Leaf Reddening
ಇತರೆ
ಕಾರಣಗಳು ಮತ್ತು ಬೆಳೆಯ ಹಂತವನ್ನು ಆಧರಿಸಿ ಎಲೆಗಳ ಕೆಂಪು ಬಣ್ಣವು ಸ್ವಲ್ಪ ಬದಲಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ಎಲೆಯ ಅಂಚುಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಅದು ಉಳಿದ ಭಾಗಕ್ಕೆ ಹರಡುತ್ತದೆ. ಇತರ ರೋಗಲಕ್ಷಣಗಳೆಂದರೆ ಬಾಡುವಿಕೆ, ಕಾಂಡಗಳ ಕೆಂಪು ಬಣ್ಣ, ಬೀಜಕೋಶಗಳ ಕಳಪೆ ಬೆಳವಣಿಗೆ, ಅಥವಾ ಬೀಜಕೋಶಗಳು ಬೆಳೆಯದೇ ಇರುವುದು. ಎಲೆ ಮತ್ತು ಹಣ್ಣುಗಳು ಉದುರುವುದು ಮತ್ತು ಕುಂಠಿತಗೊಂಡ ಸಸ್ಯಗಳು. ಹಣ್ಣಾದ ಸಮಯದಲ್ಲಿ, ಕೆಂಪಾಗುವುದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇದನ್ನು ಇಡೀ ಹೊಲದಲ್ಲಿ ಸಾಮಾನ್ಯವಾಗಿ ಗಮನಿಸಬಹುದು. ಸಾರಜನಕ ಕೊರತೆಯಲ್ಲದೆ, ಸೂರ್ಯನ ಬೆಳಕಿಗೆ ಅತಿಯಾಗಿ ಒಡ್ಡುವುದು, ತಂಪಾದ ತಾಪಮಾನ ಮತ್ತು ಗಾಳಿಯ ಹಾನಿಗಳಿಂದಲೂ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಬಹುದು. ಆ ಸಂದರ್ಭದಲ್ಲಿ, ಒಂದೇ ಎಲೆಗಿಂತ ಇಡೀ ಹೊಲ ಬಣ್ಣ ಕಳೆದುಕೊಳ್ಳುವುದು ಕಂಡು ಬರುತ್ತದೆ.
ಒತ್ತಡ ಮತ್ತು ಬೆಳವಣಿಗೆಯ ಹಂತದ ಆಧಾರದಲ್ಲಿ, ಸಾವಯವ ರಸಗೊಬ್ಬರಗಳ ಬಳಕೆ ಸಸ್ಯಕ್ಕೆ ಪ್ರಯೋಜನಕಾರಿಯಾಗಿದೆ. ಎಲೆ ಕೆಂಪಾಗುವುದು ಋತುವಿನ ಕೊನೆಯಲ್ಲಿ ಆರಂಭವಾದರೆ ಅಥವಾ ಪ್ರಕ್ರಿಯೆಯು ಭೌತಿಕ ಅಂಶಗಳಿಂದ ಪ್ರಚೋದಿಸಲ್ಪಡುತ್ತಿದ್ದರೆ ಜೈವಿಕ ನಿಯಂತ್ರಣ ಅನಿವಾರ್ಯವಲ್ಲ.
ಲಭ್ಯವಿದ್ದರೆ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹತ್ತಿಯ ಬೆಳೆಗಳಲ್ಲಿ ಎಲೆಗಳ ಕೆಂಪು ಬಣ್ಣಕ್ಕೆ ರಾಸಾಯನಿಕ ನಿಯಂತ್ರಣವಿಲ್ಲ. ಕೊಟ್ಟಿಗೆ ಗೊಬ್ಬರ, ಸೂಕ್ತವಾದ ನೀರಾವರಿ ಕಾರ್ಯಕ್ರಮ ಮತ್ತು ಸಮತೋಲಿತ ರಸಗೊಬ್ಬರ ಬಳಕೆ ಸಮಸ್ಯೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಋತುವಿನ ಆರಂಭದಲ್ಲಿ ಸಂಭವಿಸಿದರೆ, ಪೋಷಕಾಂಶಗಳ ತಿದ್ದುಪಡಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಬಹುದು. ಬೀಜಕೋಶಗಳು ತೆರೆದುಕೊಳ್ಳುವ ಸಮಯದಲ್ಲಿ ಈ ಲಕ್ಷಣಗಳು ಆರಂಭವಾದರೆ, ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿಲ್ಲ.
ನೀರು, ನಿರಂತರ ತಾಪಮಾನದ ಒತ್ತಡ ಅಥವಾ ಮಣ್ಣಿನ ಕಳಪೆ ಫಲವತ್ತತೆ ಮುಂತಾದ ಅನೇಕ ಅಜೈವಕ ಅಂಶಗಳಿಂದ ರೋಗಲಕ್ಷಣಗಳು ಉಂಟಾಗಬಹುದು. ಕೆಲವು ಪ್ರಭೇದಗಳು ಅಥವಾ ಮಿಶ್ರತಳಿಗಳು ಇತರವುಗಳಿಗಿಂತ ಹೆಚ್ಚು ಪರಿಣಾಮಕ್ಕೆ ಒಳಗಾಗುತ್ತವೆ. ಕೆಂಪು ಬಣ್ಣವು ಆಂಥೋಸಯಾನಿನ್ ಎಂಬ ಕೆಂಪು ವರ್ಣದ್ರವ್ಯದ ಹೆಚ್ಚಳ ಮತ್ತು ಎಲೆಗಳಲ್ಲಿ ಹಸಿರು ವರ್ಣದ್ರವ್ಯ ಪತ್ರಹರಿತ್ತಿನ ಇಳಿಕೆಯಿಂದ ಉಂಟಾಗುತ್ತದೆ. ಒಂದು ಕಾರಣವೆಂದರೆ ಪಾರ್ಶ್ವ ಬೇರುಗಳು ಕೊಳೆಯುವುದು. ಇದು ಸಸ್ಯದ ನೀರು ಮತ್ತು ಪೋಷಕಾಂಶಗಳನ್ನು ಸಕ್ರಿಯವಾಗಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಹಣ್ಣಾಗುವ ಸಮಯದಲ್ಲಿ, ಈ ಪ್ರಕ್ರಿಯೆಯು ಸ್ವಾಭಾವಿಕವಾಗಿದ್ದು ಇಳುವರಿಯ ಮೇಲೆ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಋತುವಿನ ಆರಂಭದಲ್ಲಿ ಇತರ ಕಾರಣಗಳೆಂದರೆ, ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ಗಳ ಕೊರತೆಯಾಗಿರಬಹುದು (ಮೆಗ್ನೀಸಿಯಮ್ ಒಳಗೊಂಡಿರುವಂತೆ ತೋರುವುದಿಲ್ಲ). ಇದಲ್ಲದೆ, ಸೂರ್ಯನ ಬೆಳಕಿಗೆ ಅತಿಯಾದ ಒಡ್ಡುವಿಕೆ, ಗಾಳಿ ಮತ್ತು ತಂಪಾದ ಉಷ್ಣತೆಯು ಬಣ್ಣ ಕಳೆದುಕೊಳ್ಳುವುದನ್ನು ಉತ್ತೇಜಿಸುತ್ತದೆ.