Adventitious roots
ಇತರೆ
ಸಸ್ಯಗಳ ಕಾಂಡಗಳ ಮೇಲೆ ಉಬ್ಬುಗಳು, ಸಣ್ಣ ಗಂಟುಗಳು, ಊತಗಳು ಅಥವಾ ಸಣ್ಣ ಕೂದಲುಗಳು. ಅವು ಕಾಂಡದ ಮೇಲೆ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಳ್ಳಬಹುದು.
ಈ ನಿರುಪದ್ರವಿ ಸಮಸ್ಯೆಗೆ ಯಾವುದೇ ಜೈವಿಕ ನಿಯಂತ್ರಣ ಅಗತ್ಯವಿಲ್ಲ; ಅದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ.
ಈ ನಿರುಪದ್ರವಿ ಸಮಸ್ಯೆಗೆ ಯಾವುದೇ ರಾಸಾಯನಿಕ ನಿಯಂತ್ರಣ ಅಗತ್ಯವಿಲ್ಲ; ಅದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ.
ಈ ಉಬ್ಬುಗಳು ನಿರುಪದ್ರವವಾಗಿವೆ. ಆದಾಗ್ಯೂ ಅವು ಟೊಮ್ಯಾಟೊ ಸಸ್ಯವು ಒತ್ತಡಕ್ಕೊಳಗಾಗಿರುವ ಸಂಕೇತವಾಗಿರಬಹುದು. ಒತ್ತಡವು, ಬೇರಿನ ವ್ಯವಸ್ಥೆಗೆ ಆಗಿರುವ ಹಾನಿ, ಅಸಮರ್ಪಕ ನೀರಿನ ಪೂರೈಕೆ, ಹೆಚ್ಚಿನ ಆರ್ದ್ರತೆ ಅಥವಾ ಶಿಲೀಂಧ್ರಗಳ ಸೋಂಕಿನಿಂದಾಗಿರಬಹುದು. ಈ ಒತ್ತಡದ ಅಂಶಗಳನ್ನು ನಿರ್ವಹಿಸಲು ಮತ್ತು ಹೊಂದಿಕೊಳ್ಳುವ ನಿಟ್ಟಿನಲ್ಲಿ ಈ ಬೇರುಗಳು ಸಸ್ಯ ತೋರುವ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ನಿರ್ದಿಷ್ಟ ಉತ್ಪಾದನಾ ಪರಿಸ್ಥಿತಿಗಳಲ್ಲಿ (ಹೆಚ್ಚುವರಿ ಆರ್ದ್ರತೆ, ನೀರಿನ ಕೊರತೆ) ಇರಿಸಲಾದ ಕೆಲವು ಪ್ರಭೇದದ ಟೊಮೆಟೊಗಳ ಮೇಲೆ ಅಡ್ವೆಂಷಿಯಸ್ ಬೇರುಗಳು ಬೆಳೆಯಬಹುದು ಎಂಬುದನ್ನು ಸಹ ಗಮನಿಸಬೇಕು. ಸಾಂಪ್ರದಾಯಿಕ ಪ್ರಭೇದಗಳಲ್ಲಿ ಅಡ್ವೆಂಷಿಯಸ್ ಬೇರುಗಳ ಬೆಳವಣಿಗೆಯನ್ನು ಹೆಚ್ಚಾಗಿ ಕಾಣಬಹುದು.