ಮೆಕ್ಕೆ ಜೋಳ

ಎಲೆಯ ವರ್ಣ ವೈವಿಧ್ಯತೆ

Chimera

ಇತರೆ

ಸಂಕ್ಷಿಪ್ತವಾಗಿ

  • ಎಲೆಯ ವರ್ಣ ವೈವಿಧ್ಯತೆ ಎಲೆಗಳ ಮೇಲೆ ಬಣ್ಣಗಳ ತೇಪೆಯಿಂದ ಉಂಟಾಗುತ್ತದೆ.
  • ಎಲೆಯ ಅಂಗಾಂಶದ ಕೆಲವು ಭಾಗಗಳು ಬಿಳಿ ಬಣ್ಣದಿಂದ ಹಳದಿ ಬಣ್ಣದಲ್ಲಿರುತ್ತವೆ.
  • ಇದು ಮೊಸಾಯಿಕ್, ತೇಪೆ ಅಥವಾ ರೇಖೀಯ ಮಾದರಿಗೆ ಕಾರಣವಾಗುತ್ತದೆ.
  • ಈ ಪರಿಸ್ಥಿತಿ ನಿರುಪದ್ರವವಾಗಿದೆ ಮತ್ತು ಸಣ್ಣ ಪ್ರಮಾಣದ ಸಸ್ಯಗಳ ಮೇಲೆ ಮಾತ್ರ ಪರಿಣಾಮ ಬೀರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

17 ಬೆಳೆಗಳು
ಹುರುಳಿ
ಹಾಗಲಕಾಯಿ
ಎಲೆಕೋಸು
ಹತ್ತಿ
ಇನ್ನಷ್ಟು

ಮೆಕ್ಕೆ ಜೋಳ

ರೋಗಲಕ್ಷಣಗಳು

ಎಲೆಯ ವರ್ಣ ವೈವಿಧ್ಯ, ಎಲೆಗಳ ಮತ್ತು ಕೆಲವೊಮ್ಮೆ ಕಾಂಡಗಳ ಕೆಲ ಭಾಗಗಳಲ್ಲಿ ಅಸಮವಾದ ಬಿಳಿ ಮತ್ತು ಹಳದಿ ಬಣ್ಣದಿಂದ ಗುರುತಿಸಲ್ಪಡುತ್ತದೆ. ಸಾಮಾನ್ಯವಾದ ಹಸಿರು ಬಣ್ಣದ ಅಂಗಾಂಶಗಳು ಪಕ್ಕದಲ್ಲೇ ಇರುವುದರಿಂದ, ವಿಶಿಷ್ಟವಾದ ಮೊಸಾಯಿಕ್, ತೇಪೆ ಅಥವಾ ರೇಖೀಯ ಮಾದರಿಗಳು ಕಂಡುಬರುತ್ತದೆ. ಕೆಲವೊಮ್ಮೆ ನಾಳೀಯ ವರ್ಣ ವೈವಿಧ್ಯವು ಕಂಡುಬರುತ್ತದೆ. ಅಂದರೆ, ನಾಳಗಳನ್ನು ಬಿಟ್ಟು ಉಳಿದ ಭಾಗವು ಗಾಢ ಹಸಿರಾಗಿರುತ್ತವೆ. ನಾಳಗಳು ಬಣ್ಣ ಕಳೆದುಕೊಳ್ಳುತ್ತವೆ. ಸಸ್ಯದ ದೊಡ್ಡ ಭಾಗಗಳ ಮೇಲೆ ಪರಿಣಾಮ ಬೀರಿದರೆ, ಪತ್ರಹರಿತ್ತಿನ ಕೊರತೆಯಿಂದ ಕುಂಠಿತಗೊಂಡ ಬೆಳವಣಿಗೆ ಉಂಟಾಗಬಹುದು. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ ಕೊರತೆಯು ಹೊಲದ ಒಂದು ಸಣ್ಣ ಶೇಕಡಾವಾರು ಭಾಗದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುವುದಿಲ್ಲ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಅಸ್ವಸ್ಥತೆಗೆ ನೇರ ಪರಿಸರ ಯಾವುದೇ ರೀತಿಯಲ್ಲೂ ಕಾರಣವಲ್ಲದೇ ಇರುವುದರಿಂದ, ಯಾವುದೇ ಜೈವಿಕ ಚಿಕಿತ್ಸೆಯು ಲಭ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಿಗಿರುವ ಸಮಗ್ರ ವಿಧಾನವನ್ನು ಪರಿಗಣಿಸಿ. ಎಲೆಯ ವರ್ಣವೈವಿಧ್ಯತೆಯು ಒಂದು ಆನುವಂಶಿಕ ಅಥವಾ ಸಸ್ಯೀಯ ಅಸ್ವಸ್ಥತೆಯಾಗಿದೆ ಮತ್ತು ಇದನ್ನು ತಡೆಗಟ್ಟಲು ಯಾವುದೇ ರಾಸಾಯನಿಕ ಉತ್ಪನ್ನಗಳು ಲಭ್ಯವಿಲ್ಲ.

ಅದಕ್ಕೆ ಏನು ಕಾರಣ

ಎಲೆಯ ವರ್ಣ ವೈವಿಧ್ಯತೆಯು ಒಂದು ಆನುವಂಶಿಕ ಅಥವಾ ಸಸ್ಯೀಯ ಅಸಹಜತೆಯಾಗಿದ್ದು ಅದು ಪರಿಸರ ಪರಿಸ್ಥಿತಿಗಳಿಂದ ಉಂಟಾಗುವುದಿಲ್ಲ. ಅಂದರೆ, ಯಾವುದೇ ರೋಗಕಾರಕ ಇದರಲ್ಲಿ ಪಾಲ್ಗೊಳ್ಳುವುದಿಲ್ಲ. ಎಲೆಯ ವರ್ಣ ವೈವಿಧ್ಯತೆಗೆ ಮುಖ್ಯ ಕಾರಣ ಎಲೆಯ ಅಂಗಾಂಶಗಳ ಕೆಲವು ಭಾಗಗಳಲ್ಲಿ ಪತ್ರಹರಿತ್ತಿನ ಕೊರತೆ. ಇದು ಪ್ರಕೃತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಸಂಭವಿಸುತ್ತದೆ ಮತ್ತು ಸಸ್ಯಗಳು ಅಥವಾ ಇಳುವರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಆದಾಗ್ಯೂ, ಕೆಲವು ಅಲಂಕಾರಿಕ ಮತ್ತು ಉದ್ಯಾನ ಸಸ್ಯಗಳು ಸ್ವಾಭಾವಿಕವಾಗಿ ವರ್ಣ ವೈವಿಧ್ಯಮಯವಾಗಿವೆ. ಮತ್ತು ಇದು ಅದರ ಸೌಂದರ್ಯದ ಭಾಗವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಗೊತ್ತಿರುವ ಪ್ರಭೇದಗಳು / ಮಿಶ್ರತಳಿಗಳಿಂದ ಪ್ರಮಾಣೀಕೃತ ಬೀಜಗಳನ್ನು ಬಳಸಿ.
  • ಬೀಜಗಳು ಆನುವಂಶಿಕ ವೈಪರೀತ್ಯಗಳಿಂದ ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಇದು ಎಲೆಯ ವರ್ಣವೈವಿಧ್ಯ ತಡೆಗಟ್ಟಲು ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ