ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಸೂರ್ಯನ ಸುಡುಗಾಯ (ಸನ್ಬರ್ನ್)

Abiotic Sunburn

ಇತರೆ

ಸಂಕ್ಷಿಪ್ತವಾಗಿ

  • ಎಲೆಗಳು ಸೊರಗುವುದು ಮತ್ತು ಹಳದಿಯಾಗುವುದು - ಅಂಚುಗಳಿಂದ ಪ್ರಾರಂಭವಾಗುತ್ತದೆ.
  • ಎಲೆಗಳು ಉದುರಿದ ನಂತರ ಹಣ್ಣುಗಳು ಮತ್ತು ತೊಗಟೆಯ ಮೇಲೂ ಪರಿಣಾಮವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

59 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ನೇರ ಸೂರ್ಯನ ಬೆಳಕು ಮತ್ತು ಅತಿಯಾದ ಉಷ್ಣತೆಯ ಸಂಯೋಜನೆಯಿಂದ ಸಸ್ಯಗಳು, ಪೊದೆಗಳು ಅಥವಾ ಮರಗಳಿಗೆ ಉಂಟಾಗುವ ಹಾನಿಯನ್ನು ಅಜೀವಕ ಸೂರ್ಯನ ಸುಡುಗಾಯ ಎನ್ನುತ್ತಾರೆ. ಈ ಅಂಶಗಳು ಸಸ್ಯ ಅಂಗಾಂಶಗಳಲ್ಲಿನ ತೇವಾಂಶವನ್ನು ಮಾರ್ಪಡಿಸುತ್ತವೆ. ಆರಂಭದಲ್ಲಿ ಎಳೆಯ, ಕೋಮಲ ಎಲೆಗಳ ಬಾಡುವಿಕೆಗೆ ಕಾರಣವಾಗುತ್ತದೆ. ಈ ಎಲೆಗಳು ಕ್ರಮೇಣ ತಿಳಿ ಹಸಿರು ಬಣ್ಣಕ್ಕೆ ತಿರುಗುತ್ತವೆ ಮತ್ತು 2-3 ದಿನಗಳ ನಂತರ ಇವುಗಳ ತುದಿ ಮತ್ತು ಅಂಚುಗಳ ಬಳಿ ಗಾಯಗಳು ಬೆಳೆಯುತ್ತವೆ. ಕಮರಿದ ಗಾಯಗಳು ನಂತರ ಎಲೆಗಳ ಮಧ್ಯಭಾಗದ ಕಡೆಗೆ ಸಾಗುತ್ತವೆ. ಬರದ ಒತ್ತಡ ಅಥವಾ ಕೀಟಗಳ ಆಕ್ರಮಣದಿಂದ ಎಲೆಗಳು ಉದುರಿದಾಗ ಅದು ಹಣ್ಣುಗಳಿಗೆ ಅಥವಾ ತೊಗಟೆಗೆ ಸೂರ್ಯನಿಂದ ಸುಟ್ಟಗಾಯವನ್ನು ಉಂಟುಮಾಡಬಹುದು. ಏಕೆಂದರೆ ಇವುಗಳಿಗೆ ಎಲೆಗಳ ನೆರಳು ಸಿಗುವುದಿಲ್ಲ. ತೊಗಟೆಯಲ್ಲಿ ಅವು ಬಿರುಕುಗಳು ಮತ್ತು ಹುಣ್ಣುಗಳ ರೂಪವನ್ನು ತೆಗೆದುಕೊಳ್ಳುತ್ತವೆ. ಮತ್ತು, ಅಂತಿಮವಾಗಿ ಕಾಂಡದ ಮೇಲೆ ಸತ್ತ ಪ್ರದೇಶಗಳಾಗಿ ಬೆಳೆಯುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸೂರ್ಯನ ಬೆಳಕನ್ನು ಭೌತಿಕವಾಗಿ ತಡೆಯಲು, ಬಿಳಿ ಜೇಡಿಮಣ್ಣು ಅಥವಾ ಟಾಲ್ಕ್ ಫಾರ್ಮುಲೇಷನ್ ಗಳನ್ನು ಎಲೆಗಳು ಮತ್ತು ಕಾಂಡದ ಮೇಲೆ ಸಿಂಪಡಿಸಬಹುದಾಗಿದೆ. ಇದು ತಾಪಮಾನವನ್ನು 5-10 ° C ಯಷ್ಟು ಕಡಿಮೆ ಮಾಡಬಹುದು. ಕ್ಯಾಲ್ಸಿಯಂ ಕಾರ್ಬೋನೇಟ್ ಅಥವಾ ಸ್ಫಟಿಕ ಸುಣ್ಣದ ಕಲ್ಲುಗಳನ್ನು ಆಧರಿಸಿದ ಉತ್ಪನ್ನಗಳನ್ನು ಸಹ ಶಿಫಾರಸು ಮಾಡಲಾಗುತ್ತದೆ. ಕಾರ್ನೌಬಾ ಮೇಣದ ಉತ್ಪನ್ನಗಳು ಸಸ್ಯಗಳಿಗೆ ನೈಸರ್ಗಿಕ ಸನ್ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಮೊದಲು ಪರಿಗಣಿಸಿ. ಆಬ್ಸಿಸಿಸಿಕ್ ಆಮ್ಲವನ್ನು ರಸಗೊಬ್ಬರದ ಪೂರಕದಂತೆ ಹಾಕಿದಾಗ ಸೇಬಿನಂತಹ ಹಣ್ಣುಗಳಲ್ಲಿ ಸುಡುಗಾಯದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ, ಇತರ ಬೆಳೆಗಳಲ್ಲೂ ಸಹ ಇದು ಕೆಲಸ ಮಾಡಬಹುದು. ಪಾಲಿ-1-P ಮೆಂಥೆನ್ ಅನ್ನು ಆಧರಿಸಿದಂತಹ, ಎಲೆಗಳಿಂದ ನೀರಿನ ನಷ್ಟವನ್ನು ಕಡಿಮೆ ಮಾಡುವ ಭಾಷ್ಟೀಕರಣ-ವಿರೋಧಿ ಉತ್ಪನ್ನಗಳು ಕೂಡ ಕೆಲವು ಅಧ್ಯಯನದಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಿವೆ.

ಅದಕ್ಕೆ ಏನು ಕಾರಣ

ಹೆಚ್ಚಿನ ಸೌರ ವಿಕಿರಣ, ಹೆಚ್ಚಿನ ವಾಯು ತಾಪಮಾನಗಳು, ಮತ್ತು ಕಡಿಮೆ ಸಾಪೇಕ್ಷ ಆರ್ದ್ರತೆ ಇರುವ ಪ್ರದೇಶಗಳಲ್ಲಿ ಬೆಳೆದ ಸಸ್ಯಗಳು ಅಥವಾ ಮರಗಳಲ್ಲಿ ಸೂರ್ಯನ ಸುಡುಗಾಯ ಸಾಮಾನ್ಯವಾಗಿದೆ. ಅತಿ ಎತ್ತರದ ಪ್ರದೇಶಗಳಲ್ಲಿ ನೇರಳಾತೀತ (UV) ವಿಕಿರಣವು ಹೆಚ್ಚಿರುವುದರಿಂದ, ಎತ್ತರವು ಇದರಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. ಎಲೆಗಳು, ಹಣ್ಣುಗಳು ಮತ್ತು ತೊಗಟೆಯ ಮೇಲೆ ರೋಗಲಕ್ಷಣಗಳು ಗೋಚರಿಸುತ್ತವೆ. ಸೂರ್ಯನ ಸುಡುಗಾಯ ಮತ್ತು ಅದರ ತೀವ್ರತೆಯು ಸಸ್ಯದ ಪ್ರಭೇಧ, ಅದರ ಬೆಳವಣಿಗೆಯ ಹಂತ ಮತ್ತು ಮಣ್ಣಿನ ತೇವಾಂಶದಂತಹ ಅಂಶಗಳ ಮೇಲೂ ಅವಲಂಬಿತವಾಗಿರುತ್ತದೆ. ಮಾಗುವ ಅವಧಿಯಲ್ಲಿ ಗಾಳಿಯ ಉಷ್ಣಾಂಶ ಮತ್ತು ಬಿಸಿಲಿನ ಅವಧಿ ಹೆಚ್ಚಾಗಿದ್ದರೆ ಸೂರ್ಯನ ಸುಡುಗಾಯ ವಿಶೇಷವಾಗಿ ತೀವ್ರವಾಗಿರುತ್ತದೆ. ವಾತಾವರಣದಲ್ಲಿ ಬದಲಾವಣೆಗಳು ಸಹ ಮುಖ್ಯವಾಗಿದೆ: ಹೀಗಾಗಿ, ತಂಪಾದ ಅಥವಾ ಸೌಮ್ಯ ವಾತಾವರಣದ ನಂತರ ಒಮ್ಮೆಲೆ ಬಿಸಿಯಾದ, ಬಿಸಿಲಿನ ವಾತಾವರಣ ಬಂದರೆ ಹಾನಿ ಸಂಭವಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಸೂರ್ಯನ ಸುಡುಗಾಯಕ್ಕೆ ಹೆಚ್ಚು ಸಹಿಷ್ಣುವಾಗಿರುವ ತಳಿಗಳನ್ನು ಬಳಸಿ.
  • ಬೆಳೆಯ ನೀರಿನ ಅಗತ್ಯಗಳಿಗೆ ನೀವು ಮಾಡುತ್ತಿರುವ ನೀರಾವರಿ ಉತ್ತಮವಾಗಿ ಹೊಂದಿಕೊಂಡಿದೆ ಎಂದು ಖಚಿತಪಡಿಸಿಕೊಳ್ಳಿ.
  • ಸಸ್ಯದ ಒತ್ತಡ ಮತ್ತು ಸೂರ್ಯನ ಸುಡುಗಾಯ ತಪ್ಪಿಸಲು ಶಾಖದ ಅಲೆಗಳ ಸಮಯದಲ್ಲಿ ಅಥವಾ ಅದಕ್ಕೆ ಮೊದಲು ನೀರಾವರಿ ಮಾಡಿ.
  • ಬೇಸಿಗೆಯಲ್ಲಿ ವಿಪರೀತ ಸಮರುವಿಕೆಯನ್ನು ಮತ್ತು ಎಲೆ ತೆಗೆಯುವ ಕೆಲಸವನ್ನು ಮಾಡಬೇಡಿ.
  • ಮೇಲಾವರಣದ ಮೂಲಕ ಗಾಳಿಯಾಡುವಿಕೆಯನ್ನು ಸುಧಾರಿಸಿ.
  • ಸಸ್ಯ ಅಥವಾ ಮರದ, ಸ್ಪ್ರಿಂಕ್ಲರ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಜಾರಿಗೆ ತರಬಹುದು.
  • ಅಗತ್ಯವಿದ್ದರೆ ನೆರಳು ಬಲೆ ಅಥವಾ ಹಣ್ಣುಗಳ ಮೇಲೆ ಚೀಲ ಹೊದಿಸುವುದನ್ನು ಕೂಡ ಮಾಡಬಹುದು.
  • ಮಣ್ಣಿನ ಜಲ ಧಾರಣ ಸಾಮರ್ಥ್ಯವನ್ನು ಹೆಚ್ಚಿಸಲು ಸಾಲುಗಳ ನಡುವೆ ಹೊದಿಕೆ ಬೆಳೆಗಳನ್ನು ಬಳಸಿ (ಉದಾಹರಣೆಗೆ ಅನಾನಸ್ ತೋಟದಲ್ಲಿ ಮೆಕ್ಕೆಜೋಳ ಅಥವಾ ತೊಗರಿಬೇಳೆ ).

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ