Fruit Deformation
ಇತರೆ
ಹಣ್ಣುಗಳ ಹೊರ ಸಿಪ್ಪೆಯು ಸೀಳುವ ಮತ್ತು ಬಿರುಕು ಬೀಳುವ ರೂಪದಲ್ಲಿ ರೋಗಲಕ್ಷಣಗಳು ಗೋಚರಿಸುತ್ತವೆ. ಸೀಳುಗಳು ಮತ್ತು ಬಿರುಕುಗಳು ಆಳ ಮತ್ತು ಗಾತ್ರದಲ್ಲಿ ಬದಲಾಗಬಹುದು ಮತ್ತು ಸಾಮಾನ್ಯವಾಗಿ ಹಣ್ಣಿನ ಮೇಲಿನ ಭಾಗದಲ್ಲಿ ಆಗುತ್ತವೆ. ಗಾಯಗಳ ಕೇಂದ್ರೀಕೃತ ಅಥವಾ ತ್ರಿಜ್ಯೀಯ ಸಮ್ಮಿತಿಯು ವಿಭಿನ್ನ ಪ್ರಾಕೃತಿಕ ಸಮಸ್ಯೆಗಳನ್ನು ಸೂಚಿಸಬಹುದು. ಕೆಲವೊಮ್ಮೆ ಹೂವಿನ ತುದಿಯ ಮೇಲೂ ಸಹ ಪರಿಣಾಮವಾಗುತ್ತದೆ. ಬಾಧಿತ ಹಣ್ಣು ಎಷ್ಟು ಎಳೆಯದಾಗಿರುತ್ತದೋ ಬಿರುಕುಗಳಿಂದಾಗುವ ಹಾನಿ ಅಷ್ಟೇ ಹೆಚ್ಚಿರುತ್ತದೆ. ಕಾಂಡದ ಸುತ್ತಲೂ ಬಿರುಕುಗಳು ಮತ್ತು ಸೀಳುಗಳು ಬರಬಹುದು. ಹಣ್ಣು ತನ್ನ ಸಿಪ್ಪೆಯ ಬೆಳವಣಿಗೆಗಿಂತ ಅಧಿಕವಾಗಿ ಬೆಳೆದರೆ ಈ ಅಸ್ವಸ್ಥತೆಯು ಉಂಟಾಗುತ್ತದೆ: ಸಿಪ್ಪೆಯ ಸ್ಥಿತಿಸ್ಥಾಪಕತ್ವಕ್ಕೆ ಅತಿಯಾದ ಒತ್ತಡವುಂಟಾಗುತ್ತದೆ ಮತ್ತು ಸಣ್ಣ ಬಿರುಕುಗಳು ಕಾಣಿಸಿಕೊಳ್ಳುತ್ತವೆ, ಇದು ಅಂತಿಮವಾಗಿ ತೆರೆದುಕೊಳ್ಳುತ್ತದೆ.
ಈ ರೋಗಗಳಿಗೆ ಜೈವಿಕ ಚಿಕಿತ್ಸೆಗಳು ಲಭ್ಯವಿಲ್ಲ. ಇದನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು.
ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ರೋಗವನ್ನು ಇದನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು. ಹೇಗಾದರೂ, ಸಾರಜನಕ ಗೊಬ್ಬರದ ವಿಪರೀತ ಬಳಕೆ ಮಾಡಬೇಡಿ ಮತ್ತು ಮಣ್ಣಿನಲ್ಲಿನ ಪೊಟ್ಯಾಸಿಯಮ್ ಮಟ್ಟದ ಬಗ್ಗೆ ಗಮನಹರಿಸಿ.
ಈ ಬಿರುಕುಗಳು ಮತ್ತು ಸೀಳುಗಳು ಹಣ್ಣಿನ ಹಠಾತ್ ಮತ್ತು ವೇಗವಾದ ಬೆಳವಣಿಗೆಯಿಂದ ಉಂಟಾಗುತ್ತವೆ, ಸಾಮಾನ್ಯವಾಗಿ ಸಸ್ಯವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಇದು ಉಂಟಾಗುತ್ತದೆ. ಸಸ್ಯದ ಬೆಳವಣಿಗೆಯಲ್ಲಿ ಈ ಹಠಾತ್ ಬದಲಾವಣೆಯನ್ನು ಅಧಿಕ ತೇವಾಂಶವನ್ನು ಹೊಂದಿರುವ ತಣ್ಣನೆಯ ಮತ್ತು ಆರ್ದ್ರ ವಾತಾವರಣವು, ಉಷ್ಣ ಮತ್ತು ಒಣ ವಾತಾವರಣಕ್ಕೆ ಬದಲಾವಣೆಯಾಗುವಂತಹ ವಾತಾವರಣದ ಪರಿಸ್ಥಿತಿಗಳು ಕೆರಳಿಸಬಹುದು ಅಥವಾ ಉಲ್ಬಣಗೊಳಿಸಬಹುದು. ಸಮಸ್ಯೆಯನ್ನು ತಪ್ಪಿಸಲು ಸಮತೋಲಿತ ರಸಗೊಬ್ಬರ ಬಳಕೆ ಸಹ ಅತ್ಯಗತ್ಯ. ಉದಾಹರಣೆಗೆ, ಹೂವುಗಳು ಮತ್ತು ಹಣ್ಣುಗಳ ಬೆಳವಣಿಗೆಯ ಸಮಯದಲ್ಲಿ ಸಾರಜನಕದ ಅತಿಯಾದ ಬಳಕೆ ಮತ್ತು ಪೊಟ್ಯಾಸಿಯಮ್ ನ ಅತೀ ಕಡಿಮೆ ಬಳಕೆಯು ಮಿತಿಮೀರಿದ ಹಣ್ಣಿನ ಬೆಳವಣಿಗೆಯನ್ನು ಬೆಂಬಲಿಸುತ್ತವೆ ಮತ್ತು ಬಿರುಕುಗಳು ಉಂಟಾಗುವುದಕ್ಕೆ ಅನುವು ಮಾಡಿಕೊಡುತ್ತವೆ.