ಟೊಮೆಟೊ

ಟೊಮೆಟೊ ಕ್ಯಾಟ್ಫೇಸ್

Physiological Disorder

ಇತರೆ

5 mins to read

ಸಂಕ್ಷಿಪ್ತವಾಗಿ

  • ತೀವ್ರವಾದ ವಿರೂಪತೆ, ಹೂವಿನ ತುದಿಯಲ್ಲಿ ಹಣ್ಣು ಕಲೆಯಾಗುವುದು ಮತ್ತು ಬಿರುಕು ಬಿಡುವುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಟೊಮೆಟೊ

ರೋಗಲಕ್ಷಣಗಳು

ಕ್ಯಾಟ್ಫೇಸ್ ಒಂದು ಶಾರೀರಿಕ ಅಸ್ವಸ್ಥತೆಯಾಗಿದ್ದು, ಅದು ಹಣ್ಣುಗಳಲ್ಲಿ ವಿರೂಪತೆ ಮತ್ತು ಕಲೆಗಳನ್ನು ಉಂಟುಮಾಡುತ್ತದೆ, ಸಾಮಾನ್ಯವಾಗಿ ಹೂವಿನ ತುದಿಯಲ್ಲಿ. ಬಾಧಿತ ಹಣ್ಣು ಸ್ವಲ್ಪ ಲೋಬೋಲೇಟ್ (ಕಿರುಹಾಲೆ) ಆಕಾರವನ್ನು ಹೊಂದಿದ್ದು, ತಿರುಳಿನೊಳಗೆ ಆಳವಾಗಿ ವಿಸ್ತರಿಸಬಲ್ಲ ವಿವಿಧ ಲೋಬ್ಯೂಲ್ ಗಳ ನಡುವೆ ಗಡುಸಾದ ಕಂದು ಬಣ್ಣದ ಗಾಯಗಳು ಉಂಟಾಗುತ್ತವೆ. ಇದನ್ನು ಹಣ್ಣುಗಳಲ್ಲಾಗುವ ಏಕಕೇಂದ್ರ ಅಥವಾ ತ್ರಿಜ್ಯೀಯ ಬಿರುಕುಗಳೊಂದಿಗೆ ತಪ್ಪಾಗಿ ಗ್ರಹಿಸಬಾರದು. ಇವುಗಳನ್ನು ಮಾರಾಟ ಮಾಡಲಾಗದಿದ್ದರೂ, ವಿರೂಪಗೊಂಡ ಹಣ್ಣುಗಳು ಇನ್ನೂ ತಮ್ಮ ರುಚಿಯನ್ನು ಉಳಿಸಿಕೊಳ್ಳುತ್ತವೆ ಮತ್ತು ಅವುಗಳನ್ನು ಸುರಕ್ಷಿತವಾಗಿ ಸೇವಿಸಬಹುದು. ಸಂಭವನೀಯ ಕಾರಣಗಳೆಂದರೆ ಹೂಬಿಡುವ ಸಮಯದಲ್ಲಿ 12 °ಸಿ ಗಿಂತ ಕಡಿಮೆ ತಾಪಮಾನವಿರುವ ತಂಪಾದ ಹವಾಮಾನ, ಹೆಚ್ಚಿನ ಸಾರಜನಕ ಮಟ್ಟಗಳು ಮತ್ತು ಸಸ್ಯನಾಶಕದ ಗಾಯ. ದೊಡ್ಡ ಹಣ್ಣುಗಳನ್ನು ಹೊಂದಿರುವ ಟೊಮೆಟೊ ಪ್ರಭೇದಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ.

Recommendations

ಜೈವಿಕ ನಿಯಂತ್ರಣ

ಈ ರೋಗವನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ರೋಗವನ್ನು ಕಾರ್ಯಗತಗೊಳಿಸಲು ಸುಲಭವಾಗಿರುವಂತಹ ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಸರಿಪಡಿಸಬಹುದು. ಹೇಗಾದರೂ, ವಿಶೇಷವಾಗಿ ಸೂಕ್ಷ್ಮವಾಗಿರುವ ಪ್ರಭೇದಗಳಲ್ಲಿ ಈ ಸ್ಥಿತಿಯನ್ನು ಪ್ರಚೋದಿಸುವಂತಹ ಸಸ್ಯನಾಶಕಗಳ ಬಳಕೆಯನ್ನು ತಡೆಗಟ್ಟಿ.

ಅದಕ್ಕೆ ಏನು ಕಾರಣ

ಟೊಮೆಟೊಗಳ ಮೇಲೆ ಕ್ಯಾಟ್ಫೇಸ್ ಬರಲು ನಿಖರವಾದ ಕಾರಣಗಳು ಅನಿಶ್ಚಿತವಾಗಿರುತ್ತವೆ ಆದರೆ ಇದು ಸಾಮಾನ್ಯವಾಗಿ ದೊಡ್ಡ-ಹಣ್ಣಿನ ವಿಧಗಳ ಮೇಲೆ ಹೆಚ್ಚಾಗಿರುತ್ತದೆ. ಹೂವಿನ ಮೊಗ್ಗು ಬೆಳವಣಿಗೆಯ ಸಮಯದಲ್ಲಿ ಹಲವಾರು ದಿನಗಳ ಕಾಲ ರಾತ್ರಿಯ ವೇಳೆ ಕಡಿಮೆ ತಾಪಮಾನಗಳು (12 °ಸಿ ಅಥವಾ ಅದಕ್ಕಿಂತ ಕಡಿಮೆ) ಈ ಶಾರೀರಿಕ ಅಸ್ವಸ್ಥತೆಯೊಂದಿಗೆ ಸರಿಹೊಂದುತ್ತದೆ, ಬಹುಶಃ ಇದು ಹೂವಿನ ಅಪೂರ್ಣ ಪರಾಗಸ್ಪರ್ಶದಿಂದಾಗಿರಬಹುದು. ಕೆಲವು ಪ್ರಭೇದಗಳು ಈ ತಾಪಮಾನ ಬದಲಾವಣೆಗಳಿಗೆ ಹೆಚ್ಚು ಸೂಕ್ಷ್ಮವಾಗಿರಬಹುದು. ಹೂವಿನ ಮೊಗ್ಗು ಬೆಳವಣಿಗೆಗೆ ಆಗುವ ಇತರ ಅಡೆತಡೆಗಳು ಕೂಡ ಕ್ಯಾಟ್ಫೇಸ್ ಬರುವುದಕ್ಕೆ ಕಾರಣವಾಗಬಹುದು. ಹೂವಿಗಾಗುವ ಶಾರೀರಿಕ ಹಾನಿ, ಅತಿಯಾದ ಸಮರುವಿಕೆ ಅಥವಾ ಕೆಲವು ಸಸ್ಯನಾಶಕಗಳಿಗೆ (2, 4-ಡಿ) ಒಡ್ಡುವುದರಿಂದಾಗುವ ಶಾರೀರಿಕ ಹಾನಿ ಕೂಡ ವಿರೂಪಕೊಂಡ ಹಣ್ಣುಗಳಿಗೆ ಕಾರಣವಾಗಬಹುದು. ಅಸಮತೋಲಿತ ಸಾರಜನಕದ ಸರಬರಾಜಿನಿಂದಾಗಿ ಅತಿಯಾದ ಹಣ್ಣಿನ ಬೆಳವಣಿಗೆ ಸಹ ಒಂದು ಕಾರಣವಾಗಬಹುದು. ಅಂತಿಮವಾಗಿ, ಥ್ರಿಪ್ಸ್(ಕೀಟ) ಹಾನಿ ಅಥವಾ ಟೊಮೆಟೊ ಸಣ್ಣ ಎಲೆ ಎಂದು ಕರೆಯಲಾಗುವ ಸ್ಥಿತಿಯೂ ಕೂಡ ಕ್ಯಾಟ್ಫೇಸಿಂಗ್ ಗೆ ಕಾರಣವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ತಾಪಮಾನ ಬದಲಾವಣೆಗಳಿಗೆ ಹೆಚ್ಚು ಸಹಿಷ್ಣುವಾಗಿರುವ ಪ್ರಭೇದಗಳನ್ನು ಬಳಸಿ.
  • ಈ ಸ್ಥಿತಿಯನ್ನು ಉಂಟುಮಾಡುವ ಸಸ್ಯನಾಶಕಗಳ ಬಳಕೆಯನ್ನು ತಡೆಗಟ್ಟಿ.
  • ಹೂವಿನ ಮೊಗ್ಗುಗಳ ಬೆಳವಣಿಗೆಯ ಸಮಯದಲ್ಲಿ ತಾಪಮಾನವನ್ನು ನಿಯತವಾಗಿ ನೋಡಿಕೊಳ್ಳಿ.
  • ಕೃಷಿ ಕೆಲಸದ ಸಮಯದಲ್ಲಿ ಸಸ್ಯಗಳಿಗೆ ಶಾರೀರಿಕ ಗಾಯವಾಗುವುದನ್ನು ತಪ್ಪಿಸಿ.
  • ಫಲವತ್ತತೆ ಮಾಡುವ ಮೊದಲು ಮಣ್ಣಿನಲ್ಲಿರುವ ಸಾರಜನಕದ ಮಟ್ಟವನ್ನು ಪರಿಶೀಲಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ