಲಿಸಿದಲ್ಲಿ, ಹಣ್ಣಿನ ಮೇಲೆ ಗಾಳಿಯ ಒತ್ತಡವು ಸ್ವಚ್ಛವಾದ ಸಣ್ಣ ಪ್ಯಾಚುಗಳ ವೈಶಿಷ್ಟತೆಯನ್ನು ಹೊಂದಿದೆ, ಅದೇ ಥ್ರಿಪ್ಸ್ ನಲ್ಲಿ ಸತತವಾದ ಗಾಯದ ಗುರುತುಗಳಿರುತ್ತವೆ. ಬಲವಾದ ಗಾಳಿಯು ರೆಂಬೆಗಳನ್ನು ಮುರಿಯಬಹುದು ಮತ್ತು ಬಗ್ಗಿಸಬಹುದು ಅಥವಾ ಮರಗಳನ್ನು ಕಿತ್ತೊಗೆಯಲೂಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಮೊದಲು ಹಾನಿಯನ್ನು ಮಾಪಿಸಿ. ಅದರ ತೀವ್ರತೆಯ ಮತ್ತು ಬೆಳವಣಿಗೆಯ ಹಂತದ ಮೇರೆಗೆ ಮರಗಳನ್ನು ರಕ್ಷಿಸಬಹುದೇ ಎಂದು ಕಂಡುಹಿಡಿಯಿರಿ. ಕತ್ತರಿಸುವ ಅಥವಾ ಸಮರುವಿಕೆಯ ಸಾಧನಗಳ ಮೂಲಕ ಹಾನಿಗೊಳಗಾದ ರೆಂಬೆಗಳನ್ನು ಮತ್ತು ಹಣ್ಣುಗಳನ್ನು ತೆಗೆದು ಹಾಕಿ. ವಿಶೇಷವಾಗಿ, ತೇವಾಂಶವಿರುವ ಹವಾಮಾನದಲ್ಲಿ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ರೋಗಗಳ ಸಮಸ್ಯೆ ಇದ್ದೆಡೆ ಸಾವಯವ ಪೇಸ್ಟುಗಳನ್ನು ಹಾಕಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳೊಡನೆ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಬೆಳೆವಣಿಗೆಯ ಹಂತ ಮತ್ತು ಹಾನಿಯ ತೀವ್ರತೆಯ ಮೇಲೆ ಚಿಕಿತ್ಸೆಗಳು ನಿರ್ಭರವಾಗಿರುತ್ತವೆ. ತೀವ್ರವಾದ ಪ್ರಕರಣಗಳಲ್ಲಿ, ಬ್ಯಾಕ್ಟೀರಿಯ ಮತ್ತು ಶಿಲೀಂಧ್ರಗಳಿಂದ ಉಂಟಾಗುವಂತಹ ರೋಗಗಳ ನಿರೋಧಕ ಕ್ರಮಗಳಿಗೆ ಚಿಕಿತ್ಸೆಗಳು ಕೇಂದ್ರೀಕೃತವಾಗಿರಬೇಕು ಉದಾಹರಣೆಗೆ, ಹಾನಿಗೊಳಗಾದ ರೆಂಬೆಗಳನ್ನು ಸ್ಪಷ್ಟ ರೀತಿಯಲ್ಲಿ ಕತ್ತರಿಸುವುದರ ಜೊತೆ ಮತ್ತು ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಪೇಸ್ಟುಗಳನ್ನು ಹಾಕುವುದು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಗಾಳಿಯಿಂದ ಉಂಟಾಗುತ್ತವೆ ಮತ್ತು ಗಾಳಿ ತಡೆಗಳಿಲ್ಲದ ಸುರಕ್ಷಿತವಲ್ಲದ ಜಾಗಗಳಲ್ಲಿ ವಿಶೇಷವಾಗಿ ಇದು ಸಮಸ್ಯೆಯಾಗುತ್ತದೆ. ಗಾಳಿ ಹೆಚ್ಚಿದ್ದಲ್ಲಿ ಅಥವಾ /ಮತ್ತು ಬಲವಾಗಿದ್ದಲ್ಲಿ, ನಿಂಬೆ ಕೊಯ್ಲಿನ ಹೆಚ್ಚಿನ ಪ್ರತಿಶತವು ಗುಣಾತ್ಮಕವಾಗಿ ಕಡಿಮೆಯಾಗಬಹುದು ಅಥವಾ ನಿರಾಕರಿಸಲ್ಪಡಬಹುದು. ಎಳೆಯ ಹಣ್ಣುಗಳ ಮೇಲಿನ ಗುರುತುಗಳು, ಹಳೆಯ ಎಲೆಗಳು ಮೇಲ್ಮೈಯಲ್ಲಿ ಗಾಳಿಯಿಂದ ತೂರಲ್ಪಟ್ಟಾಗ ಉಂಟಾಗುತ್ತವೆ. ಬಣ್ಣ ಕುಂದುವಿಕೆಯು ಬೆಂಡಿನಂತಹ, ರಕ್ಷಣಾ ಪದರದ ರಚನೆಗೆ ದಾರಿ ಮಾಡಿಕೊಡುತ್ತದೆ. ಹಣ್ಣು ಗಾತ್ರದಲ್ಲಿ 3 ಸೆಂಮಿ ತಲುಪಿದಾಗ, ಚರ್ಮವು ಗಟ್ಟಿಯಾಗಿರುತ್ತದೆ, ಮತ್ತು ಒಣಗಿದ ಸಣ್ಣ ರೆಂಬೆಗಳು ಹಾಗು ದೊಡ್ಡ ರೆಂಬೆಗಳ ಉಜ್ಜುವಿಕೆಯಿಂದ ಹೆಚ್ಚಾಗಿ ಹಾನಿ ಸಂಭವಿಸುತ್ತದೆ. ಅಂಗಾಂಶದ ಹಾನಿಯು, ಇನ್ನೂ ಹೆಚ್ಚಿನ ಹಾನಿಯನ್ನು ಉಂಟುಮಾಡಲು ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳು ಪ್ರವೇಶಿಸಲು ಮತ್ತು ಅಂಗಾಂಶಗಳನ್ನು ವಸಾಹತುಗೊಳಿಸಲು ಅವುಗಳಿಗೆ ಒಂದು ಅವಕಾಶವಾಗಿರುತ್ತದೆ. ನಿರ್ದಿಷ್ಟವಾಗಿ, ಒಣ ಗಾಳಿಯು ಎಲೆಗಳಚುವಿಕೆ, ಗಾಳಿ-ಊತ ಮತ್ತು ಬೇಗೆಯ ಮೂಲಕ ಮರಗಳಿಗೆ ಹಾನಿಯೊಡ್ಡಬಹುದು, ಇದರಿಂದ ಅನಿವಾರ್ಯವಾಗಿ ಎಲೆಗಳು ಸಾಯುವಲ್ಲಿ ಮತ್ತು ಹಣ್ಣುಗಳ ಮೇಲೆ ಗಾಯಗಳ ಕಲೆ ಮೂಡುವಲ್ಲಿ ಇದು ಕೊನೆಯಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಗಾಳಿಯ ವೇಗ, ದಿಕ್ಕು ಮತ್ತು ಆವರ್ತನಗಳ ಮಾದರಿಯನ್ನು ಅನುಸರಿಸಿ ಶಾಶ್ವತ ಅಥವಾ ಸಾಂದರ್ಭಿಕ ಗಾಳಿ ತಡೆಗಳನ್ನು ಸ್ಥಾಪಿಸಿ.
  • ಗಾಳಿಯ ದಿಕ್ಕನ್ನು ಅನುಸರಿಸಿ ಮರಗಳನ್ನು ನೆಡಿ.
  • ಮರಗಳನ್ನು ರಕ್ಷಿಸಲು ಗಾಳಿ ತಡೆಗಳನ್ನು ದುರಸ್ತಿ ಮಾಡಲು ಮತ್ತು ನಿರ್ವಹಿಸಲು ಮರೆಯದಿರಿ.
  • ಗಾಳಿಯ ಮುನ್ಸೂಚನೆಯಿದ್ದಾಗ ಮಣ್ಣಿನ ತೇವಾಂಶವನ್ನು ಹೆಚ್ಚಾಗಿರಿಸಿ.
  • ಅತಿ ಹೆಚ್ಚಿನ ಹಾನಿಯ ನಂತರ, ಹೊಸ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಹೆಚ್ಚುವರಿ ಸಾರಜನಕ ಹಾಕುವುದನ್ನೂ ಸಹ ಪರಿಗಣಿಸಿ.
  • ತೀವ್ರವಾದ ಗಾಳಿಯ ಹೊಡೆತವಿದ್ದಲ್ಲಿ ಅಥವಾ ಗಾಳಿಯ ಬೇರೆ ಬೇರೆ ದಿಕ್ಕುಗಳಿದ್ದಲ್ಲಿ, ಅನೇಕ ಗಾಳಿ ತಡೆಗಳನ್ನು ಸ್ಥಾಪಿಸಿ.
  • ಮುಖ್ಯವಾದ ಗಾಳಿಯ ದಿಕ್ಕನ್ನು ಅನುಸರಿಸಿ, ಎಚ್ಚರಿಕೆಯ ಸಮರುವಿಕೆಯನ್ನು ಶಿಫಾರಸ್ಸು ಮಾಡಲಾಗುತ್ತದೆ.
  • ಹಾಗೆಯೇ, ಮುಂದಿನ ಋತುವಿನಲ್ಲಿ ಹಾನಿಯನ್ನು ತಪ್ಪಿಸಲು, ಕೊಯ್ಲಿನ ನಂತರ ಸತ್ತ ಮರವನ್ನು ಕತ್ತರಿಸಲು ಮರೆಯದಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ