Rapid Growth Syndrome
ಇತರೆ
ಸಸ್ಯ ಬೆಳವಣಿಗೆಯ ದರದಲ್ಲಿ ತೀಕ್ಷ್ಣವಾದ ಏರಿಕೆ ಸಂಭವಿಸುತ್ತದೆ. ಮೆಕ್ಕೆ ಜೋಳದ ಎಲೆಗಳು ಸರಿಯಾಗಿ ಬಿಚ್ಚಿಕೊಳ್ಳಲು ವಿಫಲವಾಗುತ್ತವೆ ಮತ್ತು ಎಲೆ ಸುರುಳಿಯು ಬಿಗಿಯಾಗಿ ಸುತ್ತುತ್ತದೆ ಮತ್ತು ತಿರುಚುತ್ತದೆ. ವೇಗವಾಗಿ ಬೆಳೆಯುತ್ತಿರುವ ಹೊಸ ಎಲೆಗಳು ಸರಿಯಾಗಿ ಹೊರಹೊಮ್ಮಲು ಸಾಧ್ಯವಾಗುವುದಿಲ್ಲ ಮತ್ತು ಅವು ಹೊರಬರಲು ಯತ್ನಿಸಿದಾಗ ಎಲೆ ಸುರುಳಿ ಬಗ್ಗುತ್ತದೆ ಮತ್ತು ತಿರುಚಿಕೊಳ್ಳುತ್ತದೆ. ಎಲೆಸುರುಳಿಯಲ್ಲಿ ಸಿಕ್ಕಿಬಿದ್ದ ಎಲೆಗಳು ಹೊರಹೊಮ್ಮಿದಾಗ ಸಾಮಾನ್ಯವಾಗಿ ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತವೆ. ಹೀಗಾಗಿ, ಅವುಗಳು ಹೊಲದಲ್ಲಿ ಎದ್ದುಕಾಣುತ್ತವೆ. ಬಾಧಿತ ಎಲೆಗಳು ಬುಡದ ಬಳಿ ಸುಕ್ಕುಗಟ್ಟಬಹುದು ಮತ್ತು ಬೆಳವಣಿಗೆಯ ಋತುವಿನ ಉದ್ದಕ್ಕೂ ಹಾಗೆಯೇ ಉಳಿಯುತ್ತದೆ.
ಅನೇಕ ಹವಾಮಾನ-ಸಂಬಂಧಿತ ಒತ್ತಡದ ಪರಿಣಾಮಗಳಂತೆಯೇ, ಕ್ಷಿಪ್ರ ಬೆಳವಣಿಗೆಯ ಲಕ್ಷಣಗಳಿಗೆ ಕೆಲವು ಮಿಶ್ರತಳಿಗಳು ಇತರವುಗಳಿಗಿಂತ ಬೇಗ ಒಳಗಾಗುವುದು ಸಾಮಾನ್ಯವಾಗಿದೆ. ನಿಮ್ಮ ಪ್ರದೇಶಕ್ಕೆ ಸೂಕ್ತವಾದ ವೈವಿಧ್ಯ ಅಥವಾ ಹೈಬ್ರಿಡ್ ಅನ್ನು ಆರಿಸಿ.
ರಾಸಾಯನಿಕ ನಿಯಂತ್ರಣವು ಈ ಪ್ರಕರಣಕ್ಕೆ ಸಂಬಂಧಿಸಿಲ್ಲ.
ವಾತಾವರಣ ತಂಪಾದ ತಾಪಮಾನದಿಂದ ಬೆಚ್ಚಗಿನ ಪರಿಸ್ಥಿತಿಗಳಿಗೆ ಹಠಾತ್ ಆಗಿ ಪರಿವರ್ತನೆಯಾದಾಗ ಸಾಮಾನ್ಯವಾಗಿ ಹಾನಿಯು ಸಂಬಂಧಿಸುತ್ತದೆ. ಇದು ಸಸ್ಯದ ಬೆಳವಣಿಗೆಯ ದರದಲ್ಲಿ ತೀಕ್ಷ್ಣವಾದ ವೇಗವರ್ಧನೆಗೆ ಕಾರಣವಾಗುತ್ತದೆ. ವೇಗವಾಗಿ ಬೆಳೆಯುತ್ತಿರುವ ಹೊಸ ಎಲೆಗಳು ಹೊರಹೊಮ್ಮಲು ಸಾಧ್ಯವಾಗುವುದಿಲ್ಲ ಮತ್ತು ಅವು ಬಲವಂತವಾಗಿ ಹೊರಬರಲು ಪ್ರಯತ್ನಿಸುವಾಗ ಎಲೆಸುರುಳಿಗಳು ಬಗ್ಗಲು ಮತ್ತು ತಿರುಚಲು ಕಾರಣವಾಗುತ್ತದೆ. ರೋಗಲಕ್ಷಣವು ಸಾಮಾನ್ಯವಾಗಿ 5 ರಿಂದ 6 ನೇ ಸಸ್ಯಕ ಬೆಳವಣಿಗೆಯ ಹಂತದ ನಡುವೆ ಸಂಭವಿಸುತ್ತದೆ ಆದರೆ 12 ನೇ ಸಸ್ಯಕ ಬೆಳವಣಿಗೆಯ ಹಂತದವರೆಗೂ ಸಹ ಇದನ್ನು ಗಮನಿಸಬಹುದು. ಇಳುವರಿ ಮೇಲೆ ಸಾಮಾನ್ಯವಾಗಿ ಯಾವುದೇ ಗಂಭೀರ ಋಣಾತ್ಮಕ ಪರಿಣಾಮಗಳಿರುವುದಿಲ್ಲ. ತಿರುಚಿದ ಸುರುಳಿಗಳಿಗೆ ಇತರ ಕಾರಣಗಳು ವಿಶೇಷವಾಗಿ ಕಳೆನಾಶಕ ಗಾಯಗಳು ಇರಬಹುದು ಎಂಬುದನ್ನು ಗಮನಿಸಿ.