Herbicide Shikimic acid pathway inhibitors
ಇತರೆ
ಮೊದಲ ಲಕ್ಷಣಗಳಲ್ಲಿ ಚಿಗುರೆಲೆಗಳ ಬುಡದಲ್ಲಿ ಬಿಳಿ/ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಎಲೆಗಳು ಸುಕ್ಕುಗಟ್ಟಿ ಸಣ್ಣದಾಗಿ ಕಾಣುತ್ತವೆ ಮತ್ತು ಅಂಚು ಮೇಲ್ಮುಖವಾಗಿ ಬಾಗಿರುತ್ತದೆ. ಹೂವಿನ ಸಂಖ್ಯೆ ಕುಗ್ಗುವುದರಿಂದ ಇಳುವರಿ ನಷ್ಟವಾಗುತ್ತದೆ. ಹಣ್ಣುಗಳು ವಿಕಾರವಾಗಿ ಚಿಕ್ಕದಾಗಿರುತ್ತವೆ ಮತ್ತು ದಟ್ಟ ಕಂದು ಬಣ್ಣದ ಗಾಯದ ಗುರುತು ಇರುತ್ತವೆ. ತೀವ್ರವಾದ ಪ್ರಕರಣಗಳಲ್ಲಿ ಕೊಳೆತ ಗಿಡದ ಮೇಲ್ತುದಿಯಿಂದ ಶುರುವಾಗಿ ಕೆಳಮುಖವಾಗಿ ಮುಂದುವರೆಯುತ್ತದೆ.
ಲಭ್ಯವಿಲ್ಲ
ಲಭ್ಯವಿಲ್ಲ
ಈ ತೊಂದರೆಗೆ ಕಾರಣ ಆಯ್ಕೆಯೇತರ ಗ್ಲೈಫೋಸೇಟ್ ಕಳೆನಾಶಕವನ್ನ ಯರ್ರಾಬಿರ್ರಿ ಬಳಸುವುದು. ಇದರಿಂದಾಗಿ ಸಿಂಪಡಣೆ ರೈತನ ಗುರಿ ತಪ್ಪಿ ಪಕ್ಕದ ಹೊಲ ಸೇರುವುದು ಅಥವಾ ಬಹುಪಯೋಗಿ ಕೀಟನಾಶಕ ಸಿಂಪಡಣೆ ಯಂತ್ರದಲ್ಲಿ ಉಳಿದಿರುವ ಗ್ಲೈಫೋಸೇಟ್ ಬೇರೆ ಪ್ರಬೇಧದ ಗಿಡಗಳ ಮೇಲೆ ಬಿದ್ದು ಅವುಗಳ ಮೇಲೆ ಪರಿಣಾಮ ಬೀರಬಹುದು. ಎಲೆಗಳ ಸುತ್ತ ಚಿಮ್ಮುವ ಕಳೆನಾಶಕ ಇಡೀ ಗಿಡ ಪೂರ್ತಿ ಆವರಿಸುತ್ತದೆ. ಗಿಡಗಳ ಹೊಸ ಬೆಳವಣಿಗೆಗೆ ಅವಶ್ಯಕವಾದ ಅಮಿಮೋ ಆ್ಯಸಿಡ್ ಉತ್ಪಾದನೆಗೆ ಬೇಕಾದ ರಸಾಯನಿಕದ ಜೊತೆಗೆ ಇದು ಮಧ್ಯಬರುವುದರಿಂದ ಗಿಡಗಳು ಸಾವನ್ನಪ್ಪುತ್ತವೆ. ಇದರ ಹರಡುವಿಕೆ ಗಾಳಿ ಸೆಳೆತದಿಂದ ಗುರಿ ತಪ್ಪುವುದು, ಸಿಂಪಡಣೆ ಯಂತ್ರ ಕುಲುಷಿತಗೊಂಡಾಗ, ಮಣ್ಣಿನ ಜೊತೆ ಕೊಚ್ಚಿಕೊಂಡು ಬಂದಾಗ, ಚಂಚಲವಾದ, ಅಚಾನಕ್ಕಾದ ಸಿಂಪಡಣೆ ಮುಂತಾದ ರೀತಿಯಿಂದಲೂ ಆಗಬಹುದು. ಎಷ್ಟು ಪ್ರಮಾಣದ ಗ್ಲೈಫೋಸೇಟ್ ಸೇರಿದೆ, ಬೆಳೆಯುತ್ತಿರುವ ಸ್ಥಿತಿಗತಿ, ಪೀಡಿತ ತಳಿ ಮತ್ತು ಬೆಳೆವಣಿಗೆಯ ಹಂತಗಳ ಮೇಲೆ ಎಷ್ಟರ ಮಟ್ಟಿಗೆ ತೊಂದರೆಯಾಗಬಹುದು ಎಂಬುದು ನಿಂತಿದೆ. ತೊಂದರೆ ತುಂಬಾ ದೊಡ್ಡದಾಗಿ ಬೆಲೆಬಾಳುವ ಗಿಡಗಳು ಶಾಶ್ವತವಾಗಿ ಕೈತಪ್ಪುವ ಸಾಧ್ಯತೆ ಇದೆ.