Fruit Deformation
ಇತರೆ
ಹಲವು, ಅತೀ ಸಣ್ಣದಾದ, ಕೂದಲು-ರೀತಿಯ ಬಿರುಕುಗಳು ಟೊಮೆಟೊ ಸಿಪ್ಪೆಯ ಮೇಲೆ ಕಾಣಿಸಿಕೊಳ್ಳುತ್ತವೆ, ಸಾಮಾನ್ಯವಾಗಿ ಇವು ಕೇಂದ್ರೀಕೃತ ಮಾದರಿಯನ್ನು ಅನುಸರಿಸುತ್ತವೆ. ಹೊರಚರ್ಮ ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಬಿರುಕುಗಳು ಕೆಲವೇ ಮಿಲಿಮೀಟರ್ ಉದ್ದವಿರುತ್ತವೆ ಮತ್ತು ಸಾಮಾನ್ಯವಾಗಿ ಪಕ್ವತೆಯ ಪ್ರಾರಂಭದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೀಟನಾಶಕಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರೆದಿಟ್ಟ ಹಣ್ಣುಗಳು ವಿಶೇಷವಾಗಿ ಈ ರೀತಿಯ ಗಾಯಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಕೀಟನಾಶಕವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಡಿಮೆಮಾಡುತ್ತದೆ ಮತ್ತು ಇದು ಬಿರುಕಿಗೆ ಅನುಕೂಲಕರವಾಗಿರುತ್ತದೆ.
ಈ ಅಸ್ವಸ್ಥತೆಗೆ ಯಾವುದೇ ಜೈವಿಕ ಚಿಕಿತ್ಸೆಯು ಲಭ್ಯವಿಲ್ಲ. ಇದನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ರೋಗವನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು, ಹಾನಿಯನ್ನು ಬದಲಾಯಿಸಲಾಗುವುದಿಲ್ಲ. ಆದಾಗ್ಯೂ, ಈ ಅಸ್ವಸ್ಥತೆಯ ರೋಗಲಕ್ಷಣಗಳನ್ನು ತಡೆಗಟ್ಟಲು ಕೀಟನಾಶಕಗಳ ಅತಿಯಾದ ಬಳಕೆ ಮತ್ತು ಅವುಗಳನ್ನು ಮಿಶ್ರಣ ಮಾಡಿ ಬಳಸುವುದನ್ನು ತಪ್ಪಿಸಿ.
ಈ ಪ್ರಾಕೃತಿಕ ಅಸ್ವಸ್ಥತೆಯನ್ನು ಬೆಳವಣಿಗೆ ಬಿರುಕುಗಳೊಂದಿಗೆ ಗೊಂದಲ ಮಾಡಿಕೊಳ್ಳಬಹುದು, ಆದರೆ ರಸೆಟಿಂಗ್ ನಿಂದಾಗಿ ಆದ ಗುರುತುಗಳು ಚಿಕ್ಕದಾಗಿರುತ್ತವೆ, ಸಣ್ಣದಾಗಿರುತ್ತವೆ ಮತ್ತು ಬಾಹ್ಯವಾಗಿರುತ್ತವೆ. ಇದು ಸಾಮಾನ್ಯವಾಗಿ ಆರ್ದ್ರ ಹಸಿರುಮನೆ ಪರಿಸರದಲ್ಲಿ ಮತ್ತು ಮಣ್ಣಿನ ತೇವಾಂಶ ಮತ್ತು ದಿನ/ರಾತ್ರಿ ಉಷ್ಣತೆಯಲ್ಲಿನ ಏರಿಳಿತಗಳೊಂದಿಗೆ ಸಂಬಂಧ ಹೊಂದಿದೆ. ಸೂಕ್ತವಲ್ಲದ ನೀರಿನ ಮಟ್ಟಗಳು (ಬರ, ನೀರು ಹಾಕುವುದು/ಮಳೆಯಲ್ಲಿ ಏರಿಳಿತ, ಪ್ರವಾಹ), ಪೋಷಕಾಂಶಗಳು ಮತ್ತು ಬೆಳಕಿನ ಗಾಢತೆಯಲ್ಲಿ ಅತಿರೇಕ/ಕೊರತೆಯೂ ಕಾರಣವಾಗಬಹುದು. ಅಂತಿಮವಾಗಿ ಕೀಟನಾಶಕಗಳ ತಪ್ಪು ಅಥವಾ ಅತೀ ಹೆಚ್ಚು ಬಳಕೆಯು ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು. ಹಣ್ಣುಗಳು ವಿಶೇಷವಾಗಿ ಸೂಕ್ಷ್ಮವಾಗಿರುತ್ತವೆ ಏಕೆಂದರೆ ಅವು ತಮ್ಮ ಬೆಳವಣಿಗೆಯ ತುತ್ತ ತುದಿಯಲ್ಲಿರುತ್ತವೆ ಮತ್ತು ನೀರು ಮತ್ತು ಪೋಷಕಾಂಶಗಳಿಗೆ ಹೊಸ ಚಿಗುರುಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ.