ಟೊಮೆಟೊ

ಟೊಮೆಟೊ ಝಿಪರಿಂಗ್

Physiological Disorder

ಇತರೆ

ಸಂಕ್ಷಿಪ್ತವಾಗಿ

  • ಹಣ್ಣಿನ ಅಗಲಕ್ಕೂ ಮತ್ತು ಸುತ್ತಲೂ ಕೊಳೆತ(ನೆಕ್ರೋಟಿಕ್) ಕಲೆಗಳು ಇರುತ್ತವೆ.
  • ಈ ಅಸ್ವಸ್ಥತೆಯು ಹಣ್ಣಿನ ರಚನೆಯಾಗುವ ಸಮಯದಲ್ಲಿ ಕಡಿಮೆ ತಾಪಮಾನಗಳು ಮತ್ತು ಅಧಿಕ ಆರ್ದ್ರತೆಯಿದ್ದಾಗ ಉಂಟಾಗುತ್ತದೆ.
  • ಇದನ್ನು ಸಕ್ರಿಯವಾಗಿ ತಡೆಗಟ್ಟಬಹುದು ಆದರೆ ಅದು ತಗುಲಿದ ನಂತರ ಚಿಕಿತ್ಸೆ ನೀಡಲಾಗುವುದಿಲ್ಲ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಟೊಮೆಟೊ

ರೋಗಲಕ್ಷಣಗಳು

ಝಿಪರಿಂಗ್ ಎಂಬುದು ಶಾರೀರಿಕ ಅಸ್ವಸ್ಥತೆಯಾಗಿದ್ದು, ಹಣ್ಣಿನ ಉದ್ದಕ್ಕೂ ಬರುವ ತೆಳುವಾದ ಕಂದು ಬಣ್ಣದ ತೆಳು ಕೊಳೆತ(ನೆಕ್ರೋಟಿಕ್ ) ಗೆರೆಗಳಿಂದ ಇದನ್ನು ಗುರುತಿಸಬಹುದು, ಇದು ಕ್ರಮೇಣ ಸ್ಥಳೀಯವಾದ ಬಿರುಕುಗಳನ್ನು ಉಂಟುಮಾಡುತ್ತದೆ. ಕಲೆಗಳು ಹಣ್ಣಿನ ಮೇಲೆ ಉದ್ದಕ್ಕೆ ಮತ್ತು ಅಗಲಕ್ಕೂ ಭಾಗಶಃ ಹರಡುತ್ತವೆ, ಕೆಲವೊಮ್ಮೆ ಝಿಪ್ಪರ್ ತರಹದ ಗಾಯವು ಹೂವಿನ ತುದಿಯಿಂದ ಹಿಡಿದು ಕಾಂಡದವರೆಗೂ ಹರಡುತ್ತದೆ, ಹೀಗಾಗಿ ರೋಗಕ್ಕೆ ಈ ಹೆಸರು ಬಂದಿದೆ. ಹಣ್ಣಿನ ತಿರುಳಿನ ಒಳಗೆ ಕೊರಕಲು ದಾರಿಗಳು ಮತ್ತು ಸಿಪ್ಪೆಯು ವಿರೂಪಗೊಳ್ಳುವುದೂ ಸಹ ಸಾಮಾನ್ಯವಾಗಿರುತ್ತದೆ. ಹಾನಿಗೊಳಗಾದ ಅಂಗಾಂಶವು ಅದರ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುತ್ತದೆ ಮತ್ತು ಹಣ್ಣುಗಳು ಸರಿಯಾಗಿ ಬೆಳೆಯುವುದಿಲ್ಲ. ಹಾನಿ ಒಮ್ಮೆ ಕಂಡುಬಂದಾಗ, ಏನು ಮಾಡಲು ಸಹ ತುಂಬಾ ವಿಳಂಬವಾದಂತೆಯೇ ಲೆಕ್ಕ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಪ್ರಾಕೃತಿಕ ಅಸ್ವಸ್ಥತೆ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆಯು ತಿಳಿದುಬಂದಿಲ್ಲ. ಇದನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ರೋಗವನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು.

ಅದಕ್ಕೆ ಏನು ಕಾರಣ

ಝಿಪರಿಂಗ್ ಎಂಬುದು ಶಾರೀರಿಕ ಅಸ್ವಸ್ಥತೆಯಾಗಿದ್ದು, ಹೂಬಿಡುವ ಕೊನೆಯ ಹಂತ ಮತ್ತು ಹಣ್ಣು ಬಿಡುವ ಆರಂಭಿಕ ಸಮಯದಲ್ಲಿ ಕಡಿಮೆ ಉಷ್ಣತೆ ಮತ್ತು ಹೆಚ್ಚಿನ ಆರ್ದ್ರತೆಗಳಿಂದ ಉಂಟಾಗುತ್ತದೆ. ಕಾಯಿಯ ಬೆಳವಣಿಗೆಯ ಸಮಯದಲ್ಲಿ, ಒಂದು ಅಥವಾ ಹಲವಾರು ಪರಾಗಕೋಶಗಳು ಅಂಡಾಶಯದ ಗೋಡೆಯೊಂದಿಗೆ ಜೋಡಿಕೊಂಡಿರುತ್ತವೆ, ಇದು ಬೆಳೆದಂತೆ ಹಣ್ಣಿನ ಹೊರಭಾಗದಲ್ಲಿ ಉತ್ತಮವಾದ ಕಲೆಗಳನ್ನು ಉಂಟುಮಾಡುತ್ತದೆ. ತಾಪಮಾನ ಸೂಕ್ಷ್ಮತೆಯು ವೈವಿಧ್ಯತೆಯಿಂದ ವೈವಿಧ್ಯತೆಗೆ ವಿಭಿನ್ನವಾಗಿರುತ್ತದೆ. ಕೆಲವು ಟೊಮೆಟೊ ಪ್ರಭೇದಗಳು ಇತರವುಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತವೆ, ಅವುಗಳಲ್ಲಿ ಬೀಫ್ ಸ್ಟೀಕ್ ಟೊಮೆಟೊಗಳ ಮೇಲಾಗುವ ಪರಿಣಾಮ ಕೆಟ್ಟದ್ದಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಶೀತ ನಿರೋಧಕ ಮತ್ತು ಸಹಿಷ್ಣು ಪ್ರಭೇದಗಳನ್ನು ಬೆಳೆಸಿ.
  • ಹೂಬಿಡುವ ಮತ್ತು ಹಣ್ಣು ಬಿಡುವ ಸಮಯದಲ್ಲಿ ಪರಿಸರ ಪರಿಸ್ಥಿತಿಗಳನ್ನು ಅತ್ಯಂತ ಲಾಭಕಾರಿಯಾಗಿರಿಸಿ.
  • ರಾತ್ರಿಯ ಸಮಯದ ಕಡಿಮೆ ತಾಪಮಾನ ಮತ್ತು ವಿಪರೀತ ತೇವಾಂಶಗಳನ್ನು ತಪ್ಪಿಸಿ.
  • ಸಸ್ಯವು ತನ್ನ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವುದನ್ನು ತಡೆಗಟ್ಟಲು ಮುಂಚಿತವಾಗಿಯೇ ಕಲೆ ಬಂದಿರುವ ಹಣ್ಣುಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ