ಗೋಧಿ

ಹಿಮ ಹಾನಿ

Cell injury

ಇತರೆ

ಸಂಕ್ಷಿಪ್ತವಾಗಿ

  • ಎಲೆಗಳ ಬಣ್ಣಗೆಡುವಿಕೆ ಮತ್ತು ವಿರೂಪತೆ.
  • ಎಲೆ ಸುಳಿಗಳ ಕೊಳೆಯುವಿಕೆ.

ಇವುಗಳಲ್ಲಿ ಸಹ ಕಾಣಬಹುದು

59 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಗೋಧಿ

ರೋಗಲಕ್ಷಣಗಳು

ಎಲೆಗಳ ನಾಳಗಳ ನಡುವೆ ಸುಟ್ಟಂತಹ ಮತ್ತು ಮಸುಕಾದ ಕಂದು ಬಣ್ಣದ ತೇಪೆಗಳು ಕಾಣಿಸಿಕೊಳ್ಳುತ್ತವೆ. ಅರಳಿದ ಮತ್ತು ಎಳೆಯ ಹಣ್ಣುಗಳು ಹಾನಿಗೊಳಗಾಗುತ್ತವೆ. ಎಲೆಗಳ ಮೇಲೆ ಗಾಯಗಳು ಅಥವಾ ಮೇಲ್ಮೈಗಳ ಮೇಲೆ ಗುಂಡಿಗಳು ಕಾಣುತ್ತವೆ. ಹಾಗೆಯೇ ಬಣ್ಣ ಕಳೆದುಕೊಳ್ಳುತ್ತವೆ. ಅಂಗಾಂಶಗಳು ನೀರಿನಲ್ಲಿ ನೆನೆದಂತೆ ಕಾಣುತ್ತವೆ. ಗಾಯಗೊಂಡ ಅಂಗಾಂಶಗಳು ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ದುರ್ವಾಸನೆ ಬೀರುತ್ತವೆ. ಎಲೆಗಳು ಅಕಾಲಿಕವಾಗಿ ಉದುರಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇದು ನೈಸರ್ಗಿಕ ವಿದ್ಯಮಾನವಾಗಿರುವುದರಿಂದ ಜೈವಿಕ ನಿಯಂತ್ರಣ ಸಾಧ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಇದು ನೈಸರ್ಗಿಕ ವಿದ್ಯಮಾನವಾಗಿರುವುದರಿಂದ ರಾಸಾಯನಿಕ ನಿಯಂತ್ರಣ ಸಾಧ್ಯವಿಲ್ಲ.

ಅದಕ್ಕೆ ಏನು ಕಾರಣ

ಸಸ್ಯದ ಅಂಗಾಂಶದೊಳಗೆ ಮಂಜುಗೆಡ್ಡೆ ರೂಪುಗೊಂಡಾಗ ಮತ್ತು ಸಸ್ಯ ಕೋಶಗಳನ್ನು ಗಾಯಗೊಳಿಸಿದಾಗ ಹಿಮ ಹಾನಿ ಸಂಭವಿಸುತ್ತದೆ. ಆದ್ದರಿಂದ, ಶೀತ ತಾಪಮಾನಕ್ಕಿಂತ ಹೆಚ್ಚಾಗಿ ಮಂಜುಗಡ್ಡೆಯ ರಚನೆಯಿಂದಾಗುವ ಹಾನಿ ಸಸ್ಯವನ್ನು ಗಾಯಗೊಳಿಸುತ್ತದೆ. ತಣ್ಣನೆಯ ಗಾಳಿಯು ನಿತ್ಯಹರಿದ್ವರ್ಣ ಎಲೆಗಳಿಂದ ತೇವಾಂಶವನ್ನು, ಬೇರುಗಳಿಗಿಂತ ಹೆಚ್ಚಾಗಿ ಎಳೆದುಕೊಳ್ಳುತ್ತದೆ. ಇದು ಎಲೆಗಳ ಕಂದುಬಣ್ಣಕ್ಕೆ ಕಾರಣವಾಗುತ್ತದೆ. ವಿಶೇಷವಾಗಿ ಎಲೆಗಳ ಸುಳಿಗಳು ಮತ್ತು ಅಂಚುಗಳಲ್ಲಿ ಈ ಹಾನಿ ಕಾಣುತ್ತದೆ. ಸಂಪೂರ್ಣವಾಗಿ ಬೆಳೆದ ಸಸ್ಯಗಳಿಗಿಂತ ಎಳೆಯ ಸಸ್ಯಗಳು ಹಿಮ ಹಾನಿಗೆ ಹೆಚ್ಚು ಒಳಗಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಫ್ರಾಸ್ಟ್ ಪಾಕೆಟ್ಸ್ ತಪ್ಪಿಸಲು ನೆಡುವ ಸ್ಥಾನಗಳನ್ನು ಎಚ್ಚರಿಕೆಯಿಂದ ಆಯ್ಕೆಮಾಡಿ.
  • ಸಾಮಾನ್ಯವಾಗಿ, ಸ್ಥಳೀಯ ಸ್ಥಳಾಕೃತಿಯಲ್ಲಿ ತಗ್ಗಿನ ತಾಣಗಳು ತಂಪಾದ ಹವಾಮಾನವನ್ನು ಹೊಂದಿರುತ್ತವೆ.
  • ಹೀಗಾಗಿ, ಹೆಚ್ಚಿನ ಹಾನಿಯನ್ನು ಅಲ್ಲಿ ಗಮನಿಸಬಹುದು.
  • ತಂಪಾದ ಗಾಳಿ ತುಂಬವ ತಾಣಗಳನ್ನು ತೊಡೆದುಹಾಕಲು ಮತ್ತು ತಂಪಾದ ಗಾಳಿ ಹಾದುಹೋಗುವುದನ್ನು ಸುಧಾರಿಸಲು ಭೂಮಿಯನ್ನು ಸಮತಟ್ಟುಗೊಳಿಸಿ.
  • ಮುಂದಿನ ಶೀತಲ ಸಮಯದಲ್ಲಿ ಸಸ್ಯಗಳನ್ನು ರಕ್ಷಿಸಲು ಸಹಾಯವಾಗುವಂತೆ ಸತ್ತ ಎಲೆಗಳು ಮತ್ತು ಕೊಂಬೆಗಳನ್ನು ಸಸ್ಯಗಳ ಮೇಲೆ ಬಿಡಿ.
  • ಹೊಸ ಬೆಳವಣಿಗೆ ಹೊರಹೊಮ್ಮುತ್ತಿರುವುದನ್ನು ನೋಡಿದಾಗ ಸತ್ತ ಸಸ್ಯ ವಸ್ತುಗಳನ್ನು ಕತ್ತರಿಸಿ.
  • ಹಿಮದ ಮುನ್ಸೂಚನೆ ಇದ್ದಾಗ ಉಣ್ಣೆ ಅಥವಾ ಇತರ ಸೂಕ್ತ ರಕ್ಷಣಾ ವಸ್ತುವಿನೊಂದಿಗೆ ಸಸ್ಯಗಳನ್ನು ಮುಚ್ಚಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ